bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
2 Kings 4
2 Kings 4
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 3
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 5 →
1
ಒಂದು ದಿವಸ ಪ್ರವಾದಿಮಂಡಲಿಯವರಲ್ಲೊಬ್ಬನ ಹೆಂಡತಿಯು ಎಲೀಷನ ಹತ್ತಿರ ಬಂದು ಅವನಿಗೆ - ನಿನ್ನ ಸೇವಕನಾದ ನನ್ನ ಗಂಡನು ಮರಣಹೊಂದಿದನು; ಅವನು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿದ್ದನೆಂಬದು ನಿನಗೆ ಗೊತ್ತುಂಟಲ್ಲಾ; ಸಾಲಕೊಟ್ಟವನು ನನ್ನ ಇಬ್ಬರು ಮಕ್ಕಳನ್ನು ದಾಸರನ್ನಾಗಿ ತೆಗೆದುಕೊಂಡು ಹೋಗುವದಕ್ಕೆ ಬಂದಿದ್ದಾನೆ ಎಂದು ಮೊರೆಯಿಟ್ಟಳು.
2
ಎಲೀಷನು ಆಕೆಗೆ - ನಾನು ನಿನಗೇನು ಮಾಡಬೇಕನ್ನುತ್ತೀ? ನಿನ್ನ ಮನೆಯಲ್ಲಿ ಏನಿರುತ್ತದೆ, ಹೇಳು ಅಂದನು. ಅದಕ್ಕೆ ಆಕೆಯು - ನಿನ್ನ ದಾಸಿಯ ಮನೆಯಲ್ಲಿ ಒಂದು ಮೊಗೆ ಎಣ್ಣೆ ಹೊರತಾಗಿ ಏನೂ ಇಲ್ಲ ಎಂದು ಉತ್ತರಕೊಟ್ಟಳು.
3
ಆಗ ಎಲೀಷನು ಆಕೆಗೆ - ಹೋಗಿ ನಿನ್ನ ನೆರೆಯವರಿಂದ ಸಿಕ್ಕುವಷ್ಟು ಬರೀ ಪಾತ್ರೆಗಳನ್ನು ಕೇಳಿಕೊಂಡು ಬಾ.
4
ಅನಂತರ ನಿನ್ನ ಮಕ್ಕಳನ್ನು ಒಳಗೆ ಕರಕೊಂಡು ಬಾಗಲನ್ನು ಮುಚ್ಚಿ ಎಣ್ಣೆಯನ್ನು ಪಾತ್ರೆಗಳಲ್ಲಿ ಹೊಯ್ದು ತುಂಬಿದವುಗಳನ್ನೆಲ್ಲಾ ಒತ್ತಟ್ಟಿಗಿಡು ಎಂದು ಹೇಳಿದನು.
5
ಆಕೆಯು ಹೋಗಿ ಮಕ್ಕಳನ್ನು ಒಳಗೆ ಕರಕೊಂಡು ಬಾಗಲನ್ನು ಮುಚ್ಚಿ ಅವರು ಮುಂದಿಟ್ಟ ಪಾತ್ರೆಗಳಲ್ಲೆಲ್ಲಾ ಎಣ್ಣೆ ಹೊಯ್ದಳು.
6
ಪಾತ್ರೆಗಳು ತುಂಬಿದಾಗ ಆಕೆಯು ಮಗನಿಗೆ - ಇನ್ನೊಂದು ಪಾತ್ರೆಯನ್ನು ತಂದಿಡು ಅನ್ನಲು ಅವನು - ಪಾತ್ರೆಗಳು ತೀರಿದವೆಂದು ಉತ್ತರಕೊಟ್ಟನು.
7
ಕೂಡಲೆ ಎಣ್ಣೆಯುಕ್ಕುವದು ನಿಂತು ಹೋಯಿತು. ತರುವಾಯ ಆಕೆಯು ದೇವರ ಮನುಷ್ಯನ ಹತ್ತಿರ ಬಂದು ನಡೆದದ್ದನ್ನೆಲ್ಲಾ ತಿಳಿಸಿದಳು. ಅವನು ಆಕೆಗೆ - ಹೋಗಿ ಎಣ್ಣೆಯನ್ನು ಮಾರಿ ಸಾಲತೀರಿಸು; ಉಳಿದ ಹಣದಿಂದ ನೀನೂ ನಿನ್ನ ಮಕ್ಕಳೂ ಜೀವನ ಮಾಡಿರಿ ಅಂದನು.
