Song of Solomon 4:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನನ್ನ ವಧುವೇ, ಲೆಬನೋನಿನಿಂದ ನನ್ನೊಂದಿಗೆ ಬಾ! ಲೆಬನೋನಿನಿಂದ ನನ್ನೊಂದಿಗೆ ಬಾ! ಅಮಾನದ ತುದಿಯಿಂದಲೂ ಶೆನೀರಿನ ತುದಿಯಿಂದಲೂ ಹೆರ್ಮೋನಿನ ತುದಿಯಿಂದಲೂ ಸಿಂಹದ ಗವಿಗಳಿಂದಲೂ ಚಿರತೆಗಳ ಬೆಟ್ಟಗಳಿಂದಲೂ ಬಾ!
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಬಾ ವಧುವೇ, ಎನ್ನೊಂದಿಗೆ ಲೆಬನೋನಿನಿಂದ. ಬಾ ನನ್ನೊಂದಿಗೆ, ಲೆಬನೋನಿನಿಂದ, ಇಳಿದು ಬಾ ಅಮಾನದ ತುದಿಯಿಂದ, ಶೆನೀರ್ ಮತ್ತು ಹೆರ್ಮೋನ್ ಶಿಖರಗಳಿಂದ. ಹೊರಟು ಬಾ, ಸಿಂಹಗಳ ಗುಹೆಗಳಿಂದ ಚಿರತೆಗಳ ಗುಡ್ಡಗಳಿಂದ.
Kannada BSI Bible 2016
ನನ್ನ ಸಂಗಡ ಲೆಬನೋನಿನಿಂದ ಬಾ, ಪತ್ನಿಯೇ; ಲೆಬನೋನಿನಿಂದ ನನ್ನ ಸಂಗಡ ಬಾ. ಅಮಾನದ ಶಿಖರದಿಂದ, ಶೆನೀರ್, ಹೆರ್ಮೋನ್ ಶಿಖರದಿಂದ, ಸಿಂಹದ ಗವಿಗಳಿಂದ, ಚಿರತೆಗಳ ಪರ್ವತಗಳಿಂದ ದೃಷ್ಟಿಸು.
Kannada BSI JV (ಕನ್ನಡ ಸತ್ಯವೇದವು J.V. (BSI))
ಎನ್ನೊಂದಿಗೆ ಲೆಬನೋನಿನಿಂದ ಬಾ! ವಧುವೇ, ಲೆಬನೋನಿನಿಂದ ನನ್ನೊಂದಿಗೆ ಬಾ! ಅಮಾನದ ತುದಿ, ಶೆನೀರ್ ಮತ್ತು ಹೆರ್ಮೋನ್ ಶಿಖರಗಳು, ಸಿಂಹಗಳ ಗವಿಗಳು, ಚಿರತೆಗಳ ಗುಡ್ಡಗಳು, ಇವುಗಳಿಂದ ಹೊರಟು ಬಾ!
Kannada Bible (KNCL) BSI 2016
ಬಾ, ವಧುವೆ, ಲೆಬನೋನಿನಿಂದ ಬಾ, ನನ್ನೊಡನೆ ಲೆಬನೋನಿನಿಂದ ಇಳಿದು ಬಾ ಅಮಾನದ ತುದಿಯಿಂದ ಶೆನೀರ್ ಮತ್ತು ಹೆರ್ಮೋನ್ ಶಿಖರಗಳಿಂದ. ಹೊರಟು ಬಾ ಸಿಂಹಗಳ ಗುಹೆಗಳಿಂದ ಚಿರತೆಗಳ ಗುಡ್ಡಗಳಿಂದ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬಾ, ವಧುವೇ, ಲೆಬನೋನಿನಿಂದ ಬಾ, ಲೆಬನೋನಿನಿಂದ ನನ್ನೊಡನೆ ಬಾ. ಅಮಾನದ ಶಿಖರಗಳಿಂದ, ಸೆನೀರ್, ಹೆರ್ಮೋನ್ ಶಿಖರಗಳಿಂದ, ಸಿಂಹದ ಗವಿಗಳಿಂದ, ಚಿರತೆಗಳ ಪರ್ವತಗಳಿಂದ ಇಳಿದು ಬಾ.