bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
/
Ezekiel 46
Ezekiel 46
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
← Chapter 45
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 37
Chapter 38
Chapter 39
Chapter 40
Chapter 41
Chapter 42
Chapter 43
Chapter 44
Chapter 45
Chapter 46
Chapter 47
Chapter 48
Chapter 47 →
1
“ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಒಳಗಿನ ಅಂಗಳದ ಪೂರ್ವದಿಕ್ಕಿನ ಎದುರಾಗಿರುವ ಬಾಗಿಲು ಕೆಲಸ ನಡೆಯುವ ಆರು ದಿವಸಗಳಲ್ಲಿ ಮುಚ್ಚಲಾಗಬೇಕು. ಆದರೆ ಸಬ್ಬತ್ ದಿನದಲ್ಲಿ ಅದು ತೆರೆದಿರಬೇಕು. ಅಮಾವಾಸ್ಯೆಯ ದಿನದಲ್ಲೂ ಅದು ತೆರೆದಿರಬೇಕು.
2
ರಾಜಕುಮಾರನು ಆ ಬಾಗಿಲಿನ ದ್ವಾರಮಂಟಪ ಮಾರ್ಗವಾಗಿ ಹೊರಗಿನಿಂದ ಪ್ರವೇಶಿಸಿ ಬಾಗಿಲಿನ ಕಂಬದ ಬಳಿಯಲ್ಲಿ ನಿಲ್ಲಬೇಕು. ಆಗ ಯಾಜಕರು ಅವನ ದಹನಬಲಿಯನ್ನು ಅವನ ಸಮಾಧಾನದ ಬಲಿಗಳನ್ನು ಸಿದ್ಧಮಾಡಬೇಕು. ಬಾಗಿಲಿನ ಹೊಸ್ತಿಲಲ್ಲಿ ಆರಾಧಿಸಿ ಹೋಗಬೇಕು. ಆದರೆ ಬಾಗಿಲು ಸಂಜೆಯವರೆಗೂ ಮುಚ್ಚದಿರಬೇಕು.
3
ದೇಶದ ಜನರು ಸಬ್ಬತ್ ದಿನಗಳಲ್ಲಿಯೂ ಅಮಾವಾಸ್ಯೆಗಳಲ್ಲಿಯೂ ಈ ಬಾಗಿಲಿನ ಕದದ ಹತ್ತಿರ ಯೆಹೋವ ದೇವರ ಮುಂದೆ ಇದೇ ರೀತಿ ಆರಾಧಿಸಬೇಕು.
4
ರಾಜಕುಮಾರನು ಯೆಹೋವ ದೇವರಿಗೆ ಸಬ್ಬತ್ ದಿನದಲ್ಲಿ ಪೂರ್ಣಾಂಗವಾದ ಆರು ಕುರಿಮರಿಗಳು, ಪೂರ್ಣಾಂಗವಾದ ಒಂದು ಟಗರು ದಹನಬಲಿಯಾಗಿ ಅರ್ಪಿಸಬೇಕು.
5
ಟಗರಿನ ಜೊತೆಗೆ ಕೊಡುವ ಧಾನ್ಯ ಸಮರ್ಪಣೆಯು ಸುಮಾರು ಹದಿನಾರು ಕಿಲೋಗ್ರಾಂ ಆಗಿರಬೇಕು ಮತ್ತು ಕುರಿಮರಿಗಳ ಜೊತೆಗೆ ಕೊಡುವ ಧಾನ್ಯ ಸಮರ್ಪಣೆಯು ಅವನ ಕೈಲಾದಷ್ಟು ಆಗಿರಬೇಕು. ಇದರ ಜೊತೆಗೆ ಪ್ರತಿ ಎಫಾ ಪ್ರಮಾಣದ ಧಾನ್ಯ ಸಮರ್ಪಣೆಯಾಗಿ ಸುಮಾರು ಮೂರುವರೆ ಲೀಟರ್ ಎಣ್ಣೆಯನ್ನು ಅರ್ಪಿಸಬೇಕು.
6
ಅಮಾವಾಸ್ಯೆಯ ದಿನದಲ್ಲಿ ಪೂರ್ಣಾಂಗವಾದ ಒಂದು ಎಳೆಯ ಹೋರಿ, ಆರು ಕುರಿಮರಿಗಳು, ಒಂದು ಟಗರನ್ನು ಅರ್ಪಿಸಬೇಕು. ಇವು ದೋಷವಿಲ್ಲದ್ದಾಗಿರಬೇಕು.
