bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
/
2 Chronicles 18
2 Chronicles 18
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
← Chapter 17
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 19 →
1
ಯೆಹೋಷಾಫಾಟನಿಗೆ ಐಶ್ವರ್ಯವೂ, ಘನತೆಯೂ ಅಧಿಕವಾಗಿರುವಾಗ, ಅವನು ಅಹಾಬನ ಸಂಗಡ ಬಂಧುತ್ವ ಮಾಡಿದನು.
2
ಕೆಲವು ವರ್ಷಗಳ ತರುವಾಯ ಅವನು ಅಹಾಬನ ಬಳಿಗೆ ಸಮಾರ್ಯಕ್ಕೆ ಹೋದನು. ಆಗ ಅಹಾಬನು ಅವನಿಗೋಸ್ಕರವೂ, ಅವನ ಸಂಗಡ ಇದ್ದ ಜನರಿಗೋಸ್ಕರವೂ ಅನೇಕ ಕುರಿದನಗಳನ್ನೂ ವಧಿಸಿ ಔತಣವನ್ನೇರ್ಪಡಿಸಿ, ತನ್ನ ಸಂಗಡ ಯುದ್ಧಕ್ಕಾಗಿ ಗಿಲ್ಯಾದಿನ ರಾಮೋತಿಗೆ ಹೋಗಲು ಪ್ರೇರೇಪಿಸಿದನು.
3
ಇಸ್ರಾಯೇಲಿನ ಅರಸನಾದ ಅಹಾಬನು ಯೆಹೂದದ ಅರಸನಾದ ಯೆಹೋಷಾಫಾಟನಿಗೆ, “ನೀನು ಗಿಲ್ಯಾದಿನ ರಾಮೋತಿನ ಮೇಲೆ ಯುದ್ಧಮಾಡಲು ನನ್ನ ಸಂಗಡ ಬರುತ್ತೀಯಾ?” ಎಂದನು. ಅದಕ್ಕವನು, “ನಾನೂ ನೀನೂ, ನನ್ನ ಜನರೂ ನಿನ್ನ ಜನರೂ ಒಂದೇ ಅಲ್ಲವೇ? ನಾವು ಯುದ್ಧದಲ್ಲಿ ನಿನ್ನ ಸಂಗಡ ಇರುವೆವು,” ಎಂದನು.
4
ಆದರೆ ಯೆಹೋಷಾಫಾಟನು ಇಸ್ರಾಯೇಲಿನ ಅರಸನಿಗೆ, “ಈ ಹೊತ್ತು ಮೊದಲು ಯೆಹೋವ ದೇವರ ಆಲೋಚನೆಯನ್ನು ವಿಚಾರಿಸಿರಿ,” ಎಂದನು.
5
ಆಗ ಇಸ್ರಾಯೇಲಿನ ಅರಸನು ನಾನೂರು ಮಂದಿ ಪ್ರವಾದಿಗಳನ್ನು ಕೂಡಿಸಿ ಅವರಿಗೆ, “ನಾನು ಗಿಲ್ಯಾದಿನ ರಾಮೋತಿನ ಮೇಲೆ ಯುದ್ಧಕ್ಕೆ ಹೋಗಬಹುದೋ, ಬೇಡವೋ?” ಎಂದು ಕೇಳಿದನು. ಅದಕ್ಕವರು, “ಹೋಗು, ದೇವರು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವರು,” ಎಂದರು.
6
ಆದರೆ ಯೆಹೋಷಾಫಾಟನು, “ಯೆಹೋವ ದೇವರ ಪ್ರವಾದಿಗಳಲ್ಲಿ ಇವರ ಹೊರತಾಗಿ ನಾವು ವಿಚಾರಿಸುವ ಹಾಗೆ ಬೇರೆ ಪ್ರವಾದಿ ಇಲ್ಲಿ ಇಲ್ಲವೋ?” ಎಂದು ಕೇಳಿದನು.
7
ಆಗ ಇಸ್ರಾಯೇಲಿನ ಅರಸನು ಯೆಹೋಷಾಫಾಟನಿಗೆ, “ನಾವು ಯೆಹೋವ ದೇವರನ್ನು ವಿಚಾರಿಸುವ ಹಾಗೆ ಇಮ್ಲನ ಮಗ ಮೀಕಾಯನೆಂಬ ಇನ್ನೊಬ್ಬನಿದ್ದಾನೆ. ಆದರೆ ನಾನು ಅವನನ್ನು ದ್ವೇಷ ಮಾಡುತ್ತೇನೆ. ಏಕೆಂದರೆ ಅವನು ನನ್ನನ್ನು ಕುರಿತು ಒಳ್ಳೆಯದನ್ನಲ್ಲ ಯಾವಾಗಲೂ ಕೆಟ್ಟದ್ದನ್ನು ಪ್ರವಾದಿಸುತ್ತಾನೆ,” ಎಂದನು. ಅದಕ್ಕೆ ಯೆಹೋಷಾಫಾಟನು, “ಅರಸನು ಹಾಗೆ ಅನ್ನದಿರಲಿ,” ಎಂದನು.
