Zechariah 11:13 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ಯೆಹೋವನು ನನಗೆ ಹೇಳಿದ್ದೇನೆಂದರೆ, “ನನ್ನ ಬೆಲೆ ಅಷ್ಟೇ ಎಂದು ಅವರು ನೆನಸುತ್ತಾರೆ. ಆ ಹಣವನ್ನು ತೆಗೆದು ಆಲಯದ ಖಜಾನೆಗೆ ಸುರಿ.” ನಾನು ಆ ಮೂವತ್ತು ಬೆಳ್ಳಿ ನಾಣ್ಯವನ್ನು ತೆಗೆದುಕೊಂಡು ಆಲಯದ ಖಜಾನೆಗೆ ಸುರಿದೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ಇವನ ಯೋಗ್ಯತೆ ಇಷ್ಟೇ ಎಂದುಕೊಂಡು ನನಗೆ ಕೊಟ್ಟ ಆ ಭಾರೀ ಸಂಬಳವನ್ನು ಯೆಹೋವನು ನೋಡಿ, “ಅದನ್ನು ಡಬ್ಬಿಗೆ ಹಾಕು” ಎಂದು ಅಪ್ಪಣೆ ಮಾಡಿದಾಗ ನಾನು ಆ ಮೂವತ್ತು ಶೆಕೆಲ್ ಬೆಳ್ಳಿ ನಾಣ್ಯವನ್ನು ತೆಗೆದು ಯೆಹೋವನ ಆಲಯದ ಡಬ್ಬಿಗೆ ಹಾಕಿದೆನು.
Kannada BSI Bible 2016
ಆಗ ಕರ್ತನು ನನಗೆ--ಅದನ್ನು ಕುಂಬಾರನಿಗೆ ಹಾಕು; ನಾನು ಅವರಿಂದ ಬೆಲೆ ಮಾಡಲ್ಪಟ್ಟದ್ದು ಸರಿಯಾದ ಬೆಲೆ ಅಲ್ಲವೋ ಅಂದನು; ಆಗ ನಾನು ಆ ಮೂವತ್ತು ರೂಪಾಯಿಗಳನ್ನು ತಕ್ಕೊಂಡು ಕರ್ತನ ಆಲಯದಲ್ಲಿ ಅವುಗಳನ್ನು ಕುಂಬಾರನಿಗೆ ಹಾಕಿದೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ಇವನ ಯೋಗ್ಯತೆ ಇಷ್ಟೇ ಎಂದುಕೊಂಡು ನನಗೆ ಕೊಟ್ಟ ಆ ಭಾರೀ ಸಂಬಳವನ್ನು ಯೆಹೋವನು ನೋಡಿ ಅದನ್ನು ಡಬ್ಬಿಗೆ ಹಾಕು ಎಂದು ಅಪ್ಪಣೆಮಾಡಿದಾಗ ನಾನು ಆ ಮೂವತ್ತು ತೊಲ ಬೆಳ್ಳಿಯನ್ನು ತೆಗೆದು ಯೆಹೋವನ ಆಲಯದ ಡಬ್ಬಿಗೆ ಹಾಕಿದೆನು.
Kannada Bible (KNCL) BSI 2016
ಇದನ್ನು ನೋಡಿದ ಸರ್ವೇಶ್ವರ ನನಗೆ: “ಇದನ್ನು ಕಾಣಿಕೆ ಕೋಶದಲ್ಲಿ ಬಿಸಾಡು. ಇದು ತಾನೋ ಅವರು ನನಗೆ ಕೊಡುವಂಥ ಘನವಾದ ಸಂಬಳ!” ಎಂದರು. ಅಂತೆಯೇ ನಾನು ಆ ಮೂವತ್ತು ಬೆಳ್ಳಿನಾಣ್ಯಗಳನ್ನು ತೆಗೆದುಕೊಂಡು ಸರ್ವೇಶ್ವರನ ಆಲಯದ ಕಾಣಿಕೆ ಕೋಶದಲ್ಲಿ ಬಿಸಾಡಿಬಿಟ್ಟೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಯೆಹೋವ ದೇವರು ನನಗೆ, “ಅದನ್ನು ಕುಂಬಾರನಿಗೆ ಎಸೆ. ಅವರು ನನಗೆ ಕಟ್ಟಿದ ಬೆಲೆ ಸರಿಯಾಗಿದೆ,” ಎಂದನು. ಆಗ ನಾನು, ಆ ಬೆಳ್ಳಿ ನಾಣ್ಯಗಳನ್ನು ತೆಗೆದುಕೊಂಡು, ಯೆಹೋವ ದೇವರ ಆಲಯದಲ್ಲಿ ಅವುಗಳನ್ನು ಕುಂಬಾರನಿಗೆ ಎಸೆದೆನು.