bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Obadiah 1
Obadiah 1
Kannada BSI JV (ಕನ್ನಡ ಸತ್ಯವೇದವು J.V. (BSI))
Jump to:
Chapter 1
1
ಓಬದ್ಯನಿಗಾದ ದೈವದರ್ಶನ. ಕರ್ತನಾದ ಯೆಹೋವನು ಎದೋವಿುನ ವಿಷಯವಾಗಿ ನುಡಿದ ವಾಕ್ಯ. ಯೆಹೋವನಿಂದ ಬಂದ ಸಮಾಚಾರವನ್ನು ಕೇಳಿದ್ದೇವೆ; ಆತನು ದೂತನ ಮೂಲಕ ಜನಾಂಗಗಳಿಗೆ ಹೀಗೆ ಹೇಳಿಕಳುಹಿಸಿದ್ದಾನೆ - ಹೊರಡಿರಿ, ಯುದ್ಧಕ್ಕೆ ಹೊರಟು ಎದೋವಿುನ ಮೇಲೆ ಬೀಳೋಣ.
2
[ಎದೋಮೇ,] ಇಗೋ, ನೀನು ಜನಾಂಗಗಳಲ್ಲಿ ಹೀನವಾಗುವಂತೆ ಮಾಡಿದ್ದೇನೆ, ಬಹು ತಾತ್ಸಾರಕ್ಕೆ ಈಡಾಗಿದ್ದೀ.
3
ಉನ್ನತಸ್ಥಾನದಲ್ಲಿ ಬಂಡೆಯ ಬಿರುಕುಗಳೊಳಗೆ ವಾಸಿಸುತ್ತಾ - ನನ್ನನ್ನು ನೆಲಕ್ಕೆ ಇಳಿಸಬಲ್ಲವರು ಯಾರು ಅಂದುಕೊಳ್ಳುವ ಜನವೇ, ನಿನ್ನೆದೆಯ ಹೆಮ್ಮೆಯು ನಿನ್ನನ್ನು ಮೋಸಗೊಳಿಸಿದೆ;
4
ನೀನು ಹದ್ದಿನಂತೆ ಮೇಲಕ್ಕೆ ಏರಿದರೂ ನಿನ್ನ ಗೂಡು ನಕ್ಷತ್ರಮಂಡಲದಲ್ಲಿ ನೆಲೆಗೊಂಡಿದ್ದರೂ ಅಲ್ಲಿಂದ ನಿನ್ನನ್ನು ಇಳಿಸಿಬಿಡುವೆನು; ಇದು ಯೆಹೋವನ ನುಡಿ.
5
ಕಳ್ಳರು ನಿನ್ನಲ್ಲಿ ನುಗ್ಗಿದರೆ, ರಾತ್ರಿವೇಳೆಯಲ್ಲಿ ಪಂಜುಗಳ್ಳರು ನಿನ್ನ ಮೇಲೆ ಬಿದ್ದರೆ ಬೇಕಾದಷ್ಟು ಮಾತ್ರ ದೋಚಿಕೊಂಡು ಹೋಗುವರಲ್ಲವೆ. (ಆಹಾ, ನೀನು ಎಷ್ಟೋ ಭಂಗಪಟ್ಟಿದ್ದೀ!) ದ್ರಾಕ್ಷೆಯ ಹಣ್ಣನ್ನು ಕೀಳುವವರು ನಿನ್ನ ಕಡೆಗೆ ಬಂದರೆ ಹಕ್ಕಲನ್ನು ಉಳಿಸುವದಿಲ್ಲವೋ?
6
ಓಹೋ, ಏಸಾವಿನ ಆಸ್ತಿಯು ಎಷ್ಟೋ ಹುಡುಕಲ್ಪಟ್ಟಿದೆ! ಅದರ ನಿಧಿನಿಕ್ಷೇಪಗಳು ಎಷ್ಟೋ ತಡಕಲ್ಪಟ್ಟಿವೆ!