8
ಒಂದು ಸಾರಿ ಎಲೀಷನು ಶೂನೇವಿುಗೆ ಹೋದನು. ಅಲ್ಲಿನ ಒಬ್ಬ ಕುಲೀನ ಸ್ತ್ರೀಯು ಅವನನ್ನು ತನ್ನ ಮನೆಯಲ್ಲಿ ಊಟಮಾಡಬೇಕೆಂದು ಒತ್ತಾಯಪಡಿಸಿದಳು. ಅಂದಿನಿಂದ ಅವನು ಆ ಮಾರ್ಗದಿಂದ ಹೋಗುವಾಗೆಲ್ಲಾ ಆ ಮನೆಯಲ್ಲೇ ಊಟಮಾಡುತ್ತಿದ್ದನು.
9
ಆ ಸ್ತ್ರೀಯು ತನ್ನ ಗಂಡನಿಗೆ - ಯಾವಾಗಲೂ ಈ ದಾರಿಯಿಂದ ಹೋಗುತ್ತಾ ಬರುತ್ತಾ ಇರುವ ಆ ಮನುಷ್ಯನು ಪರಿಶುದ್ಧನೂ ದೇವರ ಮನುಷ್ಯನೂ ಆಗಿರುತ್ತಾನೆಂದು ನನಗೆ ಗೊತ್ತಾಯಿತು.
10
ಆದದರಿಂದ ನಾವು ಅವನಿಗೋಸ್ಕರ ಮಾಳಿಗೆಯ ಮೇಲೆ ಒಂದು ಸಣ್ಣ ಕೋಣೆಯನ್ನು ಕಟ್ಟಿಸಿ ಅದರಲ್ಲಿ ಒಂದು ಮಂಚ, ಮೇಜು, ಕುರ್ಚಿ, ದೀಪಸ್ತಂಭ, ಇವುಗಳನ್ನು ಇಡೋಣ; ಅವನು ಇಲ್ಲಿ ಬಂದಾಗೆಲ್ಲಾ ಅದರಲ್ಲಿ ವಾಸಮಾಡಲಿ ಎಂದು ಹೇಳಿದಳು.
11
ಒಂದು ದಿವಸ ಎಲೀಷನು ಅಲ್ಲಿಗೆ ಬಂದು ಆ ಕೋಣೆಯೊಳಗೆ ಪ್ರವೇಶಿಸಿ ದಣುವಾರಿಸಿಕೊಂಡನಂತರ
12
ಆ ಶೂನೇಮ್ಯಳನ್ನು ಕರೆಯಬೇಕೆಂದು ತನ್ನ ಸೇವಕನಾದ ಗೇಹಜಿಗೆ ಆಜ್ಞಾಪಿಸಿದನು. ಅವನು ಹೋಗಿ ಆಕೆಯನ್ನು ಕರೆಯಲು ಆಕೆಯು ಬಂದು ಮುಂದೆ ನಿಂತಳು.
13
ಆಗ ಎಲೀಷನು ಗೇಹಜಿಯ ಮುಖಾಂತರವಾಗಿ ಆಕೆಯನ್ನು - ನೀನು ಕಷ್ಟಪಟ್ಟು ನಮಗೆ ಇಷ್ಟೆಲ್ಲಾ ಉಪಕಾರಮಾಡಿದಿ; ನಾನು ನಿನಗೆ ಯಾವ ಪ್ರತ್ಯುಪಕಾರ ಮಾಡಲಿ? ನಿನಗೋಸ್ಕರವಾಗಿ ಅರಸನ ಮುಂದಾಗಲಿ ಸೇನಾಪತಿಯ ಮುಂದಾಗಲಿ ಮಾತಾಡಬೇಕೋ ಎಂದು ಕೇಳಲು ಆಕೆಯು - ನಾನು ಸ್ವಕುಲದವರ ಮಧ್ಯದಲ್ಲಿ ಸುಖವಾಗಿದ್ದೇನೆ ಎಂದು ಉತ್ತರಕೊಟ್ಟಳು.
14
ಆಮೇಲೆ ಎಲೀಷನು ಗೇಹಜಿಯನ್ನು - ನಾವು ಆಕೆಗೆ ಯಾವ ಉಪಕಾರವನ್ನು ಮಾಡಬಹುದು ಎಂದು ಕೇಳಲು ಅವನು - ಆಕೆಗೆ ಮಗನಿಲ್ಲ, ಗಂಡನು ಮುದುಕನಾಗಿದ್ದಾನೆ ಅಂದನು.
