bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Genesis 44
Genesis 44
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 43
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 37
Chapter 38
Chapter 39
Chapter 40
Chapter 41
Chapter 42
Chapter 43
Chapter 44
Chapter 45
Chapter 46
Chapter 47
Chapter 48
Chapter 49
Chapter 50
Chapter 45 →
1
ತರುವಾಯ ಯೋಸೇಫನು ತನ್ನ ಮನೆವಾರ್ತೆಯವನಿಗೆ - ಆ ಮನುಷ್ಯರ ಚೀಲಗಳಲ್ಲಿ ಹೊರುವಷ್ಟು ಧಾನ್ಯವನ್ನು ತುಂಬಿಸಿ ಒಬ್ಬೊಬ್ಬನ ಚೀಲದ ಬಾಯಲ್ಲಿ
2
ಅವನವನ ಹಣದ ಗಂಟನ್ನಿಟ್ಟು ಕಿರಿಯವನ ಚೀಲದ ಬಾಯೊಳಗೆ ಅವನು ದವಸಕ್ಕೆ ತಂದ ಹಣವನ್ನಲ್ಲದೆ ನನ್ನ ಬೆಳ್ಳಿಯ ಪಾನಪಾತ್ರೆಯನ್ನೂ ಇಡಬೇಕೆಂದು ಅಪ್ಪಣೆಕೊಡಲು ಮನೆವಾರ್ತೆಯವನು ಹಾಗೆಯೇ ಮಾಡಿದನು.
3
ಬೆಳಿಗ್ಗೆ ಹೊತ್ತು ಮೂಡುವಾಗ ಆ ಮನುಷ್ಯರು ಅಪ್ಪಣೆ ಪಡೆದು ಕತ್ತೆಗಳನ್ನು ಹೊಡಕೊಂಡು ಹೊರಟು ಹೋದರು.
4
ಅವರು ಪಟ್ಟಣವನ್ನು ಬಿಟ್ಟು ಸ್ವಲ್ಪದೂರ ಹೋಗುವಷ್ಟರಲ್ಲಿ ಯೋಸೇಫನು ತನ್ನ ಮನೆವಾರ್ತೆಯವನಿಗೆ - ನೀನೆದ್ದು ಆ ಮನುಷ್ಯರನ್ನು ಹಿಂದಟ್ಟಿ ಸಂಧಿಸಿ - ನೀವು ಉಪಕಾರಕ್ಕೆ ಪ್ರತಿಯಾಗಿ ಯಾಕೆ ಅಪಕಾರ ಮಾಡಿದ್ದೀರಿ?
5
ಆ ಪಾತ್ರೆಯಲ್ಲಿ ನನ್ನ ದಣಿಯು ಪಾನಮಾಡುತ್ತಾನಲ್ಲವೇ. ಅದರಲ್ಲಿ ನೋಡಿ ಶಕುನ ಹೇಳುವದಿಲ್ಲವೇ. ನೀವು ಮಾಡಿದ್ದು ಬಹಳ ಕೆಟ್ಟದ್ದು ಅನ್ನಬೇಕೆಂದು ಹೇಳಿದನು.
6
ಮನೆವಾರ್ತೆಯವನು ಅವರನ್ನು ಹಿಂದಟ್ಟಿ ಸಂಧಿಸಿ ಅವರಿಗೆ ಆ ಮಾತುಗಳನ್ನು ಹೇಳಿದಾಗ
7
ಅವರು ಅವನಿಗೆ - ನಮ್ಮ ಸ್ವಾವಿುಯು ಇಂಥಾ ಮಾತುಗಳನ್ನು ಹೇಳುವದೇನು! ನಿನ್ನ ಸೇವಕರು ಇಂಥ ಕೃತ್ಯವನ್ನು ಎಂದಿಗೂ ಮಾಡುವವರಲ್ಲ.
8
ಮೊದಲು ನಮ್ಮ ಚೀಲಗಳ ಬಾಯಲ್ಲಿ ನಮಗೆ ಸಿಕ್ಕಿದ ಹಣವನ್ನು ನಾವು ಕಾನಾನ್ದೇಶದಿಂದ ತಿರಿಗಿ ತಂದು ನಿನಗೆ ಕೊಟ್ಟೆವಲ್ಲವೇ. ಹೀಗಿರುವಾಗ ನಾವು ನಿನ್ನ ದಣಿಯ ಮನೆಯೊಳಗಿಂದ ಬೆಳ್ಳಿಬಂಗಾರವನ್ನು ಹೇಗೆ ಕದ್ದುಕೊಂಡೇವು.
