bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
/
2 Kings 12
2 Kings 12
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
← Chapter 11
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 13 →
1
ಯೇಹುವಿನ ಆಳ್ವಿಕೆಯ ಏಳನೆಯ ವರ್ಷದಲ್ಲಿ ಯೋವಾಷನು ಅರಸನಾಗಿ, ಯೆರೂಸಲೇಮಿನಲ್ಲಿ ನಲವತ್ತು ವರ್ಷ ಆಳಿದನು. ಅವನ ತಾಯಿಯ ಹೆಸರು ಚಿಬ್ಯಳು. ಅವಳು ಬೇರ್ಷೆಬ ಊರಿನವಳು.
2
ಯಾಜಕನಾದ ಯೆಹೋಯಾದಾವನು ಯೋವಾಷನಿಗೆ ಬೋಧಿಸಿದ ಎಲ್ಲಾ ವರ್ಷಗಳಲ್ಲಿ ಯೋವಾಷನು ಯೆಹೋವ ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿದನು.
3
ಆದರೂ ಪೂಜಾಸ್ಥಳಗಳನ್ನು ತೆಗೆದುಹಾಕಲಿಲ್ಲ ಆದ್ದರಿಂದ ಜನರು ಪೂಜಾಸ್ಥಳಗಳ ಮೇಲೆ ಬಲಿಗಳನ್ನೂ ಧೂಪಗಳನ್ನೂ ಅರ್ಪಿಸುವುದನ್ನು ಮುಂದುವರೆಸಿದ್ದರು.
4
ಯೋವಾಷನು ಯಾಜಕರಿಗೆ, “ಯೆಹೋವ ದೇವರ ಆಲಯಕ್ಕೆ ಪವಿತ್ರ ಅರ್ಪಣೆಗಳಾಗಿ ತರಲಾದ ಜನಗಣತಿಯಲ್ಲಿ ಸಂಗ್ರಹಿಸಿದ ಹಣ, ವೈಯಕ್ತಿಕ ಪ್ರತಿಜ್ಞೆಗಳಿಂದ ಪಡೆದ ಹಣ ಮತ್ತು ದೇವಾಲಯಕ್ಕೆ ಸ್ವಯಂಪ್ರೇರಣೆಯಿಂದ ತಂದ ಹಣವನ್ನು ಸಂಗ್ರಹಿಸಿರಿ ಎಂದನು.
5
ಯಾಜಕರಲ್ಲಿ ಪ್ರತಿಯೊಬ್ಬನು ಖಜಾಂಚಿಯವರಿಂದ ಹಣವನ್ನು ತೆಗೆದುಕೊಂಡು ಆಲಯದಲ್ಲಿ ಕಂಡುಕೊಳ್ಳುವ ಒಡಕುಗಳನ್ನೆಲ್ಲಾ ದುರಸ್ತಿ ಮಾಡಿಸಲು ಉಪಯೋಗಿಸಿರಿ,” ಎಂದನು.
6
ಆದರೆ ಯಾಜಕರು ಅರಸನಾದ ಯೋವಾಷನ ಆಳ್ವಿಕೆಯ ಇಪ್ಪತ್ತಮೂರನೆಯ ವರ್ಷದವರೆಗೂ ದೇವಾಲಯವನ್ನು ದುರಸ್ತಿ ಮಾಡದೆ ಇದ್ದರು.
7
ಆದ್ದರಿಂದ ಅರಸನಾದ ಯೋವಾಷನು ಯಾಜಕನಾದ ಯೆಹೋಯಾದಾವನನ್ನು, ಇತರ ಯಾಜಕರನ್ನು ಕರೆದು ಅವರಿಗೆ, “ನೀವು ದೇವಾಲಯದ ಒಡಕುಗಳನ್ನು ಏಕೆ ದುರಸ್ತಿ ಮಾಡಿಸುತ್ತಿಲ್ಲ? ಇನ್ನು ಮೇಲೆ ನೀವು ನಿಮಗೆ ಪರಿಚಯವಿರುವ ಖಜಾಂಚಿಯವರಿಂದ ಹಣವನ್ನು ತೆಗೆದುಕೊಳ್ಳದೆ ದೇವಾಲಯದ ಒಡಕುಗಳನ್ನು ದುರಸ್ತಿ ಮಾಡಿಸಲು ಅದನ್ನು ಒಪ್ಪಿಸಿಕೊಡಿರಿ,” ಎಂದನು.
