Zechariah 9:1 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆಹೋವನಿಂದ ಬಂದ ಸಂದೇಶ: ಹದ್ರಾಕ್ ದೇಶದ ಮತ್ತು ಅದರ ರಾಜಧಾನಿಯಾದ ದಮಸ್ಕ ನಗರದ ವಿರುದ್ಧವಾಗಿ ಯೆಹೋವನ ಸಂದೇಶ: “ಇಸ್ರೇಲ್ ಕುಲದವರು ಮಾತ್ರವೇ ದೇವರನ್ನು ತಿಳಿದವರಲ್ಲ. ಪ್ರತಿಯೊಬ್ಬರೂ ಸಹಾಯಕ್ಕಾಗಿ ಆತನಿಗೆ ಮೊರೆಯಿಡುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನು ನುಡಿದ ದೈವೋಕ್ತಿಯು ಹದ್ರಾಕ್ ದೇಶದ ಮೇಲೆ ಬಿದ್ದಿದೆ. ದಮಸ್ಕವೇ ಅದಕ್ಕೆ ಈಡು; ಯೆಹೋವನು ನರವಂಶದ ಮೇಲೆ ಕಣ್ಣಿಟ್ಟಿದ್ದಾನೆ; ಹೌದು, ಇಸ್ರಾಯೇಲಿನ ಸಕಲ ಕುಲಗಳಲ್ಲಿಯೂ,
Kannada BSI Bible 2016
ಹದ್ರಾಕಿನ ದೇಶದ ವಿಷಯವಾದ ಕರ್ತನ ವಾಕ್ಯದ ಭಾರವು; ಅದು ದಮಸ್ಕದಲ್ಲಿ ತಂಗುವದು; ಮನುಷ್ಯನ ಕಣ್ಣುಗಳು ಇಸ್ರಾಯೇಲಿನ ಎಲ್ಲಾ ಗೋತ್ರಗಳಂತೆ ಕರ್ತನ ಕಡೆಗೆ ಇರುವವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನು ನುಡಿದ ದೈವೋಕ್ತಿಯು ಹದ್ರಾಕ್ ದೇಶದ ಮೇಲೆ ಬಿದ್ದಿದೆ, ದಮಸ್ಕವೇ ಅದಕ್ಕೆ ಈಡು; ಯೆಹೋವನು ನರವಂಶದ ಮೇಲೆ ಕಣ್ಣಿಟ್ಟಿದ್ದಾನೆ, ಹೌದು, ಇಸ್ರಾಯೇಲಿನ ಸಕಲ ಕುಲಗಳಲ್ಲಿಯೂ
Kannada Bible (KNCL) BSI 2016
ಹದ್ರಾಕ್ ನಾಡಿಗೂ ದಮಸ್ಕಪಟ್ಟಣಕ್ಕೂ ವಿರುದ್ಧ ಸರ್ವೇಶ್ವರ ನುಡಿದ ದೈವೋಕ್ತಿ: ಸರ್ವೇಶ್ವರಸ್ವಾಮಿ ನರಮಾನವರ ಮೇಲೆ ಕಣ್ಣಿಟ್ಟಿದ್ದಾರೆ. ಹೌದು ಇಸ್ರಯೇಲಿನ ಸಕಲ ಕುಲಗಳ ಮೇಲೆ ಕಣ್ಣಿಟ್ಟಿದ್ದಾರೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಒಂದು ಪ್ರವಾದನೆ: ಹದ್ರಾಕ್ ದೇಶದ ವಿಷಯವಾದ ಯೆಹೋವ ದೇವರ ವಾಕ್ಯ: ಅದು ದಮಸ್ಕದಲ್ಲಿ ತಂಗುವುದು. ಮನುಷ್ಯನ ಕಣ್ಣುಗಳು, ಇಸ್ರಾಯೇಲಿನ ಎಲ್ಲಾ ಗೋತ್ರಗಳು ಯೆಹೋವ ದೇವರ ಮೇಲೆ ಇರುವುವು.