Zechariah 7:1 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಪರ್ಶಿಯದ ಅರಸನಾದ ದಾರ್ಯಾವೆಷನ ಆಳ್ವಿಕೆಯ ನಾಲ್ಕನೇ ವರ್ಷದ ಒಂಭತ್ತನೇ ತಿಂಗಳಿನ (ಕಿಸ್ಲೇವ್) ನಾಲ್ಕನೇ ದಿವಸದಲ್ಲಿ ಯೆಹೋವನ ಸಂದೇಶವನ್ನು ಜೆಕರ್ಯನು ಹೊಂದಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅರಸನಾದ ದಾರ್ಯಾವೆಷನ ಆಳ್ವಿಕೆಯ ನಾಲ್ಕನೆಯ ವರ್ಷದ ಕಿಸ್ಲೇವ್ ಎಂಬ ಒಂಭತ್ತನೆಯ ತಿಂಗಳಿನ ನಾಲ್ಕನೆಯ ದಿನದಲ್ಲಿ ಯೆಹೋವನು ಜೆಕರ್ಯನಿಗೆ ಒಂದು ವಾಕ್ಯವನ್ನು ದಯಪಾಲಿಸಿದನು.
Kannada BSI Bible 2016
ಅರಸನಾದ ದಾರ್ಯಾವೆಷನ ನಾಲ್ಕನೇ ವರುಷದಲ್ಲಿ ಆದದ್ದೇನಂದರೆ--ಒಂಭ ತ್ತನೇ ತಿಂಗಳಾದ ಕಿಸ್ಲೇವಿನ ನಾಲ್ಕನೇ ದಿವಸದಲ್ಲಿ ಕರ್ತನ ವಾಕ್ಯವು ಜೆಕರ್ಯನಿಗೆ ಉಂಟಾಯಿತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅರಸನಾದ ದಾರ್ಯಾವೆಷನ ಆಳಿಕೆಯ ನಾಲ್ಕನೆಯ ವರುಷದ ಕಿಸ್ಲೇವ್ ಎಂಬ ಒಂಭತ್ತನೆಯ ತಿಂಗಳಿನ ನಾಲ್ಕನೆಯ ದಿನದಲ್ಲಿ ಯೆಹೋವನು ಜೆಕರ್ಯನಿಗೆ ಒಂದು ವಾಕ್ಯವನ್ನು ದಯಪಾಲಿಸಿದನು.
Kannada Bible (KNCL) BSI 2016
ಅರಸನಾದ ಡೇರಿಯಸನ ಆಳ್ವಿಕೆಯ ನಾಲ್ಕನೆಯ ವರ್ಷದ ಒಂಭತ್ತನೆಯ ತಿಂಗಳ (ಅಂದರೆ ಕಿಸ್ಲೇವ್ ತಿಂಗಳಿನ) ನಾಲ್ಕನೆಯ ದಿನದಲ್ಲಿ ಸರ್ವೇಶ್ವರ ಜೆಕರ್ಯನಿಗೆ ಒಂದು ಸಂದೇಶವನ್ನು ಅನುಗ್ರಹಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅರಸನಾದ ದಾರ್ಯಾವೆಷನ ನಾಲ್ಕನೆಯ ವರ್ಷದಲ್ಲಿ ಒಂಬತ್ತನೆಯ ತಿಂಗಳಿನ ಅಂದರೆ ಕಿಸ್ಲೇವ್ ತಿಂಗಳಿನ ನಾಲ್ಕನೆಯ ದಿವಸದಲ್ಲಿ ಯೆಹೋವ ದೇವರ ವಾಕ್ಯವು ಜೆಕರ್ಯನಿಗೆ ಬಂದಿತು.