Song of Solomon 6:13 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಶೂಲಾಮಿತಳೇ, ಹಿಂತಿರುಗಿ ಬಾ, ಹಿಂತಿರುಗಿ ಬಾ! ಹಿಂತಿರುಗಿ ಬಾ, ಹಿಂತಿರುಗಿ ಬಾ, ನಾವು ನಿನ್ನನ್ನು ನೋಡಬೇಕು! ಮಹನಯಿಮ್ ನೃತ್ಯವನ್ನು ನೋಡುವಂತೆ ಶೂಲಾಮಿತಳನ್ನೇಕೆ ನೀವು ದೃಷ್ಟಿಸಿ ನೋಡುತ್ತಿರುವಿರಿ?
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಶೂಲಮ್ ಊರಿನವಳೇ, ತಿರುಗು, ಹಿಂತಿರುಗು, ನಾನು ನಿನ್ನನ್ನು ನೋಡಬೇಕು; ತಿರುಗು, ಇತ್ತ ತಿರುಗು. ಎರಡು ಸಾಲಿನಲ್ಲಿ ನರ್ತಿಸುವ ನರ್ತಕಿಯರ ನಡುವೆ ನರ್ತಿಸುವವಳನ್ನು ನೋಡುವಂತೆ ಶೂಲಮ್ ಊರಿನವಳಾದ ನನ್ನನ್ನು ನೀನು ನೋಡುವುದೇಕೆ?
Kannada BSI Bible 2016
ತಿರಿಗಿ ಬಾ, ತಿರಿಗಿ ಬಾ, ಓ ಶೂಲಮ್‌ನವಳೇ; ನಾವು ನಿನ್ನನ್ನು ದೃಷ್ಟಿಸುವ ಹಾಗೆ ತಿರಿಗಿ ಬಾ, ತಿರಿಗಿ ಬಾ. ಎರಡು ಸೈನ್ಯದ ಗುಂಪಿನವರ ಹಾಗೆಯೇಶೂಲಮ್ಯಳಲ್ಲಿ ನೀವು ದೃಷ್ಟಿಸಬೇಕಾದದ್ದೇನು?
Kannada BSI JV (ಕನ್ನಡ ಸತ್ಯವೇದವು J.V. (BSI))
ಶೂಲಮ್ ಊರಿನವಳೇ, ತಿರುಗು, ತಿರುಗು; ನಾನು ನಿನ್ನನ್ನು ನೋಡಬೇಕು; ತಿರುಗು, ಇತ್ತ ತಿರುಗು; ಎದುರುಬದುರಿನ ನಾಟ್ಯವನ್ನು ನೋಡುವಷ್ಟು ಆಶೆಯಿಂದ ಶೂಲಮ್ ಊರಿನವಳಾದ ನನ್ನನ್ನು ಏಕೆ ನೋಡಬೇಕು!
Kannada Bible (KNCL) BSI 2016
ಶೂಲಮ್ ಊರಿನ ನಾರಿಯೇ ತಿರುಗು ಇತ್ತ, ತಿರುಗು ಅತ್ತ ನಾವು ನಿನ್ನನ್ನು ನೋಡುವಂತೆ ತಿರುಗು ಇತ್ತ, ತಿರುಗು ಅತ್ತ! ನಲ್ಲೆ: ಎರಡು ಸಾಲಿನ ನರ್ತಕಿಯರ ನಡುವೆ ಕುಣಿಯುವವಳನ್ನು ನೋಡುವಂತೆ ಶೂಲಮ್ ಊರಿನವಳಾದ ನನ್ನನು ನೀನು ನೋಡುವುದೇಕೆ?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ತಿರುಗಿ ಬಾ, ತಿರುಗಿ ಬಾ, ಶೂಲಮ್ ಊರಿನವಳೇ, ನಾವು ನಿನ್ನನ್ನು ನೋಡುವಂತೆ ತಿರುಗಿ ಬಾ, ತಿರುಗಿ ಬಾ! ಎರಡು ಗುಂಪಿನ ನರ್ತಕಿಯರ ನಡುವೆ ಕುಣಿಯುತ್ತಿರುವ, ಶೂಲಮ್ ಊರಿನವಳನ್ನು ನೀವು ನೋಡುವುದೇಕೆ?