Zechariah 10:5 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಇವರು ಶತ್ರುಗಳನ್ನು ಜಯಿಸುವರು. ಸೈನಿಕರು ರಸ್ತೆಯ ಧೂಳಿನ ಮೇಲೆ ಮುನ್ನಡೆದು ಯೆಹೋವನು ಅವರೊಂದಿಗಿರುವದರಿಂದ ಅವರು ಅಶ್ವಾರೂಢನಾಗಿರುವ ಶತ್ರುಸೈನ್ಯವನ್ನು ಸದೆಬಡಿಯುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇವರು ವೀರರಾಗಿ ರಣರಂಗದೊಳಗೆ ಶತ್ರುಗಳನ್ನು ಬೀದಿಗಳ ಕೆಸರಿನಲ್ಲಿ ತುಳಿದುಬಿಡುವರು; ಯೆಹೋವನು ನಮ್ಮ ಸಂಗಡ ಇದ್ದಾನೆಂದು ಯುದ್ಧಮಾಡುವರು; ಎದುರಿಸುವ ಸವಾರರು ಭಂಗಪಡುವರು.
Kannada BSI Bible 2016
ಅವರು ಯುದ್ಧ ದಲ್ಲಿ ಶತ್ರುವನ್ನು ಬೀದಿಗಳ ಕೆಸರಿನಲ್ಲಿ ತುಳಿಯುವ ಶೂರರ ಹಾಗಿರುವರು; ಕರ್ತನು ಅವರ ಸಂಗಡ ಇರುವದರಿಂದ ಯುದ್ಧಮಾಡುವರು; ಕುದುರೆಗಳ ಮೇಲೆ ಸವಾರಿ ಮಾಡುವವರನ್ನು ನಾಚಿಕೆಪಡಿಸುವರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇವರು ವೀರರಾಗಿ ರಣದೊಳಗೆ [ಶತ್ರುಗಳನ್ನು] ಬೀದಿಗಳ ಕೆಸರಿನಲ್ಲಿ ತುಳಿದುಬಿಡುವರು; ಯೆಹೋವನು ತಮ್ಮ ಸಂಗಡ ಇದ್ದಾನೆಂದು ಯುದ್ಧಮಾಡುವರು; ಎದುರಿಸುವ ಸವಾರರು ಭಂಗಪಡುವರು.
Kannada Bible (KNCL) BSI 2016
ಇವರೆಲ್ಲರು ರಣವೀರರಂತೆ ಶತ್ರುಗಳನ್ನು ಬೀದಿಕೆಸರಿನಲ್ಲಿ ತುಳಿದುಬಿಡುವರು. ಸರ್ವೇಶ್ವರ ತಮ್ಮ ಸಂಗಡ ಇದ್ದಾರೆಂದು ಧೈರ್ಯದಿಂದ ಯುದ್ಧಮಾಡುವರು, ಎದುರಿಸುವ ಕುದುರೆ ಸವಾರರನ್ನು ಭ್ರಾಂತಿಗೊಳಿಸುವರು.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ಯುದ್ಧದಲ್ಲಿ ಶತ್ರುವನ್ನು ಕೆಸರಿನ ಬೀದಿಗಳಲ್ಲಿ ತುಳಿಯುವ ಶೂರರ ಹಾಗಿರುವರು. ಯೆಹೋವ ದೇವರು ಅವರ ಸಂಗಡ ಇರುವುದರಿಂದ ಯುದ್ಧಮಾಡುವರು. ಕುದುರೆಗಳ ಮೇಲೆ ಸವಾರಿ ಮಾಡುವ ಶತ್ರುವನ್ನು ನಾಚಿಕೆ ಪಡಿಸುವರು.