bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
2 Samuel 20
2 Samuel 20
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 19
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 21 →
1
ಅಕಸ್ಮಾತ್ತಾಗಿ ಬೆನ್ಯಾಮೀನ್ಕುಲದವನೂ ಬಿಕ್ರೀಯ ಮಗನೂ ಆದ ಶೆಬನೆಂಬ ಒಬ್ಬ ದುಷ್ಟ ಮನುಷ್ಯನು ಅಲ್ಲಿ ಹೇಗೋ ಬಂದಿದ್ದನು. ಅವನು ತುತೂರಿಯನ್ನು ಊದಿ - ಇಸ್ರಾಯೇಲ್ಯರೇ, ದಾವೀದನಲ್ಲಿ ನಮಗೆ ಪಾಲಿಲ್ಲ; ಇಷಯನ ಮಗನಲ್ಲಿ ನಮಗೆ ಸ್ವಾಸ್ತ್ಯವಿಲ್ಲ. ಪ್ರತಿಯೊಬ್ಬನೂ ನಮ್ಮ ನಮ್ಮ ನಿವಾಸಗಳಿಗೆ ಹೋಗೋಣ ಅಂದನು.
2
ಆಗ ಇಸ್ರಾಯೇಲ್ಯರೆಲ್ಲರೂ ದಾವೀದನನ್ನು ಬಿಟ್ಟು ಬಿಕ್ರೀಯ ಮಗನಾದ ಶೆಬನನ್ನು ಹಿಂಬಾಲಿಸಿದರು. ಆದರೆ ಯೆಹೂದ್ಯರು ತಮ್ಮ ಅರಸನನ್ನು ಅಂಟಿಕೊಂಡು ಯೊರ್ದನ್ತಗ್ಗಿನಿಂದ ಯೆರೂಸಲೇವಿುನವರೆಗೂ ಅವನ ಜೊತೆಯಲ್ಲಿ ಹೋದರು.
3
ಅರಸನಾದ ದಾವೀದನು ಯೆರೂಸಲೇವಿುಗೆ ಬಂದ ಮೇಲೆ ತಾನು ಮನೆಕಾಯುವದಕ್ಕೋಸ್ಕರ ಇಟ್ಟಿದ್ದ ತನ್ನ ಹತ್ತು ಮಂದಿ ಉಪಪತ್ನಿಯರನ್ನು ಪ್ರತ್ಯೇಕವಾದ ಒಂದು ಮನೆಯಲ್ಲಿಟ್ಟು ಅವರಿಗೆ ಅನ್ನವಸ್ತ್ರಕೊಡುತ್ತಿದ್ದನು; ಆದರೆ ಅವರನ್ನು ತಿರಿಗಿ ಕೂಡಲಿಲ್ಲ. ಅವರು ಜೀವದಿಂದಿರುವವರೆಗೂ ವಿಧವೆಯರಂತಿದ್ದು ಕಾವಲಲ್ಲಿರಬೇಕಾಯಿತು.
4
ಅನಂತರ ಅರಸನು ಅಮಾಸನಿಗೆ - ನೀನು ಮೂರು ದಿನಗಳೊಳಗಾಗಿ ಯೆಹೂದ್ಯರನ್ನು ಕೂಡಿಸಿಕೊಂಡು ಇಲ್ಲಿ ಸಿದ್ಧವಾಗಿರು ಎಂದು ಆಜ್ಞಾಪಿಸಿದನು.
5
ಅವನು ಹೋಗಿ ಯೆಹೂದ್ಯರನ್ನು ಕೂಡಿಸಿದನು. ಆದರೆ ಅವನು ನೇಮಕವಾದ ಸಮಯಕ್ಕೆ ಬಾರದೆ ತಡಮಾಡಿದ್ದರಿಂದ ಅರಸನು ಅಬೀಷೈಗೆ -
6
ಅಬ್ಷಾಲೋಮನಿಗಿಂತ ಬಿಕ್ರೀಯ ಮಗನಾದ ಶೆಬನು ನಮಗೆ ಹೆಚ್ಚಿನ ಕೇಡು ಮಾಡುವಂತಿದೆ. ಆದದರಿಂದ ನೀನು ನನ್ನ ಸ್ವಂತ ಆಳುಗಳನ್ನು ತೆಗೆದುಕೊಂಡು ಹೋಗಿ ಅವನನ್ನು ಹಿಂದಟ್ಟು; ಇಲ್ಲವಾದರೆ ಅವನು ನಮ್ಮ ಕಣ್ಣಿಗೆ ಮರೆಯಾಗಿ ಹೋಗಿ ಕೋಟೆ ಕೊತ್ತಲುಗಳುಳ್ಳ ಪಟ್ಟಣಗಳನ್ನು ಸೇರಿಕೊಂಡಾನು ಅಂದನು.