8
ಆಗ ಇಸ್ರಾಯೇಲಿನ ಅರಸನು ಒಬ್ಬ ಅಧಿಕಾರಿಯನ್ನು ಕರೆದು, “ಇಮ್ಲನ ಮಗನಾದ ಮೀಕಾಯನನ್ನು ಶೀಘ್ರವಾಗಿ ಕರೆದುಕೊಂಡು ಬಾ,” ಎಂದನು.
9
ಇಸ್ರಾಯೇಲಿನ ಅರಸನೂ, ಯೆಹೂದದ ಅರಸನಾದ ಯೆಹೋಷಾಫಾಟನೂ ರಾಜವಸ್ತ್ರಗಳನ್ನು ಧರಿಸಿಕೊಂಡು, ಸಮಾರ್ಯದ ಬಾಗಿಲಿನ ಮುಂದೆ ಬಯಲಿನಲ್ಲಿ ತಮ್ಮ ತಮ್ಮ ಸಿಂಹಾಸನಗಳ ಮೇಲೆ ಕುಳಿತುಕೊಂಡಿದ್ದರು. ಸಕಲ ಪ್ರವಾದಿಗಳೂ ಅವರ ಮುಂದೆ ಪ್ರವಾದಿಸುತ್ತಿದ್ದರು.
10
ಆಗ ಕೆನಾನನ ಮಗನಾದ ಚಿದ್ಕೀಯನು, “ತನಗೆ ಕಬ್ಬಿಣದ ಕೊಂಬುಗಳನ್ನು ಮಾಡಿಕೊಂಡು, ‘ಇವುಗಳಿಂದ ನೀನು ಅರಾಮ್ಯರನ್ನು ನಿರ್ಮೂಲ ಮಾಡುವವರೆಗೂ ಇರಿದು ಹಾಕುವೆ,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದನು.
11
ಸಮಸ್ತ ಪ್ರವಾದಿಗಳೂ ಹಾಗೆಯೇ ಪ್ರವಾದಿಸಿ, “ಗಿಲ್ಯಾದಿನ ರಾಮೋತಿಗೆ ಹೋಗಿ ಜಯ ಹೊಂದು. ಯೆಹೋವ ದೇವರು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವರು,” ಎಂದರು.
12
ಆದರೆ ಮೀಕಾಯನನ್ನು ಕರೆಯಲು ಹೋದ ದೂತನು ಅವನಿಗೆ, “ನೋಡು, ಎಲ್ಲ ಪ್ರವಾದಿಗಳು ಏಕಮನಸ್ಸಿನಿಂದ ಅರಸನಿಗೆ ಒಳ್ಳೆಯದನ್ನೇ ಪ್ರವಾದಿಸಿದ್ದಾರೆ. ನಿನ್ನ ಮಾತು ಅವರಲ್ಲಿ ಒಬ್ಬನ ಮಾತಿನ ಹಾಗೆಯೇ ಇರಲಿ; ಒಳ್ಳೆಯ ಮಾತು ಆಡು,” ಎಂದನು.
13
ಅದಕ್ಕೆ ಮೀಕಾಯನು, “ಯೆಹೋವ ದೇವರ ಜೀವದಾಣೆ, ನನ್ನ ದೇವರು ಏನು ಹೇಳುವರೋ, ಅದನ್ನೇ ಮಾತನಾಡುವೆನು,” ಎಂದನು.
14
ಅವನು ಅರಸನ ಬಳಿಗೆ ಬಂದಾಗ, ಅರಸನು ಅವನಿಗೆ, “ಮೀಕಾಯೆಹುವೇ, ನಾವು ಗಿಲ್ಯಾದಿನ ರಾಮೋತ್ ವಿರುದ್ಧವಾಗಿ ಯುದ್ಧಕ್ಕೆ ಹೋಗಬಹುದೋ ಅಥವಾ ಬೇಡವೋ?” ಎಂದನು. ಆಗ ಅವನು, “ಹೋಗಿ ಜಯ ಹೊಂದಿರಿ. ಅವರು ನಿಮ್ಮ ಕೈವಶರಾಗುವರು,” ಎಂದನು.
