Zechariah 11:9 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ನಾನು, “ಸರಿ, ನಾನು ನಿಮ್ಮನ್ನು ಇನ್ನು ನೋಡಿಕೊಳ್ಳುವದಿಲ್ಲ. ಹೋಗಿಬಿಡುತ್ತೇನೆ” ಅಂದೆನು. ಸಾಯಲು ಮನಸ್ಸುಳ್ಳವುಗಳನ್ನು ಸಾಯಲುಬಿಟ್ಟೆನು. ನಾಶವಾಗಲು ಮನಸ್ಸುಳ್ಳವುಗಳನ್ನು ನಾಶವಾಗಲು ಬಿಟ್ಟೆನು. ಅಳಿಯದೆ ಉಳಿದವುಗಳು ಪರಸ್ಪರ ನಾಶಮಾಡಿಕೊಳ್ಳುವವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ, “ನಾನು ನಿಮ್ಮನ್ನು ಮೇಯಿಸೆನು; ಸಾಯುವುದು ಸಾಯಲಿ, ಹಾಳಾಗುವುದು ಹಾಳಾಗಲಿ, ಉಳಿದವುಗಳು ಒಂದರ ಮಾಂಸವೊಂದನ್ನು ತಿನ್ನಲಿ ಅಂದುಕೊಂಡೆನು.”
Kannada BSI Bible 2016
ಆಗ ನಾನು ಹೇಳಿದ್ದೇನಂದರೆ-- ನಾನು ನಿಮ್ಮನ್ನು ಮೇಯಿಸುವದಿಲ್ಲ; ಸಾಯುವಂಥದ್ದು ಸಾಯಲಿ; ಕೆಡುವಂಥದ್ದು ಕೆಡಲಿ; ಮಿಕ್ಕಾದವುಗಳ ಒಂದರ ಮಾಂಸವನ್ನು ಒಂದು ತಿನ್ನಲಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ನಾನು - ನಿಮ್ಮನ್ನು ಮೇಯಿಸೆನು; ಸಾಯುವದು ಸಾಯಲಿ, ಹಾಳಾಗುವದು ಹಾಳಾಗಲಿ, ಉಳಿದವುಗಳು ಒಂದರ ಮಾಂಸವನ್ನೊಂದು ತಿನ್ನಲಿ ಅಂದುಕೊಂಡು
Kannada Bible (KNCL) BSI 2016
ಆಗ ನಾನು: “ಇನ್ನು ಮೇಲೆ ನಾನು ನಿಮ್ಮನ್ನು ಮೇಯಿಸೆನು. ಸಾಯಬೇಕಾದವು ಸಾಯಲಿ, ಹಾಳಾಗಬೇಕಾದವು ಹಾಳಾಗಿಹೋಗಲಿ, ಉಳಿದವುಗಳು ಒಂದನ್ನೊಂದು ಕಚ್ಚಿ ಕಬಳಿಸಿಬಿಡಲಿ,” ಎಂದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ನಾನು, “ನಾನು ನಿಮ್ಮನ್ನು ಮೇಯಿಸುವುದಿಲ್ಲ, ಸಾಯುವಂಥದ್ದು ಸಾಯಲಿ, ಕೆಡುವಂಥದ್ದು ಕೆಡಲಿ, ಮಿಕ್ಕಾದವುಗಳು ಒಂದರ ಮಾಂಸವನ್ನು ಒಂದು ತಿನ್ನಲಿ,” ಎಂದು ಹೇಳಿದೆನು.