bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
3 John 1
3 John 1
Kannada BSI JV (ಕನ್ನಡ ಸತ್ಯವೇದವು J.V. (BSI))
Jump to:
Chapter 1
1
ಸಭೆಯ ಹಿರಿಯನು ತಾನು ಸತ್ಯವಾಗಿ ಪ್ರೀತಿಸುವ ಪ್ರಿಯ ಗಾಯನಿಗೆ ಬರೆಯುವದೇನಂದರೆ -
2
ಪ್ರಿಯನೇ, ನೀನು ಆತ್ಮ ವಿಷಯದಲ್ಲಿ ಅಭಿವೃದ್ಧಿಹೊಂದಿರುವ ಪ್ರಕಾರ ಎಲ್ಲಾ ವಿಷಯಗಳಲ್ಲಿಯೂ ಅಭಿವೃದ್ಧಿಹೊಂದಿ ಸುಕ್ಷೇಮವಾಗಿರಬೇಕೆಂದು ಪ್ರಾರ್ಥಿಸುತ್ತೇನೆ.
3
ಸಹೋದರರು ಆಗಾಗ್ಗೆ ನನ್ನ ಬಳಿಗೆ ಬಂದು ನಿನ್ನಲ್ಲಿರುವ ಸತ್ಯವನ್ನು ಕುರಿತು ತಿಳಿಸಿ ನೀನು ಸತ್ಯವಂತನಾಗಿ ನಡೆಯುವವನು ಎಂದು ಹೇಳುವಾಗ ನಾನು ಬಹಳ ಸಂತೋಷಪಡುತ್ತೇನೆ.
4
ನನ್ನ ಮಕ್ಕಳು ಸತ್ಯವನ್ನನುಸರಿಸಿ ನಡೆಯುವವರಾಗಿದ್ದಾರೆಂದು ಕೇಳುವದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ.
5
ಪ್ರಿಯನೇ, ಪರಿಚಯವಿಲ್ಲದವರಾದ ಸಹೋದರರಿಗೂ ನೀನು ಸತ್ಕಾರವನ್ನು ಮಾಡುವದರಲ್ಲಿ ನಂಬುವವನಿಗೆ ಯೋಗ್ಯನಾಗಿ ನಡೆಯುತ್ತೀ.
6
ಅವರು ಸಭೆಯ ಮುಂದೆ ನಿನ್ನ ಪ್ರೀತಿಗೆ ಸಾಕ್ಷಿಹೇಳಿದರು. ಅವರನ್ನು ನೀನು ದೇವರ ಸೇವಕರಿಗೆ ಯೋಗ್ಯವಾದ ರೀತಿಯಿಂದ ಸಾಗ ಕಳುಹಿಸಿದರೆ ಚೆನ್ನಾಗಿರುವದು.
7
ಯಾಕಂದರೆ ಅವರು ಕ್ರಿಸ್ತನ ಹೆಸರನ್ನು ಪ್ರಸಿದ್ಧಿಪಡಿಸುವದಕ್ಕೋಸ್ಕರ ಹೊರಟುಹೋಗಿದ್ದಾರೆ ಮತ್ತು ಅನ್ಯಜನಗಳಿಂದ ಏನೂ ತೆಗೆದುಕೊಳ್ಳುವವರಲ್ಲ.
8
ಆದದರಿಂದ ನಾವು ಸತ್ಯಕ್ಕೆ ಸಹಕಾರಿಗಳಾಗುವಂತೆ ಅಂಥವರನ್ನು ಸೇರಿಸಿಕೊಳ್ಳುವ ಹಂಗಿನಲ್ಲಿದ್ದೇವೆ. ಸಭೆಗೆ ಕೆಲವು ಮಾತುಗಳನ್ನು ಬರೆದಿದ್ದೆನು;
9
ಆದರೆ ಸಭೆಯವರಲ್ಲಿ ಪ್ರಮುಖನಾಗಬೇಕೆಂದಿರುವ ದಿಯೊತ್ರೇಫನು ನಮ್ಮ ಮಾತನ್ನು ಅಂಗೀಕರಿಸುವದಿಲ್ಲ. ಆದಕಾರಣ ನಾನು ಬಂದರೆ ಅವನು ಮಾಡುವ ಕೃತ್ಯಗಳ ವಿಷಯದಲ್ಲಿ ಎಲ್ಲರಿಗೂ ನೆನಪುಕೊಡುವೆನು.
10
ಅವನು ಹರಟೆಕೊಚ್ಚುವವನಾಗಿ ನಮ್ಮ ವಿಷಯದಲ್ಲಿ ಕೆಟ್ಟಕೆಟ್ಟ ಮಾತುಗಳನ್ನಾಡುತ್ತಾನೆ. ಇವೂ ಸಾಲದೆ ತಾನು ಸಹೋದರರನ್ನು ಸೇರಿಸಿಕೊಳ್ಳಬೇಕೆಂದಿರುವವರಿಗೆ ಅಡ್ಡಿಮಾಡಿ ಅವರನ್ನು ಸಭೆಯೊಳಗಿಂದ ಬಹಿಷ್ಕರಿಸುತ್ತಾನೆ. ಪ್ರಿಯನೇ, ನೀನು ಕೆಟ್ಟ ನಡತೆಯನ್ನು ಅನುಸರಿಸದೆ ಒಳ್ಳೇ ನಡತೆಯನ್ನು ಅನುಸರಿಸು;
11
ಒಳ್ಳೇದನ್ನು ಮಾಡುವವನು ದೇವರಿಂದ ಹುಟ್ಟಿದವನಾಗಿದ್ದಾನೆ. ಕೆಟ್ಟದ್ದನ್ನು ಮಾಡುವವನು ದೇವರನ್ನು ಕಂಡವನಲ್ಲ. ದೇಮೇತ್ರಿಯನು ಸಂಭಾವಿತನೆಂದು ಎಲ್ಲರಿಂದಲೂ ಸಾಕ್ಷಾತ್ ಸತ್ಯದಿಂದಲೂ ಸಾಕ್ಷಿಹೊಂದಿದ್ದಾನೆ.
12
ನಾವು ಸಹ ಅವನ ವಿಷಯದಲ್ಲಿ ಸಾಕ್ಷಿ ಹೇಳುವವರಾಗಿದ್ದೇವೆ; ನಮ್ಮ ಸಾಕ್ಷಿ ಸತ್ಯವಾದದ್ದೆಂದು ನೀನು ಬಲ್ಲೆ.
13
ನಿನಗೆ ಬರೆಯತಕ್ಕ ಅನೇಕ ಸಂಗತಿಗಳಿದ್ದವು, ಆದರೆ ಮಸಿ ಲೇಖನಿಗಳನ್ನು ತೆಗೆದುಕೊಂಡು ಬರೆಯುವದಕ್ಕೆ ನನಗಿಷ್ಟವಿಲ್ಲ.
14
ಬೇಗನೆ ನಿನ್ನನ್ನು ನೋಡುವೆನೆಂದು ನಿರೀಕ್ಷಿಸುತ್ತೇನೆ; ಆಗ ಮುಖಾಮುಖಿಯಾಗಿ ಮಾತಾಡುವೆವು.
15
ನಿನಗೆ ಶಾಂತಿ ಇರಲಿ. ಸ್ನೇಹಿತರು ನಿನಗೆ ವಂದನೆ ಹೇಳುತ್ತಾರೆ. ಸ್ನೇಹಿತರನ್ನು ಹೆಸರ್ಹೆರಾಗಿ ವಂದಿಸು.
Jump to:
Chapter 1
All chapters:
1