8
ಆಗ ಯಾಜಕರು, “ನಾವು ಇನ್ನು ಮುಂದೆ ಜನರಿಂದ ಹಣ ತೆಗೆದುಕೊಳ್ಳುವುದಿಲ್ಲ, ದೇವಾಲಯದ ದುರಸ್ತಿಗಾಗಿ ಕೈ ಹಾಕುವುದಿಲ್ಲ,” ಎಂಬುದಾಗಿ ಮಾತುಕೊಟ್ಟರು.
9
ಯಾಜಕನಾದ ಯೆಹೋಯಾದಾವನು ಒಂದು ಪೆಟ್ಟಿಗೆಯನ್ನು ತೆಗೆದುಕೊಂಡು ಅದರ ಮುಚ್ಚಳದಲ್ಲಿ ಒಂದು ರಂಧ್ರವನ್ನು ಮಾಡಿದನು. ಅವನು ಅದನ್ನು ಬಲಿಪೀಠದ ಬಳಿಯಲ್ಲಿ ಯೆಹೋವ ದೇವರ ಆಲಯ ಪ್ರವೇಶದ ಬಲಗಡೆಯಲ್ಲಿ ಇಟ್ಟನು. ಆಗ ಬಾಗಿಲು ಕಾಯುವ ಯಾಜಕರು ಯೆಹೋವ ದೇವರ ಆಲಯಕ್ಕೆ ತರಲಾದ ಹಣವನ್ನೆಲ್ಲಾ ಅದರಲ್ಲಿ ಹಾಕಿಸುತ್ತಿದ್ದರು.
10
ಪೆಟ್ಟಿಗೆಯಲ್ಲಿ ಬಹಳ ಹಣ ಉಂಟೆಂದು ಅವರು ಕಂಡಾಗಲೆಲ್ಲಾ ಅರಸನ ಲೇಖಕನೂ, ಮಹಾಯಾಜಕನೂ ಬಂದು, ಯೆಹೋವ ದೇವರ ಆಲಯದಲ್ಲಿ ತಂದಿದ್ದ ಹಣವನ್ನು ಎಣಿಸಿ, ಚೀಲಗಳಲ್ಲಿ ಹಾಕಿದರು.
11
ಅವರು ಎಣಿಸಿದ ಹಣವನ್ನು ಯೆಹೋವ ದೇವರ ಆಲಯದ ಕೆಲಸಕ್ಕೆ ನೇಮಕಗೊಂಡ ಮೇಲ್ವಿಚಾರಕರ ಕೈಯಲ್ಲಿ ಅದನ್ನು ಒಪ್ಪಿಸಿದರು. ಅದರೊಂದಿಗೆ, ಅವರು ಯೆಹೋವ ದೇವರ ದೇವಸ್ಥಾನದಲ್ಲಿ ಕೆಲಸ ಮಾಡುವ ಬಡಗಿ, ಶಿಲ್ಪಿ,
12
ಉಪ್ಪಾರ, ಕಲ್ಲುಕುಟಿಗರಿಗೆ ಕೊಟ್ಟರು. ಇದಲ್ಲದೆ ಯೆಹೋವ ದೇವರ ಆಲಯವನ್ನು ದುರಸ್ತಿ ಮಾಡುವುದಕ್ಕೆ ಮರ, ಕೆತ್ತಿದ ಕಲ್ಲುಗಳನ್ನು ತೆಗೆದುಕೊಳ್ಳುವುದಕ್ಕೂ, ಆಲಯ ದುರಸ್ತಿ ಮಾಡಲು ಬೇಕಾದ ಸಮಸ್ತ ಖರ್ಚಿಗೂ ಕೊಟ್ಟರು.
13
ಯೆಹೋವ ದೇವರ ಆಲಯದೊಳಗೆ ತಂದ ಹಣದಿಂದ ಬೆಳ್ಳಿ ಬಟ್ಟಲು, ಕತ್ತರಿ, ಪಾತ್ರೆ, ತುತೂರಿ, ಬೆಳ್ಳಿಬಂಗಾರದ ಸಾಮಾನುಗಳು, ಇವೆಲ್ಲವುಗಳನ್ನು ಮಾಡಿಸದೆ,
14
ಅವರು ಅದನ್ನು ಕೆಲಸದವರಿಗೆ ಕೊಟ್ಟು, ಯೆಹೋವ ದೇವರ ಆಲಯದ ದುರಸ್ತಿ ಮಾಡಿಸಿದರು.