7
ನಿನ್ನ ವಿುತ್ರಮಂಡಲಿಯವರೆಲ್ಲರು ನಿನ್ನನ್ನು ನಿನ್ನ ಎಲ್ಲೆಯ ಆಚೆಗೆ ನೂಕಿಬಿಟ್ಟಿದ್ದಾರೆ; ನಿನ್ನ ಆಪ್ತರು ನಿನ್ನನ್ನು ವಂಚಿಸಿ ಸೋಲಿಸಿದ್ದಾರೆ, ನಿನ್ನ ಅನ್ನ [ತಿಂದವರು] ಅವಿವೇಕಿಯಾದ ನಿನಗೆ ಉರುಲೊಡ್ಡಿದ್ದಾರೆ;
8
ಯೆಹೋವನು ಇಂತೆನ್ನುತ್ತಾನೆ - ಆ ದಿನದಲ್ಲಿ ನಾನು ಎದೋವಿುನೊಳಗಿಂದ ಜ್ಞಾನಿಗಳನ್ನು ಅಳಿಸದೆ ಬಿಟ್ಟೇನೋ? ಏಸಾವಿನ ಪರ್ವತದೊಳಗಿಂದ ವಿವೇಕವನ್ನು ಕಿತ್ತುಹಾಕದೆ ಇದ್ದೇನೋ?
9
ತೇಮಾನೇ, ನಿನ್ನ ಶೂರರು ಧೈರ್ಯಗೆಟ್ಟು ಎಲ್ಲರೂ ಹತರಾಗಿ ಏಸಾವಿನ ಪರ್ವತದೊಳಗಿಂದ ನಿರ್ಮೂಲರಾಗುವರು.
10
ನೀನು ನಿನ್ನ ತಮ್ಮನಾದ ಯಾಕೋಬನಿಗೆ ಮಾಡಿದ ಹಿಂಸೆಯ ನಿವಿುತ್ತ ಅವಮಾನವು ನಿನ್ನನ್ನು ಕವಿಯುವದು; ನಿತ್ಯನಾಶನಕ್ಕೆ ಈಡಾಗುವಿ.
11
ನೀನು ಸುಮ್ಮನೆ ಎದುರುನಿಂತ ದಿನದಲ್ಲಿ, ಅಂದರೆ ಅನ್ಯರು ನಿನ್ನ ತಮ್ಮನ ಆಸ್ತಿಯನ್ನು ಕೊಳ್ಳೆಹೊಡೆದ ದಿನದಲ್ಲಿ ಮ್ಲೇಚ್ಫರು ಅವನ ಪುರದ್ವಾರಗಳಲ್ಲಿ ಪ್ರವೇಶಿಸಿ ಯೆರೂಸಲೇವಿುನ ಸೊತ್ತಿಗಾಗಿ ಚೀಟುಹಾಕಿದ ದಿನದಲ್ಲಿ ನೀನೂ ಅವರಂತೆ ಇದ್ದಿ.
12
ನಿನ್ನ ತಮ್ಮನ ದುರ್ದಿನದಲ್ಲಿ, ಅವನ ಅಪಾಯ ಕಾಲದಲ್ಲಿ ನೀನು ಸುಮ್ಮನೆ ನೋಡುತ್ತಿರಬಾರದಾಗಿತ್ತು; ಯೆಹೂದ್ಯರ ನಾಶನದಿವಸದಲ್ಲಿ ಹಿಗ್ಗಬಾರದಾಗಿತ್ತು; ಅವರ ಇಕ್ಕಟ್ಟಿನ ವೇಳೆಯಲ್ಲಿ ಬಾಯಿ ಕಿಸಿಯ ಬಾರದಾಗಿತ್ತು.
13
ನನ್ನ ಜನರ ವಿಪತ್ಕಾಲದಲ್ಲಿ ಅವರ ಪುರದ್ವಾರದೊಳಗೆ ಪ್ರವೇಶಿಸಬಾರದಾಗಿತ್ತು; ಅವರ ವಿಪತ್ಕಾಲದಲ್ಲಿ ಅವರ ಕೇಡಿಗೆ ನಿನ್ನಂಥವನ ಕಣ್ಣು ಅರಳಬಾರದಾಗಿತ್ತು; ಅವರ ವಿಪತ್ಕಾಲದಲ್ಲಿ ಅವರ ಸೊತ್ತಿಗೆ ನೀನು ಕೈಹಾಕಬಾರದಾಗಿತ್ತು;
14
ಓಡಿಹೋಗುವವರನ್ನು ಕೊಲ್ಲುವದಕ್ಕೆ ದಾರಿಗಳು ಕೂಡುವ ಸ್ಥಳದಲ್ಲಿ ನಿಲ್ಲಬಾರದಾಗಿತ್ತು; ಇಕ್ಕಟ್ಟಿನ ವೇಳೆಯಲ್ಲಿ ತಪ್ಪಿಸಿಕೊಂಡವರನ್ನು ಶತ್ರುವಿಗೆ ಒಪ್ಪಿಸಬಾರದಾಗಿತ್ತು.
