bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
/
Ezekiel 48
Ezekiel 48
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
← Chapter 47
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 37
Chapter 38
Chapter 39
Chapter 40
Chapter 41
Chapter 42
Chapter 43
Chapter 44
Chapter 45
Chapter 46
Chapter 47
Chapter 48
1
ಹಂಚುವಿಕೆಯನ್ನು ಅನುಸರಿಸಿ ಕುಲಗಳ ಹೆಸರುಗಳು ಇವೇ. ದೇಶದ ಉತ್ತರದಲ್ಲಿ ಹಮಾತ್ ಸೀಮೆಯ ಹತ್ತಿರ ದಾನ್ ಕುಲಕ್ಕೆ ಒಂದು ಭಾಗವಿದೆ. ಅದರ ಉತ್ತರ ಮೇರೆಯು ಹೆತ್ಲೋನಿನ ದಾರಿಯ ಪಕ್ಕದಲ್ಲಿ ಹೊರಟು, ಹಮಾತಿನ ದಾರಿಯನ್ನು ದಾಟಿ, ದಮಸ್ಕದ ಮೇರೆಯಲ್ಲಿರುವ ಹಚರ್ ಏನಾನಿನವರೆಗೆ ಹಬ್ಬುವುದು. ಅದರ ಕಡೆಗಳು ದೇಶದ ಪೂರ್ವ, ಪಶ್ಚಿಮಗಳ ಮೇರೆಗಳ ತನಕ ಚಾಚಿಕೊಂಡಿರುವವು.
2
ದಾನಿನ ದಕ್ಷಿಣ ದಿಕ್ಕಿನ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಆಶೇರಿಗೆ ಒಂದು ಪಾಲು.
3
ಆಶೇರಿನ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ನಫ್ತಾಲಿಗೆ ಒಂದು ಪಾಲು.
4
ನಫ್ತಾಲಿಯ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಮನಸ್ಸೆಗೆ ಒಂದು ಪಾಲು.
5
ಮನಸ್ಸೆಯ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಎಫ್ರಾಯೀಮಿಗೆ ಒಂದು ಪಾಲು.
6
ಎಫ್ರಾಯೀಮಿನ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ರೂಬೇನಿಗೆ ಒಂದು ಪಾಲು.
7
ರೂಬೇನಿನ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಯೆಹೂದಕ್ಕೆ ಒಂದು ಪಾಲು.
8
ಯೆಹೂದದ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ನೀವು ಮೀಸಲಾಗಿ ಸಮರ್ಪಿಸುವ ಪಾಲು ಇರುವುದು. ಅದರ ಅಗಲವು ಇಪ್ಪತ್ತೈದು ಸಾವಿರ ಮೊಳ ಉದ್ದವು, ಪೂರ್ವದಿಂದ ಪಶ್ಚಿಮ ಕುಲಗಳ ಪಾಲುಗಳ ಉದ್ದಕ್ಕೆ ಸಮಾನವಾಗಿದೆ. ಅದರ ಮಧ್ಯದಲ್ಲಿ ಪವಿತ್ರಾಲಯವಿರುವುದು.
9
ನೀವು ಮೀಸಲು ಭೂಮಿಯಲ್ಲಿ ಯೆಹೋವನಿಗೆ ವಿಶೇಷವಾದ ಮೀಸಲಾಗಿ ಸಮರ್ಪಿಸುವ ಪಾಲಿನ ಉದ್ದವು ಇಪ್ಪತ್ತೈದು ಸಾವಿರ ಮೊಳವು ಮತ್ತು ಅಗಲವು ಹತ್ತು ಸಾವಿರ ಮೊಳವಾಗಿದೆ.