9
ಆ ಪಾತ್ರೆಯು ನಿನ್ನ ಸೇವಕರೊಳಗೆ ಯಾರ ಬಳಿಯಲ್ಲಿ ಸಿಕ್ಕುತ್ತದೋ ಅವನು ಮರಣದಂಡನೆಯನ್ನು ಹೊಂದಲಿ; ಅದಲ್ಲದೆ ನಾವೆಲ್ಲರೂ ನಮ್ಮ ಸ್ವಾವಿುಗೆ ದಾಸರಾಗುವೆವು ಅಂದರು.
10
ಅದಕ್ಕೆ ಅವನು - ಒಳ್ಳೇದು, ನೀವು ಹೇಳಿದಂತೆ ಆಗಲಿ; ಆ ಪಾತ್ರೆ ಯಾವನ ಬಳಿಯಲ್ಲಿ ಸಿಕ್ಕುತ್ತದೋ ಅವನು ನನಗೆ ದಾಸನಾಗಬೇಕು; ಉಳಿದವರು ತಪ್ಪಿಲ್ಲದವರು ಎಂದು ಹೇಳಿದಾಗ,
11
ಅವರು ತ್ವರೆಪಟ್ಟು ಪ್ರತಿಯೊಬ್ಬನೂ ತನ್ನ ತನ್ನ ಚೀಲವನ್ನು ನೆಲಕ್ಕಿಳಿಸಿ ಬಿಚ್ಚಿದರು.
12
ಅವನು ಹಿರಿಯವನಿಂದ ಹಿಡಿದು ಕಿರಿಯವನ ತನಕ ಪರೀಕ್ಷಿಸಿ ನೋಡಿದನು. ಆ ಪಾತ್ರೆಯು ಬೆನ್ಯಾಮೀನನ ಚೀಲದಲ್ಲಿ ಸಿಕ್ಕಿತು.
13
ಸಿಕ್ಕಿದಾಗ ಅವರು [ದುಃಖಾಕ್ರಾಂತರಾಗಿ] ತಮ್ಮ ಬಟ್ಟೆಗಳನ್ನು ಹರಿದುಕೊಂಡು ಕತ್ತೆಗಳ ಮೇಲೆ ಚೀಲಗಳನ್ನು ಹೇರಿ ಪಟ್ಟಣಕ್ಕೆ ಹಿಂದಿರುಗಿ ಬಂದರು.
14
ಯೆಹೂದನೂ ಅವನ ಅಣ್ಣತಮ್ಮಂದಿರೂ ಯೋಸೇಫನ ಮನೆಗೆ ಬಂದಾಗ ಅವನು ಇನ್ನೂ ಅಲ್ಲೇ ಇದ್ದನು.
15
ಅವರು ಅವನೆದುರಿಗೆ ಅಡ್ಡಬೀಳಲು ಯೋಸೇಫನು ಅವರನ್ನು - ನೀವು ಮಾಡಿರುವ ಈ ಕೃತ್ಯವು ಏನು! ನನ್ನಂಥವನು ಶಕುನ ನೋಡಿ ಗುಟ್ಟನ್ನು ಬಿಚ್ಚುವನೆಂಬದು
16
ನಿಮಗೆ ತಿಳಿಯಲಿಲ್ಲವೋ ಎಂದು ಕೇಳಲು ಯೆಹೂದನು - ನಾವು ನಮ್ಮ ಸ್ವಾವಿುಗೆ ಏನು ಹೇಳೋಣ? ನಾವು ಹೇಗೆ ಮಾತಾಡೇವು? ನಾವು ನಿರ್ದೋಷಿಗಳಾಗಿ ತೋರುವಂತೆ ಏನು ಮಾಡಬೇಕು? ನಿನ್ನ ಸೇವಕರ ಪಾಪಕೃತ್ಯವನ್ನು ದೇವರು ಹೊರಪಡಿಸಿದ್ದಾನೆ. ಈ ಪಾತ್ರೆಯು ಯಾರ ಬಳಿಯಲ್ಲಿ ಸಿಕ್ಕಿತೋ ಅವನು ಮಾತ್ರವಲ್ಲದೆ ನಾವೆಲ್ಲರೂ ನಮ್ಮ ಸ್ವಾವಿುಗೆ ಗುಲಾಮರಾದೆವಲ್ಲವೇ ಅನ್ನಲು ಯೋಸೇಫನು -
17
ಹಾಗೆ ಎಂದಿಗೂ ಆಗಬಾರದು; ಈ ಪಾತ್ರೆಯು ಯಾರ ಬಳಿಯಲ್ಲಿ ಸಿಕ್ಕಿತೋ ಅವನು ಮಾತ್ರವೇ ನನಗೆ ಗುಲಾಮನಾಗಬೇಕು; ನೀವಾದರೋ ಅಡ್ಡಿಯಿಲ್ಲದೆ ನಿಮ್ಮ ತಂದೆಯ ಬಳಿಗೆ ಹೋಗಬಹುದು ಅಂದನು.
