bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Romans 15
Romans 15
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 14
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 16 →
1
ದೃಢವಾದ ನಂಬಿಕೆಯುಳ್ಳ ನಾವು ನಮ್ಮ ಸುಖವನ್ನು ನೋಡಿಕೊಳ್ಳದೆ ದೃಢವಿಲ್ಲದವರ ಅನುಮಾನಗಳನ್ನು ಸಹಿಸಿಕೊಳ್ಳಬೇಕು.
2
ನಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನ ಹಿತವನ್ನೂ ಭಕ್ತಿವೃದ್ಧಿಯನ್ನೂ ಅಪೇಕ್ಷಿಸುವವನಾಗಿ ಅವನ ಸುಖವನ್ನು ನೋಡಿಕೊಳ್ಳಲಿ.
3
ಯಾಕಂದರೆ ಕ್ರಿಸ್ತನು ಸಹ ತನ್ನ ಸುಖವನ್ನು ನೋಡಿಕೊಳ್ಳಲಿಲ್ಲ. ದೇವರೇ, ನಿನ್ನನ್ನು ದೂಷಿಸಿದವರ ದೂಷಣೆಗಳು ನನ್ನ ಮೇಲೆ ಬಂದವು ಎಂಬದಾಗಿ ಬರೆದಿರುವಂತೆ ಆತನಿಗೆ ಸಂಭವಿಸಿತಲ್ಲಾ.
4
ಪೂರ್ವದಲ್ಲಿ ಬರೆದದ್ದೆಲ್ಲಾ ನಮ್ಮನ್ನು ಉಪದೇಶಿಸುವದಕ್ಕಾಗಿ ಬರೆಯಲ್ಪಟ್ಟಿತು. ನಾವು ಓದಿ ಸ್ಥಿರಚಿತ್ತವನ್ನೂ ಆದರಣೆಯನ್ನೂ ಹೊಂದಿ ರಕ್ಷಣೆಯ ನಿರೀಕ್ಷೆಯುಳ್ಳವರಾಗಿರುವಂತೆ ಆ ಗ್ರಂಥಗಳು ಬರೆಯಲ್ಪಟ್ಟವು.
5
ಆ ಸ್ಥಿರಚಿತ್ತವನ್ನೂ ಆದರಣೆಯನ್ನೂ ಕೊಡುವ ದೇವರು ನೀವು ಕ್ರಿಸ್ತ ಯೇಸುವನ್ನು ಅನುಸರಿಸಿ ಒಂದೇ ಮನಸ್ಸುಳ್ಳವರಾಗಿರುವಂತೆ ನಿಮಗೆ ದಯಪಾಲಿಸಲಿ.
6
ಹೀಗೆ ನೀವು ಏಕ ಮನಸ್ಸಿನಿಂದ ಒಮ್ಮುಖವಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯಾದ ದೇವರನ್ನು ಕೊಂಡಾಡುವಿರಿ.
7
ಆದದರಿಂದ ಕ್ರಿಸ್ತನು ನಿಮ್ಮನ್ನು ಸೇರಿಸಿಕೊಂಡಂತೆ ನೀವು ಸಹ ಒಬ್ಬರನ್ನೊಬ್ಬರು ಸೇರಿಸಿಕೊಂಡು ದೇವರ ಮಹಿಮೆಯನ್ನು ಪ್ರಕಾಶಪಡಿಸಿರಿ.
8
ಯಾಕಂದರೆ ನಾನು ಹೇಳುವದೇನಂದರೆ - ಕ್ರಿಸ್ತನು ಪಿತೃಗಳಿಗೆ ಉಂಟಾದ ದೇವರ ವಾಗ್ದಾನಗಳನ್ನು ದೃಢಪಡಿಸಿ ಆತನ ಸತ್ಯವನ್ನು ತೋರಿಸುವದಕ್ಕಾಗಿ ಸುನ್ನತಿಯೆಂಬ ಸಂಸ್ಕಾರಕ್ಕೆ ಒಳಗಾದನು;
9
ಜನಾಂಗಗಳಾದರೆ ಕಾರುಣ್ಯದ ನಿವಿುತ್ತ ದೇವರನ್ನು ಕೊಂಡಾಡುತ್ತಾರೆಂಬದೇ. ಇದಕ್ಕೆ ಸರಿಯಾಗಿ ಶಾಸ್ತ್ರದಲ್ಲಿಯೂ ಬರೆದದೆ. ಹೇಗಂದರೆ - ಈ ಕಾರಣದಿಂದ ಅನ್ಯಜನಗಳ ಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು; ನಿನ್ನ ನಾಮವನ್ನು ಸಂಕೀರ್ತಿಸುವೆನು ಎಂದೂ
10
ಇನ್ನೊಂದು ಸ್ಥಳದಲ್ಲಿ - ಜನಾಂಗಗಳಿರಾ, ದೇವರ ಜನರೊಡನೆ ಉಲ್ಲಾಸಪಡಿರಿ ಎಂದೂ
11
ಬೇರೊಂದು ಸ್ಥಳದಲ್ಲಿ - ಸರ್ವಜನಾಂಗಗಳೇ, ಕರ್ತನನ್ನು ಕೀರ್ತಿಸಿರಿ, ಸಮಸ್ತಪ್ರಜೆಗಳೂ ಆತನನ್ನು ಸಂಕೀರ್ತಿಸಲಿ ಎಂದೂ ಬರೆದದೆ.