15
ಇದಲ್ಲದೆ ಅವರು ಕೆಲಸಮಾಡುವವರಿಗೆ ಹಣ ಕೊಡುವುದಕ್ಕೆ ಯಾರ ಕೈಯಲ್ಲಿ ಒಪ್ಪಿಸಿದ್ದರೋ, ಅವರಿಂದ ಹಣದ ಲೆಕ್ಕವನ್ನು ತೆಗೆದುಕೊಳ್ಳಲಿಲ್ಲ, ಏಕೆಂದರೆ ಅವರು ನಂಬಿಗಸ್ತರಾಗಿದ್ದರು.
16
ಆದರೆ ಪ್ರಾಯಶ್ಚಿತ್ತ ಬಲಿಯ ಹಣವನ್ನು, ಪಾಪ ಪರಿಹಾರದ ಬಲಿಯ ಹಣವನ್ನು ಯೆಹೋವ ದೇವರ ಆಲಯಕ್ಕೆ ತೆಗೆದುಕೊಂಡು ಬರಲಿಲ್ಲ, ಅದು ಯಾಜಕರದಾಗಿತ್ತು.
17
ಈ ಸಮಯದಲ್ಲಿ ಅರಾಮ್ಯರ ಅರಸನಾದ ಹಜಾಯೇಲನು ಹೋಗಿ ಗತ್ ಊರಿನ ಮೇಲೆ ಯುದ್ಧಮಾಡಿ, ಅದನ್ನು ವಶಪಡಿಸಿಕೊಂಡನು. ನಂತರ ಹಜಾಯೇಲನು ಯೆರೂಸಲೇಮಿನ ಮೇಲೆ ದಾಳಿಮಾಡಲು ಹೊರಟನು.
18
ಆಗ ಯೆಹೂದದ ಅರಸನಾದ ಯೋವಾಷನು ತನ್ನ ಪೂರ್ವಜರಾದ ಯೆಹೋಷಾಫಾಟ, ಯೆಹೋರಾಮ್, ಅಹಜ್ಯ ಎಂಬ ಯೆಹೂದದ ಅರಸರು ಅರ್ಪಿಸಿದ ಸಮಸ್ತ ಪ್ರತಿಷ್ಠಿತವಾದವುಗಳನ್ನೂ ತಾನೇ ಸ್ವತಃ ಅರ್ಪಿಸಿದ ಪ್ರತಿಷ್ಠಿತವಾದವುಗಳನ್ನೂ ಯೆಹೋವ ದೇವರ ಆಲಯದ ಬೊಕ್ಕಸದಲ್ಲಿಯೂ, ಅರಸನ ಮನೆಯಲ್ಲಿಯೂ ಸಿಕ್ಕಿದ ಸಕಲ ಬಂಗಾರವನ್ನೂ ತೆಗೆದುಕೊಂಡು ಅರಾಮಿನ ಅರಸನಾದ ಹಜಾಯೇಲನಿಗೆ ಕಳುಹಿಸಿದನು. ಆಗ ಅವನು ಯೆರೂಸಲೇಮನ್ನು ಬಿಟ್ಟುಹೋದನು.
19
ಯೋವಾಷನ ಇತರ ಕಾರ್ಯಗಳು, ಅವನು ಮಾಡಿದ್ದೆಲ್ಲವೂ ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
20
ಯೋವಾಷನ ಸೇವಕರು ಎದ್ದು ಅವನಿಗೆ ವಿರೋಧವಾಗಿ ಒಳಸಂಚುಮಾಡಿ, ಸಿಲ್ಲಾ ಊರಿಗೆ ಇಳಿದು ಹೋಗುವ ಮಾರ್ಗವಾದ ಬೇತ್ ಮಿಲ್ಲೋ ಎಂಬ ಸ್ಥಳದಲ್ಲಿ ಯೋವಾಷನನ್ನು ಕೊಂದುಹಾಕಿದರು.
21
ಅವನ ಸೇವಕರಾದ ಶಿಮೆಯಾತನ ಮಗ ಯೋಜಾಬಾದ್ ಮತ್ತು ಶೋಮೇರನ ಮಗ ಯೆಹೋಜಾಬಾದ್ ಎಂಬವರು ಅರಸನನ್ನು ಕೊಂದರು. ಯೋವಾಷನ ಜನರು ಅವನ ಶವವನ್ನು ದಾವೀದನ ಪಟ್ಟಣದಲ್ಲಿ ಅವನ ಪಿತೃಗಳ ಬಳಿಯಲ್ಲಿ ಸಮಾಧಿಮಾಡಿದರು. ಅವನ ಮಗ ಅಮಚ್ಯನು ಅವನಿಗೆ ಬದಲಾಗಿ ಅರಸನಾದನು.
← Chapter 11
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 13 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25