bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Joshua 19
Joshua 19
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 18
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 20 →
1
ಚೀಟು ಎರಡನೆಯ ಸಾರಿ ಸಿಮೆಯೋನ್ ಕುಲದವರಿಗೆ ಬಿದ್ದಿತು. ಸಿಮೆಯೋನ್ ಕುಲದ ಗೋತ್ರಗಳ ಸ್ವಾಸ್ತ್ಯವು ಯೆಹೂದಕುಲದವರ ಸ್ವಾಸ್ತ್ಯದ ಮಧ್ಯದಲ್ಲಿತ್ತು.
2
ಅದರ ಊರುಗಳು ಯಾವವಂದರೆ -
3
ಬೇರ್ಷೆಬ, ಶೆಬ, ಮೋಲಾದಾ, ಹಚರ್
4
ಷೂವಾಲ್, ಬಾಲಾ, ಎಚೆಮ್, ಎಲ್ತೋಲದ್,
5
ಬೆತೂಲ್, ಹೊರ್ಮಾ, ಚಿಕ್ಲಗ್, ಬೇತ್ಮರ್ಕಾ ಬೋತ್,
6
ಹಚರ್ಸೂಸಾ, ಬೇತ್ಲೆಬಾವೋತ್, ಶಾರೂಹೆನ್ ಎಂಬ ಹದಿಮೂರು ಪಟ್ಟಣಗಳೂ ಅವುಗಳ ಗ್ರಾಮಗಳೂ;
7
ಅಯಿನ್, ರಿಮ್ಮೋನ್, ಏತೆರ್, ಆಷಾನ್ ಎಂಬ ನಾಲ್ಕು ಪಟ್ಟಣಗಳೂ ಅವುಗಳ ಗ್ರಾಮಗಳೂ;
8
ಅವುಗಳ ಸುತ್ತಣ ಪ್ರದೇಶದಲ್ಲಿ ಬಾಲತ್ಬೇರ್ ಎಂಬ ಊರಿನವರೆಗಿರುವ ಇತರ ಗ್ರಾಮಗಳೂ ಇವೇ. ಬಾಲತ್ಬೇರ್ ಎಂಬದು ದಕ್ಷಿಣದ ರಾಮ ಅನ್ನಿಸಿಕೊಳ್ಳುತ್ತದೆ. ಸಿಮೆಯೋನ್ ಕುಲದ ಗೋತ್ರಗಳಿಗೆ ಸಿಕ್ಕಿದ ಸ್ವಾಸ್ತ್ಯವು ಇದೇ.
9
ಈ ಸ್ವಾಸ್ತ್ಯವು ಯೆಹೂದ್ಯರ ಸ್ವಾಸ್ತ್ಯದ ಒಂದು ಭಾಗ. ಯೆಹೂದ್ಯರಿಗೆ ದೊರಕಿದ ಪ್ರದೇಶವು ಹೆಚ್ಚಾಗಿದ್ದದರಿಂದ ಸಿಮೆಯೋನ್ಯರಿಗೂ ಅದರಲ್ಲೇ ಪಾಲುಸಿಕ್ಕಿತು.
10
ಚೀಟು ಮೂರನೆಯ ಸಾರಿ ಜೆಬುಲೂನ್ಯರಿಗೆ ಬಿದ್ದಿತು. ಆ ಕುಲದ ಗೋತ್ರಗಳಿಗೆ ಸಿಕ್ಕಿದ ಸ್ವಾಸ್ತ್ಯದ ಮೇರೆಯು
11
ಸಾರೀದಿನಿಂದ ತೊಡಗಿ ಪಶ್ಚಿಮದಿಕ್ಕಿನಲ್ಲಿರುವ ಮರ್ಗಲಾ, ದಬ್ಬೆಷೆತ್ ಇವುಗಳ ಮೇಲೆ ಯೊಕ್ನೆಯಾಮ್ ಊರಿನ ಈಚೆಯಲ್ಲಿರುವ ಹಳ್ಳಕ್ಕೆ ಹೋಗುತ್ತದೆ.
12
ಅದೇ ಸಾರೀದಿನಿಂದ ಅದು ಪೂರ್ವದಿಕ್ಕಿನಲ್ಲಿ ಕಿಸ್ಲೋತ್ ತಾಬೋರಿನ ಮೇರೆಗೆ ಹತ್ತಿ ದಾಬೆರತಿಗೆ ಹೋಗುತ್ತದೆ. ಅಲ್ಲಿಂದ ಏರುತ್ತಾ ಯಾಫೀಯಕ್ಕೆ ಹೋಗುತ್ತದೆ.
