bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Galatians 1
Galatians 1
Kannada BSI JV (ಕನ್ನಡ ಸತ್ಯವೇದವು J.V. (BSI))
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 2 →
1
ಮನುಷ್ಯರ ಕಡೆಯಿಂದಾಗಲಿ ಮನುಷ್ಯನ ಮುಖಾಂತರದಿಂದಾಗಲಿ ಅಪೊಸ್ತಲನಾಗಿರದೆ ಯೇಸು ಕ್ರಿಸ್ತನ ಮುಖಾಂತರವೂ ಆತನನ್ನು ಸತ್ತವರೊಳಗಿಂದ ಎಬ್ಬಿಸಿದ ತಂದೆಯಾದ ದೇವರಿಂದಲೂ ಅಪೊಸ್ತಲೋದ್ಯೋಗವನ್ನು ಹೊಂದಿದ ಪೌಲನೆಂಬ ನಾನೂ
2
ನನ್ನ ಜೊತೆಯಲ್ಲಿರುವ ಎಲ್ಲಾ ಸಹೋದರರೂ ಗಲಾತ್ಯದಲ್ಲಿರುವ ಸಭೆಗಳಿಗೆ ಬರೆಯುವದೇನಂದರೆ -
3
ತಂದೆಯಾದ ದೇವರಿಂದಲೂ ನಮ್ಮ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.
4
ಈತನು ನಮ್ಮನ್ನು ಕೆಟ್ಟದ್ದಾಗಿರುವ ಈಗಿನ ದುಷ್ಟಯುಗದೊಳಗಿಂದ ಬಿಡಿಸಬೇಕೆಂದು ನಮ್ಮ ತಂದೆಯಾದ ದೇವರ ಚಿತ್ತಕ್ಕೆ ಅನುಸಾರವಾಗಿ ನಮ್ಮ ಪಾಪಗಳ ದೆಸೆಯಿಂದ ತನ್ನನ್ನು ಮರಣಕ್ಕೆ ಒಪ್ಪಿಸಿದನು.
5
ದೇವರಿಗೆ ಯುಗಯುಗಾಂತರಗಳಲ್ಲಿಯೂ ಸ್ತೋತ್ರ. ಆಮೆನ್.
6
ಕ್ರಿಸ್ತನ ಕೃಪೆಯಿಂದ ನಿಮ್ಮನ್ನು ಕರೆದಾತನನ್ನು ನೀವು ಇಷ್ಟು ಬೇಗನೆ ಬಿಟ್ಟು ಬೇರೆ ಸುವಾರ್ತೆಯನ್ನು ಹಿಡಿದಿರುವದಕ್ಕೆ ಆಶ್ಚರ್ಯಪಡುತ್ತೇನೆ.
7
ಅದು ಸುವಾರ್ತೆಯೇ ಅಲ್ಲ, ಆದರೆ ಕೆಲವರು ನಿಮ್ಮಲ್ಲಿ ಭೇದವನ್ನು ಹುಟ್ಟಿಸುತ್ತಾ ಕ್ರಿಸ್ತನ ಸುವಾರ್ತೆಯನ್ನು ಮಾರ್ಪಡಿಸುವದಕ್ಕೆ ಅಪೇಕ್ಷಿಸುತ್ತಾ ಇದ್ದಾರೆ.
8
ಆದರೂ ನಾವು ನಿಮಗೆ ಸಾರಿದ ಸುವಾರ್ತೆಗೆ ವಿರುದ್ಧವಾದದ್ದನ್ನು ನಾವೇ ಆಗಲಿ ಪರಲೋಕದಿಂದ ಬಂದ ದೇವದೂತನೇ ಆಗಲಿ ನಿಮಗೆ ಸಾರಿದರೆ ಶಾಪಗ್ರಸ್ತನಾಗಲಿ.
9
ನೀವು ಸ್ವೀಕರಿಸಿದ ಸುವಾರ್ತೆಗೆ ವಿರುದ್ಧವಾದದ್ದನ್ನು ಯಾವನಾದರೂ ನಿಮಗೆ ಸಾರಿದರೆ ಅವನು ಶಾಪಗ್ರಸ್ತನಾಗಲಿ ಎಂದು ನಾವು ಮೊದಲು ಹೇಳಿದ್ದಂತೆಯೇ ಈಗಲೂ ನಾನು ತಿರಿಗಿ ಹೇಳುತ್ತೇನೆ.
10
ನಾನೀಗ ಯಾರನ್ನು ಒಲಿಸಿಕೊಳ್ಳುತ್ತಾ ಇದ್ದೇನೆ? ಮನುಷ್ಯರನ್ನೋ? ದೇವರನ್ನೋ? ನಾನು ಮನುಷ್ಯರನ್ನು ಮೆಚ್ಚಿಸುವದಕ್ಕೆ ಪ್ರಯತ್ನಿಸುತ್ತಾ ಇದ್ದೇನೋ? ಇನ್ನೂ ಮನುಷ್ಯರನ್ನು ಮೆಚ್ಚಿಸುವವನಾಗಿದ್ದರೆ ನಾನು ಕ್ರಿಸ್ತನ ದಾಸನಲ್ಲ.
11
ಸಹೋದರರೇ, ನಾನು ಸಾರಿದ ಸುವಾರ್ತೆಯಂತೂ ಮನುಷ್ಯ ಕಲ್ಪನೆಯಲ್ಲವೆಂದು ನಿಮಗೆ ತಿಳಿಯಪಡಿಸುತ್ತೇನೆ.