7
ಅವನು ಹೋರಿಗೆ ಒಂದು ಎಫವನ್ನೂ ಟಗರಿಗೆ ಒಂದು ಎಫವನ್ನೂ ಮತ್ತು ಕುರಿಮರಿಗೆ ಅವನ ಕೈಲಾಗುವಷ್ಟನ್ನು ಎಫ ಒಂದಕ್ಕೆ ಎಣ್ಣೆಯ ಒಂದು ಹಿನ್ನಿನ ಜೊತೆಗೆ ಅವನು ಧಾನ್ಯ ಸಮರ್ಪಣೆಗಾಗಿ ಸಿದ್ಧಮಾಡಬೇಕು.
8
ರಾಜಕುಮಾರನು ಪ್ರವೇಶಿಸುವಾಗ, ಅವನು ಬಾಗಿಲಿನ ದ್ವಾರಮಂಟಪದ ಪ್ರಕಾರವಾಗಿ ಪ್ರವೇಶಿಸಿ, ಅದೇ ಮಾರ್ಗವಾಗಿ ಹೊರಗೆ ಹೋಗಬೇಕು.
9
“ ‘ಆದರೆ ದೇಶದ ಜನರು ನಿಶ್ಚಿತ ಹಬ್ಬಗಳಲ್ಲಿ ಯೆಹೋವ ದೇವರ ಮುಂದೆ ಬರುವಾಗ ಉತ್ತರದ ಬಾಗಿಲಿನಿಂದ ಪ್ರವೇಶಿಸಿ ಆರಾಧಿಸಿದ ಮೇಲೆ ಅವನು ದಕ್ಷಿಣದ ಬಾಗಿಲಿನ ಮಾರ್ಗವಾಗಿ ಹೊರಗೆ ಹೋಗಬೇಕು. ಮತ್ತು ದಕ್ಷಿಣ ಬಾಗಿಲಿನ ಮಾರ್ಗವಾಗಿ ಪ್ರವೇಶಿಸುವವನು ಉತ್ತರ ಬಾಗಿಲಿನ ಮಾರ್ಗವಾಗಿ ಹೊರಗೆ ಹೋಗಬೇಕು. ದಕ್ಷಿಣದ ಬಾಗಿಲಿನ ಮಾರ್ಗವಾಗಿ ಪ್ರವೇಶಿಸಿದ ಬಾಗಿಲಿನ ಮಾರ್ಗವಾಗಿಯೇ ತಿರುಗಿ ಹೊರಗೆ ಹೋಗಬಾರದು. ಆದರೆ ಅದಕ್ಕೆ ಎದುರಾಗಿರುವ ಬಾಗಿಲಿನಿಂದ ಹೊರಗೆ ಹೋಗಬೇಕು.
10
ರಾಜಕುಮಾರನು ಅವರ ಮಧ್ಯದಲ್ಲೆ ಅವರು ಒಳಗೆ ಹೋಗುವಾಗ ಒಳಗೆ ಹೋಗಬೇಕು, ಹೊರಗೆ ಹೋಗುವಾಗ ಹೊರಗೆ ಬರಬೇಕು.
11
ನಿಶ್ಚಿತ ಹಬ್ಬಗಳಲ್ಲಿಯೂ ಸಭೆಗಳಲ್ಲಿಯೂ ಧಾನ್ಯ ಸಮರ್ಪಣೆಗೆ ಹೋರಿಗೆ ಒಂದು ಎಫವೂ ಟಗರಿಗೆ ಒಂದು ಎಫವೂ ಕುರಿಮರಿಗಳಿಗೆ ಅವರ ಕೈಲಾಗುವಷ್ಟು ಕೊಡಬೇಕು. ಎಫ ಒಂದಕ್ಕೆ ಎಣ್ಣೆಯ ಒಂದು ಹಿನ್ನು ಇರಬೇಕು.
