bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
/
Numbers 21
Numbers 21
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
← Chapter 20
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 22 →
1
ನೆಗೆವನಲ್ಲಿ ವಾಸಿಸುವ ಕಾನಾನ್ಯನಾದ ಅರಾದ್ ಪಟ್ಟಣದ ಅರಸನು, ಇಸ್ರಾಯೇಲರು ಅತಾರೀಮ್ ಮಾರ್ಗವಾಗಿ ಬರುತ್ತಿದ್ದಾರೆಂದು ಕೇಳಿ, ಅವರ ಸಂಗಡ ಯುದ್ಧಮಾಡಿ, ಅವರಲ್ಲಿ ಕೆಲವರನ್ನು ಸೆರೆಹಿಡಿದನು.
2
ಆಗ ಇಸ್ರಾಯೇಲರು ಯೆಹೋವ ದೇವರಿಗೆ ಪ್ರಮಾಣಮಾಡಿ, “ನೀನು ಈ ಜನರನ್ನು ನಮ್ಮ ಕೈಯಲ್ಲಿ ನಿಜವಾಗಿ ಒಪ್ಪಿಸಿಕೊಟ್ಟರೆ, ನಾವು ಅವರ ಪಟ್ಟಣಗಳನ್ನು ಸಂಪೂರ್ಣವಾಗಿ ನಾಶಮಾಡುವೆವು,” ಎಂದರು.
3
ಆಗ ಯೆಹೋವ ದೇವರು ಇಸ್ರಾಯೇಲರ ಧ್ವನಿಯನ್ನು ಕೇಳಿ ಕಾನಾನ್ಯರನ್ನು ಒಪ್ಪಿಸಿಕೊಟ್ಟನು. ಇಸ್ರಾಯೇಲರು ಅವರನ್ನೂ ಅವರ ಪಟ್ಟಣಗಳನ್ನೂ ಸಂಪೂರ್ಣವಾಗಿ ನಾಶಮಾಡಿದರು. ಆ ಸ್ಥಳಕ್ಕೆ ಹೊರ್ಮಾ ಎಂದು ಹೆಸರಿಟ್ಟರು.
4
ಅವರು ಹೋರ್ ಎಂಬ ಬೆಟ್ಟದಿಂದ ಹೊರಟು, ಎದೋಮ್ಯರ ದೇಶವನ್ನು ಸುತ್ತಿಕೊಂಡು ಹೋಗುವುದಕ್ಕೆ ಕೆಂಪುಸಮುದ್ರದ ಮಾರ್ಗವಾಗಿ ಪ್ರಯಾಣಮಾಡಿದರು. ಆದರೆ ಜನರು ಈ ಪ್ರಯಾಣದಿಂದ ಆಯಾಸವಾಗಿ ಬಹಳ ಕುಂದಿಹೋದರು.
5
ಆದಕಾರಣ ಜನರು ದೇವರಿಗೂ ಮೋಶೆಗೂ ವಿರೋಧವಾಗಿ ಮಾತನಾಡಿ, “ನಾವು ಮರುಭೂಮಿಯಲ್ಲಿ ಸಾಯುವ ಹಾಗೆ ನಮ್ಮನ್ನು ಈಜಿಪ್ಟ್ ದೇಶದಿಂದ ಏಕೆ ಬರಮಾಡಿದ್ದೀರಿ? ಇಲ್ಲಿ ರೊಟ್ಟಿ ಇಲ್ಲ, ನೀರೂ ಇಲ್ಲ. ನಾವು ಈ ನಿಸ್ಸಾರವಾದ ರೊಟ್ಟಿಯನ್ನು ತಿಂದು ನಮಗೆ ಬೇಸರವಾಗಿದೆ,” ಎಂದರು.
6
ಆಗ ಯೆಹೋವ ದೇವರು ಜನರೊಳಗೆ ವಿಷಸರ್ಪಗಳನ್ನು ಕಳುಹಿಸಿದರು. ಅವು ಜನರನ್ನು ಕಚ್ಚಿದ್ದರಿಂದ, ಇಸ್ರಾಯೇಲರಲ್ಲಿ ಬಹುಜನರು ಸತ್ತುಹೋದರು.
