Zechariah 1:19 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಈ ಕೊಂಬುಗಳೇನು?” ಎಂದು ನಾನು ದೇವದೂತನೊಂದಿಗೆ ವಿಚಾರಿಸಿದೆನು. ಅದಕ್ಕವನು, “ಇವು ಬಲಿಷ್ಠವಾದ ಕೊಂಬುಗಳು (ಬಲಿಷ್ಠವಾದ ಜನಾಂಗಗಳು); ಇಸ್ರೇಲ್, ಯೆಹೊದ ಮತ್ತು ಜೆರುಸಲೇಮಿನ ಜನರನ್ನು ಪರದೇಶಗಳಿಗೆ ಚದರಿಹೋಗುವಂತೆ ಮಾಡಿವೆ” ಅಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ವಿವರಿಸುವ ದೂತನನ್ನು ಕುರಿತು, “ಇವು ಏನು?” ಎಂದು ನಾನು ಕೇಳಿದ್ದಕ್ಕೆ ಅವನು, “ಇವು ಯೆಹೂದ, ಇಸ್ರಾಯೇಲ್, ಯೆರೂಸಲೇಮನ್ನು ಚದುರಿಸುವ ಕೊಂಬುಗಳು” ಎಂದು ಉತ್ತರಕೊಟ್ಟನು.
Kannada BSI Bible 2016
ಆಗ ನನ್ನ ಕೂಡ ಮಾತನಾಡಿದ ದೂತನಿಗೆ ನಾನು--ಇದೇನು ಅಂದೆನು. ಅದಕ್ಕೆ ಅವನು ನನಗೆ ಉತ್ತರಕೊಟ್ಟು--ಇವು ಯೆಹೂದವನ್ನೂ ಇಸ್ರಾಯೇಲನ್ನೂ ಯೆರೂಸ ಲೇಮನ್ನೂ ಚದರಿಸಿದ ಕೊಂಬುಗಳು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ವಿವರಿಸುವ ದೂತನನ್ನು ಕುರಿತು ಇವು ಏನು ಎಂದು ನಾನು ಕೇಳಿದ್ದಕ್ಕೆ ಅವನು - ಇವು ಯೆಹೂದ ಇಸ್ರಾಯೇಲು ಯೆರೂಸಲೇಮುಗಳನ್ನು ಚದರಿಸಿರುವ ಕೊಂಬುಗಳು ಎಂದು ಉತ್ತರಕೊಟ್ಟನು.
Kannada Bible (KNCL) BSI 2016
“ಈ ಕೊಂಬುಗಳು ಏನನ್ನು ಸೂಚಿಸುತ್ತವೆ?” ಎಂದು ನಾನು ಕೇಳಿದಾಗ ಸೂತ್ರಧಾರಿಯಾದ ದೂತನು: ‘ಇವು ಜೂದ, ಇಸ್ರಯೇಲ್, ಮತ್ತು ಜೆರುಸಲೇಮಿನ ಪ್ರಜೆಗಳನ್ನು ಚದರಿಸಿಬಿಟ್ಟ ಕೊಂಬುಗಳು,’ ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ನನ್ನ ಸಂಗಡ ಮಾತನಾಡಿದ ದೂತನಿಗೆ ನಾನು, “ಇದೇನು?” ಎಂದೆನು. ಅದಕ್ಕೆ ಅವನು ನನಗೆ ಉತ್ತರಕೊಟ್ಟು, “ಇವು ಯೆಹೂದ, ಇಸ್ರಾಯೇಲ್, ಯೆರೂಸಲೇಮನ್ನೂ ಚದರಿಸಿದ ಕೊಂಬುಗಳು,” ಎಂದನು.