13
ಅಲ್ಲಿಂದ ಮತ್ತೂ ಪೂರ್ವಕ್ಕೆ ಮುಂದರಿದು ಗತ್ಹೇಫೆರ್, ಎತ್ಕಾಚೀನ್ ಇವುಗಳ ಮೇಲೆ ನೇಯದ ಮಗ್ಗುಲಲ್ಲಿರುವ ರಿಮ್ಮೋನಿಗೆ ಹೋಗುತ್ತದೆ.
14
ಅಲ್ಲಿಂದ ಅದು ಉತ್ತರಕ್ಕೆ ತಿರುಗಿಕೊಂಡು ಹನ್ನಾತೋನಿನ ಮೇಲೆ ಇಪ್ತಹೇಲಿನ ತಗ್ಗಿಗೆ ಹೋಗಿ ಅಲ್ಲಿ ಮುಗಿಯುತ್ತದೆ.
15
ಕಟ್ಟಾತ್, ನಹಲ್ಲಾಲ್, ಶಿಮ್ರೋನ್, ಇದಲಾ, ಬೇತ್ಲೆಹೇಮ್ ಇವೇ ಮೊದಲಾದ ಹನ್ನೆರಡು ಪಟ್ಟಣಗಳೂ ಅವುಗಳ ಗ್ರಾಮಗಳೂ
16
ಜೆಬುಲೂನ್ ಕುಲದ ಗೋತ್ರಗಳಿಗೆ ಸ್ವಾಸ್ತ್ಯವಾಗಿ ದೊರಕಿದವು.
17
ಚೀಟು ನಾಲ್ಕನೆಯ ಸಾರಿ ಇಸ್ಸಾಕಾರ್ ಕುಲದವರಿಗೆ ಬಿದ್ದಿತು. ಅವರ ಗೋತ್ರಗಳಿಗೆ ಸಿಕ್ಕಿದ ದೇಶದಲ್ಲಿರುವ ಪಟ್ಟಣಗಳಾವವಂದರೆ -
18
ಇಜ್ರೇಲ್, ಕೆಸುಲ್ಲೋತ್,
19
ಶೂನೇಮ್, ಹಫಾರಯಿಮ್, ಶೀಯೋನ್,
20
ಅನಾಹರತ್, ರಬ್ಬೀತ್, ಕಿಷ್ಯೋನ್, ಎಬೆಜ್,
21
ರೆಮೆತ್, ಏಂಗನ್ನೀಮ್, ಏನ್ಹದ್ದಾ, ಬೇತ್ಪಚ್ಚೇಚ್ ಇವುಗಳೇ.
22
ತಾಬೋರ್, ಶಹಚೀಮಾ, ಬೇತ್ಷೆಮೆಷ್ ಎಂಬ ಊರುಗಳೂ ಅದರ ಮೇರೆಯೊಳಗಿದ್ದವು. ಮೇರೆಯು ಯೊರ್ದನ್ ಹೊಳೆಯ ತೀರದಲ್ಲಿ ಮುಗಿಯುತ್ತದೆ.
23
ಒಟ್ಟಾರೆ ಹದಿನಾರು ಪಟ್ಟಣಗಳೂ ಅವುಗಳ ಗ್ರಾಮಗಳೂ ಇಸ್ಸಾಕಾರ್ ಕುಲದ ಗೋತ್ರಗಳಿಗೆ ಸಿಕ್ಕಿದವು.
24
ಚೀಟು ಐದನೆಯ ಸಾರಿ ಆಶೇರ್ ಕುಲದವರಿಗೆ ಬಿದ್ದಿತು. ಅವರ ಗೋತ್ರಗಳಿಗೆ ಸಿಕ್ಕಿದ ಊರುಗಳು ಯಾವವಂದರೆ -
25
ಹೆಲ್ಕತ್, ಹಲೀ, ಬೆಟೆನ್, ಅಕ್ಷಾಫ್,
26
ಅಲಮ್ಮೆಲೆಕ್, ಅಮಾದ್, ವಿುಷಾಲ್ ಇವುಗಳೇ. ಇವರ ದೇಶದ ಮೇರೆಯು ಪಶ್ಚಿಮದಲ್ಲಿ ಕರ್ಮೆಲ್ ಬೆಟ್ಟಕ್ಕೂ ಶೀಹೋರ್ ಲಿಬ್ನತ್ ಎಂಬ ಹಳ್ಳಕ್ಕೂ ತಗುಲಿ
27
ಅಲ್ಲಿಂದ ಪೂರ್ವಕ್ಕೆ ತಿರುಗಿ ಬೇತ್ದಾಗೋನಿಗೆ ಹೋಗುತ್ತದೆ. ಅಲ್ಲಿಂದ ಜೆಬುಲೂನ್ಯರ ಮೇರೆಗೂ ಇಪ್ತಹೇಲ್ತಗ್ಗಿನ ಉತ್ತರ ದಿಕ್ಕಿನ ಮೂಲೆಗೂ ಹೊಂದಿಕೊಂಡು ಬೇತ್ಏಮೆಕ್, ನೆಗೀಯೇಲ್ ಇವುಗಳ ಮೇಲೆ ಉತ್ತರಕ್ಕೆ ಮುಂದರಿದು
28
ಕಾಬೂಲ್, ಎಬ್ರೋನ್, ರೆಹೋಬ್, ಹಮ್ಮೋನ್, ಕಾನಾ ಇವುಗಳ ಮೇಲೆ ಚೀದೋನ್ ಎಂಬ ಮಹಾನಗರಕ್ಕೆ ಹೋಗುತ್ತದೆ.
