bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
/
Leviticus 18
Leviticus 18
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
← Chapter 17
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 19 →
1
ಯೆಹೋವ ದೇವರು ಮೋಶೆಗೆ,
2
“ನೀನು ಇಸ್ರಾಯೇಲರೊಂದಿಗೆ ಮಾತನಾಡಿ ಹೀಗೆ ಹೇಳಬೇಕು, ‘ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.
3
ನೀವು ವಾಸವಾಗಿದ್ದ ಈಜಿಪ್ಟ್ ದೇಶದ ಆಚಾರಗಳನ್ನು ಅನುಸರಿಸಬಾರದು. ನಿಮ್ಮನ್ನು ಸೇರಿಸಲಿರುವ ಕಾನಾನ್ ದೇಶದವರ ಆಚಾರಗಳನ್ನು ನೀವು ಮಾಡಬಾರದು. ಇಲ್ಲವೆ ನೀವು ಅವರ ಪದ್ಧತಿಗಳನುಸಾರ ನಡೆಯಬಾರದು.
4
ನೀವು ನನ್ನ ನಿರ್ಣಯಗಳನ್ನು ಕೈಗೊಂಡು ಕಟ್ಟಳೆಗಳ ಪ್ರಕಾರ ನಡೆಯಬೇಕು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.
5
ಆದ್ದರಿಂದ ನೀವು ನನ್ನ ನಿಯಮಗಳನ್ನೂ, ನನ್ನ ನಿರ್ಣಯಗಳನ್ನೂ ಕೈಗೊಳ್ಳಿರಿ. ಇವುಗಳನ್ನು ಅನುಸರಿಸುವವರು ನಿಯಮಗಳ ಮೂಲಕವೇ ಬದುಕುವರು, ನಾನೇ ಯೆಹೋವ ದೇವರು.
6
“ ‘ನಿಮ್ಮಲ್ಲಿ ಯಾವನಾದರೂ ತನ್ನ ಹತ್ತಿರ ಸಂಬಂಧಿಯೊಡನೆ ಲೈಂಗಿಕ ಸಂಬಂಧ ಬೆಳೆಸಬಾರದು, ನಾನೇ ಯೆಹೋವ ದೇವರು.
7
“ ‘ನಿನ್ನ ತಾಯಿಯೊಂದಿಗೆ ಲೈಂಗಿಕ ಸಂಬಂಧ ಮಾಡಿ, ನಿನ್ನ ತಂದೆಯನ್ನು ಅಗೌರವಿಸಬೇಡ. ಆಕೆ ನಿನ್ನ ತಾಯಿ: ಆಕೆಯೊಂದಿಗೆ ಇಂಥ ಸಂಬಂಧ ಬೇಡ.
8
“ ‘ನಿನ್ನ ಮಲತಾಯಿಯೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ. ಅದು ನಿನ್ನ ತಂದೆಗೆ ಅಗೌರವವನ್ನುಂಟು ಮಾಡುವುದು.
9
“ ‘ನಿನ್ನ ಸಹೋದರಿಯೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ. ಆಕೆ ನಿನ್ನ ತಂದೆಯ ಮಗಳಾಗಿರಬಹುದು ಇಲ್ಲವೆ ತಾಯಿಯ ಮಗಳಾಗಿರಬಹುದು. ಆಕೆ ಒಂದೇ ಮನೆಯಲ್ಲಿ ಹುಟ್ಟಿರಬಹುದು ಇಲ್ಲವೆ ಬೇರೆ ಕಡೆಯಲ್ಲಿ ಹುಟ್ಟಿರಬಹುದು ಆಕೆಯೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ.
10
“ ‘ನಿನ್ನ ಮಗನ ಮಗಳ ಕೂಡ, ಇಲ್ಲವೆ ಮಗಳ ಮಗಳ ಕೂಡ ಲೈಂಗಿಕ ಸಂಬಂಧ ಮಾಡಬೇಡ. ಅದು ನಿನಗೆ ಅಗೌರವವಾಗಿದೆ.
11
“ ‘ನಿನ್ನ ತಂದೆಯಿಂದ ಜನಿಸಿದ ನಿನ್ನ ತಂದೆಯ ಮಗಳೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ. ಆಕೆ ನಿನ್ನ ಸಹೋದರಿ.
