Zechariah 11:15 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಗ ಯೆಹೋವನು ನನಗೆ ಹೇಳಿದ್ದೇನೆಂದರೆ, “ಒಬ್ಬ ಮೂರ್ಖ ಕುರುಬನು ಉಪಯೋಗಿಸುವ ವಸ್ತುಗಳನ್ನು ತೆಗೆದುಕೊಂಡು ಬಾ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಮೇಲೆ ಯೆಹೋವನು ನನಗೆ ಹೀಗೆ ಅಪ್ಪಣೆ ಮಾಡಿದನು, “ನೀನು ಮತ್ತೊಮ್ಮೆ ತಕ್ಕ ಸಲಕರಣೆಗಳನ್ನು ತೆಗೆದುಕೊಂಡು ಮೂರ್ಖ ಕುರುಬನಂತೆ ನಟಿಸು.
Kannada BSI Bible 2016
ಇದಲ್ಲದೆ ಕರ್ತನು ನನಗೆ ಹೇಳಿದ್ದೇನಂದರೆ --ಇನ್ನು ಬುದ್ಧಿಹೀನವಾದ ಕುರುಬನ ಆಯುಧಗ ಳನ್ನು ತಕ್ಕೋ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಮೇಲೆ ಯೆಹೋವನು ನನಗೆ ಹೀಗೆ ಅಪ್ಪಣೆಮಾಡಿದನು - ನೀನು ಮತ್ತೊಮ್ಮೆ ತಕ್ಕ ಸಲಕರಣೆಗಳನ್ನು ತೆಗೆದುಕೊಂಡು ಮುಕ್ಕಕುರುಬನಂತೆ ನಟಿಸು.
Kannada Bible (KNCL) BSI 2016
ಅನಂತರ ಸರ್ವೇಶ್ವರ ನನಗೆ ಹೀಗೆಂದು ಅಪ್ಪಣೆಮಾಡಿದರು: “ಮತ್ತೊಮ್ಮೆ ನೀನು ವೇಷ ಧರಿಸಿಕೊಂಡು ಮಂಕು ಕುರುಬನಂತೆ ನಟಿಸು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರು ನನಗೆ, “ಇನ್ನು ಬುದ್ಧಿಹೀನವಾದ ಕುರುಬನ ಆಯುಧಗಳನ್ನು ತೆಗೆದುಕೋ.