bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Judges 16
Judges 16
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 15
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 17 →
1
ತರುವಾಯ ಸಂಸೋನನು ಗಾಜಕ್ಕೆ ಹೋಗಿ ಅಲ್ಲಿ ಒಬ್ಬ ಸೂಳೆಯನ್ನು ಕಂಡು ಅವಳ ಬಳಿಗೆ ಹೋದನು.
2
ಸಂಸೋನನು ಬಂದಿರುವದು ಗಾಜದವರಿಗೆ ಗೊತ್ತಾಗಲು ಅವರು ಬಂದು ಅವನನ್ನು ಸುತ್ತಿಕೊಂಡರು; ಸೂರ್ಯೋದಯವಾಗುತ್ತಲೆ ಅವನನ್ನು ಕೊಂದುಹಾಕೋಣ ಎಂದುಕೊಂಡು ರಾತ್ರಿಯೆಲ್ಲಾ ಊರುಬಾಗಲಲ್ಲಿ ಹೊಂಚಿನೋಡುತ್ತಾ ಸುಮ್ಮನಿದ್ದರು.
3
ಸಂಸೋನನು ಮಲಗಿ ಮಧ್ಯರಾತ್ರಿಯಲ್ಲೆದ್ದು ಊರುಬಾಗಲಿನ ಕದಗಳನ್ನೂ ಅದರ ಎರಡು ನಿಲುವು ಪಟ್ಟಿಗಳನ್ನೂ ಅಗುಳಿಗಳನ್ನೂ ಕಿತ್ತು ಹೆಗಲಮೇಲೆ ಹೊತ್ತುಕೊಂಡು ಹೋಗಿ ಹೆಬ್ರೋನಿನ ಎದುರಿಗಿರುವ ಪರ್ವತದ ಶಿಖರದ ಮೇಲೆ ಇಟ್ಟನು.
4
ಅನಂತರ ಸಂಸೋನನು ಸೋರೇಕ್ ತಗ್ಗಿನಲ್ಲಿ ವಾಸವಾಗಿದ್ದ ದೆಲೀಲಾ ಎಂಬ ಹೆಸರುಳ್ಳ ಒಬ್ಬ ಸ್ತ್ರೀಯಲ್ಲಿ ಮೋಹಿತನಾದನು.
5
ಫಿಲಿಷ್ಟಿಯ ಪ್ರಭುಗಳು ಅವಳ ಬಳಿಗೆ ಹೋಗಿ ಅವಳಿಗೆ - ನೀನು ಅವನನ್ನು ಮರುಳುಗೊಳಿಸಿ ಅವನ ಮಹಾಶಕ್ತಿಯ ಮೂಲ ಯಾವದೆಂಬದನ್ನೂ ನಾವು ಅವನನ್ನು ಗೆದ್ದು ಕಟ್ಟಿ ಕುಂದಿಸುವದು ಹೇಗೆಂಬದನ್ನೂ ಗೊತ್ತುಮಾಡಿಕೊಂಡು ನಮಗೆ ತಿಳಿಸು; ನಮ್ಮಲ್ಲಿ ಪ್ರತಿಯೊಬ್ಬನೂ ನಿನಗೆ ಸಾವಿರದ ನೂರು ರೂಪಾಯಿ ಕೊಡುವೆವು ಎಂದು ಹೇಳಿದರು.
6
ದೆಲೀಲಳು ಸಂಸೋನನಿಗೆ - ನಿನಗೆ ಇಂಥ ಮಹಾಶಕ್ತಿ ಹೇಗೆ ಬಂದಿತು? ನಿನ್ನನ್ನು ಕಟ್ಟಿ ಕುಂದಿಸುವದು ಹೇಗೆ ಎಂಬದನ್ನು ದಯವಿಟ್ಟು ನನಗೆ ತಿಳಿಸು ಅನ್ನಲು
7
ಅವನು - ಕರುಳಿನ ಏಳು ಹಸೀ ತಂತಿಗಳಿಂದ ನನ್ನನ್ನು ಕಟ್ಟಿದರೆ ನಾನು ಬಲಹೀನನಾಗಿ ಬೇರೆ ಮನುಷ್ಯನಂತಾಗುವೆನು ಎಂದು ಹೇಳಿದನು.