15
ಯೆಹೋವನ ದಿನವು ಸಮಸ್ತ ಜನಾಂಗಗಳಿಗೆ ಸಮೀಪಿಸಿದೆ; ನೀನು ಮಾಡಿದ್ದೇ ನಿನಗಾಗುವದು; ನಿನ್ನ ಕೃತ್ಯವೇ ನಿನ್ನ ತಲೆಗೆ ಬರುವದು.
16
[ನನ್ನ ಜನರೇ,] ನೀವು ನನ್ನ ಪವಿತ್ರ ಪರ್ವತದಲ್ಲಿ [ವಿಪತ್ಪಾನಕವನ್ನು] ಪಾನಮಾಡಿದಂತೆಯೇ ಸಕಲ ಜನಾಂಗಗಳೂ ನಿತ್ಯವಾಗಿ ಪಾನಮಾಡುವವು; ಹೌದು, ಕುಡಿದು ನುಂಗಿಬಿಟ್ಟು ಇಲ್ಲದ ಹಾಗಾಗುವವು.
17
ಆದರೆ ಚೀಯೋನ್ ಪರ್ವತದಲ್ಲಿ ಅನೇಕರು ಉಳಿದಿರುವರು; ಆ ಪರ್ವತವು ಮೀಸಲಾಗಿರುವದು; ಯಾಕೋಬನ ವಂಶದವರು ತಮ್ಮ ಸ್ವಾಸ್ತ್ಯಗಳನ್ನು ಅನುಭವಿಸುವರು.
18
ಯಾಕೋಬನ ವಂಶವು ಅಗ್ನಿ, ಯೋಸೇಫನ ವಂಶವು ಜ್ವಾಲೆ, ಏಸಾವನ ವಂಶವು ಕೂಳೆ; ಆ ಅಗ್ನಿಜ್ವಾಲೆಗಳು ಕೂಳೆಯಲ್ಲಿ ಧಗಧಗಿಸುತ್ತಾ ಅದನ್ನು ನುಂಗಿಬಿಡುವವು; ಏಸಾವನ ವಂಶದವರಲ್ಲಿ ಯಾರೂ ಉಳಿಯರು; ಯೆಹೋವನೇ ಇದನ್ನು ನುಡಿದಿದ್ದಾನೆ.
19
ಆಗ ದಕ್ಷಿಣಪ್ರಾಂತದವರು ಏಸಾವಿನ ಪರ್ವತವನ್ನು ಸ್ವಾಧೀನಮಾಡಿಕೊಳ್ಳುವರು; ಇಳಕಲಿನ ಪ್ರದೇಶದವರು ಫಿಲಿಷ್ಟಿಯವನ್ನೂ ಎಫ್ರಾಯೀವಿುನ ಭೂವಿುಯನ್ನೂ ಸಮಾರ್ಯದ ನೆಲವನ್ನೂ ವಶಮಾಡಿಕೊಳ್ಳುವರು; ಬೆನ್ಯಾಮೀನಿನವರು ಗಿಲ್ಯಾದನ್ನು ಸ್ವತಂತ್ರಿಸಿಕೊಳ್ಳುವರು;
20
ಸೆರೆಹೋಗಿರುವ ಆ ದಂಡಿನ ಇಸ್ರಾಯೇಲ್ಯರು ಕಾನಾನ್ಯರ ದೇಶವನ್ನು ಚಾರೆಪತಿನವರೆಗೆ ತಮ್ಮದಾಗಿ ಮಾಡಿಕೊಳ್ಳುವರು; ಸೆಪಾರದಿನಲ್ಲಿ ಸೆರೆಯಾಗಿರುವ ಯೆರೂಸಲೇವಿುನವರು ದಕ್ಷಿಣಪ್ರಾಂತದ ಪಟ್ಟಣಗಳನ್ನು ವಶಪಡಿಸಿಕೊಳ್ಳುವರು.
21
ರಕ್ಷಕರು ಚೀಯೋನ್ ಪರ್ವತದಲ್ಲಿ ಎದ್ದು ಏಸಾವಿನ ಪರ್ವತವನ್ನು ಆಳುವರು; ಆಗ ರಾಜ್ಯವು ಯೆಹೋವನದಾಗಿರುವದು.
Jump to:
Chapter 1
All chapters:
1