bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Jonah 1
Jonah 1
Kannada BSI JV (ಕನ್ನಡ ಸತ್ಯವೇದವು J.V. (BSI))
Jump to:
Chapter 1
Chapter 2
Chapter 3
Chapter 4
Chapter 2 →
1
ಯೆಹೋವನು ಅವಿುತ್ತೈಯ ಮಗನಾದ ಯೋನನಿಗೆ -
2
ನೀನೆದ್ದು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ಗಟ್ಟಿಯಾಗಿ ಕೂಗುತ್ತಾ ಅದನ್ನು ಖಂಡಿಸು; ಅದರ ನಿವಾಸಿಗಳ ದುಷ್ಟತನವು ನನ್ನ ಸನ್ನಿಧಿಗೆ ಮುಟ್ಟಿದೆ ಎಂದು ಅಪ್ಪಣೆಮಾಡಿದನು.
3
ಆದರೆ ಯೋನನು ಯೆಹೋವನ ಸನ್ನಿಧಿಗೆ ತಪ್ಪಿಸಿಕೊಳ್ಳುವ ಹಾಗೆ ತಾರ್ಷೀಷಿಗೆ ಓಡಿಹೋಗಬೇಕೆಂದು ಹೊರಟು ಯೊಪ್ಪಕ್ಕೆ ಇಳಿದು ಅಲ್ಲಿ ತಾರ್ಷೀಷಿಗೆ ತೆರಳುವ ಹಡಗನ್ನು ಕಂಡು ಬಾಡಿಗೆಕೊಟ್ಟು ಯೆಹೋವನ ಸನ್ನಿಧಿಯಿಂದ ತಾರ್ಷೀಷಿಗೆ ಪ್ರಯಾಣಮಾಡಬೇಕೆಂದು ಹಡಗಿನವರೊಡನೆ ಅದನ್ನು ಹತ್ತಿದನು.
4
ಬಳಿಕ ಯೆಹೋವನು ಬಿರುಗಾಳಿಯನ್ನು ಸಮುದ್ರದ ಮೇಲೆ ಬಲವಾಗಿ ಬೀಸಲು ಸಮುದ್ರದಲ್ಲಿ ದೊಡ್ಡ ತುಫಾನು ಎದ್ದು ಹಡಗು ಒಡೆದುಹೋಗುವ ಹಾಗಾಯಿತು.
5
ಆಗ ನಾವಿಕರು ಹೆದರಿ ತಮ್ಮ ತಮ್ಮ ದೇವರುಗಳಿಗೆ ಮೊರೆಯಿಟ್ಟು ತಮ್ಮ ಕಷ್ಟವು ಕಡಿಮೆಯಾಗುವ ಹಾಗೆ ಹಡಗಿನ ಸಾಮಾನುಗಳನ್ನು ಸಮುದ್ರಕ್ಕೆ ಬಿಸಾಟುಬಿಟ್ಟರು. ಇಷ್ಟರೊಳಗೆ ಯೋನನು ಹಡಗಿನ ಒಳಭಾಗಕ್ಕೆ ಇಳಿದು ಮಲಗಿಕೊಂಡಿದ್ದನು; ಗಾಢನಿದ್ರೆ ಹತ್ತಿತ್ತು.
6
ಹೀಗಿರಲು ಹಡಗಿನ ಯಜಮಾನನು ಅವನ ಬಳಿಗೆ ಬಂದು - ಇದೇನು, ನಿದ್ದೆ ಮಾಡುತ್ತೀ! ಎದ್ದು ನಿನ್ನ ದೇವರಿಗೆ ಮೊರೆಯಿಡು; ಒಂದು ವೇಳೆ ನಿನ್ನ ದೇವರು ನಮ್ಮನ್ನು ರಕ್ಷಿಸಾನು, ನಾಶವಾಗದೆ ಉಳಿದೇವು ಎಂದು ಹೇಳಿದನು.
7
ಅನಂತರ ನಾವಿಕರೆಲ್ಲರು - ಈ ಕೇಡು ನಮಗೆ ಸಂಭವಿಸಿದ್ದಕ್ಕೆ ಯಾರು ಕಾರಣವೆಂದು ನಮಗೆ ತಿಳಿಯುವ ಹಾಗೆ ಚೀಟು ಹಾಕೋಣ ಬನ್ನಿರಿ ಎಂಬದಾಗಿ ಮಾತಾಡಿಕೊಂಡು ಚೀಟುಹಾಕಲು ಚೀಟು ಯೋನನಿಗೆ ಬಂತು.
8
ಅದನ್ನು ನೋಡಿ ಅವರು - ಅಯ್ಯಾ, ಈ ಕೇಡು ನಮಗೆ ಸಂಭವಿಸಿದ್ದಕ್ಕೆ ಯಾರು ಕಾರಣ ಎಂಬದನ್ನು ನೀನೇ ನಮಗೆ ತಿಳಿಸು; ನೀನು ಎಲ್ಲಿಂದ ಯಾವ ಕೆಲಸದ ಮೇಲೆ ಬಂದಿ, ನೀನು ಯಾವ ದೇಶದವನು, ಯಾವ ಜನಾಂಗದವನು ಎಂದು ಅವನನ್ನು ಕೇಳಲು ಅವನು ಅವರಿಗೆ - ನಾನು ಇಬ್ರಿಯನು;
9
ಕಡಲನ್ನೂ ಒಣನೆಲವನ್ನೂ ಸೃಷ್ಟಿಸಿದ ಪರಲೋಕದೇವರಾದ ಯೆಹೋವನ ಭಕ್ತನು ಎಂದು ಹೇಳಿದನು.
