bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Leviticus 11
Leviticus 11
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 10
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 12 →
1
ಯೆಹೋವನು ಮೋಶೆ ಆರೋನರ ಸಂಗಡ ಮಾತಾಡಿ ಆಜ್ಞಾಪಿಸಿದ್ದೇನೆಂದರೆ -
2
ನೀವು ಇಸ್ರಾಯೇಲ್ಯರಿಗೆ ಹೀಗೆ ಹೇಳಬೇಕು- ಭೂವಿುಯ ಮೇಲಿರುವ ಚತುಷ್ಪಾದ ಪ್ರಾಣಿಗಳಲ್ಲಿ ಇವುಗಳ ಮಾಂಸವನ್ನು ನೀವು ತಿನ್ನಬಹುದು.
3
ಯಾವವಂದರೆ - ಯಾವ ಪ್ರಾಣಿಯ ಕಾಲ್ಗೊರಸು ಸೀಳಿದೆಯೋ ಅದು ಮೆಲಕು ಹಾಕುವಂಥದಾದರೆ ಅದರ ಮಾಂಸವನ್ನು ತಿನ್ನಬಹುದು.
4
ಆದರೆ ಯಾವ ಪ್ರಾಣಿಯು ಮೆಲಕು ಹಾಕಿದರೂ ಗೊರಸು ಸೀಳಿರುವದಿಲ್ಲವೋ ಮತ್ತು ಯಾವ ಪ್ರಾಣಿಯು ಗೊರಸುಸೀಳಿದ್ದರೂ ಮೆಲಕು ಹಾಕುವದಿಲ್ಲವೋ ಅವುಗಳ ಮಾಂಸವನ್ನು ನೀವು ತಿನ್ನಬಾರದು. ದೃಷ್ಟಾಂತ, ಒಂಟೆಯು ಮೆಲಕುಹಾಕುವಂಥದು ಸರಿ; ಆದರೂ ಅದಕ್ಕೆ ಸೀಳುಗೊರಸು ಇಲ್ಲವಾದದರಿಂದ ನೀವು ಅದರ ಮಾಂಸವನ್ನು ಅಶುದ್ಧವೆಂದೆಣಿಸಬೇಕು.
5
ಬೆಟ್ಟದ ಮೊಲವೂ ಮೆಲಕು ಹಾಕುವಂಥದು; ಆದರೂ ಸೀಳುಗೊರಸು ಇಲ್ಲವಾದದರಿಂದ ಅದು ನಿಮಗೆ ಅಶುದ್ಧ.
6
ಮೊಲವೂ ಮೆಲಕುಹಾಕುವಂಥದು; ಆದರೂ ಸೀಳುಗೊರಸು ಇಲ್ಲವಾದ ಕಾರಣ ಅದೂ ನಿಮಗೆ ಅಶುದ್ಧ.
7
ಹಂದಿಯ ಗೊರಸು ಸೀಳಿಯದೆ; ಆದರೂ ಅದು ಮೆಲಕು ಹಾಕುವದಿಲ್ಲವಾದದರಿಂದ ಅದು ನಿಮಗೆ ಅಶುದ್ಧ. ಇವುಗಳ ಮಾಂಸವನ್ನು ನೀವು ತಿನ್ನಬಾರದು;
8
ಇವುಗಳ ಹೆಣವನ್ನು ಮುಟ್ಟಬಾರದು; ಇವುಗಳನ್ನು ಅಶುದ್ಧವೆಂದೆಣಿಸಬೇಕು.
9
ಜಲಜಂತುಗಳಲ್ಲಿ ನೀವು ತಿನ್ನಬಹುದಾದವುಗಳು ಯಾವವಂದರೆ - ಸಮುದ್ರದಲ್ಲಿಯಾಗಲಿ ನದಿಯಲ್ಲಿಯಾಗಲಿ ಬೇರೆ ಜಲಾಶಯದಲ್ಲಿಯಾಗಲಿ ಯಾವ ಜಾತಿಯ ಪ್ರಾಣಿಗೆ ರೆಕ್ಕೆ ಇದ್ದು ಮೈಯೆಲ್ಲಾ ಪರೆಪರೆಯಾಗಿರುವದೋ ಅದರ ಮಾಂಸವನ್ನು ತಿನ್ನಬಹುದು.
