Song of Solomon 7:12 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾವು ಹೊತ್ತಾರೆಯಲ್ಲಿ ಎದ್ದು ದ್ರಾಕ್ಷಾತೋಟಗಳಿಗೆ ಹೋಗೋಣ. ದ್ರಾಕ್ಷೆಯು ಚಿಗುರಿದೆಯೋ ಅದರ ಹೂವು ಅರಳಿದೆಯೋ ದಾಳಿಂಬೆ ಹಣ್ಣುಗಳು ಮಾಗಿವಿಯೋ ನೋಡೋಣ. ನನ್ನ ಪ್ರೀತಿಯನ್ನು ನಿನಗೆ ಅಲ್ಲಿ ಸಲ್ಲಿಸುವೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ತೋಟಗಳಿಗೆ ಹೊತ್ತಾರೆ ಹೊರಟು ದ್ರಾಕ್ಷಿಯು ಚಿಗುರಿದೆಯೋ, ಅದರ ಹೂವು ಅರಳಿದೆಯೋ, ದಾಳಿಂಬೆ ಹೂ ಬಿಟ್ಟಿದೆಯೋ ನೋಡೋಣ ಬಾ, ಅಲ್ಲಿ ನನ್ನ ಪ್ರೀತಿಯನ್ನು ನಿನಗೆ ಸಲ್ಲಿಸುವೆನು.
Kannada BSI Bible 2016
ನಾವು ಉದಯದಲ್ಲಿ ಎದ್ದು,ದ್ರಾಕ್ಷೇ ತೋಟಗಳಿಗೆ ಹೋಗಿ, ದ್ರಾಕ್ಷೇ ಬಳ್ಳಿಯು ಬೆಳೆಯುವದೋ? ಅದರ ಎಳೆಗಾಯಿಗಳು ಕಾಣಿ ಸುತ್ತವೋ? ದಾಳಿಂಬರ ಗಿಡಗಳು ಚಿಗುರುತ್ತವೋ ನೋಡುವ. ಅಲ್ಲಿ ನನ್ನ ಪ್ರೀತಿಯನ್ನು ನಿನಗೆ ತೋರಿಸುವೆನು.ಓ ನನ್ನ ಪ್ರಿಯನೇ, ದುದಾಯಗಳು ವಾಸನೆಕೊಡುತ್ತವೆ; ನಮ್ಮ ಬಾಗಲುಗಳ ಬಳಿಯಲ್ಲಿ ನಿನಗೋಸ್ಕರ ನಾನು ಇಟ್ಟುಕೊಂಡ ವಿವಿಧ ಹೊಸ ಹಳೇ ರಮ್ಯವಾದ ಫಲಗಳು ಅವೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ತೋಟಗಳಿಗೆ ಹೊತ್ತಾರೆ ಹೊರಟು ದ್ರಾಕ್ಷೆಯು ಚಿಗುರಿದೆಯೋ, ಅದರ ಹೂವು ಅರಳಿದೆಯೋ, ದಾಳಿಂಬರಗಳು ಪುಷ್ಟಿಸಿವೆಯೋ ನೋಡೋಣ! ಅಲ್ಲಿ ನನ್ನ ಪ್ರೀತಿಯನ್ನು ನಿನಗೆ ಸಲ್ಲಿಸುವೆನು.
Kannada Bible (KNCL) BSI 2016
ಬೆಳಗ್ಗೆ ಹೊರಟು ತೋಟಗಳಿಗೆ ಹೋಗೋಣ ಬಾ ದ್ರಾಕ್ಷಿ ಚಿಗುರಿದೆಯೋ, ಅದರ ಹೂ ಅರಳಿದೆಯೋ ದಾಳಿಂಬೆ ಹೂ ಬಿಟ್ಟಿದೆಯೋ ನೋಡೋಣ ಬಾ ಅಲ್ಲೆ ನಿನಗೆ ನನ್ನ ಪ್ರೀತಿಯನರ್ಪಿಸುವೆ ಬಾ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾವು ಬೆಳಗ್ಗೆ ಹೊರಟು, ದ್ರಾಕ್ಷಿ ತೋಟಗಳಿಗೆ ಹೋಗೋಣ ಬಾ. ದ್ರಾಕ್ಷಿ ಚಿಗುರಿದೆಯೋ, ಅದರ ಹೂ ಅರಳಿದೆಯೋ ದಾಳಿಂಬೆ ಹೂಬಿಟ್ಟಿದೆಯೋ ನೋಡೋಣ ಬಾ. ಅಲ್ಲಿ ನನ್ನ ಪ್ರೀತಿಯನ್ನು ನಿನಗೆ ಅರ್ಪಿಸುವೆನು.