10
ಮೀಸಲಾದ ಆ ಪವಿತ್ರ ಕ್ಷೇತ್ರವು ಯಾಜಕರಿಗೆ ಸಲ್ಲತಕ್ಕದ್ದು. ಉತ್ತರಕ್ಕೆ ಅದರ ಉದ್ದವು ಇಪ್ಪತ್ತೈದು ಸಾವಿರ ಮೊಳವು, ಪಶ್ಚಿಮಕ್ಕೆ ಹತ್ತು ಸಾವಿರ ಮೊಳ ಅಗಲವು, ದಕ್ಷಿಣಕ್ಕೆ ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿದೆ. ಅದರ ಮಧ್ಯದಲ್ಲಿ ಯೆಹೋವನ ಪವಿತ್ರಾಲಯವಿರುವುದು.
11
ಆ ಕ್ಷೇತ್ರವು ಚಾದೋಕನ ಸಂತಾನದವರಲ್ಲಿ ನನಗಾಗಿ ಪ್ರತಿಷ್ಠಿತರೂ, ನನ್ನ ಆಲಯದ ಪಾರುಪತ್ಯವನ್ನು ನೆರವೇರಿಸಿದವರೂ ಆದ ಯಾಜಕರಿಗೇ ಸೇರತಕ್ಕದ್ದು. ಇಸ್ರಾಯೇಲರು ನನ್ನನ್ನು ತೊರೆದಾಗ, ಲೇವಿಯರೂ ತೊರೆದಂತೆ ಇವರು ತೊರೆಯಲಿಲ್ಲ.
12
ಲೇವಿಯರ ಪಾಲಿನ ಮೇರೆಯ ಪಕ್ಕದಲ್ಲಿರುವ ಆ ಕ್ಷೇತ್ರವು ಅತಿ ಪವಿತ್ರವೂ ದೇಶದೊಳಗೆ ಮೀಸಲೂ ಆಗಿ ಯಾಜಕರಿಗೆ ಸೇರತಕ್ಕದ್ದಾಗಿದೆ.
13
ಮತ್ತು ಇಪ್ಪತ್ತೈದು ಸಾವಿರ ಮೊಳ ಉದ್ದದ ಮತ್ತು ಹತ್ತು ಸಾವಿರ ಮೊಳ ಅಗಲದ ಒಂದು ಪಾಲು ಯಾಜಕರ ಪಾಲಿನ ಮೇರೆಯ ಪಕ್ಕದಲ್ಲಿ ಲೇವಿಯರಿಗೆ ಸಲ್ಲತಕ್ಕದ್ದು. ಈ ಎರಡು ಪಾಲುಗಳ ಒಟ್ಟು ಅಳತೆ ಎಷ್ಟೆಂದರೆ ಉದ್ದವು ಇಪ್ಪತ್ತೈದು ಸಾವಿರ ಮೊಳ ಮತ್ತು ಅಗಲವು ಇಪ್ಪತ್ತು ಸಾವಿರ ಮೊಳವಾಗಿದೆ.
14
ಆ ಕ್ಷೇತ್ರವು ಯೆಹೋವನಿಗೆ ಮೀಸಲಾದುದರಿಂದ ಅದರಲ್ಲಿ ಯಾವ ಭಾಗವನ್ನೂ ಮಾರಬಾರದು ಮತ್ತು ಬದಲಾಯಿಸಲೂಬಾರದು. ದೇಶದ ಆ ಪ್ರಥಮ ಫಲವನ್ನು ಯಾರಿಗೂ ಕೊಡಬಾರದು. ಏಕೆಂದರೆ ಅದು ಯೆಹೋವನಿಗೆ ಪರಿಶುದ್ಧವಾಗಿದೆ.
15
ಇಪ್ಪತ್ತೈದು ಸಾವಿರ ಮೊಳ ಉದ್ದದ ಆ ಕ್ಷೇತ್ರದ ಪಕ್ಕದಲ್ಲಿ ಮೀಸಲು ಪಾಲಿನ ಒಟ್ಟು ಅಳತೆಯಲ್ಲಿ ಉಳಿದ ಐದು ಸಾವಿರ ಮೊಳ ಅಗಲದ ಭೂಮಿಯು ಮೀಸಲಿಲ್ಲವೆಂದೆಣಿಸಿ ಪಟ್ಟಣಕ್ಕೆ ಅಂದರೆ ಜನರ ನಿವಾಸಕ್ಕೂ ಮತ್ತು ಸುತ್ತಣ ಪ್ರದೇಶಕ್ಕೂ ಪ್ರತ್ಯೇಕಿಸಲ್ಪಡಲಿ. ಪಟ್ಟಣವು ಅದರ ಮಧ್ಯದಲ್ಲಿರಲಿ.