10
ಆದರೆ ಸಮುದ್ರದಲ್ಲಿದ್ದರೂ ನದಿಯಲ್ಲಿದ್ದರೂ ಜಲಚರಗಳಾದ ಸಕಲವಿಧವಾದ ಜೀವಜಂತುಗಳಲ್ಲಿ ಯಾವ ಜಾತಿಗೆ ರೆಕ್ಕೆಯೂ ಪರೆಪರೆಯಾದ ಮೈಯೂ ಇರುವದಿಲ್ಲವೋ ಅದು ನಿಮಗೆ ನಿಷಿದ್ಧವಾದದ್ದು.
11
ಅಂಥವು ಸಂಪೂರ್ಣವಾಗಿ ನಿಷಿದ್ಧವಾಗಿರುವದರಿಂದ ಅವುಗಳ ಮಾಂಸವನ್ನು ನೀವು ತಿನ್ನಬಾರದು; ಅವುಗಳ ಹೆಣಗಳು ನಿಮಗೆ ಹೇಯವಾಗಿರಬೇಕು.
12
ಜಲಜಂತುಗಳಲ್ಲಿ ಯಾವದಕ್ಕೆ ರೆಕ್ಕೆಗಳೂ ಪರೆಪರೆಯಾದ ಮೈಯೂ ಇಲ್ಲವೋ ಅವು ನಿಮಗೆ ಹೇಯವಾಗಿರಬೇಕು.
13
ಪಕ್ಷಿಗಳಲ್ಲಿ ಇವುಗಳು ನಿಮಗೆ ನಿಷಿದ್ಧವು; ಇವುಗಳ ಮಾಂಸವನ್ನು ತಿನ್ನಬಾರದು; ಇವು ಹೇಯವಾಗಿರಬೇಕು, ಯಾವವಂದರೆ - ಗರುಡ, ಬೆಟ್ಟದ ಹದ್ದು,
14
ಕ್ರೌಂಚ, ಹದ್ದು, ಸಕಲವಿಧವಾದ ಗಿಡುಗ, ಸಕಲವಿಧವಾದ ಕಾಗೆ,
16
ಉಷ್ಟ್ರಪಕ್ಷಿ, ಉಲೂಕ, ಕಡಲ್ಹಕ್ಕಿ,
17
ಸಕಲವಿಧವಾದ ಡೇಗೆ, ಗೂಬೆ, ಹೆಗ್ಗೂಬೆ, ಕರೇಟು,
18
ಚೀಲಮೂಗಿ, ರಣಹದ್ದು, ನೀರುಕಾಗೆ, ಕೊಕ್ಕರೆ, ಸಕಲವಿಧವಾದ ಬಕ, ಹೆಡೆಹಕ್ಕಿ, ಕಣ್ಣ ಕಪಡಿ.
20
ರೆಕ್ಕೆಯುಳ್ಳವುಗಳಾಗಿ ಕಾಲುಗಳಿಂದ ಹರಿದಾಡುವ ಕ್ರಿವಿುಕೀಟಗಳೆಲ್ಲವೂ ನಿಮಗೆ ಹೇಯವಾಗಿರಬೇಕು.
21
ಆದರೆ ಕಾಲುಳ್ಳ ಯಾವ ಕ್ರಿವಿುಕೀಟಗಳಿಗೆ ನೆಲದ ಮೇಲೆ ಹಾರುವದಕ್ಕೋಸ್ಕರ ಮುದುರಿಕೊಂಡಿರುವ ತೊಡೆಗಳು ಇರುತ್ತವೆಯೋ ಅವುಗಳನ್ನು ನೀವು ತಿನ್ನಬಹುದು.
