bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Amos 1
Amos 1
Kannada BSI JV (ಕನ್ನಡ ಸತ್ಯವೇದವು J.V. (BSI))
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 2 →
1
ಯೆಹೂದದ ಅರಸನಾದ ಉಜ್ಜೀಯನ ಕಾಲದಲ್ಲಿ ಅಂದರೆ ಇಸ್ರಾಯೇಲಿನ ಅರಸನೂ ಯೋವಾಷನ ಮಗನೂ ಆದ ಯಾರೊಬ್ಬಾಮನ ಕಾಲದಲ್ಲಿ ಭೂಕಂಪಕ್ಕೆ ಎರಡು ವರ್ಷಗಳ ಮುಂಚೆ ತೆಕೋವದ ಕುರುಬರಲ್ಲಿ ಒಬ್ಬನಾದ ಆಮೋಸನಿಗೆ ಇಸ್ರಾಯೇಲಿನ ವಿಷಯವಾಗಿ ಕಂಡುಬಂದ ದೈವೋಕ್ತಿಗಳು.
2
ಆಮೋಸನು ಹೀಗೆ ಪ್ರಕಟಿಸಿದನು - ಯೆಹೋವನು ಚೀಯೋನಿನಿಂದ ಗರ್ಜಿಸಿ ಯೆರೂಸಲೇವಿುನಿಂದ ದನಿಗೈಯುವನು; ಆಗ ಕುರುಬರ ಕಾವಲುಗಳು ಗೋಳಿಡುವವು, ಕರ್ಮೆಲ್ ಬೆಟ್ಟದ ತುದಿಯು ಒಣಗುವದು.
3
ಯೆಹೋವನು ಇಂತೆನ್ನುತ್ತಾನೆ - ದಮಸ್ಕವು ಮೂರು ಹೌದು ನಾಲ್ಕು ದ್ರೋಹಗಳನ್ನು ಮಾಡಿದ್ದರಿಂದ ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವದೇ ಇಲ್ಲ; ಅದು ಗಿಲ್ಯಾದನ್ನು ಕಬ್ಬಿಣದ ಹಂತಿ ಕುಂಟೆಗಳಿಂದ ಒಕ್ಕಿ ನುಗ್ಗುಮಾಡಿತಷ್ಟೆ.
4
ನಾನು ಹಜಾಯೇಲನ ವಂಶದ ಮೇಲೆ ಬೆಂಕಿಯನ್ನು ಸುರಿಸುವೆನು, ಅದು ಬೆನ್ಹದದನ ಅರಮನೆಗಳನ್ನು ನುಂಗಿಬಿಡುವದು.
5
ನಾನು ದಮಸ್ಕದ ಲಾಳವಂಡಿಗೆಯನ್ನು ಮುರಿದು ಆವೆನ್ ತಗ್ಗಿನೊಳಗಿಂದ ಸಿಂಹಾಸನಾಸೀನನನ್ನೂ ಬೇತ್ ಎದೆನಿನಿಂದ ರಾಜದಂಡಧಾರಿಯನ್ನೂ ನಿರ್ಮೂಲಮಾಡುವೆನು; ಅರಾಮ್ಯರು ಕೀರಿಗೆ ಸೆರೆಯಾಗಿ ಹೋಗುವರು; ಇದು ಯೆಹೋವನ ನುಡಿ.
6
ಯೆಹೋವನು ಇಂತೆನ್ನುತ್ತಾನೆ - ಗಾಜವು ಮೂರು ಹೌದು ನಾಲ್ಕು ದ್ರೋಹಗಳನ್ನು ಮಾಡಿದ್ದರಿಂದ ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವದೇ ಇಲ್ಲ; ಅದು ಜನರನ್ನು ಗುಂಪುಗುಂಪಾಗಿ ಸೆರೆಹಿಡಿದು ಎದೋವಿುಗೆ ವಶಮಾಡಿಬಿಟ್ಟಿತಷ್ಟೆ.
7
ನಾನು ಗಾಜದ ಕೋಟೆಯ ಮೇಲೆ ಬೆಂಕಿಯನ್ನು ಸುರಿಸುವೆನು. ಅದು ಅದರ ಅರಮನೆಗಳನ್ನು ನುಂಗಿಬಿಡುವದು;
8
ನಾನು ಅಷ್ಡೋದಿನೊಳಗಿಂದ ಸಿಂಹಾಸನಾಸೀನನನ್ನೂ ಅಷ್ಕೆಲೋನಿನೊಳಗಿಂದ ರಾಜದಂಡಧಾರಿಯನ್ನೂ ನಿರ್ಮೂಲ ಮಾಡಿ ಎಕ್ರೋನಿನ ಮೇಲೆ ಕೈಯೆತ್ತುವೆನು; ಉಳಿದ ಫಿಲಿಷ್ಟಿಯರೆಲ್ಲರೂ ನಾಶವಾಗಿ ಹೋಗುವರು; ಇದು ಕರ್ತನಾದ ಯೆಹೋವನ ನುಡಿ.