12
ಮತ್ತೊಂದು ಸ್ಥಳದಲ್ಲಿ ಯೆಶಾಯನು ಹೇಳುವದೇನಂದರೆ - ಇಷಯನ ಅಂಕುರದವನು ಅಂದರೆ ಜನಾಂಗಗಳನ್ನು ಆಳತಕ್ಕವನು ಬರುತ್ತಾನೆ; ಜನಾಂಗಗಳು ಆತನನ್ನು ನಿರೀಕ್ಷಿಸುತ್ತಿರುವರು.
13
ನಿರೀಕ್ಷೆಯ ಮೂಲನಾದ ದೇವರು ನಂಬಿಕೆಯಿಂದುಂಟಾಗುವ ಸಂತೋಷವನ್ನೂ ಮನಶ್ಶಾಂತಿಯನ್ನೂ ನಿಮಗೆ ಪರಿಪೂರ್ಣವಾಗಿ ದಯಪಾಲಿಸಿ ನೀವು ಪವಿತ್ರಾತ್ಮನ ಬಲಗೂಡಿದವರಾಗಿ ನಿರೀಕ್ಷೆಯಲ್ಲಿ ಅಭಿವೃದ್ಧಿಯನ್ನು ಹೊಂದುವಂತೆ ಅನುಗ್ರಹಿಸಲಿ.
14
ನನ್ನ ಸಹೋದರರೇ, ನೀವಂತೂ ಒಳ್ಳೇತನದಿಂದ ಭರಿತರಾಗಿಯೂ ಸಕಲ ಜ್ಞಾನದಿಂದ ತುಂಬಿದವರಾಗಿಯೂ ಒಬ್ಬರಿಗೊಬ್ಬರು ಬುದ್ಧಿ ಹೇಳುವದಕ್ಕೆ ಶಕ್ತರಾಗಿಯೂ ಇದ್ದೀರೆಂದು ನಿಮ್ಮ ವಿಷಯದಲ್ಲಿ ನನಗೂ ಗೊತ್ತಿದೆ.
15
ಆದರೂ ನಿಮಗೆ ಜ್ಞಾಪಕಕೊಡಬೇಕೆಂದು ಅಲ್ಲಲ್ಲಿ ಹೆಚ್ಚಾದ ಧೈರ್ಯದಿಂದ ಬರೆದಿದ್ದೇನೆ. ಯಾಕಂದರೆ ನಾನು ಅನ್ಯಜನರಿಗೋಸ್ಕರ ಯೇಸು ಕ್ರಿಸ್ತನ ಸೇವಕನಾಗುವದಕ್ಕೆ ನನಗೆ ದೇವರ ಅನುಗ್ರಹವಾಯಿತು. ನಾನು ದೇವರ ಸುವಾರ್ತೆಯ ಸೇವೆಯನ್ನು ಯಾಜಕಸೇವೆ ಎಂಬಂತೆ ನಡಿಸಿ ಅನ್ಯದೇಶಸ್ಥರೆಂಬ ಕಾಣಿಕೆಯು ಪವಿತ್ರಾತ್ಮನ ಮೂಲಕವಾಗಿ ಪವಿತ್ರವಾಗಿದ್ದು ದೇವರಿಗೆ ಸಮರ್ಪಕವಾಗುವಂತೆ ಯತ್ನೈಸುವವನಾಗಿದ್ದೇನೆ.
17
ದೇವರ ಸೇವೆಯಲ್ಲಿ ಹೊಗಳಿಕೊಳ್ಳುವದಕ್ಕೆ ಕ್ರಿಸ್ತ ಯೇಸುವಿನಲ್ಲಿ ನನಗೆ ಕಾರಣವುಂಟು.