7
ಆದ್ದರಿಂದ ಜನರು ಮೋಶೆಯ ಬಳಿಗೆ ಬಂದು, “ನಾವು ಯೆಹೋವ ದೇವರಿಗೂ ನಿನಗೂ ವಿರೋಧವಾಗಿ ಮಾತನಾಡಿ ಪಾಪಮಾಡಿದ್ದೇವೆ. ಯೆಹೋವ ದೇವರು ನಮ್ಮ ಮೇಲಿಂದ ಸರ್ಪಗಳನ್ನು ದೂರಮಾಡುವ ಹಾಗೆ ಪ್ರಾರ್ಥನೆ ಮಾಡು,” ಎಂದರು. ಆಗ ಮೋಶೆಯು ಜನರಿಗೋಸ್ಕರ ಪ್ರಾರ್ಥನೆಮಾಡಿದನು.
8
ಯೆಹೋವ ದೇವರು ಮೋಶೆಗೆ, “ನೀನು ಕಂಚಿನಿಂದ ಒಂದು ಸರ್ಪವನ್ನು ಮಾಡಿಸಿಕೊಂಡು, ಒಂದು ಕಂಬದ ಮೇಲೆ ಇಡು. ಆಗ ಕಚ್ಚಿಸಿಕೊಂಡವರೆಲ್ಲರೂ ಅದರ ಮೇಲೆ ದೃಷ್ಟಿ ಇಟ್ಟರೆ ಅವರು ಬದುಕುವರು,” ಎಂದರು.
9
ಆಗ ಮೋಶೆಯು ಕಂಚಿನ ಸರ್ಪವನ್ನು ಮಾಡಿ ಕಂಬದ ಮೇಲೆ ಇಟ್ಟನು. ಸರ್ಪದಿಂದ ಕಚ್ಚಿಸಿಕೊಂಡವರಲ್ಲಿ ಯಾರು ಆ ಕಂಚಿನ ಸರ್ಪದ ಕಡೆಗೆ ದೃಷ್ಟಿ ಇಟ್ಟು ನೋಡಿದರೋ, ಅವರು ಬದುಕಿಕೊಂಡರು.
10
ಇಸ್ರಾಯೇಲರು ಹೊರಟು ಓಬೋತಿನಲ್ಲಿ ಇಳಿದುಕೊಂಡರು.
11
ಓಬೋತಿನಿಂದ ಹೊರಟು ಮೋವಾಬ್ ದೇಶಕ್ಕೆದುರಾಗಿ ಸೂರ್ಯೋದಯದ ಕಡೆಯಲ್ಲಿರುವ ಮರುಭೂಮಿಯಲ್ಲಿ ಇಯ್ಯೇ ಅಬಾರೀಮಿನಲ್ಲಿ ಇಳಿದುಕೊಂಡರು.
12
ಅಲ್ಲಿಂದ ಅವರು ಹೊರಟು ಜೆರೆದ್ ಎಂಬ ಹಳ್ಳದ ಬಳಿಯಲ್ಲಿ ಇಳಿದುಕೊಂಡರು.
13
ಅಲ್ಲಿಂದ ಹೊರಟು ಅಮೋರಿಯರ ಪ್ರದೇಶದಿಂದ ಹೊರಗೆ ಬರುವ ಮರುಭೂಮಿಯಲ್ಲಿರುವ ಅರ್ನೋನ್ ಹೊಳೆಯ ಈಚೆಯಲ್ಲಿ ಇಳಿದುಕೊಂಡರು. ಏಕೆಂದರೆ ಅರ್ನೋನ್ ಮೋವಾಬರಿಗೂ ಅಮೋರಿಯರಿಗೂ ಮಧ್ಯದ ಮೋವಾಬಿನ ಗಡಿಯಾಗಿದೆ.
14
ಆದಕಾರಣ ಯೆಹೋವ ದೇವರ ಯುದ್ಧಗಳ ಪುಸ್ತಕದಲ್ಲಿ ಹೀಗೆಂದು ಬರೆದಿದೆ: “ಸೂಫಕ್ಕೆ ಸೇರಿದ ವಾಹೇಬನ್ನು, ಅರ್ನೋನ್
15
ಹೊಳೆಗೆ ಸೇರುವ ಹಳ್ಳಗಳನ್ನು, ಆರ್ ಪಟ್ಟಣದ ತನಕ ಮೋವಾಬಿನ ಎಲ್ಲೆಯಾಗಿರುವ ಕೊರಕಲನ್ನು.”
