Zechariah 1:21 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಯಾವ ಕೆಲಸಕ್ಕಾಗಿ ಈ ಕೆಲಸಗಾರರು ಬರುತ್ತಿದ್ದಾರೆ?” ಎಂದು ನಾನು ವಿಚಾರಿಸಿದೆನು. ಅದಕ್ಕಾತನು, “ಯೆಹೂದದ ಜನರನ್ನು ವಿದೇಶಗಳಲ್ಲಿ ಚದರಿ ಹೋಗುವಂತೆ ಮಾಡಿದ ಜನಾಂಗಗಳನ್ನು ಈ ಕೊಂಬುಗಳು ಸೂಚಿಸುತ್ತವೆ. ಈ ಕೊಂಬುಗಳು ಯೆಹೂದದ ಜನರನ್ನು ಎತ್ತಿ ಪರದೇಶಗಳಿಗೆ ಬಿಸಾಡಿದವು. ಈ ಕೊಂಬುಗಳು ಯಾರಿಗೂ ದಯೆ ತೋರಿಸಲಿಲ್ಲ. ಆದರೆ ಈ ನಾಲ್ಕು ಮಂದಿ ಕೆಲಸಗಾರರು ಆ ಕೊಂಬುಗಳಿಗೆ ಭಯಪಡಿಸಿ ಅವುಗಳನ್ನು ಎತ್ತಿ ಬಿಸಾಡಲು ಬಂದಿದ್ದಾರೆ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ನಾನು, “ಇವರು ಏನು ಮಾಡುವುದಕ್ಕೆ ಬಂದಿದ್ದಾರೆ?” ಎಂದು ಕೇಳಲು ಅವನು, “ಈ ಕೊಂಬುಗಳು ಯೆಹೂದದವರಲ್ಲಿ ಯಾರೂ ತಲೆಯೆತ್ತದಂತೆ ಅವರನ್ನು ಚದುರಿಸಿವೆಯಷ್ಟೆ; ಇವರಾದರೋ ಯೆಹೂದ ದೇಶದವರನ್ನು ಚದುರಿಸಬೇಕೆಂದು ತಲೆಯೆತ್ತಿದ ಜನಾಂಗಗಳ ಕೊಂಬುಗಳನ್ನು ಹೆದರಿಸಿ ಕೆಡುವುದಕ್ಕೆ ಬಂದಿದ್ದಾರೆ” ಎಂದು ಹೇಳಿದನು.
Kannada BSI Bible 2016
ಆಗ ನಾನು--ಇವರು ಏನು ಮಾಡುವದಕ್ಕೆ ಬರುತ್ತಾರೆ ಅಂದೆನು. ಅದಕ್ಕೆ ಆತನು ಮಾತನಾಡಿ ಹೇಳಿದ್ದೇನಂದರೆ--ಯಾವನಾದರೂ ತಲೆಯನ್ನು ಎತ್ತದ ಹಾಗೆ ಯೆಹೂದವನ್ನು ಚದರಿಸಿದ ಕೊಂಬುಗಳು. ಆದರೆ ಇವರು ಅವರನ್ನು ಹೆದರಿಸಿ ಯೆಹೂದ ದೇಶದ ಮೇಲೆ ಅದನ್ನು ಚದರಿಸುವದಕ್ಕೆ ಕೊಂಬನ್ನು ಎತ್ತಿದ ಅನ್ಯಜನಾಂಗಗಳ ಕೊಂಬುಗಳನ್ನು ಕೆಳಗೆ ಹಾಕುವದಕ್ಕೆ ಬಂದಿದ್ದಾರೆ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ನಾನು - ಇವರು ಏನು ಮಾಡುವದಕ್ಕೆ ಬಂದಿದ್ದಾರೆ ಎಂದು ಕೇಳಲು ಅವನು - ಈ ಕೊಂಬುಗಳು ಯೆಹೂದದವರಲ್ಲಿ ಯಾರೂ ತಲೆಯೆತ್ತದಂತೆ ಅವರನ್ನು ಚದರಿಸಿವೆಯಷ್ಟೆ; ಇವರಾದರೋ ಯೆಹೂದ ದೇಶದವರನ್ನು ಚದರಿಸಬೇಕೆಂದು ತಲೆಯೆತ್ತಿದ ಜನಾಂಗಗಳ ಕೊಂಬುಗಳನ್ನು ಹೆದರಿಸಿ ಕೆಡವುವದಕ್ಕೆ ಬಂದಿದ್ದಾರೆ ಎಂದು ಹೇಳಿದನು.
Kannada Bible (KNCL) BSI 2016
“ಇವರು ಏನು ಮಾಡುವುದಕ್ಕೆ ಬಂದಿದ್ದಾರೆ?” ಎಂದು ಕೇಳಿದಾಗ ಆತ: ಯೆಹೂದ್ಯರಲ್ಲಿ ಯಾರೂ ತಲೆಯೆತ್ತದಂತೆ ಅವುಗಳನ್ನು ಚದರಿಸುವ ಕೊಂಬುಗಳು ಅವು. ಇವರಾದರೆ ಜುದೇಯ ನಾಡನ್ನು ಚದರಿಸಬೇಕೆಂದು ತಲೆಯೆತ್ತಿದ ರಾಷ್ಟ್ರಗಳನ್ನೆ ಚದರಿಸಿ ಅವರ ಕೊಂಬುಗಳನ್ನು ಹೊಡೆದು ಕೆಡುವುವುದಕ್ಕೆ ಬಂದಿದ್ದಾರೆ,” ಎಂದು ಹೇಳಿದರು
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು, “ಇವರು ಏನು ಮಾಡುವುದಕ್ಕೆ ಬರುತ್ತಾರೆ?” ಎಂದೆನು. ಅದಕ್ಕೆ ಅವರು, “ಯೆಹೂದ್ಯರಲ್ಲಿ ಯಾರೂ ತಲೆಯೆತ್ತದಂತೆ ಅವುಗಳನ್ನು ಚದರಿಸುವ ಕೊಂಬುಗಳು ಅವು. ಆದರೆ ಇವರು ಯೆಹೂದ ದೇಶವನ್ನು ಚದರಿಸಬೇಕೆಂದು ತಲೆಯೆತ್ತಿದ ರಾಷ್ಟ್ರಗಳನ್ನೇ ಚದರಿಸಿ, ಅದರ ಕೊಂಬುಗಳನ್ನು ಕೆಡವಿ ಹಾಕುವುದಕ್ಕೆ ಬಂದಿದ್ದಾರೆ,” ಎಂದು ಹೇಳಿದರು.