15
ಆಗ ಅರಸನು ಅವನಿಗೆ, “ನೀನು ಯೆಹೋವ ದೇವರ ಹೆಸರಿನಲ್ಲಿ ಸತ್ಯವನ್ನಲ್ಲದೆ ಬೇರೊಂದು ನನಗೆ ಹೇಳಬಾರದೆಂದು ನಾನು ಎಷ್ಟು ಸಾರಿ ನಿನಗೆ ಆಣೆ ಇಡಬೇಕು?” ಎಂದನು.
16
ಅದಕ್ಕೆ ಮೀಕಾಯನು, “ಇಸ್ರಾಯೇಲರೆಲ್ಲರು ಕುರುಬನಿಲ್ಲದ ಕುರಿಗಳಂತೆ ಬೆಟ್ಟಗಳ ಮೇಲೆ ಚದರಿಹೋದದ್ದನ್ನು ಕಂಡೆನು. ಆಗ ಯೆಹೋವ ದೇವರು, ‘ಇವರಿಗೆ ಯಜಮಾನನು ಇಲ್ಲ. ಪ್ರತಿ ಮನುಷ್ಯನು ತನ್ನ ತನ್ನ ಮನೆಗೆ ಸಮಾಧಾನವಾಗಿ ಹಿಂದಿರುಗಿ ಹೋಗಲಿ,’ ಎಂಬುದಾಗಿ ಹೇಳಿದರು,” ಎಂದನು.
17
ಆಗ ಇಸ್ರಾಯೇಲಿನ ಅರಸನು ಯೆಹೋಷಾಫಾಟನಿಗೆ, “ಇವನು ನನ್ನನ್ನು ಕುರಿತು ಒಳ್ಳೆಯದನ್ನಲ್ಲ ಕೆಟ್ಟದ್ದನ್ನೇ ಪ್ರವಾದಿಸುವನೆಂದು ನಾನು ನಿನಗೆ ಹೇಳಲಿಲ್ಲವೇ?” ಎಂದನು.
18
ಆಗ ಮೀಕಾಯನು, “ಆದ್ದರಿಂದ ಯೆಹೋವ ದೇವರ ವಾಕ್ಯವನ್ನು ಕೇಳು. ಯೆಹೋವ ದೇವರು ತಮ್ಮ ಸಿಂಹಾಸನದ ಮೇಲೆ ಕುಳಿತುಕೊಂಡಿರುವುದನ್ನೂ ಆಕಾಶದ ಸಮಸ್ತ ಸೈನ್ಯವು ಅವರ ಬಲಗಡೆ ಮತ್ತು ಎಡಗಡೆಯಲ್ಲಿ ನಿಂತಿರುವುದನ್ನೂ ನಾನು ಕಂಡೆನು.
19
ಆಗ ಯೆಹೋವ ದೇವರು, ‘ಇಸ್ರಾಯೇಲಿನ ಅರಸನಾದ ಅಹಾಬನು ಹೋಗಿ ಗಿಲ್ಯಾದಿನ ರಾಮೋತಿನಲ್ಲಿ ಬೀಳುವ ಹಾಗೆ ಅವನನ್ನು ಮರುಳುಗೊಳಿಸುವವನು ಯಾರು?’ ಎಂದರು. “ಒಬ್ಬನು ಒಂದು ವಿಧವಾಗಿಯೂ ಮತ್ತೊಬ್ಬನು ಇನ್ನೊಂದು ವಿಧವಾಗಿಯೂ ಹೇಳುತ್ತಿದ್ದರು.
20
ಕೊನೆಯಲ್ಲಿ, ಒಂದು ಆತ್ಮವು ಹೊರಟುಬಂದು ಯೆಹೋವ ದೇವರ ಮುಂದೆ ನಿಂತು, ‘ನಾನು ಅವನನ್ನು ಮರುಳುಗೊಳಿಸುತ್ತೇನೆ,’ ಎಂದಿತು. “ಆಗ ಯೆಹೋವ ದೇವರು, ‘ಅದು ಹೇಗೆ?’ ಎಂದರು.