16
ಅವರು ಅಲ್ಲಿಂದ ಬೇರ್ ಎಂಬಲ್ಲಿಗೆ ಬಂದರು. ಯೆಹೋವ ದೇವರು ಮೋಶೆಗೆ, “ಜನರನ್ನು ಸೇರಿಸು. ನಾನು ಅವರಿಗೆ ನೀರನ್ನು ಕೊಡುವೆನು,” ಎಂದು ಯೆಹೋವ ದೇವರು ಮೋಶೆಗೆ ಹೇಳಿದ ಮಾತು ಇಲ್ಲಿನ ಬಾವಿಯನ್ನು ಕುರಿತೇ.
17
ಆಗ ಇಸ್ರಾಯೇಲರು ಈ ಹಾಡನ್ನು ಹಾಡಿದರು: “ಬಾವಿಯೇ, ಉಕ್ಕು, ಜನರೇ, ಅದರ ಬಗ್ಗೆ ನೀವು ಹಾಡಿರಿ.
18
ಪ್ರಭುಗಳು ಈ ಬಾವಿಯನ್ನು ಅಗೆದರು. ಜನರ ಅಧಿಪತಿಗಳು ನ್ಯಾಯಾಧಿಪತಿಯ ಸಲಹೆಯ ಮೇರೆಗೆ ತಮ್ಮ ಕೋಲುಗಳಿಂದ ಅದನ್ನು ತೋಡಿದರು.” ಆಮೇಲೆ ಅವರು ಮರುಭೂಮಿಯಿಂದ ಮತ್ತಾನಕ್ಕೆ ಬಂದರು.
19
ಇದಲ್ಲದೆ ಅವರು ಮತ್ತಾನದಿಂದ ನಹಲಿಯೇಲಕ್ಕೆ ಬಂದರು. ನಹಲಿಯೇಲದಿಂದ ಬಾಮೋತಿಗೆ ಬಂದರು.
20
ಬಾಮೋತಿನಿಂದ ಮೋವಾಬ್ ದೇಶದಲ್ಲಿರುವ ಕಣಿವೆಯಿಂದ ಪಿಸ್ಗಾ ಎಂಬ ಬೆಟ್ಟದ ತುದಿಗೆ ಬಂದರು. ಆ ಬೆಟ್ಟದ ಮೇಲಿನಿಂದ ಕೆಳಗಿರುವ ಮರಳುಗಾಡು ಕಾಣಿಸುತ್ತದೆ.
21
ಆಗ ಇಸ್ರಾಯೇಲರು ಅಮೋರಿಯರ ಅರಸನಾದ ಸೀಹೋನನ ಬಳಿಗೆ ದೂತರನ್ನು ಕಳುಹಿಸಿ,
22
“ನಾವು ನಿನ್ನ ದೇಶವನ್ನು ದಾಟಿಹೋಗುವುದಕ್ಕೆ ನಮಗೆ ಅಪ್ಪಣೆಯಾಗಬೇಕು. ನಾವು ಯಾವುದೇ ಹೊಲಗಳಲ್ಲಿಯಾಗಲಿ, ದ್ರಾಕ್ಷಿತೋಟಗಳಲ್ಲಿಯಾಗಲಿ ಹೋಗುವುದಿಲ್ಲ, ಬಾವಿಯ ನೀರನ್ನು ಕುಡಿಯದೆ, ನಿನ್ನ ದೇಶವನ್ನು ದಾಟುವವರೆಗೆ ರಾಜಮಾರ್ಗದಲ್ಲಿಯೇ ಹೋಗುತ್ತೇವೆ,” ಎಂದು ಬೇಡಿಕೊಂಡರು.