7
ಆಗ ಅವನು ಯೋವಾಬನ ಸೈನಿಕರನ್ನೂ ಕೆರೇತ್ಯ, ಪೆಲೇತ್ಯ ಎಂಬ ಕಾವಲುದಂಡುಗಳನ್ನೂ ಎಲ್ಲಾ ಶೂರರನ್ನೂ ಕರಕೊಂಡು ಬಿಕ್ರೀಯ ಮಗನಾದ ಶೆಬನನ್ನು ಹಿಂದಟ್ಟುವದಕ್ಕೋಸ್ಕರ ಯೆರೂಸಲೇವಿುನಿಂದ ಹೊರಟನು.
8
ಅವರು ಗಿಬ್ಯೋನಿನಲ್ಲಿದ್ದ ದೊಡ್ಡ ಕಲ್ಲನ್ನು ಸಮೀಪಿಸಿದಾಗ ಅಮಾಸನು ಅವರೆದುರಿಗೆ ಬಂದನು. ಯುದ್ಧ ವಸ್ತ್ರಗಳನ್ನು ಧರಿಸಿಕೊಂಡಿದ್ದ ಯೋವಾಬನು ಅವನನ್ನು ವಂದಿಸುವದಕ್ಕೆ ಹೋಗುತ್ತಿರುವಾಗ ಅವನ ಸೊಂಟಕ್ಕೆ ಕಟ್ಟಿದ್ದ ಕತ್ತಿಯು ಒರೆಯಿಂದ ಕೆಳಗೆ ಬಿದ್ದಿತು.
9
ಅವನು ಅಮಾಸನನ್ನು - ಸಹೋದರನೇ, ಕ್ಷೇಮವೋ ಎಂದು ಕೇಳಿ ಮುದ್ದಿಡುವದಕ್ಕೋಸ್ಕರವೋ ಎಂಬಂತೆ ಬಲಗೈಯಿಂದ ಅವನ ಗಡ್ಡವನ್ನು ಹಿಡಿದು
10
ಕೈಯಲ್ಲಿದ್ದ ಕತ್ತಿಯನ್ನು ಗಮನಿಸದಿದ್ದ ಅಮಾಸನನ್ನು ಹೊಟ್ಟೆಯೊಳಗೆ ತಿವಿದನು. ಅದರಿಂದ ಅವನ ಕರುಳುಗಳೆಲ್ಲಾ ಹೊರಗೆ ಬಂದವು. ಎರಡನೆಯ ಸಾರಿ ತಿವಿಯಲಿಲ್ಲ; ಅಷ್ಟಕ್ಕೆ ಅವನು ಸತ್ತನು. ಯೋವಾಬನೂ ಅವನ ತಮ್ಮನಾದ ಅಬೀಷೈಯೂ ಬಿಕ್ರೀಯ ಮಗನಾದ ಶೆಬನನ್ನು ಹಿಂದಟ್ಟುವದಕ್ಕೋಸ್ಕರ ಮುಂದೆ ನಡೆದಾಗ
11
ಯೋವಾಬನ ಆಳುಗಳಲ್ಲೊಬ್ಬನು ಅಮಾಸನ ಹತ್ತಿರ ನಿಂತು - ದಾವೀದ ಯೋವಾಬರ ಕಡೆಯವರು ಯೋವಾಬನನ್ನು ಹಿಂಬಾಲಿಸಲಿ ಎಂದು ಕೂಗಿದನು.
