bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Ruth 1
Ruth 1
Kannada BSI JV (ಕನ್ನಡ ಸತ್ಯವೇದವು J.V. (BSI))
Jump to:
Chapter 1
Chapter 2
Chapter 3
Chapter 4
Chapter 2 →
1
ನ್ಯಾಯಸ್ಥಾಪಕರು ಆಳುತ್ತಿದ್ದಾಗ ದೇಶದಲ್ಲಿ ಬರ ಬಂದದರಿಂದ ಯೆಹೂದಪ್ರಾಂತದ ಬೇತ್ಲೆಹೇವಿುನವನೊಬ್ಬನು ತನ್ನ ಹೆಂಡತಿ, ಇಬ್ಬರು ಕುಮಾರರು ಇವರ ಸಹಿತವಾಗಿ ಮೋವಾಬ್ ದೇಶದಲ್ಲಿ ವಾಸಮಾಡಬೇಕೆಂದು ಹೊರಟುಹೋದನು.
2
ಆ ಮನುಷ್ಯನಿಗೆ ಎಲೀಮೆಲೆಕನೆಂದೂ ಅವನ ಹೆಂಡತಿಗೆ ನೊವೊವಿುಯೆಂದೂ ಇಬ್ಬರು ಮಕ್ಕಳಿಗೆ ಮಹ್ಲೋನ್, ಕಿಲ್ಯೋನ್ ಎಂದೂ ಹೆಸರು. ಯೆಹೂದ ದೇಶಕ್ಕೆ ಸೇರಿದ ಎಫ್ರಾತದಲ್ಲಿರುವ ಬೇತ್ಲೆಹೇವಿುನವರಾದ ಇವರು ಬಂದು ಮೋವಾಬ್ ದೇಶದಲ್ಲಿ ಪ್ರವಾಸವಾಗಿದ್ದಾಗ
3
ನೊವೊವಿುಯ ಗಂಡನಾದ ಎಲೀಮೆಲೆಕನು ಸತ್ತನು. ಆಕೆಯು ಇಬ್ಬರು ಮಕ್ಕಳೊಡನೆ ಉಳಿದಳು.
4
ಈ ಮಕ್ಕಳು ಒರ್ಫಾ, ರೂತ್ ಎಂಬ ಹೆಸರುಳ್ಳ ಇಬ್ಬರು ಮೋವಾಬ್ ಸ್ತ್ರೀಯರನ್ನು ಮದುವೆಮಾಡಿಕೊಂಡು ಸುಮಾರು ಹತ್ತು ವರುಷ ಅಲ್ಲಿದ್ದ ಮೇಲೆ ಇಬ್ಬರೂ ತೀರಿಹೋದರು.
5
ಹೀಗೆ ಆ ಸ್ತ್ರೀಯು ಗಂಡನನ್ನೂ ಇಬ್ಬರು ಮಕ್ಕಳನ್ನೂ ಕಳೆದುಕೊಂಡು ಒಬ್ಬಳೇ ಉಳಿದಳು.
6
ಯೆಹೋವನು ತನ್ನ ಜನರನ್ನು ಕಟಾಕ್ಷಿಸಿ ಅವರಿಗೆ ಆಹಾರವನ್ನು ಅನುಗ್ರಹಿಸಿದ್ದಾನೆಂಬ ವರ್ತಮಾನವನ್ನು ಕೇಳಿದ ನೊವೊವಿುಯು ಮೋವಾಬ್ ದೇಶದಿಂದ ಸ್ವದೇಶಕ್ಕೆ ಹೋಗಬೇಕೆಂದು ಸೊಸೆಯರೊಡನೆ ಹೊರಟಳು.
