bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
1 Chronicles 10
1 Chronicles 10
Kannada Bible (KNCL) BSI 2016
← Chapter 9
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 11 →
1
ಗಿಲ್ಬೋವ ಬೆಟ್ಟದಲ್ಲಿ ಇಸ್ರಯೇಲ್ ಅವರಿಗೂ ಫಿಲಿಷ್ಟಿಯರಿಗೂ ಘೋರಯುದ್ಧ ನಡೆಯಿತು. ಅನೇಕ ಜನ ಇಸ್ರಯೇಲರು ಯುದ್ಧದಲ್ಲಿ ಹತರಾದರು. ಅರಸ ಸೌಲನೂ ಅವನ ಮಕ್ಕಳೂ ಇನ್ನುಳಿದವರೂ ತಪ್ಪಿಸಿಕೊಂಡು ಓಡಿಹೋಗಲು ಪ್ರಯತ್ನಿಸಿದರು.
2
ಆದರೆ ಫಿಲಿಷ್ಟಿಯರು ಅವರನ್ನು ಬೆನ್ನಟ್ಟಿ ಸೌಲನ ಮಕ್ಕಳಾದ ಯೋನಾತಾನ, ಅಬೀನಾದಾಬ, ಮಲ್ಕೀಷೂವರನ್ನು ಕೊಂದುಹಾಕಿದರು.
3
ಘೋರ ಯುದ್ಧದ ಮಧ್ಯದಲ್ಲಿ ಸೌಲನು ತಪ್ಪಿಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ವೈರಿ ಬಾಣವು ಅವನಿಗೆ ತಾಕಲು ಅವನು ತೀವ್ರ ಗಾಯಗೊಂಡನು.
4
ಆಗ ಅವನು ತನ್ನ ಆಯುಧವಾಹಕ ಯುವಕನನ್ನು ಕರೆದು, ‘ದೇವರಲ್ಲಿ ನಂಬಿಕೆ ಇಲ್ಲದ ಈ ಫಿಲಿಷ್ಟಿಯರ ಹಸ್ತಗಳಿಂದ ನಾನು ಸಾಯಬಾರದು. ನಿನ್ನ ಖಡ್ಗವನ್ನು ಹಿಡಿದು ನನ್ನನ್ನು ಕೊಂದುಬಿಡು’, ಎಂದನು. ಆದರೆ ಆ ಯುವಕನು ಭಯಗೊಂಡು ಹಿಂಜರಿದನು. ಸೌಲನು ತನ್ನ ಖಡ್ಗವನ್ನೇ ಎತ್ತಿಟ್ಟು ಅದರ ಮೇಲೆ ಹಾರಿಬಿದ್ದು ಸತ್ತುಹೋದನು.
5
ಸೌಲನು ಮೃತನಾದದ್ದನ್ನು ನೋಡಿ ಆ ಯುವಕನು ಸಹ ತನ್ನ ಖಡ್ಗದ ಮೇಲೆ ಬಿದ್ದು ಸತ್ತುಹೋದನು.
6
ಹೀಗೆ ಸೌಲನೂ ಅವನ ಮೂರು ಮಂದಿ ಗಂಡುಮಕ್ಕಳೂ ಅದೇ ದಿವಸ ಮೃತರಾದರು. ಸೌಲನ ಮನೆಯವರಲ್ಲಿ ರಾಜ್ಯ ಆಳಲು ಯಾರೂ ಉಳಿಯಲಿಲ್ಲ.
7
ತಗ್ಗಿನಲ್ಲಿ ನೆಲೆಸಿದ್ದ ಇಸ್ರಯೇಲರು ತಮ್ಮ ಸೈನ್ಯವು ಪಲಾಯನಗೈಯಿತು ಮತ್ತು ಸೌಲನೂ ಅವನ ಮಕ್ಕಳೂ ಮರಣ ಹೊಂದಿದರು ಎಂಬ ವಾರ್ತೆಯನ್ನು ಕೇಳಿ ಅವರೂ ತಮ್ಮ ಪಟ್ಟಣಗಳನ್ನು ಬಿಟ್ಟು ಓಡಿಹೋದರು. ಅನಂತರ ಫಿಲಿಷ್ಟಿಯರು ಬಂದು ಅವುಗಳನ್ನು ವಶಪಡಿಸಿಕೊಂಡರು.