10
ಇವನು ಯೆಹೋವನ ಸನ್ನಿಧಿಯಿಂದ ಓಡಿಬಂದವನು ಎಂಬದನ್ನು ಅವನು ಮೊದಲು ಹೇಳಿದ ಒಂದು ಮಾತಿನಿಂದ ಆ ಜನರು ತಿಳುಕೊಂಡಿದ್ದರು. ಈಗ ಇದನ್ನೂ ಕೇಳಿ ಬಹಳವಾಗಿ ಹೆದರಿ - ಇದೇನು ನೀನು ಮಾಡಿದ್ದು ಅಂದರು.
11
ಬಳಿಕ ಸಮುದ್ರವು ಹೆಚ್ಚೆಚ್ಚಾಗಿ ಅಲ್ಲಕಲ್ಲೋಲವಾದ ಕಾರಣ ಅವರು - ನಮ್ಮ ಮೇಲೆ ಎದ್ದಿರುವ ಸಮುದ್ರವು ಶಾಂತವಾಗುವ ಹಾಗೆ ನಿನ್ನನ್ನು ಏನು ಮಾಡೋಣ ಎಂದು ಪ್ರಶ್ನೆಮಾಡಲು ಅವನು ಅವರಿಗೆ -
12
ನನ್ನನ್ನೆತ್ತಿ ಸಮುದ್ರದಲ್ಲಿ ಹಾಕಿರಿ; ನಿಮ್ಮ ಮೇಲೆ ಎದ್ದಿರುವ ಸಮುದ್ರವು ಶಾಂತವಾಗುವದು; ಈ ದೊಡ್ಡ ತುಫಾನು ನಿಮಗೆ ಸಂಭವಿಸಿದ್ದು ನನ್ನ ನಿವಿುತ್ತವೇ ಎಂಬದು ನನಗೆ ಗೊತ್ತು ಎಂದುತ್ತರಕೊಟ್ಟನು.
13
ನಾವಿಕರು ಒಪ್ಪದೆ ದಡಕ್ಕೆ ಹಿಂದಿರುಗಬೇಕೆಂದು ಹುಟ್ಟುಹಾಕುತ್ತಾ ಬಂದರೂ ಸೇರಲು ಆಗಲಿಲ್ಲ; ಸಮುದ್ರವು ಇನ್ನೂ ಅಲ್ಲಕಲ್ಲೋಲವಾಗಿ ಅವರನ್ನು ಎದುರಿಸಿತು.
14
ಹೀಗಿರಲು ಅವರು ಯೆಹೋವನಿಗೆ ಮೊರೆಯಿಟ್ಟು - ಯೆಹೋವನೇ, ಲಾಲಿಸು, ಲಾಲಿಸು; ಈ ಮನುಷ್ಯನ ಪ್ರಾಣನಷ್ಟಕ್ಕಾಗಿ ನಾಶನವು ನಮಗೆ ಬಾರದಿರಲಿ; ನಿರಪರಾಧಿಯನ್ನು ಕೊಲ್ಲುವ ದೋಷಕ್ಕೆ ನಮ್ಮನ್ನು ಗುರಿಮಾಡಬೇಡ;
15
ಯೆಹೋವನೇ, ನಿನ್ನ ಚಿತ್ತಾನುಸಾರ ಮಾಡಿದಿಯಲ್ಲಾ ಎಂದು ಬಿನ್ನವಿಸಿ ಯೋನನನ್ನು ಎತ್ತಿ ಸಮುದ್ರದಲ್ಲಿ ಹಾಕಿದರು; ಕೂಡಲೆ ಸಮುದ್ರವು ತನ್ನ ರೌದ್ರವನ್ನು ನಿಲ್ಲಿಸಿಬಿಟ್ಟಿತು.
16
ಇದನ್ನು ನೋಡಿ ಆ ಜನರು ಯೆಹೋವನಿಗೆ ಬಹಳ ಭಯಪಟ್ಟು ಆತನಿಗೆ ಯಜ್ಞವನ್ನರ್ಪಿಸಿ ಹರಕೆಗಳನ್ನು ಮಾಡಿಕೊಂಡರು.
17
ಇತ್ತ ಯೋನನನ್ನು ನುಂಗಲು ಯೆಹೋವನು ಒಂದು ದೊಡ್ಡ ಮೀನಿಗೆ ಅಪ್ಪಣೆ ಮಾಡಿದನು; ಯೋನನು ಮೂರು ದಿನ ಹಗಲಿರುಳು ಆ ಮೀನಿನ ಹೊಟ್ಟೆಯೊಳಗೆ ಇದ್ದನು.
Jump to:
Chapter 1
Chapter 2
Chapter 3
Chapter 4
Chapter 2 →
All chapters:
1
2
3
4