12
ಮಾರ್ಗದ ಮಧ್ಯದಲ್ಲಿ ರಕ್ತದೊಳಗೆ ಹೊರಳಾಡುತ್ತಿದ್ದ ಅಮಾಸನನ್ನು ನೋಡುತ್ತಾ ಎಲ್ಲಾ ಜನರೂ ನಿಂತರು. ಬಂದವರೆಲ್ಲರೂ ಅಲ್ಲೇ ನಿಲ್ಲುವದನ್ನು ಆ ಮನುಷ್ಯನು ಕಂಡು ಅಮಾಸನ ಶವವನ್ನು ದಾರಿಯಿಂದ ಎಳೆದು ಹೊಲದಲ್ಲಿ ಹಾಕಿ ಅದನ್ನು ಬಟ್ಟೆಯಿಂದ ಮುಚ್ಚಿದನು.
13
ಶವವನ್ನು ಆಚೆ ಹಾಕಿದನಂತರ ಜನರೆಲ್ಲರೂ ಬಿಕ್ರೀಯ ಮಗನಾದ ಶೆಬನನ್ನು ಹಿಂದಟ್ಟುವದಕ್ಕೋಸ್ಕರ ಯೋವಾಬನನ್ನು ಹಿಂಬಾಲಿಸಿದರು.
14
ಶೆಬನು ಇಸ್ರಾಯೇಲ್ಪ್ರಾಂತಗಳಲ್ಲಿ ಸಂಚರಿಸುತ್ತಾ ಆಬೇಲ್ಬೇತ್ಮಾಕಾ ಎಂಬಲ್ಲಿಗೆ ಬಂದನು. ಬೇರಿಯರೆಲ್ಲರೂ ಕೂಡಿಕೊಂಡು ಅವನೊಡನೆ ಆ ಊರನ್ನು ಸೇರಿದರು.
15
ಯೋವಾಬನ ಕಡೆಯವರು ಆಬೇಲ್ಬೇತ್ಮಾಕಾ ಊರಿಗೆ ಮುತ್ತಿಗೆಹಾಕಿ ಅದಕ್ಕೆ ಎದುರಾಗಿ ಊರುಗೋಡೆಗೆ ತಗಲುವ ಒಂದು ಮಣ್ಣಿನ ದಿಬ್ಬವನ್ನು ಮಾಡಿ ಗೋಡೆಯನ್ನು ಕೆಡವಿಬಿಡುವದಕ್ಕೆ ಪ್ರಯತ್ನಿಸಿದರು.
16
ಆಗ ಆ ಊರಿನ ಬುದ್ಧಿವಂತೆಯಾದ ಒಬ್ಬ ಹೆಂಗಸು ಅವರಿಗೆ - ಕೇಳಿರಿ, ದಯವಿಟ್ಟು ಕೇಳಿರಿ; ಯೋವಾಬನು ಮಾತಾಡುವದಕ್ಕೋಸ್ಕರ ನನ್ನ ಬಳಿಗೆ ಬರಬೇಕೆಂದು ಹೇಳಿರಿ ಎಂದು ಕೂಗಿದಳು.
17
ಯೋವಾಬನು ಬರಲು ಆ ಸ್ತ್ರೀಯು - ನೀನು ಯೋವಾಬನೋ ಎಂದು ಅವನನ್ನು ಕೇಳಿದಳು. ಅವನು - ಹೌದು, ನಾನೇ ಎಂದು ಉತ್ತರಕೊಟ್ಟನು. ಆಕೆಯು - ನಿನ್ನ ದಾಸಿಯ ಮಾತನ್ನು ಕೇಳು ಅನ್ನಲು ಅವನು - ಕೇಳುತ್ತೇನೆ ಅಂದನು.
18
ಆಗ ಆಕೆಯು - ಪೂರ್ವಕಾಲದಲ್ಲಿ ಜನರು ಆಬೇಲಿನವರ ಆಲೋಚನೆಯನ್ನು ಕೇಳೋಣ ಅಂದುಕೊಂಡು ಅವರ ಆಲೋಚನೆಯ ಮೇರೆಗೆ ತೀರ್ಮಾನಮಾಡಿಕೊಳ್ಳುತ್ತಿದ್ದರು.