23
ಆದರೆ ಸೀಹೋನನು ಇಸ್ರಾಯೇಲರನ್ನು ತನ್ನ ಮೇರೆಯಲ್ಲಿ ದಾಟಗೊಡಿಸದೆ, ತನ್ನ ಜನರೆಲ್ಲರನ್ನೂ ಕೂಡಿಸಿಕೊಂಡು, ಇಸ್ರಾಯೇಲರನ್ನು ಎದುರಿಸಲು ಮರುಭೂಮಿಗೆ ಹೊರಟನು. ಅವನು ಯಹಚಕ್ಕೆ ಬಂದು ಇಸ್ರಾಯೇಲರ ಸಂಗಡ ಯುದ್ಧಮಾಡಿದನು.
24
ಆದರೆ ಇಸ್ರಾಯೇಲರು ಅವನನ್ನು ಖಡ್ಗದಿಂದ ಹೊಡೆದು, ಅವನ ದೇಶವನ್ನು ಅರ್ನೋನ್ ನದಿಯಿಂದ ಯಬ್ಬೋಕ್ ನದಿಯವರೆಗೆ ಅಮ್ಮೋನನ ಮಕ್ಕಳ ಮೇರೆಯವರೆಗೂ ಸ್ವಾಧೀನಪಡಿಸಿಕೊಂಡರು. ಏಕೆಂದರೆ ಅಮ್ಮೋನನ ಮಕ್ಕಳ ಮೇರೆಯು ಬಲಿಷ್ಠವಾಗಿತ್ತು.
25
ಇಸ್ರಾಯೇಲರು ಆ ಪಟ್ಟಣಗಳನ್ನೆಲ್ಲಾ ವಶಮಾಡಿಕೊಂಡರು. ಇಸ್ರಾಯೇಲರು ಅಮೋರಿಯರ ಸಮಸ್ತ ಪಟ್ಟಣಗಳಲ್ಲಿಯೂ ಹೆಷ್ಬೋನಿನಲ್ಲಿಯೂ ಅದರ ಸಮಸ್ತ ಗ್ರಾಮಗಳಲ್ಲಿಯೂ ವಾಸಮಾಡಿದರು.
26
ಹೆಷ್ಬೋನ್ ಪಟ್ಟಣವು ಅಮೋರಿಯರ ಅರಸನಾದ ಸೀಹೋನನ ಪಟ್ಟಣವಾಗಿತ್ತು. ಅವನು ಮೋವಾಬ್ ದೇಶದ ಹಿಂದಿನ ಅರಸನ ಸಂಗಡ ಯುದ್ಧಮಾಡಿ, ಅವನ ಸಮಸ್ತ ದೇಶವನ್ನು ಅರ್ನೋನ್ ನದಿಯವರೆಗೂ ಅವನಿಂದ ವಶಪಡಿಸಿಕೊಂಡಿದ್ದನು.
27
ಇದರ ಬಗ್ಗೆ ಕವಿಗಳು ಹೀಗೆಂದು ಹಾಡಿದ್ದಾರೆ: “ಹೆಷ್ಬೋನಿಗೆ ಬನ್ನಿರಿ ಅದನ್ನು ತಿರುಗಿ ಕಟ್ಟಬೇಕು. ಸೀಹೋನನ ಪಟ್ಟಣವನ್ನು ಪುನಃಸ್ಥಾಪನೆ ಮಾಡಬೇಕು.
28
“ಏಕೆಂದರೆ ಬೆಂಕಿ ಹೆಷ್ಬೋನಿನಿಂದಲೂ, ಜ್ವಾಲೆಯು ಸೀಹೋನನ ಪಟ್ಟಣದಿಂದಲೂ ಹೊರಟು, ಮೋವಾಬಿನ ಆರ್ ಎಂಬ ಪಟ್ಟಣವನ್ನೂ, ಅರ್ನೋನ್ ಹೊಳೆಯ ಬಳಿಯಲ್ಲಿರುವ ಎತ್ತರ ಸ್ಥಳಗಳ ಪ್ರಭುಗಳನ್ನೂ ದಹಿಸಿಬಿಟ್ಟಿತು.