22
ಸಕಲವಿಧವಾದ ವಿುಡತೆಗಳನ್ನೂ ಬೋಳವಿುಡತೆಗಳನ್ನೂ ಜಿಟ್ಟಿವಿುಡತೆಗಳನ್ನೂ ಸಣ್ಣವಿುಡತೆಗಳನ್ನೂ ಇವುಗಳನ್ನೆಲ್ಲಾ ತಿನ್ನಬಹುದು.
23
ರೆಕ್ಕೆಯುಳ್ಳವುಗಳಾಗಿ ಕಾಲುಗಳಿಂದ ಹರಿದಾಡುವ ಸಕಲವಿಧವಾದ ಕ್ರಿವಿುಕೀಟಗಳು ನಿಮಗೆ ನಿಷಿದ್ಧವು.
24
ಅದಲ್ಲದೆ ಮುಂದೆ ಹೇಳಿರುವ ಜಂತುಗಳಿಂದ ನಿಮಗೆ ಅಪವಿತ್ರತೆಯುಂಟಾಗುತ್ತದೆ. ಅವುಗಳ ಹೆಣ ಯಾವನಿಗೆ ಸೋಂಕುವದೋ ಅವನು ಆ ದಿನದ ಸಾಯಂಕಾಲದವರೆಗೂ ಅಶುದ್ಧನಾಗಿರುವನು.
25
ಅವುಗಳ ಹೆಣವನ್ನು ಎತ್ತಿದವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು. ಮತ್ತು ಸಾಯಂಕಾಲದವರೆಗೂ ಅಶುದ್ಧನಾಗಿರುವನು.
26
ಅವು ಯಾವವಂದರೆ, ಯಾವ ಪಶುವು ಗೊರಸು ಸ್ವಲ್ಪ ಸೀಳಿದ್ದರೂ ಇಗ್ಗೊರಸಾಗಿಲ್ಲವೋ ಮತ್ತು ಮೆಲಕುಹಾಕುವದಿಲ್ಲವೋ ಅದು ನಿಮಗೆ ಅಶುದ್ಧ. ಅವುಗಳು ಯಾವನಿಗೆ ಸೋಂಕುವವೋ ಅವನು ಅಶುದ್ಧನಾಗುವನು.
27
ಚತುಷ್ಪಾದ ಪ್ರಾಣಿಗಳಲ್ಲಿ ಅಂಗಾಲುಗಳಿಂದ ನಡೆಯುವವುಗಳೆಲ್ಲಾ ನಿಮಗೆ ಅಶುದ್ಧವಾಗಿರುವವು; ಅವುಗಳ ಹೆಣ ಯಾವನಿಗೆ ಸೋಂಕುವದೋ ಅವನು ಆ ದಿನದ ಸಾಯಂಕಾಲದವರೆಗೂ ಅಶುದ್ಧನಾಗಿರುವನು.
28
ಅವುಗಳ ಹೆಣವನ್ನು ಎತ್ತಿದವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು ಮತ್ತು ಆ ಸಾಯಂಕಾಲದವರೆಗೂ ಅಶುದ್ಧನಾಗಿರುವನು. ಅವು ನಿಮಗೆ ಅಶುದ್ಧ.
29
ನೆಲದ ಮೇಲೆ ಸಂಚರಿಸುವ ಸಣ್ಣ ಜಂತುಗಳಲ್ಲಿ ಇವು ನಿಮಗೆ ಅಶುದ್ಧವಾಗಿರಬೇಕು. ಯಾವವಂದರೆ - ಮುಂಗುಸಿ, ಇಲಿ, ಸಕಲವಿಧವಾದ ಉಡ.
30
ಹಾವರಾಣಿ, ಊಸರವಳ್ಳಿ ಹಲ್ಲಿ, ಬಸವನಹುಳ, ಚಿಟ್ಟಿಲಿ ಇವೇ.
31
ನೆಲದ ಮೇಲೆ ಸಂಚರಿಸುವ ಈ ಅಶುದ್ಧವಾದ ಸಣ್ಣ ಜಂತುಗಳ ಹೆಣವು ಯಾರಿಗೆ ಸೋಂಕುವದೋ ಅವರು ಆ ಸಾಯಂಕಾಲದವರೆಗೂ ಅಶುದ್ಧರಾಗಿರುವರು.
