Zechariah 4:13 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಗ ದೇವದೂತನು ಹೇಳಿದ್ದೇನೆಂದರೆ, “ಇವು ಏನನ್ನು ಸೂಚಿಸುತ್ತವೆ ಎಂದು ನಿನಗೆ ತಿಳಿಯದೋ?” ಅದಕ್ಕೆ ನಾನು, “ಇಲ್ಲ” ಅಂದೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದಕ್ಕೆ ಆ ದೂತನು ನನಗೆ, “ಇವು ಏನೆಂದು ನಿನಗೆ ತಿಳಿಯುವುದಿಲ್ಲವೋ?” ಎಂದು ಕೇಳಿದಾಗ ನಾನು, “ಇಲ್ಲ ಸ್ವಾಮೀ” ಎಂದೆ.
Kannada BSI Bible 2016
ಅವನು ನನಗೆ--ಇವು ಏನೆಂದು ಅರಿಯು ವದಿಲ್ಲವೋ ಅಂದನು.ನಾನು--ನನ್ನ ಒಡೆಯನೇ, ಇಲ್ಲ ಅಂದೆನು. ಆಗ ಅವನು--ಸಮಸ್ತ ಭೂಮಿಯ ಕರ್ತನ ಬಳಿಯಲ್ಲಿ ನಿಲ್ಲುವ ಇಬ್ಬರು ಅಭಿಷೇಕಿಸಲ್ಪಟ್ಟವರು ಇವರೇ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇವು ಏನೆಂದು ನಿನಗೆ ತಿಳಿಯುವದಿಲ್ಲವೋ ಎಂಬದಾಗಿ ನನ್ನನ್ನು ಕೇಳಲು - ಇಲ್ಲ, ಸ್ವಾಮೀ ಎಂದು ಅರಿಕೆಮಾಡಿದೆನು.
Kannada Bible (KNCL) BSI 2016
ಅದಕ್ಕೆ ಆ ದೂತನು: “ಅವು ಏನೆಂದು ನಿನಗೆ ತಿಳಿಯುವುದಿಲ್ಲವೋ” ಎಂದು ಕೇಳಿದಾಗ ನಾನು: “ಇಲ್ಲ, ಸ್ವಾಮೀ,” ಎಂದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ನನಗೆ, “ಇವು ಏನೆಂದು ತಿಳಿಯುವುದಿಲ್ಲವೋ?” ಎಂದನು. ನಾನು, “ನನ್ನ ಒಡೆಯನೇ, ಇಲ್ಲ,” ಎಂದೆನು.