15
ಇದನ್ನು ಕೇಳಿ ಎಲೀಷನು ಆ ಸ್ತ್ರೀಯನ್ನು ಕರೆಯಬೇಕೆಂದು ಆಜ್ಞಾಪಿಸಿದನು. ಅವನು ಹೋಗಿ ಕರೆಯಲು ಆಕೆಯು ಬಂದು ಬಾಗಲಿನ ಹತ್ತಿರ ನಿಂತಳು.
16
ಎಲೀಷನು ಆಕೆಗೆ - ನೀನು ಬರುವ ವರುಷ ಇದೇ ಕಾಲದಲ್ಲಿ ಒಬ್ಬ ಮಗನನ್ನು ಅಪ್ಪಿಕೊಂಡಿರುವಿ ಅಂದನು. ಅದಕ್ಕೆ ಆಕೆಯು - ದೇವರ ಮನುಷ್ಯನೇ, ಒಡೆಯನೇ, ಹೀಗೆ ಹೇಳಿ ನಿನ್ನ ದಾಸಿಯನ್ನು ವಂಚಿಸಬೇಡ ಎಂದು ನುಡಿದಳು.
17
ಆ ಸ್ತ್ರೀಯು ಗರ್ಭಿಣಿಯಾಗಿ ಎಲೀಷನು ಹೇಳಿದಂತೆ ಮುಂದಿನ ವರುಷ ಅದೇ ಕಾಲದಲ್ಲಿ ಒಬ್ಬ ಮಗನನ್ನು ಹೆತ್ತಳು.
18
ಹುಡುಗನು ದೊಡ್ಡವನಾದ ಮೇಲೆ ಒಂದು ದಿವಸ ಹೊಲದಲ್ಲಿ ಕೊಯ್ಯುವವರ ಸಂಗಡ ಇದ್ದ ತನ್ನ ತಂದೆಯ ಬಳಿಗೆ ಹೋದನು.
19
ಅಲ್ಲಿದ್ದಾಗ ಅವನು ಫಕ್ಕನೆ - ಅಪ್ಪಾ, ನನ್ನ ತಲೆ, ನನ್ನ ತಲೆ ಎಂದು ಕೂಗಲು ತಂದೆಯು ಒಬ್ಬ ಸೇವಕನನ್ನು ಕರೆದು ಅವನಿಗೆ - ಇವನನ್ನು ತಾಯಿಯ ಹತ್ತಿರ ತೆಗೆದುಕೊಂಡು ಹೋಗು ಎಂದು ಆಜ್ಞಾಪಿಸಿದನು.
20
ಸೇವಕನು ಹುಡುಗನನ್ನು ಅವನ ತಾಯಿಗೆ ತಂದೊಪ್ಪಿಸಿದನು. ಹುಡುಗನು ಮಧ್ಯಾಹ್ನದವರೆಗೂ ತಾಯಿಯ ತೊಡೆಯ ಮೇಲೆಯೇ ಇದ್ದುಕೊಂಡು ಅನಂತರ ಸತ್ತನು.
21
ಕೂಡಲೆ ಆಕೆಯು ಅವನನ್ನು ದೇವರ ಮನುಷ್ಯನ ಕೋಣೆಗೆ ತೆಗೆದುಕೊಂಡು ಹೋಗಿ ಅವನ ಮಂಚದ ಮೇಲೆ ಮಲಗಿಸಿ
22
ಬಾಗಲು ಮುಚ್ಚಿ ಗಂಡನನ್ನು ಕರಿಸಿ ಅವನಿಗೆ - ದಯವಿಟ್ಟು ನನಗೋಸ್ಕರ ಒಬ್ಬ ಸೇವಕನನ್ನೂ ಒಂದು ಕತ್ತೆಯನ್ನೂ ಕಳುಹಿಸು; ನಾನು ಬೇಗನೆ ದೇವರ ಮನುಷ್ಯನ ಬಳಿಗೆ ಹೋಗಿ ಬರುತ್ತೇನೆ ಎಂದು ಹೇಳಿದಳು.
23
ಅದಕ್ಕೆ ಅವನು - ಇಂದು ಅಮಾವಾಸ್ಯೆಯಲ್ಲ, ಸಬ್ಬತ್ತಲ್ಲ, ಈಹೊತ್ತು ಯಾಕೆ ಹೋಗುತ್ತೀ ಅಂದನು.