32
ಇವುಗಳ ಹೆಣವು ಯಾವ ವಸ್ತುವಿನ ಮೇಲೆ ಬೀಳುವದೋ ಆ ವಸ್ತುವು ಅಶುದ್ಧವಾಗಿರುವದು. ಅದು ಮರದ ವಸ್ತುವಾಗಲಿ ಬಟ್ಟೆಯಾಗಲಿ ಚರ್ಮವಾಗಲಿ ಗೋಣಿಯಾಗಲಿ ಅದು ಎಂಥದಾದರೂ ಯಾವ ಕೆಲಸಕ್ಕೆ ಉಪಯೋಗವಾಗಿದ್ದರೂ ಅದನ್ನು ನೀರಿನಲ್ಲಿ ನೆನಸಬೇಕು; ಅದು ಸಾಯಂಕಾಲದವರೆಗೂ ಅಶುದ್ಧವಾಗಿರುವದು; ತರುವಾಯ ಶುದ್ಧಿಯಾಗುವದು.
33
ಆ ಜಂತುಗಳ ಹೆಣ ಮಣ್ಣಿನ ಪಾತ್ರೆಯಲ್ಲಿ ಬಿದ್ದರೆ ಆ ಪಾತ್ರೆಯಲ್ಲಿರುವದೆಲ್ಲಾ ಅಶುದ್ಧವಾಗಿರುವದು. ಮತ್ತು ಆ ಪಾತ್ರೆಯನ್ನು ನೀವು ಒಡೆದುಬಿಡಬೇಕು.
34
ಅದರಲ್ಲಿರುವ ತಿನ್ನತಕ್ಕ ಪದಾರ್ಥವೆಲ್ಲಾ ನೀರಿನಿಂದ ನೆನದದ್ದಾಗಿದ್ದರೆ ಅಶುದ್ಧವಾಗುವದು. ಪಾನದ್ರವ್ಯವು ಆ ಪಾತ್ರೆಯಲ್ಲಿದ್ದರೆ ಅದೂ ಅಶುದ್ಧವಾಗುವದು.
35
ಆ ಜಂತುಗಳ ಹೆಣ ಯಾವ ಸಾಮಾನಿನ ಮೇಲೆ ಬಿದ್ದರೂ ಆ ಸಾಮಾನು ಅಶುದ್ಧವಾಗುವದು. ಒಲೆಗಳಲ್ಲಿ ಅದು ಒಂಟೊಲೆಯಾಗಿದ್ದರೂ ಜೋಡೊಲೆಯಾಗಿದ್ದರೂ ಅದು ಅಶುದ್ಧವಾದದರಿಂದ ಅದನ್ನು ಒಡೆದುಬಿಡಬೇಕು; ಅದು ಅಶುದ್ಧವೇ.
36
ಒರತೆ ಮೊದಲಾದ ಜಲಾಶಯಗಳನ್ನು ಮಾತ್ರ ನೀವು ಶುದ್ಧವೆಂದೆಣಿಸಬೇಕು. ಆದರೆ ಇವುಗಳೊಳಗಿಂದ ಆ ಹೆಣವನ್ನು ಎತ್ತಿದವನು ಅಶುದ್ಧನಾಗುವನು.
37
ಬಿತ್ತಬೇಕಾದ ಬೀಜದ ಮೇಲೆ ಈ ಜಂತುಗಳ ಹೆಣ ಬಿದ್ದರೆ ಆ ಬೀಜವು ಅಶುದ್ಧವಾಗುವದಿಲ್ಲ.
38
ನೀರು ಹಾಕಿ ನೆನಸಿದ ಬೀಜದ ಮೇಲೆ ಆ ಹೆಣ ಬಿದ್ದರೆ ಅದು ನಿಮಗೆ ಅಶುದ್ಧ.
