bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
/
Ezra 1
Ezra 1
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 2 →
1
ಆದರೆ ಪಾರಸಿಯ ಅರಸ ಕೋರೆಷನ ಮೊದಲನೆಯ ವರ್ಷದಲ್ಲಿ ಯೆಹೋವ ದೇವರು ಯೆರೆಮೀಯನ ಮುಂಖಾತರ ಹೇಳಿದ ವಾಕ್ಯವು ಈಡೇರುವ ಹಾಗೆ ಯೆಹೋವ ದೇವರು ಪಾರಸಿಯ ಅರಸ ಕೋರೆಷನ ಆತ್ಮವನ್ನು ಪ್ರೇರೇಪಿಸಿದ್ದರಿಂದ, ಅವನು ತನ್ನ ಸಮಸ್ತ ರಾಜ್ಯದಲ್ಲಿ ಡಂಗುರದಿಂದಲೂ, ಪತ್ರಗಳಿಂದಲೂ ಸಾರಿ ಹೇಳಿದ್ದೇನೆಂದರೆ:
2
“ಪಾರಸಿಯ ಅರಸ ಕೋರೆಷನು ಹೀಗೆ ಹೇಳುತ್ತಾನೆ: “ ‘ಪರಲೋಕದ ದೇವರಾದ ಯೆಹೋವ ದೇವರು ಭೂಲೋಕದ ರಾಜ್ಯಗಳನ್ನೆಲ್ಲಾ ನನಗೆ ಕೊಟ್ಟಿದ್ದಾರೆ ಮತ್ತು ಅವರು ಯೆಹೂದ ದೇಶದ ಯೆರೂಸಲೇಮಿನಲ್ಲಿ ತಮಗೆ ಆಲಯವನ್ನು ಕಟ್ಟಿಸಲು ನನಗೆ ಆಜ್ಞಾಪಿಸಿದ್ದಾರೆ.
3
ನಿಮ್ಮಲ್ಲಿ ಯಾರು ಅವರ ಪ್ರಜೆಗಳಾಗಿರುತ್ತೀರೋ, ಅಂಥವರು ಯೆಹೂದ, ಯೆರೂಸಲೇಮಿಗೆ ಹೋಗಿ, ಅಲ್ಲಿ ವಾಸಿಸುತ್ತಿರುವ ಇಸ್ರಾಯೇಲ್ ದೇವರಾದ ಯೆಹೋವ ದೇವರಿಗೆ ಒಂದು ದೇವಾಲಯವನ್ನು ಕಟ್ಟಲಿ, ಅವರ ಸಂಗಡ ಅವರ ದೇವರು ಇರಲಿ!
4
ಯೆಹೂದ್ಯರಲ್ಲಿ ಬದುಕುಳಿದವರು ಈಗ ವಾಸಿಸುತ್ತಿರುವ ಯಾವುದೇ ಪ್ರದೇಶದಲ್ಲಿ, ಜನರು ಅವರಿಗೆ ಬೆಳ್ಳಿ ಮತ್ತು ಬಂಗಾರ, ಸರಕುಗಳು ಮತ್ತು ಪ್ರಾಣಿಪಶುಗಳನ್ನು ಮತ್ತು ಯೆರೂಸಲೇಮಿನ ದೇವಾಲಯಕ್ಕೆ ಉಚಿತ ಕಾಣಿಕೆಗಳನ್ನು ಒದಗಿಸಬೇಕು.’ ”
5
ಆಗ ಯೆಹೂದ ಹಾಗೂ ಬೆನ್ಯಾಮೀನ್ ಕುಟುಂಬಗಳ ಮುಖ್ಯಸ್ಥರೂ, ಯಾಜಕರೂ, ಲೇವಿಯರೂ, ಯೆರೂಸಲೇಮಿನಲ್ಲಿರುವ ಯೆಹೋವ ದೇವರ ಆಲಯವನ್ನು ಕಟ್ಟುವುದಕ್ಕೆ ಹೋಗಲು ಯೆಹೋವ ದೇವರಿಂದ ಪ್ರೇರಿತರಾದವರೆಲ್ಲರೂ ಎದ್ದರು.
6
ಅವರ ನೆರೆಯವರೆಲ್ಲರು ಎಲ್ಲಾ ಕಾಣಿಕೆಗಳಲ್ಲದೇ, ಬೆಳ್ಳಿ ಹಾಗೂ ಬಂಗಾರದಿಂದ ಮಾಡಿದ ವಸ್ತುಗಳಿಂದಲೂ, ಪಶುಗಳಿಂದಲೂ, ಬೆಲೆಯುಳ್ಳವುಗಳಿಂದಲೂ ಅವರಿಗೆ ಧಾರಾಳವಾಗಿ ಸಹಾಯ ಮಾಡಿದರು.
7
ನೆಬೂಕದ್ನೆಚ್ಚರನು ಯೆರೂಸಲೇಮಿನಿಂದ ತಂದು, ತನ್ನ ದೇವರುಗಳ ಮಂದಿರಗಳಲ್ಲಿ ಇರಿಸಿದ್ದ ಯೆಹೋವ ದೇವರ ಆಲಯದ ಸಲಕರಣೆಗಳನ್ನು ಪಾರಸಿಯ ಅರಸನಾದ ಕೋರೆಷನು ತರಿಸಿದನು.
8
ಅವುಗಳನ್ನು ಪಾರಸಿಯ ಅರಸನಾದ ಕೋರೆಷನು ಬೊಕ್ಕಸದವನಾದ ಮಿತ್ರದಾತನ ಕೈಯಿಂದ ತರಿಸಿ, ಯೆಹೂದದ ರಾಜಕುಮಾರನಾದ ಶೆಷ್ಬಚ್ಚರನಿಗೆ ಎಣಿಸಿಕೊಟ್ಟನು.
9
ಅವುಗಳ ಲೆಕ್ಕವು ಹೀಗಿವೆ: ಬಂಗಾರದ 30 ತಟ್ಟೆಗಳು. ಬೆಳ್ಳಿಯ 1,000 ತಟ್ಟೆಗಳು. ಬೆಳ್ಳಿಯ 29 ಪಾತ್ರೆಗಳು.
10
ಬಂಗಾರದ 30 ಬಟ್ಟಲುಗಳು. ಬೆಳ್ಳಿಯ 410 ಬಟ್ಟಲುಗಳು. ಇನ್ನಿತರು 1,000 ವಸ್ತುಗಳು.
11
ಒಟ್ಟು 5,400 ಬೆಳ್ಳಿಬಂಗಾರದಿಂದ ಮಾಡಿದ ವಸ್ತುಗಳು. ಇವುಗಳನ್ನೆಲ್ಲಾ ಬಾಬಿಲೋನಿನಿಂದ ಯೆರೂಸಲೇಮಿಗೆ ಪ್ರಯಾಣಮಾಡಿದವರ ಸಂಗಡ ಶೆಷ್ಬಚ್ಚರನು ತೆಗೆದುಕೊಂಡು ಹೋದನು.
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 2 →
All chapters:
1
2
3
4
5
6
7
8
9
10