Song of Solomon 7:8 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾನು ಖರ್ಜೂರದ ಮರವನ್ನು ಹತ್ತುವೆನು. ನಾನು ಅದರ ಕೊಂಬೆಗಳನ್ನು ಹಿಡಿದುಕೊಳ್ಳುವೆನು. ನಿನ್ನ ಸ್ತನಗಳು ದ್ರಾಕ್ಷಿಯ ಗೊಂಚಲುಗಳಂತಿರಲಿ. ನಿನ್ನ ಉಸಿರಿನ ವಾಸನೆಯು ಸೇಬು ಹಣ್ಣುಗಳಂತಿರಲಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ಆ ಮರವನ್ನು ಹತ್ತಿ, ರೆಂಬೆಗಳನ್ನು ಹಿಡಿಯುವೆನು ಅಂದುಕೊಂಡೆನು. ನಿನ್ನ ಸ್ತನಗಳು ನನಗೆ ದ್ರಾಕ್ಷಿಯ ಗೊಂಚಲುಗಳಂತಿರಲಿ, ಸೇಬುಹಣ್ಣಿನ ಪರಿಮಳದಂತೆ ನಿನ್ನ ಉಸಿರು.
Kannada BSI Bible 2016
ನಾನು ಖರ್ಜೂರದ ಮರದ ಬಳಿಗೆ ಹೋಗಿ ಅದರ ಗರಿಗಳನ್ನು ಹಿಡುಕೊಳ್ಳುವೆ ಅಂದುಕೊಂಡೆನು. ಇದಲ್ಲದೆ ಈಗ ನಿನ್ನ ಸ್ತನಗಳು ದ್ರಾಕ್ಷೇ ಗೊಂಚಲು ಗಳ ಹಾಗೆಯೂ ನಿನ್ನ ಮೂಗಿನ ವಾಸನೆಯು ಸೇಬುಹಣ್ಣಿನ ಹಾಗೆಯೂ ಇರುವವು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಆ ವೃಕ್ಷವನ್ನು ಹತ್ತಿ ಹಣ್ಣಿನ ತುಂಬುಗಳನ್ನು ಹಿಡಿಯುವೆನು ಅಂದುಕೊಂಡೆನು. ನಿನ್ನ ಸ್ತನಗಳು ನನಗೆ ದ್ರಾಕ್ಷೆಯ ಗೊಂಚಲುಗಳಂತಿರಲಿ, ನಿನ್ನ ಶ್ವಾಸವು ಸೇಬುಹಣ್ಣುಗಳೋಪಾದಿಯಲ್ಲಿ ಪರಿಮಳಿಸಲಿ;
Kannada Bible (KNCL) BSI 2016
ಆ ಮರವನು ಹತ್ತಿ ಹಿಡಿಯುವೆ ರೆಂಬೆಗಳನು ನಿನ್ನ ಸ್ತನಗಳು ನನಗೆ ದ್ರಾಕ್ಷಿಯ ಗೊಂಚಲುಗಳು ಸೇಬುಹಣ್ಣಿನ ಪರಿಮಳದಂತೆ ನಿನ್ನ ಉಸಿರು! ನಲ್ಲೆ:
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು, “ಆ ಖರ್ಜೂರದ ಮರವನ್ನು ಹತ್ತಿ ಅದರ ಗರಿಗಳನ್ನು ಹಿಡಿಯುವೆ,” ಎಂದುಕೊಂಡೆನು. ನಿನ್ನ ಸ್ತನಗಳು ದ್ರಾಕ್ಷಿ ಗೊಂಚಲುಗಳಂತಿರಲಿ, ನಿನ್ನ ಉಸಿರು ಸೇಬು ಹಣ್ಣಿನ ಪರಿಮಳದಂತೆಯೂ ಇರಲಿ.