12
“ ‘ನಿನ್ನ ತಂದೆಯ ಸಹೋದರಿಯೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ. ಆಕೆ ನಿನ್ನ ತಂದೆಯ ಸಮೀಪ ಬಂಧು.
13
“ ‘ನಿನ್ನ ತಾಯಿಯ ಸಹೋದರಿಯೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ. ಅವಳು ನಿನ್ನ ತಾಯಿಗೆ ಹತ್ತಿರದ ಸಂಬಂಧಿಯಾಗಿದ್ದಾಳೆ.
14
“ ‘ನಿನ್ನ ತಂದೆಯ ಸಹೋದರನ ಹೆಂಡತಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಬೇಡ. ನಿನ್ನ ತಂದೆಯ ಸಹೋದರನನ್ನು ಅಗೌರವಿಸಬೇಡ. ಆಕೆ ನಿನ್ನ ದೊಡ್ಡಮ್ಮ.
15
“ ‘ನಿನ್ನ ಸೊಸೆಯೊಂದಿಗೆ ಲೈಂಗಿಕ ಸಂಪರ್ಕ ಬೇಡ. ಆಕೆ ನಿನ್ನ ಮಗನ ಹೆಂಡತಿ. ನೀನು ಅವಳ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು.
16
“ ‘ನೀನು ನಿನ್ನ ಸಹೋದರನ ಹೆಂಡತಿಯೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ. ಅದು ನಿನ್ನ ಸಹೋದರನನ್ನು ಅಗೌರವಿಸುವುದು.
17
“ ‘ಸ್ತ್ರೀಯೊಂದಿಗೂ, ಆಕೆಯ ಮಗಳೊಂದಿಗೂ ಒಟ್ಟಿಗೆ ಲೈಂಗಿಕ ಸಂಪರ್ಕ ಬೇಡ. ಆಕೆಯ ಮಗನ ಮಗಳೊಂದಿಗಾದರೂ, ಮಗಳ ಮಗಳೊಂದಿಗಾದರೂ ಲೈಂಗಿಕ ಸಂಪರ್ಕ ಬೇಡ. ಅವರು ಆಕೆಯ ಹತ್ತಿರ ಸಂಬಂಧಿಗಳು. ಅದು ದುಷ್ಟತನ.
18
“ ‘ನಿನ್ನ ಹೆಂಡತಿಗೆ ವೈರಿಯಾಗುವ ಹಾಗೆ ಅವಳ ಸಹೋದರಿಯನ್ನು ಹೆಂಡತಿಯಾಗಿ ತೆಗೆದುಕೊಳ್ಳಬೇಡ. ಒಬ್ಬಳು ಜೀವಂತವಾಗಿರುವಾಗ ಮತ್ತೊಬ್ಬಳೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ.
19
“ ‘ಮುಟ್ಟಿನಿಂದ ಅಶುದ್ಧಳಾದ ಸ್ತ್ರೀಯ ಸಂಪರ್ಕ ಮಾಡಬೇಡ.
20
“ ‘ಪರರ ಹೆಂಡತಿಯೊಂದಿಗೆ ನೀನು ಸಂಗಮಿಸಿ ಅಶುದ್ಧನಾಗಬೇಡ.
21
“ ‘ನಿನ್ನ ಮಕ್ಕಳಲ್ಲಿ ಯಾರನ್ನೂ ಮೋಲೆಕ್ ದೇವತೆಗೆ ಸಮರ್ಪಿಸಿ, ನಿನ್ನ ದೇವರ ಹೆಸರನ್ನು ಅಪಕೀರ್ತಿಗೆ ಗುರಿಮಾಡಬಾರದು. ನಾನು ಯೆಹೋವ ದೇವರು.
22
“ ‘ಸ್ತ್ರೀಯೊಂದಿಗೆ ಮಲಗಿಕೊಳ್ಳುವಂತೆ ಪುರುಷನೊಂದಿಗೆ ಮಲಗಬಾರದು. ಅದು ಅಸಹ್ಯವಾದದ್ದು.