29
ಮೋವಾಬೇ, ನಿನಗೆ ದಿಕ್ಕಾರ! ಕೆಮೋಷಿನ ಜನವೇ ನಿಮಗೆ ದುರ್ಗತಿ ಉಂಟಾಯಿತಲ್ಲಾ! ಅವನು ತನ್ನ ಪುತ್ರರನ್ನು ದೇಶಭ್ರಷ್ಟರನ್ನಾಗಿಯೂ ತನ್ನ ಪುತ್ರಿಯರನ್ನು ಸೆರೆಯವರನ್ನಾಗಿಯೂ ಅಮೋರಿಯರ ಅರಸನಾದ ಸೀಹೋನನ ಸೆರೆಗೆ ಒಪ್ಪಿಸಿಕೊಟ್ಟನು.
30
“ನಾವು ಅವರನ್ನು ಪದಚ್ಚುತಿಗೊಳಿಸಿದೆವು. ಹೆಷ್ಬೋನು ದೀಬೋನಿನವರೆಗೂ ನಾಶವಾಯಿತು. ನಾವು ಅವರನ್ನು ಮೇದೆಬಾಕ್ಕೆ ಮುಟ್ಟುವ ನೋಫಹದ ತನಕ ಹಾಳುಮಾಡಿದೆವು.”
31
ಹೀಗೆ ಇಸ್ರಾಯೇಲರು ಅಮೋರಿಯರ ದೇಶದಲ್ಲಿ ವಾಸಮಾಡಿದರು.
32
ಇದಲ್ಲದೆ ಮೋಶೆಯು ಯಜ್ಜೇರನ್ನು ಸಂಚರಿಸಿ ನೋಡುವುದಕ್ಕೆ ಗೂಢಚಾರರನ್ನು ಕಳುಹಿಸಿದನು. ಅವರು ಅವರ ಗ್ರಾಮಗಳನ್ನು ವಶಪಡಿಸಿಕೊಂಡು, ಅಲ್ಲಿರುವ ಅಮೋರಿಯರನ್ನು ಹೊರಡಿಸಿಬಿಟ್ಟರು.
33
ಅವರು ತಿರುಗಿ ಬಾಷಾನಿನ ಹಾದಿ ಏರಿದರು. ಬಾಷಾನಿನ ಅರಸನಾದ ಓಗನು ಎದ್ರೈಯಲ್ಲಿ ಯುದ್ಧಮಾಡುವುದಕ್ಕೆ ತನ್ನ ಸಮಸ್ತ ಜನರ ಸಂಗಡ ಅವರಿಗೆದುರಾಗಿ ಹೊರಟನು.
34
ಆಗ ಯೆಹೋವ ದೇವರು ಮೋಶೆಗೆ ಹೇಳಿದ್ದೇನೆಂದರೆ, “ನೀನು ಅವನಿಗೆ ಭಯಪಡಬೇಡ, ಏಕೆಂದರೆ ನಿನ್ನ ಕೈಯೊಳಗೆ ನಾನು ಅವನನ್ನೂ ಅವನ ಸಮಸ್ತ ಜನರನ್ನೂ ಅವನ ದೇಶವನ್ನೂ ಕೊಟ್ಟಿದ್ದೇನೆ. ನೀನು ಹೆಷ್ಬೋನಿನಲ್ಲಿ ವಾಸಮಾಡಿದ ಅಮೋರಿಯರ ಅರಸನಾದ ಸೀಹೋನನಿಗೆ ಮಾಡಿದ ಪ್ರಕಾರ ಇವನಿಗೂ ಮಾಡಬೇಕು,” ಎಂದರು.
35
ಈ ಪ್ರಕಾರ ಅವರು ಅವನನ್ನೂ ಅವನ ಮಕ್ಕಳನ್ನೂ ಅವನ ಸಮಸ್ತ ಜನರನ್ನೂ ಅವನಿಗೆ ಒಬ್ಬನಾದರೂ ಉಳಿಯದಂತೆ ಹೊಡೆದು, ಅವನ ದೇಶವನ್ನು ವಶಮಾಡಿಕೊಂಡರು.
← Chapter 20
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 22 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
Recommended Reading
Commentary
Numbers Commentaries
→
Devotional
Numbers Devotional Guide
→
Get This Bible
Kannada KSB (ಕನ್ನಡ ಸಮಕಾಲಿಕ ಅನುವಾದ) Study Bible
→