24
ಆಕೆಯು ಚಿಂತೆಯಿಲ್ಲ ಎಂದು ಹೇಳಿ ಕತ್ತೆಗೆ ತಡಿಹಾಕಿಸಿ ಕೂತುಕೊಂಡು ಸೇವಕನಿಗೆ - ಹೊಡೆ, ಓಡಿಸುತ್ತಾ ಬಾ; ನಾನು ಅಪ್ಪಣೆ ಮಾಡುವವರೆಗೂ ನಿಲ್ಲಿಸಬೇಡ ಎಂದು ಆಜ್ಞಾಪಿಸಿದಳು.
25
ಹೀಗೆ ಆಕೆಯು ಪ್ರಯಾಣಮಾಡಿ ಕರ್ಮೆಲ್ಬೆಟ್ಟದ ಮೇಲಿದ್ದ ದೇವರ ಮನುಷ್ಯನ ಬಳಿಗೆ ಬಂದಳು. ಅವನು ಈಕೆಯನ್ನು ದೂರದಿಂದಲೇ ಕಂಡು ತನ್ನ ಸೇವಕನಾದ ಗೇಹಜಿಗೆ -
26
ಅಗೋ, ಅಲ್ಲಿ ಶೂನೇಮ್ಯಳು! ನೀನು ಓಡಿಹೋಗಿ ಆಕೆಯನ್ನು ಎದುರುಗೊಂಡು - ನಿನಗೂ ನಿನ್ನ ಗಂಡನಿಗೂ ಮಗನಿಗೂ ಕ್ಷೇಮವೋ ಎಂದು ವಿಚಾರಿಸು ಎಂಬದಾಗಿ ಆಜ್ಞಾಪಿಸಿ ಕಳುಹಿಸಿದನು. ಆಕೆಯು ಆ ಸೇವಕನಿಗೆ - ಕ್ಷೇಮ ಎಂದು ಉತ್ತರಕೊಟ್ಟು
27
ಬೆಟ್ಟದ ಮೇಲಿದ್ದ ದೇವರ ಮನುಷ್ಯನ ಬಳಿಗೆ ಬಂದು ಅವನ ಪಾದಗಳನ್ನು ಹಿಡಿದಳು. ಗೇಹಜಿಯು ಆಕೆಯನ್ನು ದೂಡುವದಕ್ಕಾಗಿ ಹತ್ತಿರ ಬರಲು ದೇವರ ಮನುಷ್ಯನು ಅವನಿಗೆ - ಬಿಡು, ಆಕೆಯ ಮನಸ್ಸಿನಲ್ಲಿ ಬಹುದುಃಖವಿರುವ ಹಾಗೆ ತೋರುತ್ತದೆ; ಯೆಹೋವನು ಆಕೆಯ ದುಃಖವನ್ನು ನನಗೆ ಪ್ರಕಟಿಸಲಿಲ್ಲ, ಮರೆ ಮಾಡಿದ್ದಾನೆ ಎಂದು ಹೇಳಿದನು.
28
ಆಕೆಯು ದೇವರ ಮನುಷ್ಯನಿಗೆ - ನನಗೆ ಮಗನು ಬೇಕೆಂದು ಸ್ವಾವಿುಯಾದ ನಿನ್ನನ್ನು ಬೇಡಿಕೊಂಡೆನೋ? ನನ್ನನ್ನು ವಂಚಿಸಬಾರದೆಂದು ಮೊರೆಯಿಟ್ಟೆನಲ್ಲಾ ಅಂದಳು.
29
ಆಗ ಎಲೀಷನು ಗೇಹಜಿಗೆ - ನೀನು ನಡು ಕಟ್ಟಿಕೊಂಡು ನನ್ನ ಕೋಲನ್ನು ತೆಗೆದುಕೊಂಡು ಹೋಗಿ ಹುಡುಗನ ಮೋರೆಯ ಮೇಲಿಡು; ಹೋಗುವಾಗ ದಾರಿಯಲ್ಲಿ ಯಾರನ್ನೂ ವಂದಿಸಬೇಡ; ಅವರ ವಂದನೆಯನ್ನೂ ಸ್ವೀಕರಿಸಬೇಡ ಎಂದು ಹೇಳಿ ಕಳುಹಿಸಿದನು.