23
“ ‘ಇದಲ್ಲದೆ ಪಶುವಿನೊಂದಿಗೆ ನೀನು ಮಲಗಿ ನಿನ್ನನ್ನು ಅಶುದ್ಧಮಾಡಿಕೊಳ್ಳಬಾರದು. ಯಾವ ಸ್ತ್ರೀಯೂ ಸಂಗಮಕ್ಕಾಗಿ ಪಶುವಿನ ಮುಂದೆ ನಿಲ್ಲಬಾರದು. ಅದು ಸ್ವಭಾವಕ್ಕೆ ವ್ಯತಿರಿಕ್ತವಾದದ್ದು.
24
“ ‘ನೀವು ಈ ಯಾವ ವಿಷಯಗಳಲ್ಲಿಯೂ ನಿಮ್ಮನ್ನು ಅಶುದ್ಧಮಾಡಿಕೊಳ್ಳಬಾರದು. ಏಕೆಂದರೆ ನಿಮ್ಮ ಮುಂದೆಯೇ ನಾನು ಹೊರಡಿಸಿಬಿಟ್ಟ ಜನಾಂಗಗಳು ಇವೆಲ್ಲವುಗಳಿಂದ ಹೊಲೆಯಾಗಿವೆ.
25
ದೇಶವೂ ಅಶುದ್ಧವಾಗಿದೆ. ಆದ್ದರಿಂದ ಅದರ ಮೇಲಿರುವ ಅಕ್ರಮವನ್ನು ನಾನು ದಂಡಿಸುವೆನು. ಆಗ ದೇಶವು ತಾನೇ ತನ್ನೊಳಗಿನ ನಿವಾಸಿಗಳನ್ನು ಕಾರಿಬಿಡುವುದು.
26
ಆದ್ದರಿಂದ ನೀವು ನನ್ನ ನಿಯಮಗಳನ್ನು, ನನ್ನ ನಿರ್ಣಯಗಳನ್ನು ಕೈಗೊಳ್ಳಬೇಕು. ಸ್ವದೇಶದವರಲ್ಲಿ ಯಾವನಾಗಲಿ ಇಲ್ಲವೆ ನಿಮ್ಮೊಳಗೆ ಪ್ರವಾಸಿಯಾಗಿದ್ದ ಪರಕೀಯನಾಗಲಿ ಈ ಅಸಹ್ಯವಾದವುಗಳಲ್ಲಿ ಒಂದನ್ನೂ ಮಾಡಬಾರದು.
27
ನಿಮ್ಮೆದುರಿನಲ್ಲಿದ್ದ ಆ ದೇಶದವರು ಈ ಎಲ್ಲಾ ಅಸಹ್ಯವಾದವುಗಳನ್ನು ಮಾಡಿದ್ದರಿಂದ ದೇಶವೂ ಅಶುದ್ಧವಾಯಿತು.
28
ನೀವೂ ಅದನ್ನು ಅಶುದ್ಧಮಾಡಿದರೆ, ಅದು ನಿಮಗಿಂತ ಮೊದಲಿದ್ದ ಜನಾಂಗಗಳವರನ್ನು ಕಾರಿದಂತೆ ನಿಮ್ಮನ್ನೂ ಕಾರುವುದು.
29
“ ‘ಏಕೆಂದರೆ ಯಾವನಾದರೂ ಈ ಅಸಹ್ಯವಾದವುಗಳಲ್ಲಿ ಯಾವುದನ್ನಾದರೂ ಮಾಡಿದರೆ, ಅವನನ್ನು ಅವರ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.
30
ನಿಮಗಿಂತ ಮೊದಲಿನವರು ಮಾಡಿದಂತೆ ಅಸಹ್ಯವಾದ ಆಚರಣೆಗಳಲ್ಲಿ ಒಂದನ್ನಾದರೂ ನೀವು ಮಾಡದಂತೆ ಮತ್ತು ಅವುಗಳಲ್ಲಿ ನಿಮ್ಮನ್ನು ಅಶುದ್ಧಮಾಡಿಕೊಳ್ಳದಂತೆ ನೀವು ನನ್ನ ಕಟ್ಟಳೆಗಳನ್ನು ಕೈಗೊಳ್ಳಬೇಕು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.’ ”
← Chapter 17
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 19 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27