16
ಪಟ್ಟಣದ ಅಳತೆಯು ಹೀಗಿರಬೇಕು: ಉತ್ತರದ ಕಡೆಯಲ್ಲಿ ನಾಲ್ಕು ಸಾವಿರದ ಐನೂರು ಮೊಳವು, ದಕ್ಷಿಣದ ಕಡೆಯಲ್ಲಿ ನಾಲ್ಕು ಸಾವಿರದ ಐನೂರು ಮೊಳವು; ಪೂರ್ವದ ಕಡೆಯಲ್ಲಿ ನಾಲ್ಕು ಸಾವಿರದ ಐನೂರು ಮೊಳವು ಮತ್ತು ಪಶ್ಚಿಮಕ್ಕೆ ನಾಲ್ಕು ಸಾವಿರದ ಐನೂರು ಮೊಳವು ಇರಬೇಕು.
17
ಪಟ್ಟಣಕ್ಕೆ ಸುತ್ತಣ ಪ್ರದೇಶವಿರಬೇಕು. ಅದರ ಅಗಲವು ಉತ್ತರದಲ್ಲಿ ಇನ್ನೂರೈವತ್ತು ಮೊಳವು, ದಕ್ಷಿಣದಲ್ಲಿ ಇನ್ನೂರೈವತ್ತು ಮೊಳವು, ಪೂರ್ವದಲ್ಲಿ ಇನ್ನೂರೈವತ್ತು ಮೊಳವು ಮತ್ತು ಪಶ್ಚಿಮದಲ್ಲಿ ಇನ್ನೂರೈವತ್ತು ಮೊಳವು ಇರಬೇಕು.
18
ಪಟ್ಟಣವನ್ನು ಹೊರತುಪಡಿಸಿ, ಅದಕ್ಕೆ ಒಳಪಟ್ಟ ಉಳಿದ ಭೂಮಿಯ ಉದ್ದವು ಮೀಸಲಾದ ಪವಿತ್ರ ಕ್ಷೇತ್ರದ ಪಕ್ಕದಲ್ಲಿ ಪೂರ್ವದ ಕಡೆಗೆ ಹತ್ತು ಸಾವಿರ ಮೊಳವು, ಪಶ್ಚಿಮದ ಕಡೆಗೆ ಹತ್ತು ಸಾವಿರ ಮೊಳವು ಆಗಿರಬೇಕು. ಆ ಭೂಮಿಯು ಮೀಸಲಾದ ಪವಿತ್ರ ಕ್ಷೇತ್ರದ ಮೇರೆಯನ್ನು ಅನುಸರಿಸುವುದು. ಅದರ ಉತ್ಪತ್ತಿಯು ಆ ಪಟ್ಟಣದ ನಿವಾಸಿಗಳಿಗೆ ಆಹಾರವಾಗುವುದು.
19
ಅವರು ಇಸ್ರಾಯೇಲಿನ ಯಾವ ಕುಲಕ್ಕೆ ಸೇರಿದ್ದರೂ, ಪಟ್ಟಣದಲ್ಲಿ ವಾಸಿಸುತ್ತಾ ಆ ಭೂಮಿಯನ್ನು ಬಿತ್ತುವರು.
20
ಮೀಸಲಾದ ಪೂರ್ಣ ಕ್ಷೇತ್ರದ ಉದ್ದ ಇಪ್ಪತ್ತೈದು ಸಾವಿರ ಮೊಳವು, ಅಗಲ ಇಪ್ಪತ್ತೈದು ಸಾವಿರ ಮೊಳ ಮತ್ತು ನೀವು ಮೀಸಲಾಗಿ ಅರ್ಪಿಸುವ ಪವಿತ್ರ ಕ್ಷೇತ್ರವು ಪಟ್ಟಣಕ್ಕೆ ಒಳಪಟ್ಟು, ಭೂಮಿ ಸಹಿತವಾಗಿ ಚಚ್ಚೌಕವಾಗಿರಬೇಕು.
