Song of Solomon 5:7 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಗರದಲ್ಲಿ ಗಸ್ತು ತಿರುಗುವ ಕಾವಲುಗಾರರು ನನ್ನನ್ನು ಕಂಡು ಹೊಡೆದು ಗಾಯಮಾಡಿದರು. ಕೋಟೆಯ ಕಾವಲುಗಾರರು ನನ್ನ ಮೇಲ್ಹೋದಿಕೆಯನ್ನು ತೆಗೆದುಕೊಂಡರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಊರಲ್ಲಿ ಸುತ್ತುತ್ತಿರುವ ಕಾವಲುಗಾರರು ನನ್ನನ್ನು ಕಂಡುಹಿಡಿದು, ಹೊಡೆದು ಗಾಯಪಡಿಸಿದರು, ಪೌಳಿಯ ಕಾವಲುಗಾರರು ಮೇಲೊದಿಕೆಯನ್ನು ನನ್ನಿಂದ ಕಿತ್ತುಕೊಂಡರು.
Kannada BSI Bible 2016
ಪಟ್ಟಣದಲ್ಲಿ ಸಂಚರಿಸುವ ಕಾವಲುಗಾರರು ನನ್ನನ್ನು ಕಂಡು, ನನ್ನನ್ನು ಹೊಡೆದು, ಗಾಯಮಾಡಿದರು; ಗೋಡೆಗಳನ್ನು ಕಾಯುವವರು ನನ್ನ ಮುಸುಕನ್ನು ಕಸಕೊಂಡರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಊರಲ್ಲಿ ಸುತ್ತುತ್ತಿರುವ ಕಾವಲುಗಾರರು ನನ್ನನ್ನು ಕಂಡು ಹಿಡಿದು ಹೊಡೆದು ಗಾಯಪಡಿಸಿದರು; ಪವುಳಿಯ ಕಾವಲುಗಾರರು ಮೇಲುಹೊದಿಕೆಯನ್ನು ನನ್ನಿಂದ ಕಿತ್ತುಕೊಂಡರು.
Kannada Bible (KNCL) BSI 2016
ಸುತ್ತುತ್ತಿದ್ದರು ಬೀದಿಗಳಲಿ ಪಹರೆಯವರು ನನ್ನನ್ನು ಕಂಡುಹಿಡಿದರು, ಹೊಡೆದು ಗಾಯಗೊಳಿಸಿದರು. ಕಿತ್ತುಕೊಂಡರು ಮೇಲುಹೊದಿಕೆಯನು ಆ ಪೌಳಿಗೋಡೆಯ ಕಾವಲುಗಾರರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಪಟ್ಟಣದಲ್ಲಿ ಸಂಚರಿಸುವ ಕಾವಲುಗಾರರು ನನ್ನನ್ನು ಕಂಡುಹಿಡಿದರು. ನನ್ನನ್ನು ಹೊಡೆದು, ಗಾಯ ಮಾಡಿದರು. ಗೋಡೆಗಳನ್ನು ಕಾಯುವವರು ನನ್ನ ಮುಸುಕನ್ನು ಕಸಿದುಕೊಂಡರು.