Zechariah 11:16 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾನು ಈ ದೇಶಕ್ಕೆ ಒಬ್ಬ ಹೊಸ ಕುರುಬನನ್ನು ನೇಮಕ ಮಾಡುವೆನೆಂದು ಆ ರೀತಿಯಾಗಿ ತೋರಿಸುವೆನು. ಆದರೆ ಈ ಮನುಷ್ಯನಿಗೆ ನಾಶಮಾಗುತ್ತಿರುವ ಕುರಿಗಳನ್ನು ಪರಾಮರಿಸಲು ಸಾಧ್ಯವಾಗುವುದಿಲ್ಲ. ಗಾಯಗೊಂಡ ಕುರಿಗಳನ್ನು ಗುಣಮಾಡಲು ಅವನಿಂದ ಸಾಧ್ಯವಾಗುವುದಿಲ್ಲ. ಸಾಯದೆ ಉಳಿದ ಕುರಿಗಳಿಗೆ ಆಹಾರ ಕೊಡಲು ಅವನಿಂದ ಸಾಧ್ಯವಾಗುವುದಿಲ್ಲ. ಪುಷ್ಟಿಕರವಾದ ಕುರಿಗಳನ್ನು ಪೂರ್ತಿಯಾಗಿ ತಿಂದುಹಾಕಲಾಗುವದು. ಅದರ ಗೊರಸುಗಳು ಮಾತ್ರವೇ ಉಳಿಯುವದು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಗೋ, ದೇಶದಲ್ಲಿ ನಾನು ಒಬ್ಬ ಕುರುಬನನ್ನು ನೇಮಿಸುವೆನು; ಅವನು ಹಾಳಾಗುತ್ತಿರುವ ಕುರಿಗಳನ್ನು ನೋಡಿಕೊಳ್ಳನು, ಚದುರಿದವುಗಳನ್ನು ಹುಡುಕನು, ಊನವಾದವುಗಳನ್ನು ಗುಣಪಡಿಸನು, ನೆಟ್ಟಗಿರುವವುಗಳನ್ನು ಸಾಕನು; ಕೊಬ್ಬಿದವುಗಳ ಮಾಂಸವನ್ನು ತಿನ್ನುವನು, ಕುರಿಗಳ ಗೊರಸುಗಳನ್ನು ಚೂರುಚೂರು ಮಾಡುವನು.
Kannada BSI Bible 2016
ಇಗೋ, ನಾನು ದೇಶದಲ್ಲಿ ಒಬ್ಬ ಕುರುಬನನ್ನು ಎಬ್ಬಿಸುವೆನು; ಅವನು ಕೆಟ್ಟು ಹೋಗುವ ವುಗಳನ್ನು ವಿಚಾರಿಸುವದಿಲ್ಲ; ಇಲ್ಲವೆ ಮರಿಯನ್ನು ಅವನು ಹುಡುಕುವದಿಲ್ಲ; ಮುರಿದದ್ದನ್ನು ಅವನು ಗುಣಮಾಡುವದಿಲ್ಲ; ಇನ್ನೂ ನಿಂತಿರುವದನ್ನು ಅವನು ಪೋಷಿಸುವದಿಲ್ಲ; ಆದರೆ ಕೊಬ್ಬಿದವುಗಳ ಮಾಂಸ ವನ್ನು ತಿನ್ನುವನು; ಅವುಗಳ ಗೊರಸುಗಳನ್ನು ಮುರಿದು ಬಿಡುವನು.ಮಂದೆಯನ್ನು ಕೈಬಿಡುವಂಥ ಮೈಗಳ್ಳನಾದ ಕುರುಬನಿಗೆ ಅಯ್ಯೋ! ಕತ್ತಿಯು ಅವನ ತೋಳಿನ ಮೇಲೆಯೂ ಅವನ ಬಲಗಣ್ಣಿನ ಮೇಲೆಯೂ ಇರುವದು; ಅವನ ತೋಳು ತೀರಾ ಒಣಗುವದು; ಅವನ ಬಲಗಣ್ಣು ಪೂರ್ಣವಾಗಿ ಕತ್ತಲಾಗುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಗೋ, ದೇಶದಲ್ಲಿ ನಾನು ಒಬ್ಬ ಕುರುಬನನ್ನು ಏರ್ಪಡಿಸುವೆನು; ಅವನು ಹಾಳಾಗುತ್ತಿರುವ ಕುರಿಗಳನ್ನು ನೋಡಿಕೊಳ್ಳನು, ಚದರಿದವುಗಳನ್ನು ಹುಡುಕನು, ಊನವಾದವುಗಳನ್ನು ಗುಣಪಡಿಸನು, ನೆಟ್ಟಗಿರುವವುಗಳನ್ನು ಸಾಕನು; ಕೊಬ್ಬಿದವುಗಳ ಮಾಂಸವನ್ನು ತಿನ್ನುವನು, ಕುರಿಗಳ ಗೊರಸುಗಳನ್ನು ಚೂರುಚೂರುಮಾಡುವನು.
Kannada Bible (KNCL) BSI 2016
ಏಕೆಂದರೆ ನಾಡಿನಲ್ಲಿ ಒಬ್ಬ ಕುರುಬನು ಏಳುವಂತೆ ನಾನು ಮಾಡುವೆನು. ಅವನು ಅಳಿದುಹೋದ ಕುರಿಗಳನ್ನು ಗುಣಪಡಿಸನು; ಚದರಿಹೋದ ಕುರಿಗಳನ್ನು ಹುಡುಕಿತರನು; ಉಳಿದವುಗಳನ್ನು ಸಾಕಲಾರನು. ಕೊಬ್ಬಿದ ಕುರಿಗಳನ್ನು ಕಡಿದು, ಅವುಗಳ ಗೊರಸುಗಳನ್ನೂ ಸುಲಿದು ಕಬಳಿಸುವನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಏಕೆಂದರೆ ನಾನು ದೇಶದಲ್ಲಿ ಒಬ್ಬ ಕುರುಬನನ್ನು ಎಬ್ಬಿಸುವೆನು. ಅವನು ಕಳೆದುಹೋದ ಕುರಿಗಳ ಬಗ್ಗೆ ಕಾಳಜಿವಹಿಸುವುದಿಲ್ಲ ಮತ್ತು ಪ್ರಾಯದ ಕುರಿಗಳನ್ನು ಹುಡುಕುವುದಿಲ್ಲ, ಗಾಯಗೊಂಡದ್ದನ್ನು ಅವನು ಗುಣ ಮಾಡುವುದಿಲ್ಲ, ಇನ್ನೂ ಆರೋಗ್ಯದಿಂದಿರುವುದನ್ನು ಅವನು ಪೋಷಿಸುವುದಿಲ್ಲ. ಆದರೆ ಕೊಬ್ಬಿದವುಗಳ ಮಾಂಸವನ್ನು ತಿನ್ನುವನು. ಅವುಗಳ ಗೊರಸುಗಳನ್ನು ಮುರಿದು ಬಿಡುವನು.