bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Micah 1
Micah 1
Kannada BSI JV (ಕನ್ನಡ ಸತ್ಯವೇದವು J.V. (BSI))
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 2 →
1
ಯೆಹೂದದ ಅರಸನಾದ ಯೋಥಾಮ, ಆಹಾಜ, ಹಿಜ್ಕೀಯ, ಇವರ ಕಾಲದಲ್ಲಿ ಸಮಾರ್ಯದ ಮತ್ತು ಯೆರೂಸಲೇವಿುನ ವಿಷಯವಾಗಿ ಮೋರೆಷೆತ್ ಊರಿನವನಾದ ಮೀಕನಿಗೆ ಕಂಡುಬಂದ ಯೆಹೋವನ ವಾಕ್ಯ.
2
ಜನಾಂಗಗಳೇ, ನೀವೆಲ್ಲರೂ ಕೇಳಿರಿ; ಭೂಮಂಡಲವೇ, ಭೂವಿುಯಲ್ಲಿರುವ ಸಮಸ್ತವೇ, ಕಿವಿಗೊಡಿರಿ! ಕರ್ತನು, ಕರ್ತನಾದ ಯೆಹೋವನು ತನ್ನ ಪವಿತ್ರಾಲಯದೊಳಗಿಂದ ನಿಮಗೆ ವಿರುದ್ಧವಾಗಿ ಸಾಕ್ಷಿ ಕೊಡುತ್ತಾನೆ.
3
ಇಗೋ, ಯೆಹೋವನು ತನ್ನ ಸ್ಥಾನದಿಂದ ಹೊರಟು ಇಳಿದುಬರುತ್ತಿದ್ದಾನೆ, ಭೂವಿುಯ ಉನ್ನತಪ್ರದೇಶಗಳಲ್ಲಿ ನಡೆಯುತ್ತಾನೆ.
4
ಬೆಂಕಿಗೆ ಕರಗಿದ ಮೇಣದಂತೆಯೂ ಜರಿಯಲ್ಲಿ ಹೊಯ್ದ ನೀರಿನ ಹಾಗೂ ಪರ್ವತಗಳು ಆತನ ಹೆಜ್ಜೆಗೆ ಕರಗಿ ಹರಿಯುತ್ತವೆ, ತಗ್ಗುಗಳು ಸೀಳಿಹೋಗುತ್ತವೆ.
5
ಇದಕ್ಕೆಲ್ಲಾ ಕಾರಣವು ಯಾಕೋಬಿನ ದ್ರೋಹವೇ, ಇಸ್ರಾಯೇಲ್ ವಂಶದ ಪಾಪಗಳೇ, ಯಾಕೋಬಿನ ದ್ರೋಹವೇನು? ಸಮಾರ್ಯವಲ್ಲವೇ. ಯೆಹೂದದ [ಕೆಟ್ಟ] ಪೂಜಾಸ್ಥಾನಗಳು ಯಾವವು? ಯೆರೊಸಲೇಮಲ್ಲವೇ.
6
ಆದಕಾರಣ ನಾನು ಸಮಾರ್ಯವನ್ನು ಹೊಲದಲ್ಲಿನ ಹಾಳು ದಿಬ್ಬವನ್ನಾಗಿಯೂ ದ್ರಾಕ್ಷೆಯ ತೋಟದ ಮಡಿಗಳನ್ನಾಗಿಯೂ ಮಾಡುವೆನು; ಅದರ ಕಲ್ಲುಗಳನ್ನು ತಗ್ಗಿಗೆ ಸುರಿದು ಬಿಡುವೆನು; ಅದರ ಅಸ್ತಿವಾರಗಳನ್ನು ಬೈಲುಮಾಡುವೆನು.
7
ಅದರ ಎರಕದ ಬೊಂಬೆಗಳೆಲ್ಲಾ ಒಡೆಯಲ್ಪಡುವವು; ಅದರ ಸಮಸ್ತ ಸಂಪಾದನೆಯು ಸುಟ್ಟುಹೋಗುವದು, ಅದರ ಸಕಲ ವಿಗ್ರಹಗಳನ್ನು ಹಾಳುಮಾಡುವೆನು; ಅದು ಸೂಳೆತನದ ಸಂಪಾದನೆಯಾಗಿ ಕೂಡಿಸಿಟ್ಟುಕೊಂಡವುಗಳು, ಸೂಳೆತನದ ಸಂಪಾದನೆಯಾಗಿಯೇ ಪರರಪಾಲಾಗುವವು.