21
“ಅದಕ್ಕದು, ‘ನಾನು ಹೊರಟು ಅವನ ಎಲ್ಲಾ ಪ್ರವಾದಿಗಳ ಬಾಯಲ್ಲಿ ಸುಳ್ಳನ್ನಾಡುವ ಆತ್ಮವಾಗಿರುವೆನು,’ ಎಂದಿತು. “ಅದಕ್ಕೆ ಯೆಹೋವ ದೇವರು, ‘ನೀನು ಅವನನ್ನು ಮರುಳುಗೊಳಿಸುವೆ ಮತ್ತು ಜಯಿಸುವೆ, ಹೊರಟುಹೋಗಿ ಹಾಗೆ ಮಾಡು,’ ಎಂದರು.
22
“ಆದ್ದರಿಂದ ಇಗೋ, ಯೆಹೋವ ದೇವರು ಈ ನಿನ್ನ ಪ್ರವಾದಿಗಳ ಬಾಯಿಯಲ್ಲಿ ಸುಳ್ಳನ್ನಾಡುವ ಆತ್ಮವನ್ನು ಇಟ್ಟಿದ್ದಾರೆ. ಇದಲ್ಲದೆ ಯೆಹೋವ ದೇವರು ನಿನ್ನನ್ನು ಕುರಿತು ಕೇಡನ್ನು ಹೇಳಿದ್ದಾರೆ,” ಎಂದನು.
23
ಆಗ ಕೆನಾನನ ಮಗನಾದ ಚಿದ್ಕೀಯನು ಸಮೀಪಕ್ಕೆ ಬಂದು ಮೀಕಾಯನ ಕೆನ್ನೆಯ ಮೇಲೆ ಹೊಡೆದು, “ಯೆಹೋವ ದೇವರ ಆತ್ಮವು ನನ್ನನ್ನು ಬಿಟ್ಟು, ನಿನ್ನ ಸಂಗಡ ಮಾತನಾಡಲು ಯಾವ ಮಾರ್ಗವಾಗಿ ಬಂದಿತು?” ಎಂದನು.
24
ಅದಕ್ಕೆ ಮೀಕಾಯನು, “ಇಗೋ, ನಿನ್ನನ್ನು ಬಚ್ಚಿಟ್ಟುಕೊಳ್ಳಲು ಒಳಕೊಠಡಿಗೆ ನೀನು ಹೋಗುವ ದಿವಸದಲ್ಲಿ ನೋಡುವೆ,” ಎಂದನು.
25
ಆಗ ಇಸ್ರಾಯೇಲಿನ ಅರಸನು ಹೇಳಿದ್ದೇನೆಂದರೆ, “ನೀವು ಮೀಕಾಯನನ್ನು ಹಿಡಿದು ಪಟ್ಟಣದ ಅಧಿಪತಿಯಾದ ಆಮೋನನ ಬಳಿಗೂ, ಅರಸನ ಮಗನಾದ ಯೋವಾಷನ ಬಳಿಗೂ ತೆಗೆದುಕೊಂಡುಹೋಗಿ,
26
‘ನಾನು ಸಮಾಧಾನವಾಗಿ ತಿರುಗಿ ಬರುವವರೆಗೂ ನೀವು ಇವನನ್ನು ಸೆರೆಮನೆಯಲ್ಲಿಟ್ಟು, ಅವನಿಗೆ ರೊಟ್ಟಿ ಮತ್ತು ನೀರನ್ನು ಬಿಟ್ಟು ಮತ್ತೇನೂ ಕೊಡಬೇಡಿರೆಂದು ಅರಸನು ಹೇಳಿದ್ದಾನೆ’ ಎಂದು ತಿಳಿಸು,” ಎಂದನು.
27
ಅದಕ್ಕೆ ಮೀಕಾಯನು, “ನೀನು ಸಮಾಧಾನದಿಂದ ನಿಜವಾಗಿ ಬಂದರೆ, ಯೆಹೋವ ದೇವರು ನನ್ನ ಮುಖಾಂತರ ಮಾತನಾಡಿಲ್ಲ, ಎಂದು ಹೇಳಿ; ಜನರೇ, ನೀವೆಲ್ಲರೂ ನನ್ನ ಮಾತನ್ನು ಗಮನದಲ್ಲಿಡಿರಿ!” ಎಂದು ಕೂಗಿ ಹೇಳಿದನು.
28
ಹೀಗೆಯೇ ಇಸ್ರಾಯೇಲಿನ ಅರಸನೂ, ಯೆಹೂದದ ಅರಸನಾದ ಯೆಹೋಷಾಫಾಟನೂ ಗಿಲ್ಯಾದಿನ ರಾಮೋತಿಗೆ ಹೋದರು.