19
ನಮ್ಮ ಪಟ್ಟಣವು ಇಸ್ರಾಯೇಲ್ಯರಲ್ಲಿ ಸಮಾಧಾನವುಳ್ಳದ್ದೂ ರಾಜನಿಷ್ಠೆಯುಳ್ಳದ್ದೂ ಆಗಿದೆ. ನೀನು ಇಸ್ರಾಯೇಲ್ಯರ ಪಟ್ಟಣಗಳಲ್ಲಿ ತಾಯಿಯೆಂದು ಹೆಸರುಗೊಂಡ ಈ ಪಟ್ಟಣವನ್ನು ಹಾಳುಮಾಡಬೇಕೆಂದಿದ್ದೀ; ನೀನು ಯೆಹೋವನ ಸ್ವಾಸ್ತ್ಯವನ್ನು ನುಂಗಿಬಿಡುವದೇಕೆ ಅಂದಳು.
20
ಅದಕ್ಕೆ ಯೋವಾಬನು - ನುಂಗಿಬಿಡುವದಾಗಲಿ ಹಾಳುಮಾಡುವದಾಗಲಿ ನನಗೆ ದೂರವಾಗಿರಲಿ; ಅಂಥದು ಬೇಡವೇ ಬೇಡ.
21
ಸಂಗತಿಯು ಹೀಗಿರುವದಿಲ್ಲ; ಎಫ್ರಾಯೀಮ್ ಪರ್ವತಪ್ರದೇಶದ ಬಿಕ್ರೀಯ ಮಗನಾದ ಶೆಬನೆಂಬವನು ಅರಸನಾದ ದಾವೀದನಿಗೆ ವಿರೋಧವಾಗಿ ಕೈಯೆತ್ತಿದ್ದಾನೆ. ಅವನನ್ನೇ ಒಪ್ಪಿಸಿರಿ; ನಾನು ಊರನ್ನು ಬಿಟ್ಟುಹೋಗುತ್ತೇನೆ ಎಂದು ಹೇಳಿದನು. ಅದಕ್ಕೆ ಸ್ತ್ರೀಯು - ನೋಡು, ಈಗಲೇ ಅವನ ತಲೆಯು ಗೋಡೆಯಕಂಡಿಯಿಂದ ನಿನ್ನ ಕಡೆಗೆ ಒಗೆಯಲ್ಪಡುವದು ಎಂದು ಉತ್ತರಕೊಟ್ಟು
22
ತನ್ನ ಜನರ ಬಳಿಗೆ ಹೋಗಿ ಅವರಿಗೆ ವಿವೇಕದೊಡನೆ ಈ ಸಂಗತಿಯನ್ನು ತಿಳಿಸಿದಳು. ಅವರು ಬಿಕ್ರೀಯ ಮಗನಾದ ಶೆಬನ ತಲೆಯನ್ನು ಕಡಿದು ಯೋವಾಬನಿದ್ದಲ್ಲಿಗೆ ಬಿಸಾಡಿದರು. ಕೂಡಲೆ ಅವನು ತುತೂರಿಯನ್ನು ಊದಿಸಿದನು; ಜನರು ಆ ಪಟ್ಟಣವನ್ನು ಬಿಟ್ಟು ತಮ್ಮ ತಮ್ಮ ನಿವಾಸಗಳಿಗೆ ಹೋದರು. ಯೋವಾಬನು ಹಿಂದಿರುಗಿ ಯೆರೂಸಲೇವಿುನಲ್ಲಿದ್ದ ಅರಸನ ಬಳಿಗೆ ಬಂದನು.
23
ಯೋವಾಬನು ಇಸ್ರಾಯೇಲ್ಯರ ಮುಖ್ಯ ಸೇನಾಪತಿ; ಯೆಹೋಯಾದಾವನ ಮಗನಾದ ಬೆನಾಯಾಯನು ಕೆರೇತ್ಯ, ಪೆಲೇತ್ಯ ಎಂಬ ಕಾವಲುದಂಡುಗಳ ಅಧಿಪತಿ.
24
ಅದೋರಾಮನು ಬಿಟ್ಟೀಕೆಲಸ ಮಾಡಿಸುವವನು. ಅಹೀಲೂದನ ಮಗನಾದ ಯೆಹೋಷಾಫಾಟನು ಪ್ರಧಾನಮಂತ್ರಿಯು.
25
ಶೆವನು ಲೇಖಕನು; ಚಾದೋಕ್ ಎಬ್ಯಾತಾರರು ಯಾಜಕರು;
26
ಯಾಯೀರಿನವನಾದ ಈರನೂ ದಾವೀದನ ಯಾಜಕನು.
← Chapter 19
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 21 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24