8
ಇದಕ್ಕಾಗಿ ನಾನು ಅರಿಚಾಟ ಕಿರಿಚಾಟ ಮಾಡುವೆನು; ಬರಿಗಾಲಾಗಿಯೂ ಬೆತ್ತಲೆಯಾಗಿಯೂ ನಡೆಯುವೆನು; ನರಿಗಳಂತೆ ಅರಚಿಕೊಳ್ಳುವೆನು, ಉಷ್ಟ್ರಪಕ್ಷಿಗಳ ಹಾಗೆ ಕಿರಚಿಕೊಳ್ಳುವೆನು.
9
ಸಮಾರ್ಯಕ್ಕೆ ಬಿದ್ದ ಪೆಟ್ಟು ಗಡಸು; ಅದು ಯೆಹೂದಕ್ಕೂ ತಾಕಿದೆ; ನನ್ನ ಜನರ ಆಲೋಚನಾಸ್ಥಾನವಾದ ಯೆರೂಸಲೇವಿುಗೆ ಮುಟ್ಟಿದೆ.
10
ಇದನ್ನು ಗತ್ ಊರಿನಲ್ಲಿ ತಿಳಿಸಬೇಡಿರಿ; ಅಳಲೇಬೇಡಿರಿ; ಬೇತ್ಲೆಯಪ್ರದಲ್ಲಿ ಧೂಳಿನೊಳಗೆ ಹೊರಳಾಡಿರಿ.
11
ಶಾಫೀರಿನವರೇ, ಬೆತ್ತಲೆಯಾಗಿ ಅವಮಾನಪಟ್ಟು ತೊಲಗಿರಿ; ಚಾನಾನಿನವರು ಹೊರಡರು; ಬೇತೇಚೆಲಿನ ಗೋಳಾಟವು ಅದರ ಬೆಂಬಲವನ್ನು ನಿಮಗೆ ತಪ್ಪಿಸುವದು.
12
ಕೇಡು ಯೆಹೋವನಿಂದಿಳಿದು ಯೆರೂಸಲೇವಿುನ ಪುರದ್ವಾರಕ್ಕೆ ತಗಲಿದ ಕಾರಣ ಮಾರೋತಿನವರು ಮೇಲುಂಟಾಗುವದಿಲ್ಲವೋ ಎಂದು ವೇದನೆಪಡುತ್ತಾರೆ.
13
ಲಾಕೀಷಿನವರೇ, ಅಶ್ವಗಳನ್ನು ರಥಕ್ಕೆ ಕಟ್ಟಿರಿ; ನಿಮ್ಮ ಊರೇ ಚೀಯೋನ್ ನಗರಿಯ ಪಾಪಕ್ಕೆ ಮೂಲ; ಹೌದು, ಇಸ್ರಾಯೇಲಿನ ದ್ರೋಹಗಳು ನಿಮ್ಮಲ್ಲಿಯೇ ಹುಟ್ಟಿಬಂದವು.
14
ಆದಕಾರಣ ನೀವು ಮೋರೆಷತ್ಗತ್ ಊರಿಗೆ ಬಳುವಳಿ ಕೊಡಬೇಕಾಗುವದು; ಅಕ್ಜೀಬಿನ ಮನೆಗಳಿಂದ ಇಸ್ರಾಯೇಲಿನ ಅರಸರಿಗೆ ಮೋಸವಾಗುವದು.
15
ಮಾರೇಷದವರೇ, ನಿಮ್ಮನ್ನು ವಶಮಾಡಿಕೊಳ್ಳತಕ್ಕವನನ್ನು ಇನ್ನು ನಿಮ್ಮ ಬಳಿಗೆ ಬರಮಾಡುವೆನು; ಇಸ್ರಾಯೇಲಿನ ಮಹಿಮೆಯವರು ಅದುಲ್ಲಾವಿುಗೆ ಸೇರುವರು.
16
[ಯೆಹೂದವೇ,] ನಿನ್ನ ಮುದ್ದು ಮಕ್ಕಳಿಗಾಗಿ ಕ್ಷೌರಮಾಡಿಸಿಕೋ, ತಲೆಬೋಳಿಸಿಕೋ; ನಿನ್ನ ಬೋಳುತನವನ್ನು ರಣಹದ್ದಿನ ಹಾಗೆ ವಿಸ್ತರಿಸಿಕೋ; ಅವರು ನಿನ್ನ ಕಡೆಯಿಂದ ಸೆರೆಹೋಗಿದ್ದಾರಲ್ಲಾ!
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 2 →
All chapters:
1
2
3
4
5
6
7