29
ಆಗ ಇಸ್ರಾಯೇಲಿನ ಅರಸನು ಯೆಹೋಷಾಫಾಟನಿಗೆ, “ನಾನು ವೇಷಹಾಕಿಕೊಂಡು ಯುದ್ಧದಲ್ಲಿ ಪ್ರವೇಶಿಸುವೆನು. ಆದರೆ ನೀನು ನಿನ್ನ ರಾಜವಸ್ತ್ರಗಳನ್ನು ಧರಿಸಿಕೊಂಡಿರು,” ಎಂದನು. ಹಾಗೆಯೇ ಇಸ್ರಾಯೇಲಿನ ಅರಸನು ವೇಷಹಾಕಿಕೊಂಡು ಯುದ್ಧಕ್ಕೆ ಹೋದನು.
30
ಅರಾಮಿನ ಅರಸನು ತನ್ನ ರಥಗಳ ಮೇಲೆ ಅಧಿಕಾರವುಳ್ಳವರಿಗೆ, “ನೀವು ಶತ್ರುಗಳ ಸಾಧಾರಣ ಸೈನಿಕರನ್ನೂ ಅಧಿಪತಿಗಳನ್ನೂ ಬಿಟ್ಟು ಇಸ್ರಾಯೇಲಿನ ಅರಸನನ್ನು ಮಾತ್ರ ಗುರಿಯಾಗಿಸಿಕೊಂಡು ಯುದ್ಧಮಾಡಿರಿ,” ಎಂದು ಆಜ್ಞಾಪಿಸಿದನು.
31
ಆದ್ದರಿಂದ ರಥಗಳ ಅಧಿಪತಿಗಳು ಯೆಹೋಷಾಫಾಟನನ್ನು ಕಂಡಾಗ, “ಇವನೇ ಇಸ್ರಾಯೇಲಿನ ಅರಸನು,” ಎಂದು ಹೇಳಿ ಅವನ ಸಂಗಡ ಯುದ್ಧಮಾಡುವುದಕ್ಕೆ ತಿರುಗಿಕೊಂಡರು. ಆದರೆ ಯೆಹೋಷಾಫಾಟನು ಕೂಗಿಕೊಂಡನು. ಆಗ ಯೆಹೋವ ದೇವರು ಅವನಿಗೆ ಸಹಾಯಮಾಡಿ, ಶತ್ರುಗಳನ್ನು ಅವನ ಕಡೆಯಿಂದ ತೊಲಗಿಸಿದರು.
32
ಅವನು ಇಸ್ರಾಯೇಲಿನ ಅರಸನಲ್ಲವೆಂದು ರಥಗಳ ಅಧಿಪತಿಗಳಿಗೆ ಗೊತ್ತಾದಾಗ, ಅವರು ಅವನನ್ನು ಬಿಟ್ಟುಹೋದರು.
33
ಆದರೆ ಅರಾಮ್ಯರ ಸೈನಿಕನೊಬ್ಬನು ಗುರಿ ಇಡದೆ ಬಿಲ್ಲಿಗೆ ಬಾಣವನ್ನೇರಿಸಿ ಹೊಡೆಯಲು, ಅದು ಇಸ್ರಾಯೇಲಿನ ಅರಸನಿಗೆ, ಅವನ ಕವಚದ ಸಂದಿನಲ್ಲಿ ಬಂದು ತಾಕಿತು. ಆದ್ದರಿಂದ ಅವನು ತನ್ನ ರಥ ನಡೆಸುವವನಿಗೆ, “ನೀನು ರಥವನ್ನು ತಿರುಗಿಸಿ ನನ್ನನ್ನು ಸೈನ್ಯದೊಳಗಿಂದ ಆಚೇಕಡೆಗೆ ತೆಗೆದುಕೊಂಡು ಹೋಗು, ನನಗೆ ದೊಡ್ಡ ಗಾಯವಾಗಿದೆ,” ಎಂದನು.
34
ಆ ದಿವಸವೆಲ್ಲಾ ಯುದ್ಧವು ಬಹು ಘೋರವಾದದ್ದರಿಂದ ಇಸ್ರಾಯೇಲಿನ ಅರಸನಾದ ಅಹಾಬನು ಸಾಯಂಕಾಲದವರೆಗೂ ಅರಾಮ್ಯರಿಗೆ ಎದುರಾಗಿ ರಥದಲ್ಲಿಯೇ ಆತುಕೊಂಡು ನಿಂತಿದ್ದನು, ಸೂರ್ಯನು ಅಸ್ತಮಿಸಿದಾಗ ಅವನು ಮರಣಹೊಂದಿದನು.
← Chapter 17
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 19 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36