Song of Solomon 6:5 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಿನ್ನ ಕಣ್ಣುಗಳನ್ನು ನನ್ನ ಕಡೆಯಿಂದ ತಿರುಗಿಸು; ಅವು ನನ್ನನ್ನು ಉದ್ರೇಕಗೊಳಿಸುತ್ತವೆ. ನಿನ್ನ ಕೂದಲು ಗಿಲ್ಯಾದ್ ಬೆಟ್ಟದ ಇಳಿಜಾರುಗಳಲ್ಲಿ ನೃತ್ಯವಾಡುತ್ತಿರುವ ಆಡುಮಂದೆಯಂತೆ ಬಳಕುತ್ತಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿನ್ನ ಕಣ್ಣುಗಳನ್ನು ನನ್ನ ಕಡೆಯಿಂದ ತಿರುಗಿಸು, ಅವು ನನ್ನನ್ನು ಹೆದರಿಸುತ್ತವೆ. ನಿನ್ನ ಕೂದಲು ಗಿಲ್ಯಾದ್ ಬೆಟ್ಟದ ಪಾರ್ಶ್ವದಲ್ಲಿ ಮಲಗಿರುವ ಆಡುಮಂದೆಯಂತಿದೆ.
Kannada BSI Bible 2016
ನಿನ್ನ ಕಣ್ಣುಗಳನ್ನು ನನ್ನ ಕಡೆಯಿಂದ ತಿರುಗಿಸು; ಅವು ನನ್ನನ್ನು ಜೈಸಿದವು. ನಿನ್ನ ಕೂದಲು ಗಿಲ್ಯಾದಿನಿಂದ ಕಾಣಿಸಲ್ಪಡುವ ಮೇಕೆ ಮಂದೆಯ ಹಾಗೆ ಅದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿನ್ನ ಕಣ್ಣುಗಳನ್ನು ನನ್ನ ಕಡೆಯಿಂದ ತಿರುಗಿಸು, ಅವು ನನ್ನನ್ನು ಹೆದರಿಸುತ್ತವೆ. ನಿನ್ನ ಕೂದಲು ಗಿಲ್ಯಾದ್ [ಬೆಟ್ಟದ] ಪಾರ್ಶ್ವದಲ್ಲಿ ಮಲಗಿರುವ ಆಡುಮಂದೆಯಂತಿದೆ.
Kannada Bible (KNCL) BSI 2016
ತಿರುಗಿಸು ನಿನ್ನ ಕಣ್ಣುಗಳನ್ನು ನನ್ನ ಕಡೆಯಿಂದ ನನ್ನ ಸೆರೆಹಿಡಿದು ಬಿಡುವವು ತಮ್ಮ ನೋಟದಿಂದ. ನಿನ್ನ ಕೇಶರಾಶಿಯ ನರ್ತನ ಗಿಲ್ಯಾದ್ ಗುಡ್ಡದಿಂದ ಇಳಿಯುವ ಆಡುಮಂದೆಗೆ ಸಮಾನ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿನ್ನ ಕಣ್ಣುಗಳನ್ನು ನನ್ನ ಕಡೆಯಿಂದ ತಿರುಗಿಸು, ಏಕೆಂದರೆ ಅವು ನನ್ನನ್ನು ಜಯಿಸಿವೆ. ನಿನ್ನ ತಲೆಗೂದಲು ಗಿಲ್ಯಾದ್ ಪರ್ವತದಿಂದ ಇಳಿಯುವ ಮೇಕೆಯ ಮಂದೆಯಂತಿದೆ.