29
ಅಲ್ಲಿಂದ ಅದು ತಿರುಗಿಕೊಂಡು ರಾಮಾ, ತೂರ್ ಕೋಟೆ, ಹೋಸಾ ಇವುಗಳ ಮೇಲೆ ಅಕ್ಜೀಬ್ ಪ್ರಾಂತಕ್ಕೆ ಹೋಗಿ ಸಮುದ್ರತೀರದಲ್ಲಿ ಮುಗಿಯುತ್ತದೆ.
30
ಉಮ್ಮಾ, ಅಫೇಕ್, ರೆಹೋಬ್ ಇವೇ ಮೊದಲಾದ ಇಪ್ಪತ್ತೆರಡು ಪಟ್ಟಣಗಳೂ
31
ಅವುಗಳ ಗ್ರಾಮಗಳೂ ಆಶೇರ್ ಕುಲದ ಗೋತ್ರಗಳ ಸ್ವಾಸ್ತ್ಯವಾಗಿವೆ.
32
ಚೀಟು ಆರನೆಯ ಸಾರಿ ನಫ್ತಾಲಿ ಕುಲದವರಿಗೆ ಬಿದ್ದಿತು. ಆ ಕುಲದ ಗೋತ್ರಗಳಿಗೆ ಸಿಕ್ಕಿದ ಸ್ವಾಸ್ತ್ಯದ ಮೇರೆಯು
33
ಚಾನನ್ನೀವಿುನಲ್ಲಿರುವ ಹೇಲೆಫಿನ ಅಲ್ಲೋನ್ ಮರದಿಂದ ತೊಡಗಿ ಅದಾಮೀನೆಕೆಬ್; ಯಬ್ನೆಯೇಲ್ ಇವುಗಳ ಮೇಲೆ ಲಕ್ಕೂವಿುಗೆ ಹೋಗಿ ಯೊರ್ದನ್ ಹೊಳೆಯ ತೀರದಲ್ಲಿ ಮುಗಿಯುವದು.
34
ಇದಲ್ಲದೆ ಮೇರೆಯು ತಿರಿಗಿ ಅದೇ ಸ್ಥಳದಿಂದ ತೊಡಗಿ ಅಜ್ನೋತ್ ತಾಬೋರಿನ ಮೇಲೆ ಹುಕ್ಕೋಕಿಗೆ ಹೋಗುತ್ತದೆ. ದಕ್ಷಿಣದಲ್ಲಿ ಜೆಬುಲೂನ್ಯರ ಮೇರೆಗೂ ಪಶ್ಚಿಮದಲ್ಲಿ ಆಶೇರ್ಯರ ಮತ್ತು ಯೆಹೂದ್ಯರ ಮೇರೆಗೂ ಪೂರ್ವದಲ್ಲಿ ಯೊರ್ದನ್ ಹೊಳೆಗೂ ಹೊಂದಿಕೊಂಡಿರುತ್ತದೆ.
35
ಚಿದ್ದೀಮ್, ಚೇರ್, ಹಮ್ಮತ್, ರಕ್ಕತ್,
36
ಕಿನ್ನೆರೆತ್, ಅದಾಮಾ, ರಾಮಾ, ಹಾಚೋರ್,
37
ಕೆದೆಷ್, ಎದ್ರೈ, ಏನ್ಹಾಚೋರ್, ಇರೋನ್, ವಿುಗ್ದಲೇಲ್, ಹೊರೇಮ್, ಬೇತನಾತ್, ಬೇತ್ಷೆಮೆಷ್ ಇವೇ ಮೊದಲಾದ ಹತ್ತೊಂಭತ್ತು ಕೋಟೆ ಕೊತ್ತಲುಗಳುಳ್ಳ ಪಟ್ಟಣಗಳೂ ಅವುಗಳ ಗ್ರಾಮಗಳೂ
39
ನಫ್ತಾಲಿ ಕುಲದ ಗೋತ್ರಗಳಿಗೆ ಸಿಕ್ಕಿದ ಸ್ವಾಸ್ತ್ಯವಾಗಿವೆ.
