Zechariah 11:2 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದೇವದಾರು ಮರಗಳು ಬೀಳುವಾಗ ಓಕ್ ಮರಗಳು ರೋದಿಸುವವು. ಆ ಬಲವಾದ ಮರಗಳನ್ನು ತೆಗೆದುಕೊಂಡು ಹೋಗಲಾಗುವುದು. ಅಡವಿಯು ಕಡಿದುಹಾಕಲ್ಪಟ್ಟಿದ್ದಕ್ಕಾಗಿ ಬಾಷಾನಿನ ಶ್ರೇಷ್ಠ ವೃಕ್ಷಗಳು ದುಃಖಿಸುವವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ತುರಾಯಿ ಮರವೇ, ಗೋಳಾಡು! ದೇವದಾರು ಬಿದ್ದಿದೆ, ಶ್ರೇಷ್ಠವೃಕ್ಷಗಳು ನಾಶವಾಗಿವೆ. ಬಾಷಾನಿನ ಅಲ್ಲೋನ್ ಮರಗಳೇ ಕಿರಿಚಿರಿ! ನುಗ್ಗಲಾಗದ ದಟ್ಟವಾದ ವನವು ಉರುಳಿದೆ.
Kannada BSI Bible 2016
ತುರಾಯಿ ಗಿಡವೇ, ಗೋಳಿಡು; ದೇವದಾರು ಬಿದ್ದುಹೋಯಿತು, ಬಲವಾದವುಗಳು ಹಾಳಾದವು; ಬಾಷಾನಿನ ಓಕ್‌ ಮರಗಳೇ, ಗೋಳಾ ಡಿರಿ; ದ್ರಾಕ್ಷೆಯ ಅಡವಿಯು ಇಳಿದು ಬಂದಿದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ತುರಾಯಿ ಮರವೇ, ಗೋಳಾಡು! ದೇವದಾರು ಬಿದ್ದಿದೆ, ಶ್ರೇಷ್ಠವೃಕ್ಷಗಳು ನಾಶವಾಗಿವೆ. ಬಾಷಾನಿನ ಅಲ್ಲೋನ್ ಮರಗಳೇ, ಕಿರಚಿರಿ! ನುಗ್ಗಲಾಗದ ವನವು ಉರುಳಿದೆ.
Kannada Bible (KNCL) BSI 2016
ತುರಾಯಿಮರವೇ, ಗೋಳಾಡು ಬಿದ್ದುಹೋಗಿದೆ ದೇವದಾರು ನಾಶವಾಗಿವೆ ಭಾರೀ ಮರಗಳು. ರೋಧಿಸಲಿ ಬಾಷಾನಿನ ಅಲ್ಲೋನ್ ವೃಕ್ಷಗಳು ಉರುಳಿವೆ ನುಗ್ಗಲಾಗದಾ ದಟ್ಟವನಗಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ತುರಾಯಿ ಗಿಡವೇ, ಗೋಳಾಡು. ಏಕೆಂದರೆ ದೇವದಾರು ಬಿದ್ದುಹೋಯಿತು. ಭವ್ಯವಾದ ಮರಗಳು ಹಾಳಾದವು. ಬಾಷಾನಿನ ಅಲ್ಲೋನ್ ಮರಗಳೇ, ಗೋಳಾಡಿರಿ. ದಟ್ಟವಾದ ಅಡವಿಯು ಕಡಿಯಲಾಗಿದೆ.