18
ಕ್ರಿಸ್ತನು ಅನ್ಯಜನಗಳನ್ನು ತನಗೆ ಅಧೀನಮಾಡಿಕೊಳ್ಳುವದಕ್ಕಾಗಿ ನನ್ನ ಕೈಯಿಂದ ಮಾತಿನಲ್ಲಿಯೂ ಕ್ರಿಯೆಯಲ್ಲಿಯೂ ಸೂಚಕಕಾರ್ಯ ಅದ್ಭುತಕಾರ್ಯಗಳ ಬಲದಿಂದಲೂ ಪವಿತ್ರಾತ್ಮನ ಬಲದಿಂದಲೂ ಮಾಡಿಸಿದ ಕಾರ್ಯಗಳನ್ನೇ ಹೊರತು ಬೇರೆ ಯಾವ ಕಾರ್ಯಗಳನ್ನೂ ಹೇಳುವದಕ್ಕೆ ನನಗೆ ಧೈರ್ಯಸಾಲದು.
19
ನಾನು ಯೆರೂಸಲೇಮ್ ಮೊದಲುಗೊಂಡು ಇಲ್ಲುರಿಕ ಸೀಮೆಯ ಪರ್ಯಂತರಕ್ಕೂ ಸುತ್ತಿ ಕ್ರಿಸ್ತನ ಸುವಾರ್ತೆಯ ಸಾರೋಣವನ್ನು ನೆರವೇರಿಸಿದ್ದೇನೆ.
20
ಮತ್ತೊಬ್ಬರು ಹಾಕಿದ ಅಸ್ತಿವಾರದ ಮೇಲೆ ಕಟ್ಟಬಾರದೆಂದು ಮನಸ್ಸಿನಲ್ಲಿ ನೆನಸಿ ಇತರರು ಕ್ರಿಸ್ತನ ಹೆಸರನ್ನು ತಿಳಿಸಿದ ಕಡೆಯಲ್ಲಿ ಸುವಾರ್ತೆಯನ್ನು ಪ್ರಕಟಿಸುವದಿಲ್ಲವೆಂಬದಾಗಿ ನಿಷ್ಕರ್ಷೆಮಾಡಿಕೊಂಡೆನು.
21
ಯಾರಿಗೆ ಆತನ ಸಮಾಚಾರ ಬಂದಿರಲಿಲ್ಲವೋ ಅವರೇ ಆತನನ್ನು ನೋಡುವರು; ಯಾರು ಆತನ ವರ್ತಮಾನವನ್ನು ಕೇಳಿರಲಿಲ್ಲವೋ ಅವರೇ ಗ್ರಹಿಸಿಕೊಳ್ಳುವರು ಎಂಬದಾಗಿ ಬರೆದಿರುವ ಪ್ರಕಾರ ನನ್ನ ಕೆಲಸವನ್ನು ನಡಿಸಿದ್ದೇನೆ.
22
ಈ ಕಾರಣದಿಂದ ನಿಮ್ಮ ಬಳಿಗೆ ಬರುವದಕ್ಕೆ ನನಗೆ ಅನೇಕಾವರ್ತಿ ಅಭ್ಯಂತರವಾಯಿತು.
23
ಆದರೆ ಇನ್ನು ಮೇಲೆ ಈ ಪ್ರಾಂತ್ಯಗಳಲ್ಲಿ ನನಗೆ ಅನುಕೂಲವಿಲ್ಲದ್ದರಿಂದಲೂ ನಿಮ್ಮ ಬಳಿಗೆ ಬರುವದಕ್ಕೆ ಅನೇಕ ವರುಷಗಳಿಂದ ಅಭಿಲಾಷೆ ಇರುವದರಿಂದಲೂ
24
ನಾನು ಸ್ಪೇನ್ ದೇಶಕ್ಕೆ ಹೋಗುವಾಗ ನನ್ನ ಮಾರ್ಗದಲ್ಲಿ ನಿಮ್ಮ ದರ್ಶನವನ್ನು ಮಾಡಬೇಕೆಂಬ ಅಭಿಪ್ರಾಯ ಉಂಟು. ತರುವಾಯ ನಿಮ್ಮ ಸಹವಾಸದಲ್ಲಿ ನನಗೆ ಸ್ವಲ್ಪಮಟ್ಟಿಗೆ ಸಂತೃಪ್ತಿಯಾದ ಮೇಲೆ ನೀವು ಆ ದೇಶಕ್ಕೆ ನನ್ನ ಪ್ರಯಾಣವನ್ನು ಸಾಗಿಸುವಿರೆಂದು ನಂಬುತ್ತೇನೆ.
25
ಆದರೆ ಈಗ ನಾನು ದೇವಜನರಿಗೆ ಒಂದು ಧರ್ಮಕಾರ್ಯವನ್ನು ಮಾಡುವವನಾಗಿ ಯೆರೂಸಲೇವಿುಗೆ ಹೋಗುತ್ತೇನೆ.