8
ಫಿಲಿಷ್ಟಿಯ ಪ್ರಭುಗಳು ಅಂಥ ಏಳು ಹಸೀ ತಂತಿಗಳನ್ನು ಅವಳಿಗೆ ತಂದುಕೊಟ್ಟರು.
9
ಅವಳು ಒಳಗಿನ ಕೋಣೆಯಲ್ಲಿ ಹೊಂಚುಗಾರರನ್ನಿಟ್ಟು ಅವುಗಳಿಂದ ಅವನನ್ನು ಕಟ್ಟಿ - ಸಂಸೋನನೇ, ನಿನ್ನ ಮೇಲೆ ಫಿಲಿಷ್ಟಿಯರು ಬಂದರು ಎಂದು ಕೂಗಿದಳು. ಅವನು ಬೆಂಕಿತಗುಲಿದ ಸೆಣಬಿನ ದಾರವನ್ನೋ ಎಂಬಂತೆ ಆ ತಂತಿಗಳನ್ನು ಹರಿದುಬಿಟ್ಟನು; ಹೀಗೆ ಅವನ ಶಕ್ತಿಯ ರಹಸ್ಯವು ತಿಳಿಯದೆ ಹೋಯಿತು.
10
ದೆಲೀಲಳು ತಿರಿಗಿ ಸಂಸೋನನಿಗೆ - ನೀನು ನನ್ನನ್ನು ವಂಚಿಸಿದಿ; ಸುಳ್ಳಾಡಿದಿ; ನಿನ್ನನ್ನು ಯಾವದರಿಂದ ಕಟ್ಟಬಹುದೆಂಬದನ್ನು ದಯವಿಟ್ಟು ನನಗೆ ತಿಳಿಸು ಎಂದಳು.
11
ಅವನು ಅವಳಿಗೆ - ಯಾವದಕ್ಕೂ ಉಪಯೋಗಿಸದ ಹೊಸ ಹಗ್ಗಗಳಿಂದ ನನ್ನನ್ನು ಕಟ್ಟಿದರೆ ನಾನು ಬಲಹೀನನಾಗಿ ಬೇರೆ ಮನುಷ್ಯರಂತಾಗುವೆನು ಅಂದನು.
12
ಅವಳು ಒಳಗಿನ ಕೋಣೆಯಲ್ಲಿ ಹೊಂಚುಗಾರರನ್ನಿರಿಸಿ ಹೊಸ ಹಗ್ಗಗಳನ್ನು ತೆಗೆದುಕೊಂಡು ಅವುಗಳಿಂದ ಅವನನ್ನು ಕಟ್ಟಿ - ಸಂಸೋನನೇ, ಫಿಲಿಷ್ಟಿಯರು ಬಂದಿದ್ದಾರೆಂದು ಕೂಗಲು ಅವನೆದ್ದು ತೋಳುಗಳಿಗೆ ಕಟ್ಟಿದ ಹಗ್ಗಗಳನ್ನು ದಾರವನ್ನೋ ಎಂಬಂತೆ ಹರಿದುಬಿಟ್ಟನು.
13
ಆಗ ದೆಲೀಲಳು ಸಂಸೋನನಿಗೆ - ನೀನು ತಿರಿಗಿ ನನ್ನನ್ನು ವಂಚಿಸಿದಿ; ಸುಳ್ಳಾಡಿದಿ; ನಿನ್ನನ್ನು ಯಾವದರಿಂದ ಕಟ್ಟಬಹುದೆಂದು ತಿಳಿಸು ಅನ್ನಲು ಅವನು - ನನ್ನ ತಲೇಕೂದಲಿನ ಏಳು ಜಡೆಗಳನ್ನು ಮಗ್ಗದಲ್ಲಿ ನೇಯಿದರೆ ಸಾಕು ಎಂದು ಹೇಳಿದನು.