7
ಆಕೆಯು ಇಬ್ಬರು ಸೊಸೆಯರೊಡನೆ ತಾನಿದ್ದ ಸ್ಥಳದಿಂದ ಯೆಹೂದ ದೇಶಕ್ಕೆ ಹೋಗುವ ದಾರಿಯಲ್ಲಿ ಅವರಿಗೆ -
8
ತಿರಿಗಿ ನಿಮ್ಮ ನಿಮ್ಮ ತೌರಮನೆಗೆ ಹೋಗಿರಿ; ನೀವು ನನ್ನನ್ನೂ ಮರಣಹೊಂದಿದ ನನ್ನ ಮಕ್ಕಳನ್ನೂ ಪ್ರೀತಿಸಿದಂತೆ ಯೆಹೋವನು ನಿಮ್ಮನ್ನು ಪ್ರೀತಿಸಿ ನಿಮಗೆ ಕೃಪೆಮಾಡಲಿ.
9
ನೀವಿಬ್ಬರೂ ಮದುವೆಯಾಗಿ ಗಂಡನ ಮನೆಯಲ್ಲಿ ವಿಶ್ರಾಂತಿಯಿಂದಿರುವಂತೆ ಯೆಹೋವನು ಅನುಗ್ರಹಿಸಲಿ ಎಂದು ಹೇಳಿ ಅವರನ್ನು ಮುದ್ದಿಟ್ಟಳು. ಆಗ ಅವರು ಗಟ್ಟಿಯಾಗಿ ಅತ್ತು -
10
ನಾವೂ ನಿನ್ನ ಜೊತೆಯಲ್ಲೇ ನಿನ್ನ ಸ್ವಜನರ ಬಳಿಗೆ ಬರುತ್ತೇವೆ ಅನ್ನಲು
11
ಆಕೆಯು - ನನ್ನ ಮಕ್ಕಳೇ, ನೀವು ನನ್ನೊಡನೆ ಬರುವದೇಕೆ? ಹಿಂದಿರುಗಿ ಹೋಗಿರಿ; ನಿಮಗೆ ಗಂಡಂದಿರನ್ನು ಕೊಡುವದಕ್ಕೆ ನನ್ನ ಗರ್ಭದಲ್ಲಿ ಬೇರೆ ಮಕ್ಕಳಿಲ್ಲವಲ್ಲಾ.
12
ಮತ್ತೊಬ್ಬನನ್ನು ಮದುವೆಮಾಡಿಕೊಳ್ಳುವ ಪ್ರಾಯವೂ ನನಗೆ ದಾಟಿಹೋಯಿತು. ಆದದರಿಂದ ನನ್ನ ಮಕ್ಕಳೇ, ನೀವು ಹಿಂದಿರುಗಿ ಹೋಗಿರಿ. ಒಂದು ವೇಳೆ ನಿರೀಕ್ಷೆಯಿಂದ ಈ ಹೊತ್ತೇ ಒಬ್ಬ ಗಂಡನನ್ನು ಕೂಡಿ ಮಕ್ಕಳನ್ನು ಹೆತ್ತರೂ
13
ಅವರು ದೊಡ್ಡವರಾಗುವ ತನಕ ಕಾದಿರುವಿರೋ? ಅಲ್ಲಿಯವರೆಗೂ ಗಂಡಂದಿರಿಲ್ಲದೆ ಇರುವಿರೋ? ನನ್ನ ಮಕ್ಕಳೇ, ಹಾಗೆ ಮಾಡಬೇಡಿರಿ; ಯೆಹೋವನ ಹಸ್ತವು ನನಗೆ ವಿರೋಧವಾಗಿರುವದರಿಂದ ನಿಮಗೋಸ್ಕರ ಬಹಳ ದುಃಖಪಡುತ್ತೇನೆ ಅಂದಳು.
14
ಆಗ ಅವರು ತಿರಿಗಿ ಗಟ್ಟಿಯಾಗಿ ಅತ್ತರು. ಒರ್ಫಳು ಅತ್ತೆಯನ್ನು ಮುದ್ದಿಟ್ಟು ಹೊರಟುಹೋದಳು; ರೂತಳಾದರೋ ಅತ್ತೆಯನ್ನೇ ಅಂಟಿಕೊಂಡಳು.
