Zechariah 14:20 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆ ಸಮಯದಲ್ಲಿ ಸಮಸ್ತವೂ ಯೆಹೋವನಿಗೆ ಸೇರಿದ್ದಾಗಿರುವದು. ಕುದುರೆಗಳ ಮೇಲಿರುವ ಜೀನಿನ ಮೇಲೂ ಸರ್ವಶಕ್ತನಾದ ಯೆಹೋವನಿಗೆ ಇದು ಮೀಸಲಾಗಿರುವದು ಎಂದು ಬರೆಯಲ್ಪಡುವದು. ಯೆಹೋವನ ಆಲಯದಲ್ಲಿ ಉಪಯೋಗಿಸುವ ಎಲ್ಲಾ ಮಡಕೆಗಳು ಯಜ್ಞವೇದಿಕೆಯ ಮೇಲೆ ಉಪಯೋಗಿಸುವ ಬೋಗುಣಿಗಳಷ್ಟೇ ಮುಖ್ಯವಾಗಿವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ದಿನದಲ್ಲಿ, “ಯೆಹೋವನಿಗೆ ಮೀಸಲು” ಎಂಬ ಲಿಪಿಯು ಕುದುರೆಗಳ ಘಂಟೆಗಳ ಮೇಲೂ ಕೆತ್ತಿರುವುದು; ಯೆಹೋವನ ಆಲಯದ ಪಾತ್ರೆಗಳೆಲ್ಲವೂ ಯಜ್ಞವೇದಿಯ ಪಕ್ಕದ ಬೋಗುಣಿಗಳಂತೆ ಪರಿಶುದ್ಧವಾಗಿರುವವು.
Kannada BSI Bible 2016
ಆ ದಿನದಲ್ಲಿ ಕುದುರೆಗಳ ಗೆಜ್ಜೆಗಳ ಮೇಲೆ ಕರ್ತನಿಗೆ ಪರಿಶುದ್ಧವು ಎಂದಿರುವದು; ಕರ್ತನ ಆಲಯದ ಪಾತ್ರೆಗಳು ಬಲಿಪೀಠದ ಮುಂದಿನ ಪಾತ್ರೆಗಳ ಹಾಗಿರುವವು.ಹೌದು, ಯೆರೂಸಲೇಮಿ ನಲ್ಲಿಯೂ ಯೆಹೂದದಲ್ಲಿಯೂ ಇರುವ ಪ್ರತಿ ಯೊಂದು ಪಾತ್ರೆಯು ಸೈನ್ಯಗಳ ಕರ್ತನಿಗೆ ಪರಿಶುದ್ಧ ವಾಗಿರುವವು; ಯಜ್ಞಗಳನ್ನು ಅರ್ಪಿಸುವವರೆಲ್ಲರು ಬಂದು ಅವುಗಳಲ್ಲಿ ತಕ್ಕೊಂಡು ಬೇಯಿಸುವರು; ಆ ದಿನದಲ್ಲಿ ಕಾನಾನ್ಯನು ಸೈನ್ಯಗಳ ಕರ್ತನ ಆಲಯದಲ್ಲಿ ಇನ್ನು ಮೇಲೆ ಇರುವದೇ ಇಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ದಿನದಲ್ಲಿ - ಯೆಹೋವನಿಗೆ ಮೀಸಲು ಎಂಬ ಲಿಪಿಯು ಕುದುರೆಗಳ ಘಂಟೆಗಳ ಮೇಲೂ ಕೆತ್ತಿರುವದು; ಯೆಹೋವನ ಆಲಯದ ಪಾತ್ರೆಗಳೆಲ್ಲವೂ ಯಜ್ಞವೇದಿಯ ಪಕ್ಕದ ಬೋಗುಣಿಗಳಂತೆ ಪರಿಶುದ್ಧವಾಗಿರುವವು.
Kannada Bible (KNCL) BSI 2016
ಆ ದಿನ ಬಂದಾಗ ‘ಸರ್ವೇಶ್ವರಸ್ವಾಮಿಗೆ ಸಮರ್ಪಿತ’ ಎಂಬ ಲಿಪಿಯು ಕುದುರೆಗಳ ಕತ್ತಿಗೆ ಕಟ್ಟಿರುವ ಗಂಟೆಗಳ ಮೇಲೆ ಕೆತ್ತನೆ ಮಾಡಲಾಗಿರುವುದು. ದೇವಾಲಯದ ಪಾತ್ರೆಗಳೆಲ್ಲವು ಬಲಿಪೀಠದ ಪಾತ್ರೆಗಳಷ್ಟೆ ಪವಿತ್ರವಾಗಿರುವುವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ದಿವಸದಲ್ಲಿ, ಕುದುರೆಗಳ ಘಂಟೆಗಳ ಮೇಲೆ ಯೆಹೋವ ದೇವರಿಗೆ ಪರಿಶುದ್ಧವು ಎಂದಿರುವುದು. ಯೆಹೋವ ದೇವರ ಆಲಯದ ಪಾತ್ರೆಗಳು ಬಲಿಪೀಠದ ಮುಂದಿನ ಪಾತ್ರೆಗಳ ಹಾಗಿರುವುವು.