Titus 3:11 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅಂಥವನು ಕೆಟ್ಟವನೂ ಪಾಪಪೂರಿತನೂ ಆಗಿದ್ದಾನೆ ಎಂಬುದು ನಿನಗೂ ತಿಳಿದಿದೆ. ಅವನು ತನ್ನ ಸ್ವಕಾರ್ಯಗಳಿಂದಲೇ ತಪ್ಪಿತಸ್ಥನೆಂಬ ತೀರ್ಪನ್ನು ಹೊಂದಿದ್ದಾನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಂಥವನು ಸನ್ಮಾರ್ಗದಿಂದ ದೂರವಾದವನೂ ಪಾಪಮಾಡುವವನೂ ಆಗಿದ್ದಾನೆ; ತಾನು ಶಿಕ್ಷೆಗೆ ಅರ್ಹನೆಂದು ಅವನ ಮನಸ್ಸೇ ನಿರ್ಣಯ ಮಾಡುತ್ತದೆ.
Kannada BSI Bible 2016
ಅಂಥವನು ಸನ್ಮಾರ್ಗ ತಪ್ಪಿದವನೂ ಪಾಪಮಾಡುವವನು ಆಗಿದ್ದಾನೆ; ತಾನು ಶಿಕ್ಷಾಪಾತ್ರನೆಂದು ತನ್ನನ್ನು ತಾನೇ ಖಂಡಿಸಿಕೊಳ್ಳುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಂಥವನು ಸನ್ಮಾರ್ಗ ತಪ್ಪಿದವನೂ ಪಾಪಮಾಡುವವನೂ ಆಗಿದ್ದಾನೆ; ತಾನು ಶಿಕ್ಷಾಪಾತ್ರನೆಂದು ಅವನ ಮನಸ್ಸೇ ನಿರ್ಣಯಿಸುವದು.
Kannada Bible (KNCL) BSI 2016
ಅಂಥವನು ಪತಿತ ಹಾಗೂ ಪಾಪಿಯೆಂದು ತಿಳಿ. ಅವನ ದುಷ್ಕೃತ್ಯಗಳೇ ಅವನ ಮೇಲೆ ತೀರ್ಪಿಡುತ್ತವೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅಂಥವರು ಸನ್ಮಾರ್ಗ ತಪ್ಪಿದವರೂ ತಮ್ಮನ್ನು ತಾವೇ ಖಂಡಿಸಿಕೊಳ್ಳುವವರಾಗಿ ಪಾಪಮಾಡುವವರೂ ಆಗಿದ್ದಾರೆಂದು ನಿಶ್ಚಯವಾಗಿ ತಿಳಿದುಕೊ.