bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI Bible 2016
/
1 Samuel 21
1 Samuel 21
Kannada BSI Bible 2016
← Chapter 20
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 22 →
1
ತರುವಾಯ ದಾವೀದನು ನೋಬ್ ಊರಲ್ಲಿದ್ದ ಯಾಜಕನಾದ ಅಹೀಮೆಲೆ ಕನ ಬಳಿಗೆ ಬಂದನು. ಅಹೀಮೆಲೆಕನು ದಾವೀದನನ್ನು ಎದುರುಗೊಳ್ಳಬಂದಾಗ ಹೆದರಿ--ಒಬ್ಬರೂ ನಿನ್ನ ಸಂಗಡ ಬಾರದೆ ನೀನು ಒಂಟಿಯಾಗಿ ಬಂದದ್ದು ಏನೆಂದು ಅವನನ್ನು ಕೇಳಿದನು.
2
ದಾವೀದನು ಯಾಜಕನಾದ ಅಹೀಮೆಲೆಕನಿಗೆ--ಅರಸನು ನನಗೆ ಒಂದು ಕಾರ್ಯವನ್ನು ಆಜ್ಞಾಪಿಸಿ--ನಾನು ಕಳುಹಿಸಿದ ಕಾರ್ಯವು ನಿನಗೆ ಆಜ್ಞಾಪಿಸಿದ್ದು ಇಂಥಾದ್ದೆಂದು ಒಬ್ಬರಿಗೂ ತಿಳಿಯ ಬಾರದೆಂದು ನನಗೆ ಹೇಳಿದನು. ಇಂಥಿಂಥ ಸ್ಥಳಗಳಿಗೆ ಹೋಗಬೇಕೆಂದು ನಾನು ನನ್ನ ಕೆಲಸದವರಿಗೆ ನೇಮಿಸಿದ್ದೇನೆ.
3
ಈಗ ನಿನ್ನ ಕೈಯಲ್ಲಿ ಏನಾದರೂ ಉಂಟೋ? ಐದು ರೊಟ್ಟಿಗಳನ್ನಾದರೂ ನಿನಗೆ ದೊರಕಿದ ಯಾವದನ್ನಾದರೂ ನನಗೆ ಕೊಡು ಅಂದನು.
4
ಯಾಜಕನು ದಾವೀದನಿಗೆ ಪ್ರತ್ಯುತ್ತರ ವಾಗಿ--ಪರಿಶುದ್ಧ ರೊಟ್ಟಿಯ ಹೊರತಾಗಿ ನನ್ನ ಕೈಯಲ್ಲಿ ಬಳಕೆಯಾದ ರೊಟ್ಟಿ ಒಂದಾದರೂ ಇಲ್ಲ; ಯೌವನ ಸ್ಥರು ಸ್ತ್ರೀಯರ ಬಳಿಗೆ ಸೇರದಿದ್ದರೆ ಅದು ಆಗಲಿ ಅಂದನು.
5
ದಾವೀದನು ಯಾಜಕನಿಗೆ ಪ್ರತ್ಯುತ್ತರ ವಾಗಿ--ನಾನು ಹೊರಡುವದಕ್ಕಿಂತ ಮುಂಚೆ ನಿನ್ನೆಯೂ ಮೊನ್ನೆಯೂ ಸ್ತ್ರೀಯರು ನಮಗೆ ದೂರವಾ ಗಿದ್ದರು. ಯೌವನಸ್ಥರ ಪಾತ್ರೆಗಳು ಪರಿಶುದ್ಧವಾಗಿವೆ; ರೊಟ್ಟಿಯು ಈ ಹೊತ್ತು ಪಾತ್ರೆಯಲ್ಲಿ ಪರಿಶುದ್ಧ ಮಾಡಲ್ಪಟ್ಟದ್ದಾಗಿದ್ದರೂ ಅದು ಒಂದು ವಿಧವಾಗಿ ಬಳಕೆಯಾಗಿದೆ ಅಂದನು.
6
ಆಗ ಕರ್ತನ ಸನ್ನಿಧಿಯಿಂದ ತೆಗೆದುಕೊಳ್ಳಲ್ಪಟ್ಟ ಸಮ್ಮುಖದ ರೊಟ್ಟಿಗಳ ಹೊರತು ಬೇರೆ ರೊಟ್ಟಿಯು ಅಲ್ಲಿ ಇಲ್ಲದ್ದರಿಂದ ಯಾಜಕನು ಅವನಿಗೆ ಪರಿಶುದ್ಧ ರೊಟ್ಟಿಯನ್ನು ಕೊಟ್ಟನು. ಅವುಗಳನ್ನು ತೆಗೆದುಕೊಳ್ಳುವ ದಿವಸದಲ್ಲಿ ಅವುಗಳಿಗೆ ಬದಲಾಗಿ ಬಿಸಿರೊಟ್ಟಿಗಳು ಇಡಲ್ಪಡುವವು.
7
ಆದರೆ ಸೌಲನ ಸೇವಕರಲ್ಲಿ ಎದೋಮ್ಯನಾದ ದೋಯೇಗ ನೆಂಬ ಹೆಸರುಳ್ಳ ಒಬ್ಬನು ಆ ದಿವಸ ಅಲ್ಲಿ ಕರ್ತನ ಮುಂದೆ ತಡೆಯಲ್ಪಟ್ಟಿದ್ದನು. ಅವನು ಸೌಲನ ಹಿಂಡು ಕಾಯುವವರಲ್ಲಿ ಮುಖ್ಯಸ್ಥನಾಗಿದ್ದನು.