12
ನಾನು ಅದನ್ನು ಮನುಷ್ಯನಿಂದ ಹೊಂದಲಿಲ್ಲ, ನನಗೆ ಯಾರೂ ಉಪದೇಶಿಸಲಿಲ್ಲ, ಯೇಸು ಕ್ರಿಸ್ತನೇ ಅದನ್ನು ನನಗೆ ಪ್ರಕಟಿಸಿದನು.
13
ಹಿಂದೆ ನಾನು ಯೆಹೂದ್ಯಮತದಲ್ಲಿದ್ದಾಗ ನನ್ನ ನಡತೆ ಎಂಥದೆಂದು ನೀವು ಕೇಳಿದ್ದೀರಷ್ಟೆ. ನಾನು ದೇವರ ಸಭೆಯನ್ನು ಅತ್ಯಂತವಾಗಿ ಹಿಂಸೆಪಡಿಸಿ ಹಾಳುಮಾಡುತ್ತಿದ್ದೆನು.
14
ಇದಲ್ಲದೆ ನಾನು ನನ್ನ ಪಿತೃಗಳಿಂದ ಬಂದ ಸಂಪ್ರದಾಯಗಳಲ್ಲಿ ಬಹು ಅಭಿಮಾನವುಳ್ಳವನಾಗಿ ನನ್ನ ಜನರೊಳಗೆ ಸಮಪ್ರಾಯದವರಾದ ಅನೇಕರಿಗಿಂತ ಯೆಹೂದ್ಯ ಮತಾಚಾರದಲ್ಲಿ ಆಸಕ್ತನಾಗಿದ್ದೆನು.
15
ಆದರೆ ನಾನು ತಾಯಿಯ ಗರ್ಭದಲ್ಲಿದ್ದಾಗಲೇ ನನ್ನನ್ನು ಪ್ರತ್ಯೇಕಿಸಿ ತನ್ನ ಕೃಪೆಯಿಂದ ಕರೆದ ದೇವರು
16
ತನ್ನ ಮಗನನ್ನು ನಾನು ಅನ್ಯಜನರಲ್ಲಿ ಪ್ರಸಿದ್ಧಿಪಡಿಸುವವನಾಗಬೇಕೆಂದು ಆತನನ್ನು ನನ್ನೊಳಗೆ ಪ್ರಕಟಿಸುವದಕ್ಕೆ ಇಚ್ಫೈಸಿದಾಗಲೇ ನಾನು ಮನುಷ್ಯರ ಆಲೋಚನೆಯನ್ನು ವಿಚಾರಿಸದೆ
17
ಯೆರೂಸಲೇವಿುಗೆ ನನಗಿಂತ ಮುಂಚೆ ಅಪೊಸ್ತಲರಾಗಿದ್ದವರ ಬಳಿಗೂ ಹೋಗದೆ ಅರಬಸ್ಥಾನಕ್ಕೆ ಹೋಗಿ ತಿರಿಗಿ ದಮಸ್ಕಕ್ಕೆ ಬಂದೆನು.
18
ಮೂರು ವರುಷಗಳಾದ ಮೇಲೆ ಕೇಫನ ಪರಿಚಿತಿಯನ್ನು ಮಾಡಿಕೊಳ್ಳಬೇಕೆಂದು ಯೆರೂಸಲೇವಿುಗೆ ಹೋಗಿ ಅವನ ಬಳಿಯಲ್ಲಿ ಹದಿನೈದು ದಿವಸ ಇದ್ದೆನು.
19
ಕರ್ತನ ತಮ್ಮನಾದ ಯಾಕೋಬನನ್ನಲ್ಲದೆ ಅಪೊಸ್ತಲರಲ್ಲಿ ಬೇರೆ ಯಾರನ್ನೂ ಕಾಣಲಿಲ್ಲ.
20
ನಾನು ನಿಮಗೆ ಬರೆಯುವ ಸಂಗತಿಗಳು ಸುಳ್ಳಲ್ಲವೆಂಬದಕ್ಕೆ ಇಗೋ ದೇವರೇ ಸಾಕ್ಷಿ.
21
ಆಮೇಲೆ ಸಿರಿಯ ಮತ್ತು ಕಿಲಿಕ್ಯ ಪ್ರಾಂತ್ಯಗಳಿಗೆ ಹೋದೆನು.
22
ಆದರೆ ಕ್ರಿಸ್ತನಲ್ಲಿರುವ ಯೂದಾಯದ ಸಭೆಗಳಿಗೆ ನನ್ನ ಗುರುತಿರಲಿಲ್ಲ.
23
ಪೂರ್ವದಲ್ಲಿ ನಮ್ಮನ್ನು ಹಿಂಸೆಪಡಿಸಿದವನು ತಾನು ಹಾಳುಮಾಡುತ್ತಿದ್ದ ಮತವನ್ನು ಈಗ ಪ್ರಸಿದ್ಧಿಪಡಿಸುತ್ತಾನೆಂಬ
24
ಸುದ್ದಿಯನ್ನು ಮಾತ್ರ ಅವರು ಕೇಳಿ ನನ್ನ ದೆಸೆಯಿಂದ ದೇವರನ್ನು ಕೊಂಡಾಡಿದರು.
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 2 →
All chapters:
1
2
3
4
5
6