15
ನೊವೊವಿುಯು ರೂತಳಿಗೆ - ಇಗೋ, ನಿನ್ನ ಓರಗಿತ್ತಿಯು ತಿರಿಗಿ ತನ್ನ ಜನರ ಬಳಿಗೂ ದೇವತೆಗಳ ಬಳಿಗೂ ಹೋಗುತ್ತಾಳೆ; ನೀನೂ ಆಕೆಯ ಜೊತೆಯಲ್ಲಿ ಹೋಗು ಅಂದಾಗ
16
ಆಕೆಯು - ನಿನ್ನನ್ನು ಬಿಟ್ಟು ಹಿಂದಿರುಗಬೇಕೆಂದು ನನ್ನನ್ನು ಒತ್ತಾಯಪಡಿಸಬೇಡ. ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು; ನೀನು ವಾಸಿಸುವಲ್ಲೇ ನಾನೂ ವಾಸಿಸುವೆನು; ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು.
17
ನೀನು ಸಾಯುವಲ್ಲೇ ನಾನೂ ಸಾಯುವೆನು; ಅಲ್ಲೇ ನನಗೆ ಸಮಾಧಿಯಾಗಬೇಕು. ಮರಣದಿಂದಲ್ಲದೆ ನಾನು ನಿನ್ನನ್ನು ಅಗಲಿದರೆ ಯೆಹೋವನು ನನಗೆ ಬೇಕಾದದ್ದನ್ನು ಮಾಡಲಿ ಎಂದಳು.
18
ಆಕೆಯು ತನ್ನ ಜೊತೆಯಲ್ಲಿ ಬರುವದಕ್ಕೆ ದೃಢಮಾಡಿಕೊಂಡಿದ್ದಾಳೆಂದು ನೊವೊವಿುಯು ತಿಳಿದು ಸುಮ್ಮನಾದಳು.
19
ಹಾಗೆಯೇ ಪ್ರಯಾಣ ಮಾಡಿಕೊಂಡು ಅವರಿಬ್ಬರೂ ಬೇತ್ಲೆಹೇವಿುಗೆ ಬಂದು ಊರೊಳಕ್ಕೆ ಹೋದಾಗ ಅಲ್ಲೆಲ್ಲಾ ಗದ್ದಲವಾಯಿತು. ಸ್ತ್ರೀಯರು - ಈಕೆಯು ನೊವೊವಿುಯಲ್ಲವೋ ಎಂದು ಮಾತಾಡತೊಡಗಲು
20
ಆಕೆಯು ಅವರಿಗೆ - ನನ್ನನ್ನು ನೊವೊವಿುಯೆಂದು ಕರೆಯಬೇಡಿರಿ; ಸರ್ವಶಕ್ತನು ನನ್ನನ್ನು ಬಹಳವಾಗಿ ದುಃಖಪಡಿಸಿದ್ದಾನೆ. ಆದದರಿಂದ ಮಾರಾ ಎಂದು ಕರೆಯಿರಿ.
21
ಭಾಗ್ಯವಂತಳಾಗಿ ಹೋದೆನು; ಯೆಹೋವನು ನನ್ನನ್ನು ಗತಿಹೀನಳನ್ನಾಗಿ ಬರಮಾಡಿದನು. ಯೆಹೋವನು ನನಗೆ ವಿರೋಧವಾಗಿ ಸಾಕ್ಷಿಹೇಳಿದ್ದಾನೆ; ಸರ್ವಶಕ್ತನು ನನ್ನನ್ನು ಬಾಧಿಸಿದ್ದಾನೆ. ಇದರಿಂದ ನೀವು ನನ್ನನ್ನು ನೊವೊವಿುಯೆಂದು ಕರೆಯುವದು ಹೇಗೆ ಅಂದಳು.
22
ಹೀಗೆ ನೊವೊವಿುಯು ಮೋವಾಬ್ಯಳೂ ತನ್ನ ಸೊಸೆಯೂ ಆದ ರೂತಳೊಡನೆ ಬೇತ್ಲೆಹೇವಿುಗೆ ಬಂದಳು. ಆಗ ಜವೆಗೋದಿಯ ಸುಗ್ಗಿಯು ಪ್ರಾರಂಭವಾಗಿತ್ತು.
Jump to:
Chapter 1
Chapter 2
Chapter 3
Chapter 4
Chapter 2 →
All chapters:
1
2
3
4