14
ಅವಳು ಅವನ ತಲೇಕೂದಲಿನ ಏಳು ಜಡೆಗಳನ್ನು ಗೂಟಕ್ಕೆ ಭದ್ರಮಾಡಿ ಸಂಸೋನನೇ, ಫಿಲಿಷ್ಟಿಯರು ಬಂದಿದ್ದಾರೆ ಎಂದು ಕೂಗಿದಳು. ಅವನು ನಿದ್ರೆಯಿಂದ ಎಚ್ಚತ್ತು ಮಗ್ಗವನ್ನೂ ಮಗ್ಗದ ಗೂಟವನ್ನೂ ಕಿತ್ತುಕೊಂಡು ಹೋದನು.
15
ಆಕೆಯು ತಿರಿಗಿ ಅವನಿಗೆ - ನಿನ್ನನ್ನು ಪ್ರೀತಿಸುತ್ತೇನೆಂದು ನೀನು ನನಗೆ ಹೇಗೆ ಹೇಳಬಹುದು? ನಿನ್ನ ಮನಸ್ಸು ನನ್ನ ಮೇಲೆ ಇಲ್ಲವಲ್ಲಾ; ಮೂರುಸಾರಿ ನನ್ನನ್ನು ವಂಚಿಸಿದಿ. ನಿನಗೆ ಇಂಥ ಮಹಾಶಕ್ತಿ ಯಾವದರಿಂದ ಬಂದಿತೆಂಬದನ್ನು ನನಗೆ ತಿಳಿಸಲಿಲ್ಲ ಅಂದಳು.
16
ಇದಲ್ಲದೆ ಅವಳು ಅವನನ್ನು ದಿನ ದಿನವೂ ಮಾತಿನಿಂದ ಪೀಡಿಸಿದ್ದರಿಂದ ಅವನಿಗೆ ಸಾಯುವದು ಒಳ್ಳೇದನ್ನುವಷ್ಟು ಬೇಸರವಾಯಿತು.
17
ಮತ್ತು ಅವನು - ಕ್ಷೌರಕತ್ತಿಯು ನನ್ನ ತಲೆಯ ಮೇಲೆ ಬಂದದ್ದಿಲ್ಲ; ನಾನು ಮಾತೃಗರ್ಭ ಬಿಟ್ಟಂದಿನಿಂದಲೇ ದೇವರಿಗೆ ಪ್ರತಿಷ್ಠಿತನಾದವನು. ನನ್ನ ತಲೆಯನ್ನು ಕ್ಷೌರಮಾಡುವದಾದರೆ ನನ್ನ ಶಕ್ತಿಯು ಹೋಗುವದು; ಮತ್ತು ನಾನು ಬಲಹೀನನಾಗಿ ಬೇರೆ ಮನುಷ್ಯನಂತಾಗುವೆನು ಎಂದು ತನ್ನ ಗುಟ್ಟನ್ನೆಲ್ಲಾ ಆಕೆಯ ಮುಂದೆ ಬಿಚ್ಚಿಹೇಳಿದನು.
18
ಅವನು ಇದ್ದದ್ದನ್ನು ಇದ್ದ ಹಾಗೆಯೇ ಹೇಳಿದನೆಂದು ದೆಲೀಲಳು ತಿಳಿದು ಫಿಲಿಷ್ಟಿಯ ಪ್ರಭುಗಳ ಬಳಿಗೆ ದೂತರನ್ನು ಕಳುಹಿಸಿ ಅವರಿಗೆ - ಇದೊಂದು ಸಾರಿ ಬನ್ನಿರಿ; ಅವನು ನನಗೆ ತನ್ನ ಹೃದಯವನ್ನೆಲ್ಲಾ ತಿಳಿಸಿದ್ದಾನೆ ಎಂದು ಹೇಳಿಸಿ ಕರಿಸಿದಳು. ಅವರು ಹಣವನ್ನು ತೆಗೆದುಕೊಂಡು ಆಕೆಯ ಬಳಿಗೆ ಬಂದರು.
