Titus 1:9 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾವು ಬೋಧಿಸುವ ಸತ್ಯವಾಕ್ಯವನ್ನು ಅವನು ನಂಬಿಗಸ್ತಿಕೆಯಿಂದ ಅನುಸರಿಸಬೇಕು. ಸತ್ಯವಾದ ಮತ್ತು ಯೋಗ್ಯವಾದ ಬೋಧನೆಯಿಂದ ಅವನು ಜನರಿಗೆ ಸಹಾಯ ಮಾಡುವವನಾಗಿರಬೇಕು. ಅವನು ಸತ್ಯಬೋಧನೆಗೆ ವಿರುದ್ಧವಾದ ಜನರಿಗೆ ಅವರ ತಪ್ಪನ್ನು ತೋರಿಸಿಕೊಡುವ ಸಾಮರ್ಥ್ಯ ಉಳ್ಳವನಾಗಿರಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ತಾನು ಸ್ವಸ್ಥಬೋಧನೆಯಿಂದ ಜನರನ್ನು ಎಚ್ಚರಿಸುವುದಕ್ಕೂ, ಸುವಾರ್ತಾ ವಿರೋಧಿಗಳ ಬಾಯಿ ಕಟ್ಟುವುದಕ್ಕೂ ಶಕ್ತನಾಗಿರುವಂತೆ, ಕ್ರಿಸ್ತನ ಉಪದೇಶಕ್ಕೆ ಅನುಸಾರವಾಗಿ ನಂಬತಕ್ಕ ವಚನಗಳನ್ನು, ದೃಢವಾಗಿ ಅವಲಂಬಿಸಿದವನಾಗಿರಬೇಕು.
Kannada BSI Bible 2016
ತಾನು ಸ್ವಸ್ಥ ಬೋಧನೆಯಿಂದ ಎಚ್ಚರಿಸುವದಕ್ಕೂ ಎದುರಿಸು ವವರು ಒಪ್ಪುವಂತೆ ಮಾಡುವದಕ್ಕೂ ಶಕ್ತನಾಗಿರುವಂತೆ ತನಗೆ ಕಲಿಸಲ್ಪಟ್ಟ ಪ್ರಕಾರ ವಿಶ್ವಾಸದ ವಾಕ್ಯವನ್ನು ದೃಢವಾಗಿ ಹಿಡಿದುಕೊಂಡವನಾಗಿರತಕ್ಕದ್ದು.
Kannada BSI JV (ಕನ್ನಡ ಸತ್ಯವೇದವು J.V. (BSI))
ತಾನು ಸ್ವಸ್ಥಬೋಧನೆಯಿಂದ ಜನರನ್ನು ಎಚ್ಚರಿಸುವದಕ್ಕೂ ಎದುರಿಸುವವರ ಬಾಯಿಕಟ್ಟುವದಕ್ಕೂ ಶಕ್ತನಾಗಿರುವಂತೆ ಕ್ರಿಸ್ತ ಬೋಧಾನುಸಾರವಾದ ನಂಬತಕ್ಕ ವಾಕ್ಯವನ್ನು ದೃಢವಾಗಿ ಹಿಡಿದುಕೊಂಡವನಾಗಿರಬೇಕು.
Kannada Bible (KNCL) BSI 2016
ವಿಶ್ವಾಸಿಸಲು ಯೋಗ್ಯವಾದ ಹಾಗೂ ಕ್ರೈಸ್ತತತ್ವಗಳಿಗೆ ಅನುಗುಣವಾದ ಸಿದ್ಧಾಂತಗಳನ್ನು ಅವನು ಭದ್ರವಾಗಿ ಹಿಡಿದವನಾಗಿರಬೇಕು. ಆಗ ಸದ್ಬೋಧನೆಯಿಂದ ಇತರರನ್ನು ಪ್ರೋತ್ಸಾಹಿಸುವುದಕ್ಕೂ ಅದಕ್ಕೆ ವ್ಯತಿರಿಕ್ತವಾಗಿ ನಡೆಯುವವರ ತಪ್ಪುಗಳನ್ನು ಎತ್ತಿತೋರಿಸುವುದಕ್ಕೂ ಆತನು ಸಮರ್ಥನಾಗುತ್ತಾನೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇತರರನ್ನು ಸ್ವಸ್ಥಬೋಧನೆಯಿಂದ ಪ್ರೋತ್ಸಾಹಿಸುವುದಕ್ಕೂ ಎದುರಿಸುವವರನ್ನು ಖಂಡಿಸುವಂತೆ ಮಾತನಾಡುವುದಕ್ಕೂ ಶಕ್ತನಾಗಿರಲು ಅವನು ಬೋಧಿಸಿದ ಪ್ರಕಾರ ನಂಬತಕ್ಕ ವಾಕ್ಯವನ್ನು ದೃಢವಾಗಿ ಹಿಡಿದುಕೊಂಡವನಾಗಿರಬೇಕು.