Zechariah 12:7 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆಹೋವನು ಯೆಹೂದದ ಜನರನ್ನು ಮೊದಲು ರಕ್ಷಿಸುವನು. ಆಗ ಜೆರುಸಲೇಮಿನ ನಿವಾಸಿಗಳು ತಮ್ಮನ್ನು ಹೆಚ್ಚಿಸಿಕೊಳ್ಳುವದಿಲ್ಲ. ಜೆರುಸಲೇಮಿನಲ್ಲಿ ವಾಸಿಸುವ ದಾವೀದನ ಸಂತತಿಯವರೂ ಇತರರೂ ತಾವು ಯೆಹೂದ ಪ್ರಾಂತ್ಯದಲ್ಲಿ ವಾಸಿಸುವ ಜನರಿಗಿಂತ ಉತ್ತಮರು ಎಂದು ಹೆಚ್ಚಳಪಡುವದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದಾವೀದ ವಂಶದವರ ಮಹಿಮೆಯೂ, ಯೆರೂಸಲೇಮಿನವರ ಮಹಿಮೆಯೂ, ಯೆಹೂದದ ಮಹಿಮೆಯನ್ನು ಮೀರದಂತೆ ಯೆಹೋವನು ಯೆಹೂದದ ಪಾಳೆಯಗಳಿಗೆ ಮೊದಲು ಜಯವನ್ನುಂಟುಮಾಡುವನು;
Kannada BSI Bible 2016
ಇದಲ್ಲದೆ ದಾವೀದನ ಮನೆಯ ಘನತೆಯೂ ಯೆರೂಸಲೇಮಿನ ನಿವಾಸಿಗಳ ಗೌರವವೂ ಯೆಹೂದಕ್ಕೆ ವಿರೋಧವಾಗಿ ಹೆಚ್ಚಳ ಪಡದ ಹಾಗೆ ಕರ್ತನು ಮೊದಲು ಯೆಹೂದದ ಗುಡಾರಗಳನ್ನು ರಕ್ಷಿಸುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ದಾವೀದ ವಂಶದವರ ಮಹಿಮೆಯೂ ಯೆರೂಸಲೇವಿುನವರ ಮಹಿಮೆಯೂ ಯೆಹೂದದ ಮಹಿಮೆಯನ್ನು ಮೀರದಂತೆ ಯೆಹೋವನು ಯೆಹೂದದ ಪಾಳೆಯಗಳಿಗೆ ಮೊದಲು ಜಯವನ್ನುಂಟುಮಾಡುವನು;
Kannada Bible (KNCL) BSI 2016
“ಸರ್ವೇಶ್ವರನಾದ ನಾನು ಜುದೇಯದ ಸೈನ್ಯಗಳು ಮೊದಲು ಜಯಗಳಿಸುವಂತೆ ಮಾಡುವೆನು. ಆಗ ದಾವೀದ ವಂಶದವರ ಹಾಗೂ ಜೆರುಸಲೇಮಿನವರ ಘನತೆ ಗೌರವ ಜುದೇಯದವರ ಘನತೆ ಗೌರವವನ್ನು ಮೀರದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಇದಲ್ಲದೆ ದಾವೀದನ ಮನೆಯ ಘನತೆಯೂ, ಯೆರೂಸಲೇಮಿನ ನಿವಾಸಿಗಳ ಗೌರವವೂ ಯೆಹೂದಕ್ಕೆ ವಿರೋಧವಾಗಿ ಹೆಚ್ಚಳ ಪಡದ ಹಾಗೆ, ಯೆಹೋವ ದೇವರು ಮೊದಲು ಯೆಹೂದದ ಗುಡಾರಗಳನ್ನು ರಕ್ಷಿಸುವರು.