18
ಆಗ ಯೆಹೂದನು ಹತ್ತರಕ್ಕೆ ಬಂದು - ನಿನ್ನ ಸೇವಕನಾದ ನಾನು ಒಂದು ಮಾತನ್ನು ಅರಿಕೆಮಾಡಿಕೊಳ್ಳುತ್ತೇನೆ, ನನ್ನ ಮೇಲೆ ಸಿಟ್ಟು ಮಾಡಬಾರದು; ನೀನು ಫರೋಹನಿಗೆ ಸಮಾನನಾಗಿದ್ದೀಯೆಂದು ನಾನು ಬಲ್ಲೆ.
19
ಸ್ವಾವಿುಯು ಸೇವಕರನ್ನು - ನಿಮಗೆ ತಂದೆಯಾಗಲಿ ತಮ್ಮನಾಗಲಿ ಇದ್ದಾನೋ ಎಂದು ಕೇಳಲು ನಾವು -
20
ತಂದೆಯಿದ್ದಾನೆ, ಅವನು ಮುದುಕನು; ಅವನಿಗೆ ಮುಪ್ಪಿನಲ್ಲಿ ಹುಟ್ಟಿದ ಒಬ್ಬ ಚಿಕ್ಕ ಹುಡುಗನೂ ಇದ್ದಾನೆ. ಅವನ ಒಡಹುಟ್ಟಿದವನು ಸತ್ತು ಹೋದನು; ಅವನ ತಾಯಿಯಲ್ಲಿ ಹುಟ್ಟಿದವರೊಳಗೆ ಅವನೊಬ್ಬನೇ ಉಳಿದಿದ್ದಾನೆ, ಅವನ ಮೇಲೆ ತಂದೆಗೆ ಬಹಳ ಪ್ರೀತಿಯುಂಟು ಎಂದು ಹೇಳಿದೆವು.
21
ಅದಕ್ಕೆ ನೀನು ಸೇವಕರಾದ ನಮಗೆ - ನಾನು ಆ ಹುಡುಗನನ್ನು ನೋಡಬೇಕು, ಅವನನ್ನು ನನ್ನ ಬಳಿಗೆ ಕರಕೊಂಡು ಬನ್ನಿರಿ ಎಂದು ಅಪ್ಪಣೆಕೊಡಲು
22
ನಾವು ಸ್ವಾವಿುಯವರಿಗೆ - ಆ ಹುಡುಗನು ತನ್ನ ತಂದೆಯನ್ನು ಅಗಲುವದಕ್ಕಾಗುವದಿಲ್ಲ; ಅಗಲಿದರೆ ತಂದೆ ಸತ್ತಾನು ಅಂದೆವು.
23
ಅದಕ್ಕೆ - ನಿಮ್ಮ ತಮ್ಮನು ಸಂಗಡ ಬಾರದಿದ್ದರೆ ನೀವು ಇನ್ನೊಂದು ಸಾರಿ ನನ್ನ ಮುಖವನ್ನು ನೋಡಕೂಡದು ಎಂದು ಅಪ್ಪಣೆಕೊಟ್ಟಿಯಷ್ಟೆ.
24
ನಾವು ನಿನ್ನ ಸೇವಕನಾದ ನಮ್ಮ ತಂದೆಯ ಬಳಿಗೆ ಬಂದಾಗ ಸ್ವಾವಿುಯ ಮಾತನ್ನು ತಿಳಿಸಿದೆವು.
25
ನಮ್ಮ ತಂದೆ - ನೀವು ತಿರಿಗಿ ಹೋಗಿ ನಮಗೆ ಧಾನ್ಯವನ್ನು ಕೊಂಡುಕೊಂಡು ಬನ್ನಿರಿ ಎಂದು ಹೇಳಿದಾಗ ನಾವು ಆತನಿಗೆ - ಹೇಗೆ ಹೋಗುವದು?
