Zechariah 4:14 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ಅವನು, “ಈ ಪ್ರಪಂಚದಲ್ಲಿ ಯೆಹೋವನು ತನ್ನ ಸೇವೆಮಾಡಲು ಆರಿಸಿಕೊಂಡ ಇಬ್ಬರು ಮನುಷ್ಯರನ್ನು ಅವು ಪ್ರತಿನಿಧಿಸುತ್ತವೆ” ಅಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದಕ್ಕೆ ಅವನು, “ಇವು ದೇವರಿಂದ ಆಯ್ಕೆಯಾಗಿ ಎಣ್ಣೆಯಿಂದ ಅಭಿಷೇಕಿಸಲ್ಪಟ್ಟ ಆ ಇಬ್ಬರು ವ್ಯಕ್ತಿಗಳನ್ನು ಸೂಚಿಸುತ್ತವೆ. ಸರ್ವ ಲೋಕದ ಒಡೆಯನ ಸನ್ನಿಧಿಯಲ್ಲಿರುವ ಸೇವಕರನ್ನು ಸೂಚಿಸುತ್ತವೆ” ಎಂದು ಹೇಳಿದನು.
Kannada BSI Bible 2016
ನಾನು--ನನ್ನ ಒಡೆಯನೇ, ಇಲ್ಲ ಅಂದೆನು. ಆಗ ಅವನು--ಸಮಸ್ತ ಭೂಮಿಯ ಕರ್ತನ ಬಳಿಯಲ್ಲಿ ನಿಲ್ಲುವ ಇಬ್ಬರು ಅಭಿಷೇಕಿಸಲ್ಪಟ್ಟವರು ಇವರೇ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದಕ್ಕೆ ಅವನು - ಇವು ಸರ್ವಭೂಲೋಕದೊಡೆಯನ ಸನ್ನಿಧಿ ಸೇವಕರೂ ಎಣ್ಣೆಯ ಬುಗ್ಗೆಗಳೂ ಆದ ಇಬ್ಬರು ಪುರುಷರು ಎಂದು ಹೇಳಿದನು.
Kannada Bible (KNCL) BSI 2016
ಅದಕ್ಕೆ ಅವನು, “ಇವು ದೇವರಿಂದ ಆಯ್ಕೆಯಾಗಿ ಎಣ್ಣೆಯಿಂದ ಅಭಿಷಿಕ್ತರಾದ ಇಬ್ಬರು ವ್ಯಕ್ತಿಗಳನ್ನು ಸೂಚಿಸುತ್ತವೆ. ಸರ್ವಲೋಕದ ಒಡೆಯನ ಸನ್ನಿಧಿಯಲ್ಲಿರುವ ಸೇವಕರನ್ನು ಸೂಚಿಸುತ್ತವೆ,” ಎಂದನು. ಜೆರುಬ್ಬಾಬೆಲನಿಗೆ ದೇವರಿತ್ತ ವಾಗ್ದಾನ ದೂತನು ನನಗೆ ಹೀಗೆಂದು ಹೇಳಿದನು: “ಜೆರುಬ್ಬಾಬೆಲನಿಗೆ ಈ ಸಂದೇಶವನ್ನು ಕೊಡು - ನಿನಗೆ ಜಯ ದೊರಕುವುದು. ನಿನ್ನ ಶಕ್ತಿಸಾಮರ್ಥ್ಯದಿಂದಲ್ಲ, ಸೇನಾಬಲದಿಂದಲೂ ಅಲ್ಲ; ನನ್ನ ಆತ್ಮಶಕ್ತಿಯಿಂದ, ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ. ಅಡ್ಡಿ ಅಡಚಣೆಗಳು ಬೆಟ್ಟದಂತಿದ್ದರೂ ನೀನು ದೇವಾಲಯವನ್ನು ಕಟ್ಟುವೆ. ಅಂತ್ಯದಲ್ಲಿ ಕಲಶವನ್ನು ಸ್ಥಾಪಿಸುವಾಗ ಜನರು ‘ಎಷ್ಟು ರಮ್ಯ! ಎಷ್ಟು ಸುಂದರ!’ ಎಂದು ಉದ್ಗರಿಸುವರು.” ಸರ್ವೇಶ್ವರ ನನಗೆ ಇನ್ನೊಂದು ಸಂದೇಶವಿತ್ತರು: “ಜೆರುಬ್ಬಾಬೆಲನು ಮಹಾದೇವಾಲಯದ ಕಟ್ಟಡಕ್ಕೆ ಅಸ್ತಿಭಾರವನ್ನು ಹಾಕಿದ್ದಾನೆ. ಆ ಕಟ್ಟಡವನ್ನು ಅವನೇ ಪೂರೈಸುವನು. ನಿನ್ನನ್ನು ಜನರ ಬಳಿಗೆ ಕಳುಹಿಸಿದಾತ ಸೇನಾಧೀಶ್ವರ ಸರ್ವೇಶ್ವರ ಎಂದು ಆಗ ಸರ್ವರಿಗೆ ಗೊತ್ತಾಗುವುದು. ಪ್ರಾರಂಭದಲ್ಲಿ ಚಿಕ್ಕಕಾರ್ಯಗಳನ್ನು ನೋಡಿ ಪರಿಹಾಸ್ಯಮಾಡಿದವರು ಆಗ ಜೆರುಬ್ಬಾಬೆಲನ ಕೈಯಲ್ಲಿ ಅಳತೆನೂಲಿನ ಗುಂಡನ್ನು ಕಂಡು ಸಂತೋಷಪಡುವರು.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅವನು, “ಇವು ಸಮಸ್ತ ಭೂಮಿಯ ಕರ್ತ ಆಗಿರುವವರ ಸನ್ನಿಧಿಸೇವೆ ಮಾಡಲು ಅಭಿಷೇಕ ಹೊಂದಿರುವ ಇಬ್ಬರು ಸೇವಕರನ್ನು ಸೂಚಿಸುತ್ತದೆ,” ಎಂದನು.