12
“ ‘ರಾಜಕುಮಾರನು ಉಚಿತವಾದ ದಹನಬಲಿಯನ್ನಾಗಲಿ ಸಮಾಧಾನದ ಬಲಿಗಳನ್ನಾಗಲಿ ಉಚಿತವಾಗಿ ಯೆಹೋವ ದೇವರಿಗೆ ಸಮರ್ಪಿಸುವಾಗ ಅವರು ಪೂರ್ವದಿಕ್ಕಿಗೆ ಎದುರಾಗಿರುವ ಬಾಗಿಲನ್ನು ಅವನಿಗೆ ತೆರೆಯಬೇಕು. ಆಗ ಅವನು ತನ್ನ ದಹನಬಲಿಯನ್ನು ತನ್ನ ಸಮಾಧಾನದ ಬಲಿಗಳನ್ನು ಸಬ್ಬತ್ ದಿನದಲ್ಲಿ ಮಾಡಿದ ಹಾಗೆ ಸಮರ್ಪಣೆಮಾಡಿ ಹೊರಗೆ ಹೋಗಬೇಕು, ಅವನು ಹೊರಗೆ ಹೋದ ಮೇಲೆ ಬಾಗಿಲನ್ನು ಮುಚ್ಚಬೇಕು.
13
“ ‘ನೀನು ಪ್ರತಿದಿನವೂ ಯೆಹೋವ ದೇವರಿಗೆ ಒಂದು ವರ್ಷದ ದೋಷರಹಿತವಾದ ಕುರಿಮರಿಯ ದಹನಬಲಿಯನ್ನು ಸಿದ್ಧಮಾಡಬೇಕು. ಹೀಗೆ ಪ್ರತಿದಿನವೂ ಮುಂಜಾನೆ ನಡೆಯಬೇಕು.
14
ಅದಕ್ಕೆ ಅರ್ಪಣೆಯಾಗಿ ಪ್ರತಿದಿನದ ಮುಂಜಾನೆಯಲ್ಲಿ ನೀನು ಸುಮಾರು ಎರಡುವರೆ ಕಿಲೋಗ್ರಾಂ ಗೋಧಿ ಹಿಟ್ಟಿನಲ್ಲಿ ಕಲಿಸುವ ಹಾಗೆ ಸುಮಾರು ಒಂದುವರೆ ಲೀಟರ್ ಎಣ್ಣೆಯನ್ನು ಸಿದ್ಧಮಾಡಬೇಕು. ಇದು ಯೆಹೋವ ದೇವರಿಗೆ ನಿತ್ಯನಿಯಮದ ಪ್ರಕಾರ ಎಡೆಬಿಡದ ಧಾನ್ಯ ಸಮರ್ಪಣೆಯಾಗಿದೆ.
15
ಹೀಗೆ ಅವರು ಕುರಿಮರಿಯನ್ನು ಧಾನ್ಯ ಸಮರ್ಪಣೆಯನ್ನು ಎಣ್ಣೆಯನ್ನು ಪ್ರತಿದಿನದ ಮುಂಜಾನೆಯಲ್ಲಿ ಎಡೆಬಿಡದ ದಹನಬಲಿಯನ್ನಾಗಿ ಸಿದ್ಧಮಾಡಬೇಕು.
16
“ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ರಾಜಕುಮಾರನು ತನ್ನ ಪುತ್ರರಲ್ಲಿ ಯಾವನಿಗಾದರೂ ದಾನವನ್ನು ಕೊಟ್ಟರೆ ಅದರ ಬಾಧ್ಯತೆಯು ಅವನ ಕುಮಾರರಿಗೆ ಸಲ್ಲಬೇಕು. ಏಕೆಂದರೆ ಅದು ಬಾಧ್ಯವಾಗಿ ಅವರ ಸೊತ್ತಾಗಿದೆ.
17
ಆದರೆ ಆತನು ತನ್ನ ಸೊತ್ತಿನೊಳಗಿಂದ ತನ್ನ ಸೇವಕರಲ್ಲಿ ಒಬ್ಬರಿಗೆ ದಾನವಾಗಿ ಕೊಟ್ಟರೆ, ಅದು ಬಿಡುಗಡೆ ವರ್ಷದವರೆಗೂ ಅವನಿಗಾಗಿದ್ದು ಆಮೇಲೆ ಮತ್ತೆ ರಾಜಕುಮಾರನಿಗೆ ಸೇರಬೇಕು. ಅವನ ಸೊತ್ತು ಅವನ ಮಕ್ಕಳಿಗೆ ಮಾತ್ರ ಸೇರಬೇಕು. ಇದು ಅವರದೇ.