19
ಆಕೆಯು ಸಂಸೋನನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಅವನಿಗೆ ನಿದ್ರೆಹತ್ತಿದಾಗ ಒಬ್ಬ ಮನುಷ್ಯನಿಂದ ಅವನ ತಲೆಯ ಏಳು ಜಡೆಗಳನ್ನು ಬೋಳಿಸಿ ಅವನನ್ನು ದುರ್ಬಲಪಡಿಸಿದಳು. ಅವನ ಶಕ್ತಿಯು ಹೋಯಿತು,
20
ಆಗ ಅವಳು - ಸಂಸೋನನೇ, ಫಿಲಿಷ್ಟಿಯರು ಬಂದಿದ್ದಾರೆಂದು ಕೂಗಲು ಅವನು ಎಚ್ಚತ್ತು - ಮುಂಚಿನಂತೆ ಈಗಲೂ ಕೊಸರಿಕೊಂಡು ಹೋಗುವೆನು ಅಂದುಕೊಂಡನು; ಆದರೆ ಯೆಹೋವನು ತನ್ನನ್ನು ಬಿಟ್ಟುಹೋಗಿದ್ದಾನೆಂಬದು ಅವನಿಗೆ ತಿಳಿಯಲಿಲ್ಲ.
21
ಫಿಲಿಷ್ಟಿಯರು ಅವನನ್ನು ಹಿಡಿದು ಕಣ್ಣುಗಳನ್ನು ಕಿತ್ತು ಗಾಜಕ್ಕೆ ಒಯ್ದು ಕಬ್ಬಿಣದ ಬೇಡಿಗಳನ್ನು ಹಾಕಿ ಸೆರೆಮನೆಯಲ್ಲಿ ಬೀಸುವದಕ್ಕೆ ಹಚ್ಚಿದರು.
22
ಅಷ್ಟರಲ್ಲಿ ಅವನ ತಲೆಗೂದಲುಗಳು ಬೆಳೆಯ ಹತ್ತಿದವು.
23
ಶತ್ರುವಾದ ಸಂಸೋನನನ್ನು ತಮ್ಮ ಕೈಗೆ ಒಪ್ಪಿಸಿದ ತಮ್ಮ ದೇವರಾದ ದಾಗೋನನಿಗೆ ಮಹಾಯಜ್ಞವನ್ನು ಸಮರ್ಪಿಸಿ ಸಂತೋಷಪಡಬೇಕೆಂದು ಫಿಲಿಷ್ಟಿಯ ಪ್ರಭುಗಳು ಕೂಡಿಬಂದರು.
24
ಜನರು ಸಂಸೋನನನ್ನು ನೋಡಿ - ನಮ್ಮ ದೇಶವನ್ನು ಹಾಳುಮಾಡಿ ನಮ್ಮಲ್ಲಿ ಅನೇಕರನ್ನು ಕೊಂದು ಹಾಕಿದ ಈ ಶತ್ರುವನ್ನು ನಮ್ಮ ದೇವರು ನಮ್ಮ ಕೈಗೆ ಒಪ್ಪಿಸಿ ಕೊಟ್ಟಿದ್ದಾನೆ ಎಂದು ಗಾನಮಾಡಿದರು.
25
ಅವರು ಆನಂದಲಹರಿಯಲ್ಲಿದ್ದಾಗ - ನಮ್ಮ ವಿನೋದಕ್ಕೋಸ್ಕರ ಸಂಸೋನನನ್ನು ಕರಕೊಂಡು ಬನ್ನಿರಿ ಅಂದರು; ಅದರಂತೆಯೇ ಸಂಸೋನನನ್ನು ಸೆರೆಮನೆಯಿಂದ ಕರಕೊಂಡು ಬಂದರು. ಅವನು ಎರಡು ಸ್ತಂಭಗಳ ನಡುವೆ ನಿಂತು ವಿನೋದಮಾಡಬೇಕಾಯಿತು.
26
ಆಗ ಸಂಸೋನನು ತನ್ನನ್ನು ಕೈಹಿಡಿದು ನಡಿಸುವ ಹುಡುಗನಿಗೆ - ನನ್ನ ಕೈಗಳನ್ನು ಬಿಡು; ನಾನು ಕೈಯಾಡಿಸಿ ಮನೆಗೆ ಆಧಾರವಾಗಿರುವ ಸ್ತಂಭಗಳನ್ನು ಹುಡುಕಿ ಅವುಗಳಿಗೆ ಸ್ವಲ್ಪ ಒರಗಿಕೊಳ್ಳುತ್ತೇನೆ ಅಂದನು.
