Song of Solomon 6:9 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದರೆ ನನ್ನ ಪಾರಿವಾಳವೂ ನಿರ್ಮಲೆಯೂ ಒಬ್ಬಳೇ ಒಬ್ಬಳು. ಆಕೆಯು ತನ್ನ ತಾಯಿಗೆ ಅಚ್ಚುಮೆಚ್ಚಿನವಳು. ಯುವತಿಯರು ಆಕೆಯನ್ನು ಕಂಡು ಹೊಗಳುವರು. ಹೌದು, ರಾಣಿಯರೂ ಉಪಪತ್ನಿಯರೂ ಆಕೆಯನ್ನು ಹೊಗಳುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನನ್ನ ಪಾರಿವಾಳವು, ನನ್ನ ನಿರ್ಮಲೆಯು ಒಬ್ಬಳೇ, ಇವಳು ಏಕಮಾತ್ರ ಪುತ್ರಿ ತಾಯಿಗೆ, ಮುದ್ದುಮಗಳು ಹೆತ್ತವಳಿಗೆ. ಧನ್ಯಳೆಂದು ಹೊಗಳಿದರು ಯುವತಿಯರು ನೋಡಿ, ರಾಣಿಯರೂ, ಉಪಪತ್ನಿಯರೂ ಕೊಂಡಾಡಿದರು ಈ ರೀತಿ.
Kannada BSI Bible 2016
ನನ್ನ ಪಾರಿವಾಳವು, ನನ್ನ ನಿರ್ಮಲೆಯು, ಒಬ್ಬಳೇ; ಅವಳು ತನ್ನ ತಾಯಿಗೆ ಒಬ್ಬಳೇ. ತನ್ನ ಹೆತ್ತವಳಿಗೆ ಆಯಲ್ಪಟ್ಟವಳಾಗಿದ್ದಾಳೆ, ಕುಮಾರ್ತೆಯರು ಅವ ಳನ್ನು ನೋಡಿ ಆಶೀರ್ವದಿಸಿದರು; ಹೌದು, ರಾಣಿ ಯರೂ ಉಪಪತ್ನಿಯರೂ ಅವಳನ್ನು ಹೊಗಳಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ನನ್ನ ಪಾರಿವಾಳವು, ನನ್ನ ನಿರ್ಮಲೆಯು, ಒಬ್ಬಳೇ, ಇವಳು ತಾಯಿಗೆ ಏಕಪುತ್ರಿಯು, ಹೆತ್ತವಳಿಗೆ ಆಪ್ತಳು. ಯುವತಿಯರು ನೋಡಿದಾಗ ಧನ್ಯಳೆಂದು ಹೇಳಿದರು. ರಾಣಿಯರೂ ಉಪಸ್ತ್ರೀಯರೂ ಕಂಡಾಗ ಹೀಗೆ ಪ್ರಶಂಸಿಸಿದರು -
Kannada Bible (KNCL) BSI 2016
ನನ್ನ ಪಾರಿವಾಳ, ನನ್ನ ನಿರ್ಮಲೆ ಇವಳೇ ಏಕಮಾತ್ರ ಪುತ್ರಿ ತಾಯಿಗೆ ಮುದ್ದುಮಗಳು ಹೆತ್ತವಳಿಗೆ. ಈಕೆ ಧನ್ಯಳೆಂದು ಹೊಗಳಿದರು ಯುವತಿಯರು ನೋಡಿ ರಾಣಿಯರು, ಉಪಪತ್ನಿಯರು ಕೊಂಡಾಡಿದರು ಈ ಪರಿ:
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ನನಗೆ ನನ್ನ ಪಾರಿವಾಳವು, ನನ್ನ ಪರಿಪೂರ್ಣಳು ಒಬ್ಬಳೇ. ಇವಳು ತನ್ನ ತಾಯಿಗೆ ಒಬ್ಬಳೇ ಮಗಳು. ತನ್ನ ಹೆತ್ತವಳಿಗೆ ಪ್ರಿಯಳು. ಕನ್ನಿಕೆಯರು ಇವಳನ್ನು ಕಂಡು ಆಶೀರ್ವದಿಸಿದರು. ಹೌದು, ರಾಣಿಯರೂ ಉಪಪತ್ನಿಯರೂ ಇವಳನ್ನು ಹೀಗೆಂದು ಹೊಗಳಿದರು: