bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Matthew 1
Matthew 1
Kannada BSI JV (ಕನ್ನಡ ಸತ್ಯವೇದವು J.V. (BSI))
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 2 →
1
ಯೇಸು ಕ್ರಿಸ್ತನ ವಂಶಾವಳಿಯು. ಆತನು ದಾವೀದನ ವಂಶದವನು. ದಾವೀದನು ಅಬ್ರಹಾಮನ ವಂಶದವನು.
2
ಅಬ್ರಹಾಮನು ಇಸಾಕನನ್ನು ಪಡೆದನು. ಇಸಾಕನು ಯಾಕೋಬನನ್ನು ಪಡೆದನು. ಯಾಕೋಬನು ಯೆಹೂದನನ್ನೂ ಅವನ ಅಣ್ಣತಮ್ಮಂದಿರನ್ನೂ ಪಡೆದನು.
3
ಯೆಹೂದನು ತಾಮಾರಳಲ್ಲಿ ಪೆರೆಚನನ್ನೂ ಜೆರಹನನ್ನೂ ಪಡೆದನು. ಪೆರೆಚನು ಹೆಚ್ರೋನನನ್ನು ಪಡೆದನು.
4
ಹೆಚ್ರೋನನು ಅರಾಮನನ್ನು ಪಡೆದನು. ಅರಾಮನು ಅಮ್ಮೀನಾದಾಬನನ್ನು ಪಡೆದನು. ಅಮ್ಮೀನಾದಾಬನು ನಹಶೋನನನ್ನು ಪಡೆದನು. ನಹಶೋನನು ಸಲ್ಮೋನನನ್ನು ಪಡೆದನು.
5
ಸಲ್ಮೋನನು ರಾಹಾಬಳಲ್ಲಿ ಬೋವಜನನ್ನು ಪಡೆದನು. ಬೋವಜನು ರೂತಳಲ್ಲಿ ಓಬೇದನನ್ನು ಪಡೆದನು. ಓಬೇದನು ಇಷಯನನ್ನು ಪಡೆದನು.
6
ಇಷಯನು ಅರಸನಾದ ದಾವೀದನನ್ನು ಪಡೆದನು. ದಾವೀದನು ಊರೀಯನ ಹೆಂಡತಿಯಾಗಿದ್ದವಳಲ್ಲಿ ಸೊಲೊಮೋನನನ್ನು ಪಡೆದನು.
7
ಸೊಲೊಮೋನನು ರೆಹಬ್ಬಾಮನನ್ನು ಪಡೆದನು. ರೆಹಬ್ಬಾಮನು ಅಬೀಯನನ್ನು ಪಡೆದನು. ಅಬೀಯನು ಆಸನನ್ನು ಪಡೆದನು.
8
ಆಸನು ಯೆಹೋಷಾಫಾಟನನ್ನು ಪಡೆದನು. ಯೆಹೋಷಾಫಾಟನು ಯೆಹೋರಾಮನನ್ನು ಪಡೆದನು. ಯೆಹೋರಾಮನು ಉಜ್ಜೀಯನನ್ನು ಪಡೆದನು.
9
ಉಜ್ಜೀಯನು ಯೋತಾಮನನ್ನು ಪಡೆದನು. ಯೋತಾಮನು ಆಹಾಜನನ್ನು ಪಡೆದನು. ಆಹಾಜನು ಹಿಜ್ಕೀಯನನ್ನು ಪಡೆದನು.
10
ಹಿಜ್ಕೀಯನು ಮನಸ್ಸೆಯನ್ನು ಪಡೆದನು. ಮನಸ್ಸೆಯು ಆಮೋನನನ್ನು ಪಡೆದನು.
11
ಆಮೋನನು ಯೋಷೀಯನನ್ನು ಪಡೆದನು. ಪ್ರಜೆಯು ಬಾಬೆಲಿಗೆ ಸೆರೆಹೋದ ಸಮಯದಲ್ಲಿ ಯೋಷೀಯನು ಯೆಕೊನ್ಯನನ್ನೂ ಅವನ ಅಣ್ಣತಮ್ಮಂದಿರನ್ನೂ ಪಡೆದನು.
12
ಬಾಬೆಲಿಗೆ ಸೆರೆಹೋದ ಮೇಲೆ ಯೆಕೊನ್ಯನು ಶೆಯಲ್ತಿಯೇಲನನ್ನು ಪಡೆದನು. ಶೆಯಲ್ತಿಯೇಲನು ಜೆರುಬ್ಬಾಬೆಲನನ್ನು ಪಡೆದನು.
13
ಜೆರುಬ್ಬಾಬೆಲನು ಅಬಿಹೂದನನ್ನು ಪಡೆದನು. ಅಬಿಹೂದನು ಎಲ್ಯಕೀಮನನ್ನು ಪಡೆದನು. ಎಲ್ಯಕೀಮನು ಅಜೋರನನ್ನು ಪಡೆದನು.
14
ಅಜೋರನು ಸದೋಕನನ್ನು ಪಡೆದನು. ಸದೋಕನು ಅಖೀಮನನ್ನು ಪಡೆದನು. ಅಖೀಮನು ಎಲಿಹೂದನನ್ನು ಪಡೆದನು.