21
ಮೀಸಲಾದ ಪವಿತ್ರ ಕ್ಷೇತ್ರದ ಮತ್ತು ಪಟ್ಟಣಕ್ಕೆ ಒಳಪಟ್ಟ ಭೂಮಿಯ ಎರಡು ಕಡೆಗಳಲ್ಲಿ ಉಳಿದ ಭೂಮಿಯು ಅರಸನ ಪಾಲಾಗಿರಲಿ. ಆ ಪಾಲು ಮೀಸಲಾದ ಕ್ಷೇತ್ರದ ಪೂರ್ವದ ಕಡೆಗೆ ಇಪ್ಪತ್ತೈದು ಸಾವಿರ ಮೊಳ ಉದ್ದವು, ಮೇರೆಯ ಪಕ್ಕದಲ್ಲಿಯ ಪಶ್ಚಿಮದ ಕಡೆಗೆ ಇಪ್ಪತ್ತೈದು ಸಾವಿರ ಮೊಳ ಉದ್ದವು, ಮೇರೆಯ ಪಕ್ಕದಲ್ಲಿಯೂ ಕುಲಗಳ ಪಾಲಿನಷ್ಟು ಉದ್ದವಾಗಿ ಹಬ್ಬುವುದು; ಅದು ಪ್ರಭುವಿಗೆ ಸೇರತಕ್ಕದ್ದು. ಪವಿತ್ರಾಲಯವೂ ಮೀಸಲಾದ ಪವಿತ್ರ ಕ್ಷೇತ್ರದ ಮಧ್ಯದಲ್ಲಿರುವುದು.
22
ಅರಸನ ಪಾಲಿನ ಎರಡು ಭಾಗಗಳ ಮಧ್ಯದಲ್ಲಿ ಲೇವಿಯರ ಪಾಲಿನ (ಬಡಗಣ) ಮೇರೆಯಿಂದ ಪಟ್ಟಣಕ್ಕೆ ಒಳಪಟ್ಟ ಭೂಮಿಯ (ತೆಂಕಣ) ಮೇರೆಯ ತನಕ ಅಂದರೆ ಯೆಹೂದದ (ತೆಂಕಣ) ಮೇರೆಯಿಂದ ಬೆನ್ಯಾಮೀನಿನ (ಬಡಗಣ) ಮೇರೆಯವರೆಗೆ ಅರಸನ ಪಾಲು ಹರಡಿರುವುದು.
23
ಉಳಿದ ಕುಲಗಳ ಪಾಲಿನ ಕ್ರಮವೇನೆಂದರೆ, ಪೂರ್ವದಿಂದ ಪಶ್ಚಿಮದ ತನಕ ಬೆನ್ಯಾಮೀನಿಗೆ ಒಂದು ಪಾಲು.
24
ಬೆನ್ಯಾಮೀನಿನ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಸಿಮೆಯೋನಿಗೆ ಒಂದು ಪಾಲು.
25
ಸಿಮೆಯೋನಿನ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಇಸ್ಸಾಕಾರಿಗೆ ಒಂದು ಪಾಲು.
26
ಇಸ್ಸಾಕಾರಿನ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಜೆಬುಲೂನಿಗೆ ಒಂದು ಪಾಲು.
27
ಜೆಬುಲೂನಿನ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಗಾದಿಗೆ ಒಂದು ಪಾಲು.
28
ಗಾದನ್ ಮೇರೆಯು ದಕ್ಷಿಣದ ಕಡೆಯಲ್ಲಿ, ದಕ್ಷಿಣದ ಮೇರೆಯು ತಾಮಾರಿನಿಂದ ಹೊರಟು ಮೇರೀಬತ್ ಕಾದೇಶಿನ ಹಳ್ಳವನ್ನು ದಾಟಿ, (ಐಗುಪ್ತದ ಮುಂದಣ) ನದಿಯ ಮಾರ್ಗವಾಗಿ ಮಹಾ ಸಮುದ್ರಕ್ಕೆ ಸೇರುವುದು.
