Zechariah 14:13 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆ ಭಯಂಕರವಾದ ವ್ಯಾಧಿಯು ಶತ್ರುಗಳ ಶಿಬಿರದಲ್ಲಿರುವದು. ಅವರ ಬಳಿಯಲ್ಲಿರುವ ಕುದುರೆ, ಹೇಸರಕತ್ತೆ, ಒಂಟೆ ಮತ್ತು ಕತ್ತೆಗಳೆಲ್ಲಾ ಈ ವ್ಯಾಧಿಯಿಂದ ಸಂಕಟಪಡುವವು. ಆ ಸಮಯದಲ್ಲಿ ಆ ಜನರು ನಿಜವಾಗಿಯೂ ಯೆಹೋವನಿಗೆ ಭಯಪಡುವರು. ಪ್ರತಿಯೊಬ್ಬನೂ ತನ್ನ ನೆರೆಯವನ ಕೈಗಳನ್ನು ಹಿಡಿದುಕೊಳ್ಳುವನು ಮತ್ತು ಆ ನೆರೆಯವರು ಪರಸ್ಪರ ಹೊಡೆದಾಡಿಕೊಳ್ಳುವರು. ಯೆಹೂದವೂ ಜೆರುಸಲೇಮಿನೊಂದಿಗೆ ಕಾದಾಡುವದು. ಎಲ್ಲಾ ಜನಾಂಗಗಳ ಐಶ್ವರ್ಯವನ್ನು ಪಟ್ಟಣದ ಸುತ್ತಲೂ ಶೇಖರಿಸಿಟ್ಟಿರುವಾಗಲೂ ಇದು ಸಂಭವಿಸುವುದು. ಆಗ ಅಲ್ಲಿ ಬಹು ಸಂಖ್ಯೆಯಲ್ಲಿ ಬೆಳ್ಳಿಬಂಗಾರ ಮತ್ತು ಬಟ್ಟೆಗಳ ರಾಶಿ ಇರುವದು. (Verses 13-15)
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ದಿನದಲ್ಲಿ ಯೆಹೋವನು ಉಂಟುಮಾಡುವ ದೊಡ್ಡ ಗಲಿಬಿಲಿಯು ಅವರಲ್ಲಿ ಹರಡುವುದು; ಒಬ್ಬರ ಕೈಯನೊಬ್ಬರು ತಡೆಹಿಡಿಯುವರು, ಒಬ್ಬರ ಮೇಲೊಬ್ಬರು ಕೈಯೆತ್ತುವರು.
Kannada BSI Bible 2016
ಆ ದಿನದಲ್ಲಿ ಆಗುವದೇನಂದರೆ --ಕರ್ತನಿಂದಾದ ದೊಡ್ಡ ಕೋಲಾಹಲ ಅವರಲ್ಲಿ ಇರುವದು; ಆಗ ಒಬ್ಬೊಬ್ಬನು ತನ್ನ ತನ್ನ ನೆರೆಯವನ ಕೈಯನ್ನು ಹಿಡಿಯುವನು ಮತ್ತು ಅವನ ಕೈ ತನ್ನ ನೆರೆಯವನ ಮೇಲೆ ಎತ್ತಲ್ಪಡುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ದಿನದಲ್ಲಿ ಯೆಹೋವನು ಉಂಟುಮಾಡುವ ದೊಡ್ಡ ಗಲಿಬಿಲಿಯು ಅವರಲ್ಲಿ ಹರಡುವದು; ಒಬ್ಬರ ಕೈಯನ್ನೊಬ್ಬರು ತಡೆಹಿಡಿಯುವರು, ಒಬ್ಬರ ಮೇಲೊಬ್ಬರು ಕೈಯೆತ್ತುವರು.
Kannada Bible (KNCL) BSI 2016
ಸರ್ವೇಶ್ವರ ಆ ದಿನದಂದು ನಾಡಿನಲ್ಲಿ ಕೋಲಾಹಲವನ್ನೆಬ್ಬಿಸಲು, ಜನರು ಭಯಭೀತಿಗೆ ಒಳಗಾಗುವರು. ಒಬ್ಬರನ್ನೊಬ್ಬರು ತಡೆಹಿಡಿದು ಹೊಡೆದಾಡುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ದಿವಸದಲ್ಲಿ, ಯೆಹೋವ ದೇವರಿಂದಾದ ದೊಡ್ಡ ಕೋಲಾಹಲದಿಂದ ಜನರು ಭಯಭೀತಿಗೆ ಒಳಗಾಗುವರು. ಆಗ ಒಬ್ಬೊಬ್ಬನು ತನ್ನ ತನ್ನ ನೆರೆಯವನ ಕೈಯನ್ನು ಹಿಡಿಯುವನು ಮತ್ತು ಒಬ್ಬರ ಮೇಲೊಬ್ಬರು ಕೈಯೆತ್ತುವರು.