Zechariah 11:14 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಮೇಲೆ ನಾನು ‘ಒಗ್ಗಟ್ಟು’ ಎಂಬ ಹೆಸರಿನ ಕೋಲನ್ನು ಎರಡು ತುಂಡಾಗಿ ಮುರಿದೆನು. ಇಸ್ರೇಲ್ ಮತ್ತು ಯೆಹೂದ ರಾಜ್ಯಗಳ ಒಗ್ಗಟ್ಟು ಮುರಿಯಿತು ಎಂದು ತೋರಿಸುವದಕ್ಕಾಗಿ ನಾನು ಹಾಗೆ ಮಾಡಿದೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕೂಡಲೆ ಯೆಹೂದಕ್ಕೂ, ಇಸ್ರಾಯೇಲಿಗೂ ಇದ್ದ ಸಹೋದರಭಾವವನ್ನು ಭಂಗಪಡಿಸಬೇಕೆಂದು “ಒಗ್ಗಟ್ಟು” ಎಂಬ ನನ್ನ ಎರಡನೆಯ ಕೋಲನ್ನು ಮುರಿದುಬಿಟ್ಟೆನು.
Kannada BSI Bible 2016
ಆಗ ನನ್ನ ಎರಡನೇ ಕೋಲಾದ ಬಂಧಗಳನ್ನು ಮುರಿದುಬಿಟ್ಟೆನು; ಹೀಗೆ ಯೆಹೂದಕ್ಕೂ ಇಸ್ರಾಯೇ ಲಿಗೂ ಮಧ್ಯೆ ಇರುವ ಸಹೋದರತನವನ್ನು ಇಲ್ಲದ ಹಾಗೆ ಮಾಡಿದೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕೂಡಲೆ ಯೆಹೂದಕ್ಕೂ ಇಸ್ರಾಯೇಲಿಗೂ ಇದ್ದ ಸಹೋದರಭಾವವನ್ನು ಭಂಗಪಡಿಸಬೇಕೆಂದು ಒಗ್ಗಟ್ಟೆಂಬ ನನ್ನ ಎರಡನೆಯ ಕೋಲನ್ನು ಕತ್ತರಿಸಿಬಿಟ್ಟೆನು.
Kannada Bible (KNCL) BSI 2016
ಕೂಡಲೆ ಜುದೇಯ ಮತ್ತು ಇಸ್ರಯೇಲ್ ನಡುವೆ ಇದ್ದ ಸೋದರ ಸಂಬಂಧವನ್ನು ಮುರಿಯಬೇಕೆಂದು ‘ಐಕ್ಯ’ವೆಂಬ ನನ್ನ ಎರಡನೇ ಕೋಲನ್ನು ಮುರಿದುಬಿಟ್ಟೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ನನ್ನ ಎರಡನೆಯ ಕೋಲಾದ “ಐಕ್ಯ” ಎಂಬುದನ್ನು ಮುರಿದುಬಿಟ್ಟೆನು. ಹೀಗೆ ಯೆಹೂದಕ್ಕೂ, ಇಸ್ರಾಯೇಲಿಗೂ ಮಧ್ಯೆ ಇರುವ ಸಹೋದರತನವನ್ನು ಇಲ್ಲದ ಹಾಗೆ ಮಾಡಿದೆನು.