27
ಆ ಮನೆಯು ಸ್ತ್ರೀಪುರುಷರಿಂದ ಕಿಕ್ಕಿರಿಯುತ್ತಿತ್ತು. ಫಿಲಿಷ್ಟಿಯರ ಅಧಿಪತಿಗಳೆಲ್ಲರೂ ಅಲ್ಲಿದ್ದರು; ಸಂಸೋನನ ವಿನೋದವನ್ನು ನೋಡುವದಕ್ಕಾಗಿ ಬಂದವರಲ್ಲಿ ಸುಮಾರು ಮೂರು ಸಾವಿರ ಮಂದಿ ಸ್ತ್ರೀಪುರುಷರು ಮಾಳಿಗೆಯ ಮೇಲಿದ್ದರು.
28
ಆಗ ಸಂಸೋನನು ಯೆಹೋವನಿಗೆ - ಕರ್ತನೇ, ಯೆಹೋವನೇ, ಫಿಲಿಷ್ಟಿಯರು ಕಿತ್ತುಹಾಕಿದ ನನ್ನ ಎರಡೂ ಕಣ್ಣುಗಳಲ್ಲಿ ಒಂದಕ್ಕೋಸ್ಕರವಾದರೂ ನಾನು ಅವರಿಗೆ ಮುಯ್ಯಿತೀರಿಸುವ ಹಾಗೆ ನನ್ನನ್ನು ಈ ಸಾರಿ ಬಲಪಡಿಸು ಎಂದು ಮೊರೆಯಿಟ್ಟು
29
ಮನೆಯ ಆಧಾರಸ್ತಂಭಗಳಲ್ಲಿ ಒಂದನ್ನು ಬಲಗೈಯಿಂದಲೂ ಇನ್ನೊಂದನ್ನು ಎಡಗೈಯಿಂದಲೂ ಹಿಡಿದು
30
ಅವುಗಳನ್ನು ಒತ್ತಿ ನಾನೂ ಫಿಲಿಷ್ಟಿಯರ ಸಂಗಡ ಸಾಯುವೆನು ಎಂದು ಹೇಳಿ ಬಲವಾಗಿ ಬಾಗಿಕೊಳ್ಳಲು ಮನೆಯು ಅಧಿಪತಿಗಳ ಮೇಲೆಯೂ ಅಲ್ಲಿ ಬಂದಿದ್ದ ಎಲ್ಲಾ ಜನರ ಮೇಲೆಯೂ ಬಿದ್ದಿತು. ಅವನು ಜೀವದಿಂದಿದ್ದಾಗ ಕೊಂದುಹಾಕಿದವರಿಗಿಂತ ಸಾಯುವಾಗ ಕೊಂದವರ ಸಂಖ್ಯೆಯೇ ಹೆಚ್ಚಿತ್ತು.
31
ಅವನ ಬಂಧುಗಳೂ ತಂದೆಯ ಮನೆಯವರೆಲ್ಲರೂ ಬಂದು ಅವನ ಶವವನ್ನು ಎತ್ತಿ ತೆಗೆದುಕೊಂಡು ಹೋಗಿ ಚೊರ್ಗಕ್ಕೂ ಎಷ್ಟಾವೋಲಿಗೂ ಮಧ್ಯದಲ್ಲಿದ್ದ ಅವನ ತಂದೆಯಾದ ಮಾನೋಹನ ಸಮಾಧಿಯಲ್ಲಿ ಹೂಣಿಟ್ಟರು. ಅವನು ಇಸ್ರಾಯೇಲ್ಯರನ್ನು ಇಪ್ಪತ್ತು ವರುಷ ಪಾಲಿಸಿದನು.
← Chapter 15
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 17 →
All chapters:
1
2
3
4
5
6
7
8
9
10
11
12
13
14
15
16
17
18
19
20
21