29
ನೀವು ಇಸ್ರಾಯೇಲಿನ ಕುಲಗಳಿಗೆ ಸ್ವತ್ತಾಗಿ ಹಂಚಿ ಕೊಡಬೇಕಾದ ದೇಶವು ಇದೇ. ಕುಲಗಳ ಪಾಲುಗಳು ಇವೇ. ಇದು ಕರ್ತನಾದ ಯೆಹೋವನ ನುಡಿ.
30
ಪಟ್ಟಣದ ನಿರ್ಗಮನ ಹೀಗಿರಬೇಕು: ಉತ್ತರದ ಕಡೆಯ ಉದ್ದ ನಾಲ್ಕು ಸಾವಿರದ ಐನೂರು ಮೊಳವಾಗಿದೆ.
31
ಪಟ್ಟಣದ ಬಾಗಿಲುಗಳಿಗೆ ಇಸ್ರಾಯೇಲಿನ ಕುಲಗಳ ಆಯಾ ಹೆಸರುಗಳು ಇರಲಿ; ಉತ್ತರಕ್ಕೆ ಮೂರು ಬಾಗಿಲುಗಳು; ಒಂದು ರೂಬೇನ್ ಬಾಗಿಲು, ಇನ್ನೊಂದು ಯೆಹೂದ ಬಾಗಿಲು, ಮತ್ತೊಂದು ಲೇವಿಯರ ಬಾಗಿಲು.
32
ಪೂರ್ವದ ಕಡೆಯ ಉದ್ದವು ನಾಲ್ಕು ಸಾವಿರದ ಇನ್ನೂರು ಮೊಳವಾಗಿದೆ; ಅದರಲ್ಲಿ ಮೂರು ಬಾಗಿಲುಗಳು; ಒಂದು ಯೋಸೇಫನ ಬಾಗಿಲು; ಇನ್ನೊಂದು ಬೆನ್ಯಾಮೀನನ ಬಾಗಿಲು, ಮತ್ತೊಂದು ದಾನಿನ ಬಾಗಿಲು.
33
ದಕ್ಷಿಣದ ಕಡೆಯಲ್ಲಿ ಉದ್ದವು ನಾಲ್ಕು ಸಾವಿರದ ಐನೂರು ಮೊಳವು; ಅದರಲ್ಲಿ ಮೂರು ಬಾಗಿಲುಗಳು; ಒಂದು ಸಿಮೆಯೋನನ ಬಾಗಿಲು, ಇನ್ನೊಂದು ಇಸ್ಸಾಕಾರನ ಬಾಗಿಲು, ಮತ್ತೊಂದು ಜೆಬುಲೂನಿನ ಬಾಗಿಲು.
34
ಪಶ್ಚಿಮದ ಗಡಿಯ ಉದ್ದವು ನಾಲ್ಕು ಸಾವಿರದ ಐನೂರು ಮೊಳವು; ಅದರಲ್ಲಿ ಮೂರು ಬಾಗಿಲುಗಳು; ಒಂದು ಗಾದಿನ ಬಾಗಿಲು, ಇನ್ನೊಂದು ಆಶೇರಿನ ಬಾಗಿಲು, ಮತ್ತೊಂದು ನಫ್ತಾಲಿನ ಬಾಗಿಲು.
35
ಪಟ್ಟಣದ ಸುತ್ತಳತೆಯು ಹದಿನೆಂಟು ಸಾವಿರ ಮೊಳವು; ಅದನ್ನು ನಿರ್ಮಿಸಿದ ದಿನದಿಂದ ಆ ಪಟ್ಟಣಕ್ಕೆ “ಯೆಹೋವನ ನೆಲೆ ” ಎಂದು ಹೆಸರಾಗುವುದು.
← Chapter 47
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 37
Chapter 38
Chapter 39
Chapter 40
Chapter 41
Chapter 42
Chapter 43
Chapter 44
Chapter 45
Chapter 46
Chapter 47
Chapter 48
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48