8
ಕಾಳಗದ ಮರುದಿನ ಫಿಲಿಷ್ಟಿಯರು ಸತ್ತವರ ಒಡವೆವಸ್ತುಗಳನ್ನು ಸುಲಿಗೆಮಾಡಲು ಹೋದಾಗ, ಗಿಲ್ಬೋವ ಬೆಟ್ಟದಲ್ಲಿ ಸೌಲ ಹಾಗೂ ಅವನ ಮಕ್ಕಳು ಸತ್ತುಬಿದ್ದಿರುವುದನ್ನು ಕಂಡರು.
9
ಸೌಲನ ತಲೆಯನ್ನು ಕಡಿದು ದೇಹದಿಂದ ಬೇರ್ಪಡಿಸಿದರು. ಅವನ ಆಯುಧಗಳನ್ನು ಬಿಚ್ಚಿಕೊಂಡರು. ಅವುಗಳೊಂದಿಗೆ ಸುದ್ದಿವಾಹಕರನ್ನು ತಮ್ಮ ನಾಡಿನ ಎಲ್ಲೆಡೆಗೂ ಕಳುಹಿಸಿ, ಈ ಜಯವಾರ್ತೆಯನ್ನು ತಮ್ಮ ದೇವತೆಗಳಿಗೂ ಜನರಿಗೂ ಮುಟ್ಟಿಸಿದರು.
10
ಸೌಲನ ಆಯುಧಗಳನ್ನು ತೆಗೆದುಕೊಂಡು ಹೋಗಿ ತಮ್ಮ ಒಂದು ಗುಡಿಯಲ್ಲಿಟ್ಟರು. ಸೌಲನ ತಲೆಯನ್ನು ತಮ್ಮ ದೇವರಾದ ದಾಗೋನನ ಗುಡಿಯಲ್ಲಿ ನೇತುಹಾಕಿದರು.
11
ಸೌಲನಿಗೆ ಫಿಲಿಷ್ಟಿಯರು ಮಾಡಿದ್ದು ಎಲ್ಲವನ್ನೂ ಯಾಬೇಷ್ ಗಿಲ್ಯಾದಿನ ಜನರು ಕೇಳಿದರು.
12
ಅವರಲ್ಲಿ ಅತೀ ಶೂರರಾದವರು ಹೋಗಿ ಸೌಲನ ಮತ್ತು ಅವನ ಮಕ್ಕಳ ಶವಗಳನ್ನು ತೆಗೆದುಕೊಂಡು ಯಾಬೇಷಿಗೆ ಬಂದರು. ಅಲ್ಲಿ ಅವುಗಳನ್ನು ಏಲಾ ಮರದ ಕೆಳಗೆ ಸಮಾಧಿಮಾಡಿ ಏಳು ದಿನ ಉಪವಾಸ ಆಚರಿಸಿದರು.
13
ಸೌಲನು ಸರ್ವೇಶ್ವರನಿಗೆ ಅವಿಧೇಯನಾದ್ದರಿಂದ ಮರಣ ಹೊಂದಿದನು. ಅವನು ಸರ್ವೇಶ್ವರನ ಆಜ್ಞೆಗಳನ್ನು ಮೀರಿದನು; ಸರ್ವೇಶ್ವರನನ್ನು ವಿಚಾರಿಸದೆ ಭೂತಪ್ರೇತಗಳನ್ನು ವಿಚಾರಿಸಿದನು.
14
ಆದುದರಿಂದ ಸರ್ವೇಶ್ವರ ಅವನನ್ನು ಕೊಲ್ಲಿಸಿ ಜೆಸ್ಸೆಯ ಮಗ ದಾವೀದನಿಗೆ ರಾಜ್ಯವನ್ನೊಪ್ಪಿಸಿದರು.
← Chapter 9
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 11 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29