18
ಇದಾದ ಮೇಲೆ ರಾಜಕುಮಾರನು ಜನರ ಸೊತ್ತನ್ನು ಬಲವಂತವಾಗಿ ತೆಗೆದುಕೊಂಡು ಬಾಧ್ಯತೆಯೊಳಗಿಂದ ಅವರನ್ನು ತಳ್ಳಬಾರದು. ನನ್ನ ಜನರು ತಮ್ಮ ತಮ್ಮ ಬಾಧ್ಯತೆಯನ್ನು ಕಳೆದುಕೊಳ್ಳಬಾರದು. ತಂದೆಯು ತನ್ನ ಸ್ವಂತ ಬಾಧ್ಯತೆಯಿಂದಲೇ ತನ್ನ ಪುತ್ರರಿಗೆ ಸೊತ್ತನ್ನು ಕೊಡಬೇಕು.’ ”
19
ಆಮೇಲೆ ಅವನು ನನ್ನನ್ನು ಬಾಗಿಲಿನ ಪಕ್ಕದಲ್ಲಿದ್ದ ಪ್ರವೇಶವಿದ್ದ ಉತ್ತರಕ್ಕೆ ಅಭಿಮುಖವಾದ ಯಾಜಕರ ಪರಿಶುದ್ಧ ಕೊಠಡಿಗೆ ಕರೆದುಕೊಂಡು ಹೋದನು. ಅಲ್ಲಿ ಅವುಗಳ ಪಶ್ಚಿಮದ ಕಡೆಗೆ ಒಂದು ಸ್ಥಳವಿತ್ತು.
20
ಆಗ ಅವನು ನನಗೆ, “ಯಾಜಕರು ಅಪರಾಧ ಬಲಿಯನ್ನೂ ದೋಷಪರಿಹಾರ ಬಲಿಯನ್ನೂ ಬೇಯಿಸಿದ ಧಾನ್ಯ ಸಮರ್ಪಣೆಯನ್ನು ಸುಡುವಂತೆ ಏರ್ಪಡಿಸಿರುವ ಸ್ಥಳವು ಇದೇ. ಜನರನ್ನು ಪರಿಶುದ್ಧ ಮಾಡುವುದಕ್ಕೆ ಅವರು ಅವುಗಳನ್ನು ಹೊರಗಿನ ಅಂಗಳಕ್ಕೆ ತೆಗೆದುಕೊಂಡು ಹೋಗಬಾರದು,” ಎಂದು ಹೇಳಿದನು.
21
ಆಗ ಅವನು ನನ್ನನ್ನು ಹೊರಗಿನ ಅಂಗಳಕ್ಕೆ ಕರೆದುಕೊಂಡು ಹೋಗಿ ಅಂಗಳದ ನಾಲ್ಕು ಮೂಲೆಗಳನ್ನು ಹಾದುಹೋಗುವಂತೆ ಮಾಡಿದನು. ಅಂಗಳದ ಒಂದೊಂದು ಮೂಲೆಯಲ್ಲಿ ಒಂದು ಅಂಗಳವನ್ನು ನಾನು ಕಂಡೆನು.
22
ಅಂಗಳದ ನಾಲ್ಕು ಮೂಲೆಯಲ್ಲಿ ನಲವತ್ತು ಮೊಳ ಉದ್ದವಾಗಿಯೂ ಮೂವತ್ತು ಮೊಳ ಅಗಲವಾಗಿಯೂ ಕೂಡಿಕೊಂಡಿದ್ದವು. ಆ ನಾಲ್ಕೂ ಮೂಲೆಗಳಿಗೂ ಒಂದೇ ಅಳತೆಯಾಗಿತ್ತು.
23
ಅವುಗಳಲ್ಲಿ ಎಂದರೆ ಆ ನಾಲ್ಕರಲ್ಲಿ ಸುತ್ತಲೂ ಸಾಲು ಇತ್ತು. ಆ ಸಾಲುಗಳ ಕೆಳಗೆ ಸುತ್ತಲೂ ಒಲೆಗಳಿದ್ದವು.
24
ಆಮೇಲೆ ಅವನು ನನಗೆ, “ಇವು ಮನೆಯ ಸೇವಕರು ಜನರ ಬಲಿಯನ್ನು ಬೇಯಿಸುವಂಥ ಸ್ಥಳಗಳು ಎಂದು ಹೇಳಿದನು.”
← Chapter 45
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 37
Chapter 38
Chapter 39
Chapter 40
Chapter 41
Chapter 42
Chapter 43
Chapter 44
Chapter 45
Chapter 46
Chapter 47
Chapter 48
Chapter 47 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48