30
ಆದರೂ ಹುಡುಗನ ತಾಯಿ - ಯೆಹೋವನಾಣೆ, ನಿನ್ನ ಜೀವದಾಣೆ, ನಾನು ನಿನ್ನನ್ನು ಬಿಟ್ಟು ಹೋಗುವದಿಲ್ಲ ಎಂದು ಹೇಳಿದ್ದರಿಂದ ಎಲೀಷನು ಆಕೆಯ ಜೊತೆಯಲ್ಲಿ ಹೊರಟನು.
31
ಅವರ ಮುಂದಾಗಿ ಹೋದ ಗೇಹಜಿಯು ಕೋಲನ್ನು ಹುಡುಗನ ಮುಖದ ಮೇಲಿಟ್ಟರೂ ಶಬ್ದವಿಲ್ಲ, ಜೀವದ ಲಕ್ಷಣವಿಲ್ಲ. ಆದದರಿಂದ ಅವನು ಹಿಂದಿರುಗಿ ಹೋಗಿ ಎಲೀಷನನ್ನು ಎದುರುಗೊಂಡು ಅವನಿಗೆ - ಹುಡುಗನು ಎಚ್ಚರವಾಗಲಿಲ್ಲ ಅಂದನು.
32
ಎಲೀಷನು ಆ ಮನೆಯನ್ನು ಮುಟ್ಟಿದಾಗ ಸತ್ತ ಹುಡುಗನು ತನ್ನ ಮಂಚದ ಮೇಲೆ ಇಡಲ್ಪಟ್ಟಿರುವದನ್ನು ಕಂಡು
33
ಯಾರೂ ಒಳಗೆ ಬಾರದಂತೆ ಆ ಕೋಣೆಯ ಬಾಗಲನ್ನು ಮುಚ್ಚಿಕೊಂಡು ಯೆಹೋವನನ್ನು ಪ್ರಾರ್ಥಿಸಿದನು.
34
ಅನಂತರ ಹುಡುಗನ ಮೇಲೆ ಬೋರ್ಲಬಿದ್ದು ತನ್ನ ಬಾಯಿ ಕಣ್ಣು ಕೈಗಳನ್ನು ಅವನ ಬಾಯಿ ಕಣ್ಣು ಕೈಗಳಿಗೆ ಮುಟ್ಟಿಸಿದ್ದರಿಂದ ಹುಡುಗನ ದೇಹವು ಬೆಚ್ಚಗಾಯಿತು.
35
ಆಮೇಲೆ ಹುಡುಗನನ್ನು ಬಿಟ್ಟು ಎದ್ದು ಮನೆಯಲ್ಲಿ ತುಸುಹೊತ್ತು ಅತ್ತಿತ್ತ ಅಡ್ಡಾಡಿ ತಿರಿಗಿ ಅವನ ಮೇಲೆ ಬೋರ್ಲ ಬೀಳಲು ಹುಡುಗನು ಏಳು ಸಾರಿ ಸೀತು ಕಣ್ದೆರೆದನು.
36
ಆಗ ಎಲೀಷನು ಗೇಹಜಿಗೆ - ಶೂನೇಮ್ಯಳನ್ನು ಕರೆ ಎಂದು ಆಜ್ಞಾಪಿಸಲು ಅವನು ಆಕೆಯನ್ನು ಕರೆದನು. ಆಕೆಯು ಬಂದಾಗ ಎಲೀಷನು ಆಕೆಗೆ - ನಿನ್ನ ಮಗನನ್ನು ತೆಗೆದುಕೋ ಎಂದು ಹೇಳಿದನು.
37
ಆಕೆಯು ಹತ್ತಿರ ಬಂದು ಅವನ ಪಾದಗಳಿಗೆ ಬಿದ್ದು ಸಾಷ್ಟಾಂಗನಮಸ್ಕಾರಮಾಡಿ ಮಗನನ್ನು ತೆಗೆದುಕೊಂಡು ಹೋದಳು.
38
ಎಲೀಷನು ತಿರಿಗಿ ಗಿಲ್ಗಾಲಿಗೆ ಹೋದನು. ಆಗ ದೇಶದಲ್ಲಿ ಬರವಿದ್ದಿತು. ಪ್ರವಾದಿ ಮಂಡಲಿಯವರು ತನ್ನ ಮುಂದೆ ಕೂಡಿ ಬರಲು ಅವನು ತನ್ನ ಸೇವಕನಿಗೆ - ದೊಡ್ಡ ಹಂಡೆಯನ್ನು ತೆಗೆದುಕೊಂಡು ಇವರಿಗೋಸ್ಕರ ಅಡಿಗೆಮಾಡು ಎಂದು ಆಜ್ಞಾಪಿಸಿದನು.