39
ಆಹಾರಕ್ಕೆ ಯೋಗ್ಯವಾಗಿರುವ ಪಶುವು ಸತ್ತರೆ ಅದರ ಹೆಣವನ್ನು ಮುಟ್ಟಿದವನು ಆ ದಿನದ ಸಾಯಂಕಾಲದವರೆಗೂ ಅಶುದ್ಧನಾಗಿರುವನು.
40
ಆ ಹೆಣದಲ್ಲಿ ಸ್ವಲ್ಪವಾಗಿ ತಿಂದವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು. ಅವನು ಆ ದಿನದ ಸಾಯಂಕಾಲದವರೆಗೂ ಅಶುದ್ಧನಾಗಿರುವನು. ಆ ಹೆಣವನ್ನು ಹೊತ್ತವನೂ ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು; ಅವನು ಆ ಸಾಯಂಕಾಲದವರೆಗೂ ಅಶುದ್ಧನಾಗಿರುವನು.
41
ನೆಲದ ಮೇಲೆ ಹರಿದಾಡುವ ಕ್ರಿವಿುಕೀಟಗಳೆಲ್ಲಾ ಹೇಯವಾಗಿವೆ; ಅವುಗಳ ಮಾಂಸವನ್ನು ತಿನ್ನಬಾರದು.
42
ಹೊಟ್ಟೆಯಿಂದ ನಡೆಯುವಂಥದನ್ನೂ ಕಾಲಿನಿಂದ ಹರಿದಾಡುವಂಥದನ್ನೂ ಬಹಳ ಕಾಲುಳ್ಳದ್ದನ್ನೂ ಅಂತೂ ನೆಲದ ಮೇಲೆ ಹರಿದಾಡುವ ಯಾವ ಸಣ್ಣ ಜೀವಿಯನ್ನೂ ನೀವು ತಿನ್ನಬಾರದು; ಅವು ಹೇಯವಾಗಿವೆ.
43
ನೀವು ಅಂಥ ಯಾವ ಸಣ್ಣ ಜೀವಿಯನ್ನೂ ತಿಂದು ನಿಮ್ಮನ್ನು ನೀವೇ ಹೇಸಿಕೆ ಮಾಡಿಕೊಂಡು ಅಶುದ್ಧರಾಗಬಾರದು.
44
ಯಾಕಂದರೆ ನಾನು ನಿಮ್ಮ ದೇವರಾದ ಯೆಹೋವನು; ನೀವು ದೇವಜನರಿಗೆ ತಕ್ಕಂತಿರಬೇಕು. ನಾನು ಪರಿಶುದ್ಧನಾಗಿರುವದರಿಂದ ನೀವೂ ಪರಿಶುದ್ಧರಾಗಿರಬೇಕು. ನೆಲದ ಮೇಲೆ ಹರಿದಾಡುವ ಯಾವ ಜಂತುವಿನಿಂದಾದರೂ ನೀವು ನಿಮ್ಮನ್ನು ಅಶುದ್ಧಮಾಡಿಕೊಳ್ಳಬಾರದು.
45
ನಿಮ್ಮ ದೇವರಾಗಿರುವದಕ್ಕೆ ನಿಮ್ಮನ್ನು ಐಗುಪ್ತ ದೇಶದೊಳಗಿಂದ ಬರಮಾಡಿದ ಯೆಹೋವನೇ ನಾನು; ನಾನು ಪರಿಶುದ್ಧನಾಗಿರುವದರಿಂದ ನೀವೂ ಪರಿಶುದ್ಧರಾಗಿರಬೇಕು.
46
ಇದೇ ಪಶುಪಕ್ಷಿ ಜಲಚರ ಕ್ರಿವಿುಕೀಟಗಳ ವಿಷಯವಾದ ವಿಧಿ.
47
ಇದರಿಂದ ಶುದ್ಧಾಶುದ್ಧಗಳನ್ನೂ ಭಕ್ಷ್ಯಾಭಕ್ಷ್ಯಗಳನ್ನೂ ವಿವೇಚಿಸುವದಕ್ಕೆ ನಿಮ್ಮಿಂದಾಗುವದು.
← Chapter 10
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 12 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27