9
ಯೆಹೋವನು ಇಂತೆನ್ನುತ್ತಾನೆ - ತೂರ್ ಪಟ್ಟಣವು ಮೂರು ಹೌದು ನಾಲ್ಕು ದ್ರೋಹಗಳನ್ನು ಮಾಡಿದ್ದರಿಂದ ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವದೇ ಇಲ್ಲ; ಅದು ಒಡಹುಟ್ಟಿದವರ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳದೆ ಜನರನ್ನು ಗುಂಪುಗುಂಪಾಗಿ ಎದೋವಿುಗೆ ವಶಮಾಡಿಬಿಟ್ಟಿತಷ್ಟೆ;
10
ನಾನು ತೂರಿನ ಕೋಟೆಯ ಮೇಲೆ ಬೆಂಕಿಯನ್ನು ಸುರಿಸುವೆನು; ಅದು ಅದರ ಅರಮನೆಗಳನ್ನು ನುಂಗಿಬಿಡುವದು.
11
ಯೆಹೋವನು ಇಂತೆನ್ನುತ್ತಾನೆ - ಎದೋಮು ಮೂರು ಹೌದು ನಾಲ್ಕು ದ್ರೋಹಗಳನ್ನು ಮಾಡಿದ್ದರಿಂದ ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವದೇ ಇಲ್ಲ; ಅದು ಕತ್ತಿಹಿಡಿದು ತನ್ನ ಸಹೋದರನನ್ನು ಹಿಂದಟ್ಟಿ ಕರುಣೆಯನ್ನು ತೊರೆದು ಸಿಟ್ಟಿನಿಂದ ಸದಾ ಸಿಗಿದುಬಿಡುತ್ತಾ ತನ್ನ ಕೋಪವನ್ನು ಶಾಶ್ವತಮಾಡಿಕೊಂಡಿತಷ್ಟೆ.
12
ನಾನು ತೇಮಾನಿನ ಮೇಲೆ ಬೆಂಕಿಯನ್ನು ಸುರಿಸುವೆನು, ಅದು ಬೊಚ್ರದ ಅರಮನೆಗಳನ್ನು ನುಂಗಿಬಿಡುವದು.
13
ಯೆಹೋವನು ಇಂತೆನ್ನುತ್ತಾನೆ - ಅಮ್ಮೋನ್ಯರು ಮೂರು ಹೌದು ನಾಲ್ಕು ದ್ರೋಹಗಳನ್ನು ಮಾಡಿದ್ದರಿಂದ ಅವರಿಗಾಗುವ ದಂಡನೆಯನ್ನು ನಾನು ತಪ್ಪಿಸುವದೇ ಇಲ್ಲ; ಅವರು ತಮ್ಮ ದೇಶವನ್ನು ವಿಸ್ತರಿಸಬೇಕೆಂದು ಗಿಲ್ಯಾದಿನ ಗರ್ಭಿಣಿಯರ ಹೊಟ್ಟೆಯನ್ನು ಸೀಳಿಬಿಟ್ಟರಷ್ಟೆ.
14
ನಾನು ರಬ್ಬದ ಕೋಟೆಯಲ್ಲಿ ಬೆಂಕಿಯನ್ನು ಉರಿಸುವೆನು, ಅದು ಅವರ ಅರಮನೆಗಳನ್ನು ನುಂಗಿಬಿಡುವದು; ಆ ಯುದ್ಧದಿನದಲ್ಲಿ ಆರ್ಭಟವಾಗುವದು. ಆ ಸುಂಟರಗಾಳಿಯ ದಿವಸದಲ್ಲಿ ರೋಷಮಾರುತವು ಬೀಸುವದು;
15
ಅವರ ಅರಸನೂ ಅವನ ರಾಜ್ಯಾಧಿಕಾರಿಗಳೂ ಒಟ್ಟಿಗೆ ಸೆರೆಯಾಗಿ ಹೋಗುವರು; ಇದು ಯೆಹೋವನ ನುಡಿ.
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 2 →
All chapters:
1
2
3
4
5
6
7
8
9