39
ಒಬ್ಬನು ಯಾವದಾದರೊಂದು ಪಲ್ಯ ಸಿಕ್ಕೀತೆಂದು ಕಾಡಿಗೆ ಹೋಗಿ ಅಲ್ಲಿ ಒಂದು ಕಾಡುಬಳ್ಳಿಯನ್ನು ಕಂಡು ಉಡಿತುಂಬಾ ಅದರ ಕಾಯಿಗಳನ್ನು ಕಿತ್ತುಕೊಂಡು ಬಂದು ತುಂಡುತುಂಡುಮಾಡಿ ಆ ಪಾತ್ರೆಯೊಳಗೆ ಹಾಕಿದನು. ಅದು ಎಂಥ ಕಾಯಿಯೆಂಬದು ಯಾರಿಗೂ ಗೊತ್ತಿರಲಿಲ್ಲ.
40
ಜನರಿಗೆ ಅದನ್ನೇ ಊಟಕ್ಕೆ ಬಡಿಸಿದರು; ಅವರು ಅದನ್ನು ಬಾಯೊಳಗೆ ಹಾಕಿದ ಕೂಡಲೆ ತಿನ್ನಲಾರದೆ - ದೇವರ ಮನುಷ್ಯನೇ, ಪಾತ್ರೆಯಲ್ಲಿ ವಿಷ ಎಂದು ಕೂಗಿದರು.
41
ಆಗ ಅವನು - ಹಿಟ್ಟನ್ನು ತಂದುಕೊಡಿರಿ ಎಂದು ಹೇಳಿದನು; ಅವರು ತರಲು ಅದನ್ನು ಆ ಪಾತ್ರೆಯೊಳಗೆ ಹಾಕಿ ಈಗ ಇದನ್ನು ಬಡಿಸಬಹುದು ಅಂದನು. ಕೂಡಲೆ ಪಾತ್ರೆಯಲ್ಲಿದ್ದ ವಿಷವೆಲ್ಲಾ ಹೋಯಿತು.
42
ಒಂದು ದಿವಸ ಬಾಳ್ಷಾಲಿಷಾ ಊರಿನ ಒಬ್ಬ ಮನುಷ್ಯನು ಇಪ್ಪತ್ತು ಜವೆಗೋದಿಯ ರೊಟ್ಟಿಗಳನ್ನೂ ಒಂದು ಚೀಲತುಂಬಾ ಹಸೀ ತೆನೆಗಳನ್ನೂ ಪ್ರಥಮ ಫಲದ ಕಾಣಿಕೆಯಾಗಿ ತೆಗೆದುಕೊಂಡು ಬಂದು ದೇವರ ಮನುಷ್ಯನಿಗೆ ಸಮರ್ಪಿಸಿದನು. ಎಲೀಷನು ತನ್ನ ಸೇವಕನಿಗೆ - ಇದನ್ನು ಜನರಿಗೆ ಕೊಡು; ಅವರು ಊಟಮಾಡಲಿ ಎಂದು ಹೇಳಿದನು.
43
ಅದಕ್ಕೆ ಅವನು - ಇಷ್ಟನ್ನು ನೂರು ಮಂದಿಗೆ ಹೇಗೆ ಬಡಿಸಲಿ ಅಂದನು. ಎಲೀಷನು ಅವನಿಗೆ - ಇರಲಿ, ಕೊಡು; ಅವರು ಊಟ ಮಾಡಲಿ. ಅವರು ಅದನ್ನು ಊಟಮಾಡಿ ತೃಪ್ತರಾಗಿ ಇನ್ನೂ ಉಳಿಸಿಕೊಳ್ಳುವರೆಂದು ಯೆಹೋವನು ಅನ್ನುತ್ತಾನೆ ಎಂದು ಹೇಳಿದನು.
44
ಸೇವಕನು ಬಡಿಸಲು ಯೆಹೋವನು ಹೇಳಿದಂತೆ ಜನರು ಊಟಮಾಡಿ ತೃಪ್ತರಾಗಿ ಇನ್ನೂ ಉಳಿಸಿಕೊಂಡರು.
← Chapter 3
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 5 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25