40
ಚೀಟು ಏಳನೆಯ ಸಾರಿ ದಾನ್ ಕುಲದವರಿಗೆ ಬಿದ್ದಿತು. ಅವರ ಗೋತ್ರಗಳಿಗೆ ಸ್ವಾಸ್ತ್ಯವಾಗಿ ದೊರಕಿದ ಊರುಗಳು ಯಾವವಂದರೆ -
41
ಚೊರ್ಗಾ, ಎಷ್ಟಾವೋಲ್,
42
ಈರ್ಷೆಮೆಷ್, ಶಾಲಬ್ಬೀನ್, ಅಯ್ಯಾಲೋನ್,
43
ಇತ್ಲಾ, ಏಲೋನ್, ತಿಮ್ನಾ, ಎಕ್ರೋನ್, ಎಲ್ತೆಕೇ,
45
ಗಿಬ್ಬೆತೋನ್, ಬಾಲತ್, ಯೆಹುದ್, ಬೆನೇಬೆರಕ್,
46
ಗತ್ರಿಮ್ಮೋನ್, ಮೇಯರ್ಕೋನ್, ರಕ್ಕೋನ್, ಇವೇ. ಯೊಪ್ಪಕ್ಕೆ ಹೊಂದಿರುವ ಪ್ರದೇಶವೂ ಇವರಿಗೇ ದೊರಕಿತು.
47
ದಾನ್ಕುಲದವರು ತಮ್ಮ ಪ್ರಾಂತವನ್ನು ವಿಸ್ತರಿಸುವದಕ್ಕಾಗಿ ಹೊರಟು ಲೆಷೆವಿುನವರೊಡನೆ ಯುದ್ಧಮಾಡಿ ಜಯಿಸಿ ಜನರನ್ನು ಕತ್ತಿಯಿಂದ ಸಂಹರಿಸಿ ಪಟ್ಟಣವನ್ನು ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸಿಸಿದರು. ಮತ್ತು ಅದಕ್ಕೆ ತಮ್ಮ ಮೂಲಪುರುಷನ ಹೆಸರಾದ ದಾನ್ ಎಂಬ ಹೆಸರನ್ನಿಟ್ಟರು.
48
ದಾನ್ಕುಲದ ಗೋತ್ರಗಳಿಗೆ ಸಿಕ್ಕಿದ ಸ್ವಾಸ್ತ್ಯವೂ ಅದರಲ್ಲಿದ್ದ ಗ್ರಾಮನಗರಗಳೂ ಇವೇ.
49
ಇಸ್ರಾಯೇಲ್ಯರು ದೇಶವನ್ನು ಮೇರೆಗಳ ಪ್ರಕಾರ ತಮ್ಮೊಳಗೆ ಹಂಚಿಕೊಂಡ ಮೇಲೆ ನೂನನ ಮಗನಾದ ಯೆಹೋಶುವನಿಗೂ ತಮ್ಮದರಲ್ಲಿ ಪಾಲುಕೊಟ್ಟರು.
50
ಅವನು ತನಗೋಸ್ಕರ ಎಫ್ರಾಯೀಮ್ಯರ ಪರ್ವತ ಪ್ರದೇಶದಲ್ಲಿರುವ ತಿಮ್ನತ್ಸೆರಹ ಎಂಬ ಪಟ್ಟಣವನ್ನು ಕೇಳಿಕೊಳ್ಳಲು ಅವರು ಯೆಹೋವನ ಆಜ್ಞೆಯಂತೆ ಅದನ್ನು ಅವನಿಗೆ ಕೊಟ್ಟುಬಿಟ್ಟರು. ಅವನು ಅದನ್ನು ಕಟ್ಟಿಕೊಂಡು ಅದರಲ್ಲಿ ವಾಸವಾಗಿದ್ದನು.
51
ಮಹಾಯಾಜಕ ಎಲ್ಲಾಜಾರನೂ ನೂನನ ಮಗ ಯೆಹೋಶುವನೂ ಇಸ್ರಾಯೇಲ್ ಕುಲಪ್ರಧಾನರೂ ಶೀಲೋವಿನಲ್ಲಿದ್ದ ದೇವದರ್ಶನದ ಗುಡಾರದ ಬಾಗಿಲಲ್ಲಿ ಯೆಹೋವನ ಸನ್ನಿಧಿಯಲ್ಲೇ ಚೀಟುಹಾಕಿ ಹಂಚಿಕೊಟ್ಟ ಪ್ರಾಂತಗಳು ಇವೇ. ಹೀಗೆ ದೇಶ ವಿಭಾಗಕಾರ್ಯವು ಪೂರೈಸಿತು.
← Chapter 18
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 20 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24