15
ಎಲಿಹೂದನು ಎಲಿಯಾಜರನನ್ನು ಪಡೆದನು. ಎಲಿಯಾಜರನು ಮತ್ತಾನನನ್ನು ಪಡೆದನು. ಮತ್ತಾನನು ಯಾಕೋಬನನ್ನು ಪಡೆದನು.
16
ಯಾಕೋಬನು ಮರಿಯಳ ಗಂಡನಾದ ಯೋಸೇಫನನ್ನು ಪಡೆದನು. ಈ ಮರಿಯಳಲ್ಲಿ ಕ್ರಿಸ್ತನೆಂಬ ಯೇಸು ಹುಟ್ಟಿದನು.
17
ಹೀಗೆ ಅಬ್ರಹಾಮನಿಂದ ದಾವೀದನವರೆಗೂ ಒಟ್ಟು ಹದಿನಾಲ್ಕು ತಲೆಗಳು. ದಾವೀದ ಮೊದಲುಗೊಂಡು ಬಾಬೆಲಿಗೆ ಸೆರೆಹೋಗುವವರೆಗೂ ಹದಿನಾಲ್ಕು ತಲೆಗಳು. ಬಾಬೆಲಿಗೆ ಸೆರೆಹೋದಂದಿನಿಂದ ಕ್ರಿಸ್ತನವರೆಗೂ ಹದಿನಾಲ್ಕು ತಲೆಗಳು.
18
ಯೇಸು ಕ್ರಿಸ್ತನ ಜನನವು ಹೇಗಾಯಿತಂದರೆ - ಆತನ ತಾಯಿಯಾದ ಮರಿಯಳನ್ನು ಯೋಸೇಫನಿಗೆ ನಿಶ್ಚಯಮಾಡಿರಲಾಗಿ ಅವರು ಕೂಡುವದಕ್ಕಿಂತ ಮುಂಚೆ ಆಕೆಯು ಪವಿತ್ರಾತ್ಮನಿಂದ ಬಸುರಾಗಿದ್ದದ್ದು ತಿಳಿದುಬಂತು.
19
ಆದರೆ ಆಕೆಯ ಗಂಡನಾದ ಯೋಸೇಫನು ಸಜ್ಜನನಾಗಿದ್ದು ಆಕೆಯನ್ನು ಬೈಲಿಗೆ ತರುವದಕ್ಕೆ ಮನಸ್ಸಿಲ್ಲದೆ, ಯಾರಿಗೂ ತಿಳಿಯದಂತೆ ಆಕೆಯನ್ನು ಬಿಟ್ಟುಬಿಡಬೇಕೆಂದಿದ್ದನು.
20
ಅವನು ಇದನ್ನು ಆಲೋಚಿಸುತ್ತಿರುವಾಗ ಕರ್ತನ ದೂತನು ಅವನಿಗೆ ಕನಸಿನಲ್ಲಿ ಕಾಣಿಸಿಕೊಂಡು - ಎಲೈ ಯೋಸೇಫನೇ, ದಾವೀದನ ವಂಶದವನೇ, ನಿನ್ನ ಹೆಂಡತಿಯಾದ ಮರಿಯಳನ್ನು ಸೇರಿಸಿಕೊಳ್ಳುವದಕ್ಕೆ ಅಂಜಬೇಡ. ಆಕೆಯ ಗರ್ಭವು ಪವಿತ್ರಾತ್ಮದಿಂದಲೇ ಆದದ್ದು.
21
ಆಕೆಯು ಒಬ್ಬ ಮಗನನ್ನು ಹಡೆಯುವಳು; ನೀನು ಆತನಿಗೆ ಯೇಸು ಎಂದು ಹೆಸರಿಡಬೇಕು; ಯಾಕಂದರೆ ಆತನೇ ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ಕಾಯುವನು ಅಂದನು.
22
ಕರ್ತನು ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರುವಂತೆ ಇದೆಲ್ಲಾ ನಡೆಯಿತು; ಆ ಮಾತು ಏನಂದರೆ -
23
ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನನ್ನು ಹಡೆಯುವಳು; ಆತನಿಗೆ ಇಮ್ಮಾನುವೇಲ್ ಎಂದು ಹೆಸರಿಡುವರು ಎಂಬದು. ದೇವರು ನಮ್ಮ ಕೂಡ ಇದ್ದಾನೆಂದು ಈ ಹೆಸರಿನ ಅರ್ಥ.
24
ಆಗ ಯೋಸೇಫನು ನಿದ್ದೆ ತಿಳಿದೆದ್ದು ಕರ್ತನ ದೂತನು ಅಪ್ಪಣೆಕೊಟ್ಟ ಹಾಗೆ ತನ್ನ ಹೆಂಡತಿಯನ್ನು ಸೇರಿಸಿಕೊಂಡನು.
25
ಆದರೆ ಆಕೆಯು ಗಂಡುಮಗನನ್ನು ಹಡೆಯುವ ತನಕ ಆಕೆಯನ್ನು ಅರಿಯಲಿಲ್ಲ. ಮಗುವಿಗೆ ಯೇಸುವೆಂದು ಹೆಸರಿಟ್ಟನು.
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 2 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28