26
ಯಾಕಂದರೆ ಯೆರೂಸಲೇವಿುನಲ್ಲಿರುವ ದೇವಜನರೊಳಗೆ ಬಡವರಿಗೋಸ್ಕರ ಸ್ವಲ್ಪ ಹಣದ ಸಹಾಯವನ್ನು ಮಾಡಬೇಕೆಂಬದಾಗಿ ಮಕೆದೋನ್ಯ ಅಖಾಯ ಸೀಮೆಗಳವರು ಇಷ್ಟಪಟ್ಟಿದ್ದಾರೆ.
27
ಇದನ್ನು ಮಾಡುವದಕ್ಕೆ ಇವರು ಇಷ್ಟಪಟ್ಟದ್ದಲ್ಲದೆ ಇವರು ಅವರ ಹಂಗಿನವರಾಗಿದ್ದಾರೆ. ಹೇಗಂದರೆ ಅನ್ಯಜನರು ಅವರ ಆತ್ಮಸಂಬಂಧವಾದ ಸಂಪತ್ತಿಗೆ ಪಾಲುಗಾರರಾದ ಮೇಲೆ ಲೋಕಸಂಬಂಧವಾದ ಕಾರ್ಯಗಳಲ್ಲಿ ಅವರಿಗೆ ಸೇವೆಮಾಡುವ ಹಂಗಿನಲ್ಲಿದ್ದಾರಲ್ಲವೇ.
28
ನಾನು ಈ ಕೆಲಸವನ್ನು ತೀರಿಸಿಕೊಂಡು ಈ ಪ್ರೀತಿಯ ಫಲವನ್ನು ಅಲ್ಲಿಯವರ ವಶಕ್ಕೆ ಯಥಾಕ್ರಮವಾಗಿ ಕೊಟ್ಟ ಮೇಲೆ ನಿಮ್ಮ ಮಾರ್ಗವಾಗಿ ಸ್ಪೇನ್ ದೇಶಕ್ಕೆ ಹೋಗುವೆನು.
29
ಇದಲ್ಲದೆ ನಿಮ್ಮ ಬಳಿಗೆ ಬರುವಾಗ ಕ್ರಿಸ್ತನಿಂದಾಗುವ ವರಗಳನ್ನು ಹೇರಳವಾಗಿ ತರುವೆನೆಂದು ಬಲ್ಲೆನು.
30
ಸಹೋದರರೇ, ನೀವು ನನಗೋಸ್ಕರ ದೇವರ ಮುಂದೆ ಮಾಡುವ ಪ್ರಾರ್ಥನೆಗಳಲ್ಲಿ ನನ್ನೊಂದಿಗೆ ಬಲೀಯವಾಗಿ ವಿಜ್ಞಾಪಿಸಿಕೊಳ್ಳಬೇಕೆಂದು ನಮ್ಮ ಕರ್ತನಾದ ಯೇಸು ಕ್ರಿಸ್ತನ ನಿವಿುತ್ತವಾಗಿಯೂ ಪವಿತ್ರಾತ್ಮನಿಂದಾಗುವ ಪ್ರೀತಿಯ ನಿವಿುತ್ತವಾಗಿಯೂ ನಿಮ್ಮನ್ನು ಬೇಡಿಕೊಳ್ಳುತ್ತೇನೆ.
31
ದೇವರು ನನ್ನನ್ನು ಯೂದಾಯದಲ್ಲಿರುವ ಅವಿಧೇಯರ ಕೈಗೆ ತಪ್ಪಿಸಬೇಕೆಂತಲೂ ಯೆರೂಸಲೇವಿುಗೋಸ್ಕರ ನಾನು ಮಾಡುವಂಥ ಈ ಧರ್ಮಕಾರ್ಯವು ಅಲ್ಲಿರುವ ದೇವಜನರಿಗೆ ಹಿತಕರವಾಗಿ ತೋರಬೇಕೆಂತಲೂ ಪ್ರಾರ್ಥಿಸಿರಿ.
32
ಹೀಗೆ ನಾನು ದೇವರ ಚಿತ್ತಾನುಸಾರ ಆನಂದವುಳ್ಳವನಾಗಿ ನಿಮ್ಮಲ್ಲಿಗೆ ಬಂದು ನಿಮ್ಮ ಸಂಗಡ ವಿಶ್ರಾಂತಿ ಹೊಂದಲಾಗುವದು.
33
ಶಾಂತಿದಾಯಕನಾದ ದೇವರು ನಿಮ್ಮೆಲ್ಲರೊಂದಿಗಿರಲಿ. ಆಮೆನ್.
← Chapter 14
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 16 →
All chapters:
1
2
3
4
5
6
7
8
9
10
11
12
13
14
15
16