26
ತಮ್ಮನು ನಮ್ಮ ಜೊತೆಯಲ್ಲಿ ಇಲ್ಲವಾದರೆ ಆ ಮನುಷ್ಯನ ಮುಖವನ್ನು ನೋಡಲಾಗದು; ತಮ್ಮನು ನಮ್ಮ ಸಂಗಡ ಬಂದರೆ ಹೋಗುತ್ತೇವೆ ಎಂದು ಹೇಳಿದ್ದಕ್ಕೆ ನಿನ್ನ ಸೇವಕನಾದ
27
ನಮ್ಮ ತಂದೆಯು - ನನ್ನ ಪತ್ನಿಯಲ್ಲಿ ನನಗೆ ಇಬ್ಬರೇ ಗಂಡುಮಕ್ಕಳು ಹುಟ್ಟಿದರೆಂಬದು ನಿಮಗೆ ತಿಳಿದೇ ಇದೆಯಷ್ಟೆ;
28
ಅವರಲ್ಲಿ ಒಬ್ಬನು ನನ್ನ ಬಳಿಯಿಂದ ಹೊರಟುಹೋದನು; ಅವನು ಸಂದೇಹವಿಲ್ಲದೆ ಮೃಗದಿಂದ ಸೀಳಿಹಾಕಲ್ಪಟ್ಟಿರಬೇಕೆಂದು ತಿಳುಕೊಂಡೆನು; ಅಂದಿನಿಂದ ನಾನು ಅವನನ್ನು ಕಾಣಲಿಲ್ಲ.
29
ಈಗ ಇವನನ್ನೂ ನನ್ನ ಬಳಿಯಿಂದ ತೆಗೆದುಕೊಂಡು ಹೋಗಬೇಕೆಂದಿದ್ದೀರಿ. ಇವನಿಗೂ ಕೇಡು ಬಂದರೆ ಈ ಮುದಿತಲೆ ದುಃಖದಿಂದಲೇ ಪಾತಾಳಕ್ಕೆ ಸೇರಲು ನೀವು ಕಾರಣರಾಗುವಿರಿ ಅಂದನು.
30
ನಮ್ಮ ತಂದೆಯ ಪ್ರಾಣವೂ ಇವನ ಪ್ರಾಣವೂ ಒಂದೇಯಾಗಿರುವದರಿಂದ ನಾನು ನಿನ್ನ ಸೇವಕನಾದ ನನ್ನ ತಂದೆಯ ಬಳಿಗೆ ಸೇರಿದಾಗ ಈ ಹುಡುಗನು ಸಂಗಡ ಇಲ್ಲದೆ ಹೋದರೆ ಹುಡುಗನು ಬರಲಿಲ್ಲವೆಂದು ಅವನು ತಿಳಿದಕೂಡಲೇ ಸಾಯುವನು.
31
ಹೀಗೆ ಸ್ವಾವಿುಯ ಸೇವಕರಾದ ನಾವು ನಿನ್ನ ಸೇವಕನಾದ ನಮ್ಮ ತಂದೆಯ ಮುದಿತಲೆ ದುಃಖದಿಂದಲೇ ಪಾತಾಳಕ್ಕೆ ಸೇರಲು ಕಾರಣರಾಗುವೆವು.
32
ಸೇವಕನಾದ ನಾನು ನನ್ನ ತಂದೆಯ ಬಳಿಯಲ್ಲಿ ಈ ಹುಡುಗನಿಗೆ ಹೊಣೆಯಾಗಿ - ನಾನು ಇವನನ್ನು ನಿನ್ನ ಬಳಿಗೆ ಕರೆದುಕೊಂಡು ಬಾರದಿದ್ದರೆ ತಂದೆಗೆ ತಪ್ಪಿದವನ ದೋಷ ಎಂದೆಂದಿಗೂ ನನಗಿರಲಿ ಎಂದು ಮಾತು ಕೊಟ್ಟೆನು.
33
ಆದದರಿಂದ ಸೇವಕನಾದ ನಾನು ಈ ಹುಡುಗನಿಗೆ ಬದಲಾಗಿ ಸ್ವಾವಿುಗೆ ಗುಲಾಮನಾಗುವಂತೆಯೂ ಇವನು ತನ್ನ ಅಣ್ಣಂದಿರ ಸಂಗಡ ಹೋಗುವಂತೆಯೂ ಅನುಗ್ರಹ ಮಾಡಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ.
34
ಈ ಹುಡುಗನನ್ನು ಬಿಟ್ಟು ನಾನು ನನ್ನ ತಂದೆಯ ಬಳಿಗೆ ಹೇಗೆ ಹೋಗುವದಕ್ಕಾದೀತು? ತಂದೆಗೆ ಮಹಾ ಶೋಕವುಂಟಾಗುವದನ್ನು ನಾನು ನೋಡಕೂಡದು ಅಂದನು.
← Chapter 43
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 37
Chapter 38
Chapter 39
Chapter 40
Chapter 41
Chapter 42
Chapter 43
Chapter 44
Chapter 45
Chapter 46
Chapter 47
Chapter 48
Chapter 49
Chapter 50
Chapter 45 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50