8
ಆಗ ದಾವೀದ ನು ಅಹೀಮೆಲೆಕನಿಗೆ--ನಿನ್ನ ಕೈಯಲ್ಲಿ ಈಟಿಯಾದರೂ ಕತ್ತಿಯಾದರೂ ಇಲ್ಲವೋ? ಯಾಕಂದರೆ ಅರಸನ ಕಾರ್ಯವು ಅವಸರವಾದದ್ದರಿಂದ ನಾನು ನನ್ನ ಕತ್ತಿ ಯನ್ನಾದರೂ ಆಯುಧಗಳನ್ನಾದರೂ ತಕ್ಕೊಂಡು ಬರಲಿಲ್ಲ ಅಂದನು.
9
ಅದಕ್ಕೆ ಯಾಜಕನು--ನೀನು ಏಲಾ ತಗ್ಗಿನಲ್ಲಿ ಸಂಹರಿಸಿದ ಫಿಲಿಷ್ಟಿಯನಾದ ಗೊಲ್ಯಾ ತನ ಕತ್ತಿಯನ್ನು ಎಫೋದಿನ ಹಿಂದೆ ಒಂದು ಬಟ್ಟೆ ಯಲ್ಲಿ ಸುತ್ತಿ ಇಟ್ಟಿದೆ. ಅದನ್ನು ನೀನು ತೆಗೆದುಕೊಂಡರೆ ತೆಗೆದುಕೋ ಯಾಕಂದರೆ ಅದು ಒಂದೇ ಅಲ್ಲದೆ ಇಲ್ಲಿ ಬೇರೊಂದು ಇಲ್ಲ ಅಂದನು. ಅದಕ್ಕೆ ದಾವೀದನು ಅದರಂಥದ್ದು ಇನ್ನಿಲ್ಲ; ಅದನ್ನು ನನಗೆ ಕೊಡು ಅಂದನು.
10
ದಾವೀದನು ಎದ್ದು ಆ ದಿನ ಸೌಲನ ಭಯದಿಂದ ಗತ್ ಊರಿನ ಅರಸನಾದ ಆಕೀಷನ ಬಳಿಗೆ ಓಡಿ ಬಂದನು.
11
ಆಕೀಷನ ಸೇವಕರು ಅವನಿಗೆ--ಇವನು ದೇಶದ ಅರಸನಾದ ದಾವೀದನಲ್ಲವೋ? ಸೌಲನು ಸಾವಿರಗಳನ್ನೂ ದಾವೀದನು ಹತ್ತು ಸಾವಿರಗಳನ್ನೂ ಸಂಹರಿಸಿದನೆಂದು ಇವನನ್ನು ಕುರಿತು ನಾಟ್ಯದಲ್ಲಿ ಒಬ್ಬರಿಗೊಬ್ಬರು ಹಾಡಿದರಲ್ಲವೇ ಅಂದರು.
12
ಆಗ ದಾವೀದನು ಈ ಮಾತುಗಳನ್ನು ತನ್ನ ಹೃದಯದಲ್ಲಿ ಇಟ್ಟುಕೊಂಡು ಗತ್ ಊರಿನ ಅರಸನಾದ ಆಕೀಷನಿ ಗೋಸ್ಕರ ಮಹಾಭಯಸ್ಥನಾಗಿ
13
ಅವರ ಕಣ್ಣುಮುಂದೆ ತನ್ನ ಬುದ್ಧಿಯನ್ನು ಮಾರ್ಪಡಿಸಿ ತನ್ನನ್ನು ಹುಚ್ಚನ ಹಾಗೆ ತೋರಮಾಡಿ ದ್ವಾರದ ಕದಗಳನ್ನು ಕೆರೆಯುತ್ತಾ ತನ್ನ ಬಾಯಿಯ ಜೊಲ್ಲನ್ನು ತನ್ನ ಗಡ್ಡದ ಮೇಲೆ ಸುರಿಸಿಕೊಂಡನು.
14
ಆಗ ಆಕೀಷನು ತನ್ನ ಸೇವಕ ರಿಗೆ--ಇಗೋ, ಈ ಮನುಷ್ಯನು ಹುಚ್ಚು ಹಿಡಿದವ ನೆಂದು ನೋಡುತ್ತೀರಲ್ಲಾ. ಇವನನ್ನು ನನ್ನ ಬಳಿಗೆ ಏಕೆ ತೆಗೆದುಕೊಂಡು ಬಂದಿರಿ?ಹುಚ್ಚರು ನನಗೆ ಅವಶ್ಯವೆಂದು ಹುಚ್ಚು ಆಟ ಆಡಲು ಇವನನ್ನು ನನ್ನ ಮುಂದೆ ತೆಗೆದುಕೊಂಡು ಬಂದಿರೋ? ಇಂಥವನು ನನ್ನ ಮನೆಯಲ್ಲಿ ಬರಬೇಕೋ ಅಂದನು.
15
ಹುಚ್ಚರು ನನಗೆ ಅವಶ್ಯವೆಂದು ಹುಚ್ಚು ಆಟ ಆಡಲು ಇವನನ್ನು ನನ್ನ ಮುಂದೆ ತೆಗೆದುಕೊಂಡು ಬಂದಿರೋ? ಇಂಥವನು ನನ್ನ ಮನೆಯಲ್ಲಿ ಬರಬೇಕೋ ಅಂದನು.
← Chapter 20
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 22 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31