Zechariah 5:8 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಗ ಆ ದೂತನು, “ಆ ಸ್ತ್ರೀಯು ದುಷ್ಟತನವನ್ನು ಸೂಚಿಸುತ್ತಾಳೆ” ಎಂದು ಹೇಳಿ ದೂತನು ಆ ಸ್ತ್ರೀಯನ್ನು ಬುಟ್ಟಿಯ ತಳಕ್ಕೆ ನೂಕಿ, ಸೀಸದ ಮುಚ್ಚಳವನ್ನು ಹಾಕಿಬಿಟ್ಟನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ದೂತನು ಹೇಳಿದ್ದೇನೆಂದರೆ, “ಇದು ದುಷ್ಟತ್ವವು” ಎಂದು ಹೇಳಿ ಅವಳನ್ನು ಬುಟ್ಟಿಯೊಳಗೆ ಪುನಃ ಅದುಮಿ ಆ ಬುಟ್ಟಿಯ ಮುಚ್ಚಳವನ್ನು ಮುಚ್ಚಿದನು.
Kannada BSI Bible 2016
ಅವಳನ್ನು ಎಫದ ಮಧ್ಯದಲ್ಲಿ ಹಾಕಿ ಆ ನೂಲಿನ ಸೀಸದ ಭಾರವನ್ನು ಅದರ ಬಾಯಿಯ ಮೇಲೆ ಇಟ್ಟನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ಕಂಡು - ಇವಳು ಪಾಪಮೂರ್ತಿ ಎಂದು ಹೇಳಿ ಅವಳನ್ನು ಕೊಳಗದೊಳಗೆ ಅದುವಿು ಸೀಸದ ಭಾರಿ ಮುಚ್ಚಳವನ್ನು ಅದರ ಬಾಯಿಗೆ ಹಾಕಿಬಿಟ್ಟನು.
Kannada Bible (KNCL) BSI 2016
ಸೂತ್ರಧಾರಿಯಾದ ದೂತನು: “ಇವಳೇ ಪಾಪದ ಪ್ರತೀಕ,” ಎಂದು ಹೇಳಿ, ಅವಳನ್ನು ಕೊಳಗದೊಳಗೆ ಅದುಮಿ, ಭಾರವಾದ ಆ ಸೀಸದ ಮುಚ್ಚಳವನ್ನು ತಟ್ಟನೆ ಕೊಳಗದ ಬಾಯಿಗಿಟ್ಟು ಮುಚ್ಚಿಬಿಟ್ಟನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆತನು, “ಇದು ದುಷ್ಟತ್ವವು,” ಎಂದು ಹೇಳಿ ಆಕೆಯನ್ನು ಬುಟ್ಟಿಯಲ್ಲಿ ಪುನಃ ಅದುಮಿ, ಆ ಬುಟ್ಟಿಯ ಮುಚ್ಚಳವನ್ನು ಮುಚ್ಚಿದನು.